ಆಲ್ ಟೈಮ್ ಹಿಟ್ ಹಾಲಿವುಡ್ ಸಿನಿಮಾಗಳು – 06

ಕೆಲವು ಸಿನಿಮಾಗಳು ಹಾಗೆ ಎಷ್ಟು ಸಾರಿ ನೋಡಿದ್ರು ನೋಡಬೇಕು ಅನ್ನಿಸುತ್ತೆ. ಮತ್ತೆ ಕೆಲವು ಸಿನಿಮಾಗಳು ಯಾವಾಗಲು ಹಿಟ್ ಸಿನಿಮಾಗಳೇ ಆಗಿ ಉಳಿದುಕೊಂಡಿರುತ್ವೆ. ಅಂತಹ ಹಾಲಿವುಡ್ ಸಿನಿಮಾಗಳ ಸರಣಿಯ 10 ಸಿನಿಮಾಗಳನ್ನ ನಿಮಗೆ ತೋರಿಸ್ತಿದಿವಿ. ಇದನ್ನ ನೋಡಿದ ಮೇಲೆ ನಿಮಗೆ ಈ ಸಿನಿಮಾಗಳನ್ನ ನೋಡಬೇಕು ಅನ್ನೋದರಲ್ಲಿ ಎರಡು ಮಾತಿಲ್ಲ. 10. ಆಪಾಕಲಿಪ್ಸ್ ನೌವ್ ( 1979 ) 1979 ರಲ್ಲಿ ತೆರೆಕಂಡ ಅಪಾಕಲಿಪ್ಸ್ ನೌವ್ ಒಂದು ವಿಮರ್ಷತ್ಮಕ ಚಿತ್ರ ಎಂದರೆ ತಪ್ಪಾಗೊದಿಲ್ಲ. ಇದರ ಚಿತ್ರಕಥೆಯು 1969ರ ವಿಯೆಟ್ನಾ ಯುದ್ದದ ಹಾಗು ಹೋಗುಗಳ ಮೇಲೆ ಬೆಳಕನ್ನು ಚೆಲ್ಲುವಂತಹದ್ದು. ಯುದ್ದದ ಸ್ಥಿತಿ, ಸೈನಿಕರ ಮತ್ತು ಅಲ್ಲಿನ ಜನರ ನಡುವಿನ ತಿಕ್ಕಾಟ ಮತ್ತು ವೆವಸ್ಥೆಯ ಬಗ್ಗೆ ತಿಳಿಸಿ ಹೇಳುವಂತಹ ಚಿತ್ರ ಇದು. ಇದನ್ನು ಪ್ರಾನ್ಸಿಸ್ ಕೊಪ್ಟೊಲಾ ನಿರ್ದೇಶನದ ಜೊತೆಗೆ ನಿರ್ಮಾಣವನ್ನು ಕೂಡ ಮಾಡಿದ್ದಾರೆ. ಕಾರ್ಮೈನ್ ಕೊಪ್ಟೊಲಾ ಸಂಗೀತವನ್ನು ನೀಡಿದ್ದು. ವಿಕ್ಟೋರಿಯೋ ಸ್ಟಿರಿಯೋ ಛಾಯಾಗ್ರಹಣದ ಜವಾಬ್ದಾರಿಯನ್ನ ಹೊತ್ತಿದ್ದು. ಮರ್ಲಾನ್ ಬ್ರಾಂಡೋ, ರಾಬರ್ಟ್ ಡುವಲ್, ಮಾರ್ಟಿನ್ ಶೀನ್, ಫ್ರೆಡ್ರಿಕ್ ಫಾರೆಸ್ಟ್ ಮೊದಲಾದವರ ತಾರಾಗಣ ಚಿತ್ರದಲ್ಲಿರೋದನ್ನ ಕಾಣ್ಬೋದು. ಈ ಚಿತ್ರಕ್ಕೆ ಅತ್ಯತ್ತಮ ಗೋಲ್ಡ್ ಗ್ಲೋಬ್ ಪ್ರಶಸ್ತಿ ಮತ್ತು ಆಸ್ಕರ್ ಪ್ರಶಸ್ತಿಗೆ ನಾಮ ನಿರ್ದೇಶನವನ್ನು ಕೂಡ ಆಗಿತ್ತು. ಇವುಗಳಲ್ಲದೆ ಅನೇಕ ಪ್ರಶಸ್ತಿಗಳು ಈ ಚಿತ್ರವನ್ನು ಹರಸಿ ಬಂದಿರುವುದನ್