ಪ್ರಪಂಚದ ಉತ್ತಮ ಸ್ನೈಪರ್ ರೈಪಲ್ಸ್ - 04


ಒಂದು ರಾಷ್ಟ್ರದ ಶಕ್ತಿಯ ಪ್ರತೀಕ  ಈ ರೈಫಲ್‍ಗಳು ಇದರಲ್ಲಿ ತುಂಬಾನೆ ವೆರೈಟಿಗಳನ್ನ ಕಾಣ್ಬೋದು. ಹತ್ತು ಅತ್ಯುತ್ತಮ ರೈಫಲ್‍ಗಳನ್ನ ಮತ್ತು ಅದರ ಹುಟ್ಟು ಮತ್ತು ಬೆಳವಣಿಗೆಯ ಬಗ್ಗೆ ನಾವಿವತ್ತು ತಿಳಿಸ್ತಿದಿವಿ. 

10. ಐ42a1  ಎನ್ಫಿಲ್ಡ್ 

 ಐ42a1  ಎನ್ಫಿಲ್ಡ್ ರೈಫಲ್, ಬ್ರಿಟೀಷ್ ಸೈನ್ಯದಲ್ಲಿ ಹೆಚ್ಚಾಗಿ ಬಳಸುತ್ತಿದ್ದ ಬಂದೂಕು. ರಾಯಲ್ ಮರಿನ್ ಆರ್ ಎನ್ ಎಫ್ ರೆಜಿಮೆಂಟ್‍ನಲ್ಲಿ 1970ರಲ್ಲಿ ಬಳಕೆ ಮಾಡುವುದಕ್ಕೆ ಅನುವು ಮಾಡಿಕೊಡಲಾಗಿತು. ಇದು 1985ರಲ್ಲಿ ಎಲ್ 96 ರೈಫಲ್‍ನ ಒಂದು ಮಾದರಿ. ಇದು 7.62 ಎಂ ಎಂ ನ್ಯಾಟೋ ಕಾಡತೂಸು ಕೋಣೆಗಳನ್ನ ಹೊಂದಿರೋ ಸ್ನೈಪರ್ ರೈಫಲ್. 

ಯುನೈಟೆಡ್ ಕಿಂಗ್ಡಮ್‍ನಲ್ಲಿ ತಯಾರು ಮಾಡುತ್ತಿದ್ದ ಈ ರೈಫಲ್ 1970 ರಿಂದ 1990ರ ದಶಕಗಳವರೆಗೂ ಸೇವೆಯಲ್ಲಿತ್ತು. ಇದನ್ನ ಯುನೈಟೆಡ್ ಕಿಂಗ್ಡಮ್ ಬಳಸ್ತಾ ಇತ್ತು. ದೋಫರ್ ದಂಗೆ, ಫ್ಲಾಕ್ಲೆಂಡ್ ಯುದ್ಧ, ಕೊಲ್ಲಿ ಯುದ್ಧಗಳಲ್ಲಿ ಇದನ್ನ ಬಳಸಿದ್ರು. 4.4 ಕೆಜಿ ತೂಕ, 1.070 ಮೀ.ಮೀ ಉದ್ದ, 699 ಮಿಮೀ ಬ್ಯಾರೆಲ್ ಉದ್ದವನ್ನ ಹೊಂದಿದೆ. 730ಮೀ ಫೈರಿಂಗ್ ಕ್ಯಾಪಸಿಟಿ ಇದಕ್ಕಿದೆ. 10ಸುತ್ತಿನ ಡಿಟ್ಯಾಚೇಬಲ್ ಬಾಕ್ಸ್ ಹೊದಿದೆ ಐ42ಚಿ1  ಎನ್ಫಿಲ್ಡ್.

09. ಎಸ್ ಆರ್ – 25 (ಯುಎಸ್‍ಎ) 

