ಪ್ರಪಂಚದ ವಿಷಪೂರಿತ ಹಾವುಗಳು - 05


ಪ್ರಪಂಚದ ಹಲವಾರು ವಿಶೇಷ ಜೀವಿಗಳಲ್ಲಿ ಹಾವು ಕೂಡ ಒಂದು. ಇದರ ಬಗ್ಗೆ ಹೇಳ್ತಿದ್ರೆ ಒಂದು ದಿನವಾದ್ರೂ ಮುಗಿಯೋದಿಲ್ಲ.  ಮನುಷ್ಯನಿಗೆ, ಇತರೆ ಸಣ್ಣ ಜೀವಿಗಳಿಗೆ ಒಂದು ರೀತಿ ಮಾರಕವಾಗಿ ಇರೋ ಹಾವು. ಒಂದು ವಿಚಿತ್ರ ಜೀವಿ. ಈ ಹಾವುಗಳಲ್ಲಿ ಅತ್ಯಂತ ವಿಷಪೂರಿತ ಹತ್ತು ಹಾವುಗಳ ಬಗ್ಗೆ.

10.  ರ್ಯಾಟಲ್ ಅಥವಾ ಬುಡಬುಡಕೆ ಹಾವು 

ಬುಡಬುಡಕೆ ಹಾವು ತನ್ನ ಪಿಷಪೂರಿತ ನಡವಳಿಕೆಯಿಂದ ಪ್ರಪಂಚದ ವಿಷಪೂರಿತ ಹಾವುಗಳಲ್ಲಿ ಹತ್ತನೇ ಸ್ಥಾನವನ್ನ ಪಡೆದುಕೊಂಡಿದೆ. ಪ್ರಮುಖವಾಗಿ ದಕ್ಷಿಣ ಅಮೇರಿಕಾ, ಕೆನಡಾ, ಕೊಲಂಬಿಯಾ, ಅರ್ಜಂಟೈನಾ, ಮತ್ತು ದಕ್ಷಿಣ ಬ್ರಿಟೀಷ್ ಪ್ರದೇಶಗಳಲ್ಲಿ ಹೆಚ್ಚಾಗಿ ಕಂಡುಬರುತ್ವೆ. ಸುಮಾರು 65 ರಿಂದ 70 ಉಪಜಾತಿಗಳು ಈ ಹಾವಿನ ಸಂತತಿಗೆ ಸೇರುತ್ವೆ. 
ಈ ಹಾವುಗಳು ಇಲಿ ಮತ್ತು ಸಣ್ಣ ಪ್ರಾಣಿಗಳನ್ನ ಬೇಟೆಯಾಡಿ ತಮ್ಮ ಆಹಾರವನ್ನಾಗಿ ಮಾಡಿಕೊಳ್ಳುತ್ವೆ. ಗಿಡುಗ, ರಣ ಹದ್ದು ಮತ್ತು ಇವು ದೊಡ್ಡ ಹಾವುಗಳಿಗೆ ಆಹಾರವಾಗುತ್ವೆ. ಬಾಲದಲ್ಲಿ ವಿಷಿಷ್ಠ ರೀತಿಯಲ್ಲಿ ಸದ್ದು ಮಾಡಿ, ಬೇಟೆಗಾರರನ್ನು ಹೆದರಿಸುತ್ತೆ ಹತ್ತಿರ ಬರದಂತೆ, ಎಚ್ಚರಿಕೆಯನ್ನ ನೀಡುತ್ತೆ, ಜೊತೆಗೆ ಬೇಟೆಯಾಡುವುದಕ್ಕೂ ಇದು ತನ್ನ ಬಾಲವನ್ನ ಬಳಕೆ ಮಾಡಿಕೊಳ್ಳುತ್ತೆ. 
ಹಲವು ರಾಷ್ಟ್ರಗಳಲ್ಲಿ ಈ ಹಾವನ್ನ ಆಹಾರವನ್ನಾಗಿ ಕೂಡ ಬಳಸುತ್ತಾರೆ. ಇದಕ್ಕೆ ಬೇಡಿಕೆಯೂ ಸಹ ಹೆಚ್ಚಾಗಿಯೇ ಇದೆ. ಇವುಗಳು ಹೆಚ್ಚಾಗಿ ಅನ್ನುವುದಕ್ಕಿಂತ ಮರುಭೂಮಿಯಲ್ಲೆ ವಾಸಮಾಡುತ್ವೆ. ಅಲ್ಲಿನ ವಾತಾವರಣ ಈ ಸಂತತಿಗೆ ಪೂರಕವಾಗಿದೆ. ಮತ್ತು ಇವು ಉಳಿದ ಹಾವುಗಳಂತೆ ನೇರವಾಗಿ ಹರಿಯುವುದಿಲ್ಲ, ಪಕ್ಕಕ್ಕೆ ವಾರೆಯಾಗಿ ಚಲಿಸುವುದನ್ನ ಕಾಣ್ಬೋದು.