1990ರಿಂದ ಇತ್ತೀಚಿನ ದಿನಗಳವರೆಗೂ ಬಳಕೆಯಲ್ಲಿರೊ ರೈಫಲ್ ಎಸ್ ಆರ್ – 25. ಇದನ್ನ ಯುನೈಟೆಡ್ ಸ್ಟೇಟ್ಸ್ ತಯಾರುಮಾಡಿ ಬಳಕೆ ಮಾಡ್ತಿದೆ. ಆಫ್ಘಾನಿಸ್ಥಾನ ಯುದ್ದ, ಇರಾಕ್ ಯುದ್ದ, 2006ರ ತೈಮೊರೆಸ್ ಬಿಕ್ಕಟ್ಟು ಮೊದಲಾದವುಗಳಲ್ಲಿ ಇದನ್ನ ಬಳಕೆ ಮಾಡಿದ್ರು. ಇದನ್ನು ಯುಜೀನ್ ಸ್ಟೋನರ್ ಡೈಸೈನ್ ಮಾಡಿದ್ದನ್ನ ನೈಟ್ ಶಸ್ತ್ರಾಸ್ತ್ರ ಕಂಪನಿ ತಯಾರು ಮಾಡಿತು.

ಇದರಲ್ಲೇ ಮಾರ್ಪಾಡುಗಳನ್ನ ಮಾಡಿಕೊಳ್ಳುತ್ತಾ ಎಸ್ ಆರ್ 25 510ಮಿಮೀ ಬ್ಯಾರಲ್ ಬಂದೂಕು, ಎಸ್ ಆರ್ 25 410 ಮಿಮೀ ಬ್ಯಾರಲ್ ಹೊಂದಿದೆ. ಎಂ 110 ಫ್ಲಾಶ್ ನಿರೋಧಕ ಕಾರ್ಬೈನ್ ಹೊದಿಕೆಯನ್ನ ಹೊಂದಿದೆ. ಇದು 4.88 ಕೆ.ಜಿ, ಕಾರ್ಬೈನ್ 3.4 ಕೆ.ಜಿ, ಸ್ಪೋರ್ಟರ್ 3.97 ಕೆ.ಜಿ, ಉದ್ದ 1.118 ಮಿಮೀ ಇದೆ. ಕಾಟ್ರ್ರಿಡ್ಜ್ 7.62*51 ಎಂ ಎಂ ನ್ಯಾಟೋ, ಗ್ಯಾಸ್ ಚಾಲಿತ, ತಿರುಗುವ ಬೋಲ್ಟ್, ಅರೆ ಸ್ವಯಂಚಾಲಿತವಾಗಿ ನಡೆಯುತ್ತೆ. 

08. ಎ ಎಸ್ 50 (ಯುಕೆ) 

ಯುಕೆ ದೇಶವು 2007ರಿಂದ ಬಳಕೆ ಮಾಡುತ್ತಿರುವ ಮಿಲಿಟರಿ ಶಕ್ತಿಗೆಂದೆ ತಯಾರು ಮಾಡಿರುವ ರೈಫಲ್ ಎ ಎಸ್ 50. ಅಮೇರಿಕಾದ ನೇವಲ್ ಸರ್ಫೇಸ್ ವಾರ್ಫೇರ್ ಸೆಂಟರ್ ಇದನ್ನು ಅಭಿವೃದ್ಧಿ ಪಡಿಸಿದ್ರು. ಇದು ಸ್ನೈಪರ್ ರೈಫಲ್ ವರ್ಗಕ್ಕೆ ಸೇರಿದ್ದು 1369 ಮಿಮೀ ಉದ್ದ ಮತ್ತು 12.2ಕೆ.ಜಿ ತೂಕವನ್ನ ಹೊಂದಿದೆ.

ಇದರ ವಿಶೇಷತೆಗಳನ್ನ ನೋಡುವುದಾದರೆ 12.799ಎಂ ಎಂ ನ್ಯಾಟೋ, ಇದು ಬಾಕ್ಸ್ ಮ್ಯಾಗಜಿನ್ ಹೊಂದಿದ್ದು 5ರಿಂದ 10 ಕಾಟ್ರ್ರಿಜ್ಗಳು ಹೊಂದಿದೆ. 1000 ಮೀಟರ್ ದೂರದಲ್ಲಿರುವ ಶತ್ರುಗಳನ್ನು ನಾಶ ಮಾಡಲು ಈ ರೈಫಲ್ ಬಳಸಲಾಗುತ್ತೆ. ಬ್ರಿಟೀಶ್ ಸಶಸ್ತ್ರ ಮತ್ತು ರೈಫಲ್ ಬಳಕೆಯಲ್ಲಿ ಒಂದಾಗಿದೆ.

07. ಎಂ 2 ಸ್ನೈಪರ್ ರೈಫಲ್ 

ಯುನೈಟೆಡ್ ಸ್ಟೇಟ್ಸ್ ರಾಷ್ಟ್ರದಲ್ಲಿ ತಯಾರಾಗುವ ರೈಫಲ್ ಇದು. 1969ರಿಂದಲೂ ಸೇವೆಯಲ್ಲಿರುವ ಎಂ2 ಸ್ನೈಪರ್ ರೈಫಲ್ ವಿಯೆಂಟ್ನಾಂ ಯುದ್ದ, ಇರಾಕ್ ಯುದ್ದಗಳಲ್ಲಿ ಬಳಗೆಯಾಗಿರುವ ಹೆಗ್ಗಳಿಕೆ ಇದರದ್ದು. ಇದನ್ನ ಡಿಸೈನ್ ಮಾಡಿರುವುದು ಮೆರೀನ್ ವೆಪನ್ ಕಮಾಂಡ್, ಇದನ್ನ ತಯಾರು ಮಾಡುವ ಜವಾಬ್ದಾರಿ ರಾಕ್ ಈಲೆಂಡ್ ಆರ್ಸೆನಲ್, ಸ್ಟ್ರಿಂಗ್ಛೀಲ್ಡ್ ಶಸ್ತ್ರಗಾರದಲ್ಲಿ.

ಈ ರೈಫಲ್‍ನಲ್ಲಿ ಹಲವಾರು ಮಾರ್ಪಾಡುಗಳಾಗಿ ಎಂ25 ಎಂದು ಕೂಡ ಅಭಿವೃದ್ಧಿಯನ್ನ ಹೋಂದಿರುವುದು ಕಾಣ್ಬೋದು. ಇದರ ವಿಶೇಷತೆಯ ಕಡೆ ನೋಡುವುದಾದರೆ ತೂಕದಲ್ಲಿ 5.27 ಕೆ.ಜಿ, ಉದ್ದ 1118 ಮಿಮೀ ಮತ್ತು ಬ್ಯಾರಲ್‍ನ ಉದ್ದ 560 ಮಿಮೀ ಇರೋದನ್ನ ಕಾಣ್ಬೋದು. ಇದು ಕ್ಯಾಸ್ ಚಾಲಿತ ತಿರು ಬೋಲ್ಡ್‍ನ್ನು ಹೊಂದಿದೆ. ಇದು ಸೆಕೆಂಡಿಗೆ 2800 ವೇಗದಲ್ಲಿ ಚಲಿಸುತ್ತದೆ. 

06. ಪಿಎಸ್‍ಜಿ 1 ಜರ್ಮನಿ

1985ರಿಂದ ಇಲ್ಲಿಯವರೆಗೆ ಬಳಸಿಕೊಂಡು ಬರುತ್ತಿದ್ದಾರೆ ಪಿಎಸ್‍ಜಿ 1 ಜರ್ಮನಿ ರೈಫಲ್. ಪಶ್ಚಿಮ ಜರ್ಮನಿಯಲ್ಲಿ ಹುಟ್ಟಿ ಎಲ್ಲಾ ಕಡೆಯಲ್ಲೂ ಹೆಚ್ಚು ಬಳಕೆಯಲ್ಲಿದೆ. ಇದನ್ನ ಡಿಸೈನ್ ಮಾಡಿದ್ದವರು ಹೆಕ್ಲರ್ ಮತ್ತು ಕೋಚ್ ಜಿಎಂಬಿಹೆಚ್ ಅದು 1970ರಲ್ಲಿ. ಜೊತೆಗೆ ಇವರೇ ಕೂಡ ತಯಾರು ಮಾಡಿದ್ದಾರೆ. 1972 ರಿಂದ 2014ರ ವರೆಗೆ ನಿರ್ಮಾಣ ಮಾಡಲಾಗಿದೆ. 

ಪಿಎಸ್‍ಜಿ 1 ರೈಫಲ್‍ನ ತೂಕ 7.2 ಕೆಜಿ  ಉದ್ದ 1230 ಮಿಮೀ  ಮತ್ತು ಬ್ಯಾರಲ್‍ನ ಉದ್ದ 650 ಮೀಮೀ ಇದೆ. ಅಗಲ 59 ಮಿಮೀ ಮತ್ತು ಎತ್ತರ 258 ಮಿಮೀ ಇದೆ. ಇದನ್ನು ಫೈರಿಂಗ್ ಮಾಡಿದ್ರೆ 800 ಮೀ ದೂರದ ವರೆಗೆ ಸಾಗುತ್ತದೆ.

05. ಡ್ರಾಗ್‍ನೋವ್ ಸ್ನೈಪರ್ ರೈಫಲ್ 

4.30 ಕೆ.ಜಿ ತೂಕ ಮತ್ತು 1,225 ಮಿಮೀ ಉದ್ದ ಮತ್ತು 620 ಮಿಮೀ ಬ್ಯಾರಲ್ ಅಂತರವನನ್ನು ಹೊಂದಿರೋ ಡ್ರಾಗ್‍ನೋವ್ ಸ್ನೈಪರ್ ರೈಫಲ್ ಪ್ರಪಂಚದ ಶಕ್ತಿ ಶಾಲಿ ರೈಫಲ್‍ಗಳ ಪಟ್ಟಿಯಲ್ಲಿ 05ನೇ ಸ್ಥಾನವನ್ನು ಪಡೆದುಕೊಂಡಿದೆ. ಮೂಲತಹ ಸೋವಿಯತ್ ಒಕ್ಕೂಟದಲ್ಲಿ ಹುಟ್ಟಿದ ಈ ರೈಫಲ್ ಜಗತ್ತಿನ ಹಲವು ದೇಶಗಳಲ್ಲಿ ಕಾರ್ಯ ನಿರ್ವಹಿಸುತ್ತಾ ಇದೆ. 1963 ರಿಂದ ಇಲ್ಲಿಯವರೆಗೂ ಬಳಕೆಯಲ್ಲಿರುವ ರೈಫಲ್ ಇದು.

ಈ ಬಗೆಯ ರೈಫಲ್ ಹೊಂದಿರುವ ದೇಶಗಳಲ್ಲಿ ಭಾರತ ಕೂಡ ಒಂದು ಇದನ್ನ ಕಾರ್ಗಿಲ್ ಯುದ್ದದಲ್ಲಿ ಬಳಸಲಾಗಿತ್ತು, ಉಳಿದಂತೆ ಇರಾನ್ ಇರಾಕ್ ಯುದ್ದ, ಕೊಲ್ಲಿ ಯುದ್ಧ, ಸೋಮಾಲಿಯಾ ಯುದ್ದ, ಅಫ್ಘಾನಿಸ್ಥಾನ ಯುದ್ಧ ಸೇರಿದಂತೆ ಅನೇಕ ಯುದ್ದಗಳಲ್ಲಿ ಇದರ ಬಳಕೆ ಇರೋದನ್ನ ಕಾಣ್ಬೋದು.
ಇದನ್ನ ಅಭಿವೃದ್ಧಿ ಪಡಿಸಿದವರು ಯೆವ್ಗನಿ ಡ್ರಾಗ್‍ನೋವಾ, ಅತೀ ವೇಗವಾಗು ಗುಂಡು ನುಗ್ಗುವ ಮತ್ತು ಬೆಂಕಿಯನ್ನು ಹುಗುಳುವ 

04. ಮೊಸಿನ್ ರೈಫಲ್ 

1877-1778ರಲ್ಲಿ ಒಟೋಮನ್ ಯುದ್ದದಲ್ಲಿ ಭಾಗವಹಿಸಿದ ರಷ್ಯಾ ಶಸ್ತ್ರ ಸಜ್ಜಿತವಾದ ಬಂದೂಕುಗಳನ್ನು ಹೊಂದಿದ ಎದುರಾಳಿಗೆ ತಲೆ ಬಾಗಿ ನಿಲ್ಲುವಂತೆ ಬಂದಿತು. ಇದರಿಂದ ಪಾಠ ಕಲಿತ ರಷ್ಯಾ 1881-82ರಲ್ಲಿ ಮೊಸಿನ್ ರೈಫಲ್‍ನ್ನು ಹುಟ್ಟು ಹಾಕಿತು. ಇದು ನಂತರದ ದಿನಗಳಲ್ಲಿ ವಿಶ್ವದೆಲ್ಲೆಡೆ ಬಳಕೆಗೆ ಬಂದಿರೋದನನ್ನ ಕಾಣ್ಬೋದು. ಎಕೆ 47 ಇದರ ರೂಪಾಂತರ ಎಂದು ಕೂಡ ಹೇಳಲಾಗುತ್ತೆ.

ಮೊದಲನೆ ಮತ್ತು ಎರಡನೇ ವಿಶ್ವ ಸಮರದಲ್ಲಿ ರಷ್ಯಾ ಪರವಾಗಿ ಹೋರಾಡಿದ ಕೀರ್ತಿ ಮೊಸಿನ್ ರೈಫಲ್‍ಕೆ ಸಲ್ಲುತ್ತದೆ. ಅಲ್ಲದೆ ಸೋವಿಯತ್ ವಾರ್, ರಷ್ಯನ್ ಅಂತರ್ ಯುದ್ದ, ಇರಾಕ್ ಯುದ್ದ, ಕಾಂಬೋಡಿಯಾ ಅಂತರ್ ಯುದ್ದ ಸೇರಿದಂತೆ ಹಲವು ಯುದ್ದಗಳಲ್ಲಿ ಇದನ್ನ ಬಳಕೆ ಮಾಡಲಾಗಿದೆ.

1891 ರಿಂದ ಇಲ್ಲಿಯವರೆಗೂ ಇದನ್ನು ಬಳಕೆ ಮಾಡಿಕೊಂಡು ಬರುತ್ತಿದ್ದಾರೆ, ಇದರ ಕೀರ್ತಿ ತಯಾರು ಮಾಡಿದ ಕ್ಯಾಪ್ಟನ್ ಸರ್ಗೆಯ್ ಮೊಸಿನ್, ಲಿಯಾನ್ ನಾಗಾಂಟ್. 4 ಕೆಜಿ ತೂಕ, 1,232 ಮಿಮೀ ಉದ್ದ ಮತ್ತು 730 ಮಿಮೀ ಉದ್ದದ ಬ್ಯಾರಲ್ ಹೊಂದಿದೆ.

03. ಎಲ್115ಎ3 ಎಡಬ್ಲಿಯೂಎಂ

ಯುನೈಟೆಡ್ ಕಿಂಗ್‍ಡಮ್‍ನಲ್ಲಿ ಜನಿಸಿ 1996ರಿಂದ ಬಳಕೆಯಲ್ಲಿರುವ ರೈಫಲ್ ಎಲ್115ಎ3 ಎ ಡಬ್ಲಿಯೂ ಎಂ ರೈಫಲ್, ಸುಮಾರು 6.5 ಕೆ ಜಿ ತೂಕ, 1200 ಮಿಮೀ ಉದ್ದ ಮತ್ತು 660 ಮಿಮೀ ಉದ್ದದ ಬ್ಯಾರಲ್ ಹೊಂದಿದೆ ಇದು. ನಿಖರತೆ ಇಂಟರ್‍ನ್ಯಾಷನಲ್ ಕಂಪನಿ ಇದನ್ನು ತಯಾರು ಮಾಡುತ್ತಿದೆ. ಇವುಗಳಲ್ಲದೆ ಇನ್ನೂ ಮೊದಲಾದ ಉತ್ತಮ ಲಕ್ಷಣಗಳನ್ನ ಹೊಂದಿದೆ.

ಬಾಂಗ್ಲಾದೇಶ, ಚೆಕ್‍ಗಣರಾಜ್ಯ, ಐರ್ಲೆಂಡ್, ಇಟಲಿ, ಇಸ್ರೇಲ್, ಮಲೇಷ್ಯಾ, ರಷ್ಯಾ ಹಾಗೂ ಯುನೈಟೆಡ್ ಸ್ಟೇಟ್ಸ್, ಯುನೈಟೆಡ್ ಕಿಂಗ್ಡಮ್ ಸೇರಿದಂತೆ ಹಲವು ದೇಶಗಳಲ್ಲಿ ಇವುಗಳ ಬಳಕೆ ಇದೆ. ಆಪ್ಘಾನಿಸ್ಥಾನ ಮತ್ತು ಇರಾಕ್ ಯುದ್ದಗಳಲ್ಲಿ ಬಳಕೆ ಮಾಡಲಾಗಿತ್ತು ಎಂಬ ಕೀರ್ತಿ ಇದಕ್ಕೆ ಸಲ್ಲುತ್ತೆ.

02. ಚೈಟಾಕ್  ಇಂಟರ್ ವೆಕ್ಷನ್ m200 

ಯುನೈಟೆಡ್ ಸ್ಟೇಟ್ಸ್‍ನಲ್ಲಿ ತಯಾರಾದ ಮತ್ತು ಸ್ನೈಪರ್ ರೈಫಲ್‍ನ ಒಂದು ಭಾಗವಾಗಿರುವ ಇದು ಅತ್ಯಂತ ಶಕ್ತಿಯುತವಾದ ರೈಫಲ್‍ಗಳಲ್ಲಿ ಎರಡನೇ ಸ್ಥಾನವನ್ನು ಪಡೆದುಕೊಂಡಿದೆ. ಅರ್ಜೆಟೀನಾ, ಟರ್ಕಿ, ಜೋರ್ಡಾನ್, ಪೋಲೆಂಡ್ ಮೊದಲಾದ ದೇಶಗಳಲ್ಲಿ ಇದನ್ನ ಬಳಸುತ್ತಿದ್ದಾರೆ.

ಇತ್ತೀಚೆಗೆ ಅಂದ್ರೆ 2001 ರಿಂದ ಇಂದಿನವರೆಗೆ ಬಳಕೆಯನ್ನ ಮಾಡುತ್ತಿದ್ದಾರೆ. ಈ ರೈಫಲ್ 14 ಕೆ.ಜಿ ತೂಕ, 1.34 ಮೀಟರ್ ಉದ್ದವನ್ನ ಹೊಂದಿದೆ. ಹೆಚ್ಚು ಪರಿಣಾಮಕಾರಿಯಾದ ಮತ್ತು ಶಕ್ತಿಯುತವಾದ ರೈಫಲ್ ಇದಾಗಿದ್ದು ಬಹುತೇಕ ರಾಷ್ಟ್ರಗಳಲ್ಲಿ ಇದು ಇರುವುದನ್ನ ಕಾಣ್ಬೋದು.

01. ಬ್ಯಾರೆಟ್ 50 ಕಾಲ್

ಭಾರತವು ಸೇರಿದಂತೆ ಪ್ರಪಂಚದ ಬಹುತೇಕ ರಾಷ್ಟ್ರಗಳು ಬಳಸುತ್ತಿರುವ ರೈಫಲ್ ಬ್ಯಾರೆಟ್ 50 ಕಾಲ್. ಒಂದು ವಿಭಿನ್ನ ಹಾಗೂ ವಿಶಿಷ್ಟವಾದ ರೈಫಲ್, ಇದು ಹಗುರವಾದ ಭಾರವಿರುವುದರಿಂದ ಬಳಕೆ ಮಾಡಲು ಸುಲಭವಾಗಿ ಇರುತ್ತದೆ. ಆದ್ದರಿಂದ ಬೇರೆ ಬೇರೆ ದೇಶಗಳಲ್ಲಿ ಬೇರೆ ಬೇರೆ ವಿಭಾಗಗಲ್ಲಿ ಇದನ್ನ ಬಳಕೆ ಮಾಡಲಾಗುತ್ತದೆ.

ಆಂಟಿ ಮೆಟಿರಿಯಲ್ ರೈಫಲ್ ಅಂಕಿತದಿಂದ ಇದನ್ನು ಗುರ್ತಿಸಲಾಗುತ್ತದೆ. ಯುನೈಟೆಡ್ ಸ್ಟೇಟ್ಸ್‍ನಲ್ಲಿ ತಯಾರು ಮಾಡುವ ಈ ರೈಫಲ್ 1989ರಿಂದ ಇಲ್ಲಿಯವರೆಗೂ ಕೂಡ ಬಳಕೆಯಲ್ಲಿರುವುದನ್ನ ಕಾಣ್ಬೋದು. ಜೊತಗೆ ಇದನ್ನು ಕೊಲ್ಲಿ ಯುದ್ಧ, ಸೋಮಾಲಿಯಾ ಅಂತರ್‍ಯುದ್ಧ, ಯುರಾಕ್ ಯುದ್ಧ ಸೇರಿದಂತೆ ಹಲವಾರು ಯುದ್ದಗಳಲ್ಲಿ ಇದರ ಸಾಮಥ್ರ್ಯ ಗೊತ್ತಾಗಿದೆ.
ಮಂಜುನಾಥ್ ಜೈ
manjunathahr1991@gmail.com











ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಪ್ರಪಂಚದ 10 ಎತ್ತರದ ಪರ್ವತಗಳು - 26

ಭಾರತದ 10 ಪ್ರಸಿದ್ಧ ರಾಜರು - 22

ಕರ್ನಾಟಕದ 10 ಸುಂದರ ಬೆಟ್ಟಗಳು - 25