09. ಡೆತ್ ಆಡರ್ ಹಾವು 

ಪ್ರಮುಖವಾಗಿ ಆಸ್ಟ್ರೇಲಿಯಾದ ಕಾಡುಗಳಲ್ಲಿ ಹೆಚ್ಚಾಗಿ ಕಂಡುಬರುವ ಡೆತ್ ಆಡರ್ ಅತ್ಯಂತ ಅಪಾಯಕಾರಿ ಮತ್ತು ವಿಷಪೂರಿತ ಹಾವು. ಆಸ್ಟ್ರೇಲಿಯಾ ಅಲ್ಲದೆ ಪಿನ್‍ಲ್ಯಾಂಡ್, ನ್ಯೂಸೌತ್‍ವೇಲ್ಸ್, ವಿಕ್ಟೋರಿಯಾ ಮೊದಲಾದ ದೇಶಗಳಲ್ಲಿ ಕಂಡುಬರುತ್ವೆ. ಹುಲ್ಲುಗಾವಲು, ದಟ್ಟವಾದ ಕಾಡುಗಳಲ್ಲಿ ಕಂಡುಬರುವ ಒಂದು ಜಾತಿಯ ಹಾವು.
ಈ ಹಾವುಗಳು ತ್ರಿಕೋನಾಕೃತಿಯ ತಲೆ, ಚಪ್ಪಟೆಯಾಕಾರದ ದೇಹಾಕೃತಿ ಮತ್ತು ಬೂದು, ಕಂದು ಮತ್ತು ಕಪ್ಪು ಬಣ್ಣವನ್ನ ಹೊಂದಿರುತ್ವೆ.  ಮರದ ತರಗೆಲೆ ಮತ್ತು ಕಸದ ರಾಶಿಯೊಳಗಡೆ ಸೇರಿಕೊಂಡು ತರಗೆಲೆಯಂದೆ ಕಾಣುತ್ತವೆ. ಈ ಸಂತತಿಯ ಹಾವುಗಳು 70 ರಿಂದ 100 ಸೆಂಟಿಮೀಟರ್ ನಷ್ಟು ಉದ್ದವಾದ ದೇಹಾಕೃತಿಯನ್ನ ಹೊಂದಿವೆ.
ಈ ಹಾವುಗಳು ಬೇಸಿಗೆಯ ಸಮಯದಲ್ಲಿ ತನ್ನ ಸಂತತಿಯನ್ನ ಹೆಚ್ಚಿಸಿಕೊಳ್ಳುತ್ವೆ, ಹೆಣ್ಣು ಹಾವು ಒಂದು ಬಾರಿಗೆ 3 ರಿಂದ 20 ಮೊಟ್ಟೆಗಳವರೆಗೆ ಇಡುತ್ತವೆ. ಇದರ ಎಲ್ಲಾ ಕಾರ್ಯಗಳು ನಡೆಯೋದು, ತರಗೆಲೆಗಳಲ್ಲಿ. ಇವುಗಳು ಎಷ್ಟು ವಿಷಪೂರಿತವಾದವೆಂದರೆ ಮನುಷ್ಯನಿಗೆ ಕಚ್ಚಿದ 6 ಗಂಟೆಗಳ ಒಳಗೆ ಸಾವನ್ನಪ್ಪುನ್ನಾನೆ, ಅಲ್ಲದೆ ಪಾಶ್ರ್ವಾವಾಯು ಸಂಬವಿಸುವ ಎಲ್ಲಾ ಲಕ್ಷಣಗಳಿರುತ್ವೆ. 

08. ವೈಪರ್ ಸ್ನೇಕ್ 

ಅಮೇರಿಕಾ, ಆಫ್ರಿಕಾ, ಯುರೇಷಿಯಾ ಮತ್ತು ಮೆಕ್ಸಿಕೋ ಕರಾವಳಿ ಪ್ರದೇಶಗಳಲ್ಲಿ ಕಂಡುಬರುವ ವಿಷಪೂರಿತ ಹಾವುಗಳಲ್ಲಿ ವೈಪರ್ ಸ್ನೇಕ್ ಅತ್ಯಂತ ವಿಷಕಾರಿ ಹಾವು. ಇದರ ವಿಷ ಎಷ್ಟೇಂದರೆ ಹೆಚ್ಚು ಮನುಷ್ಯನ ನರಮಂಡಲವು ತನ್ನ ಸ್ವಾದೀನ ಕಳೆದುಕೊಳ್ಳುತ್ತದೆ. ಹೃದಯದ ಬಡಿತವು ನಿದಾನವಾಗುತ್ತೆ, ರಕ್ತ ಹೆಪ್ಪುಗಟ್ಟಲು ಪ್ರಾರಂಬಿಸಿ ಮಾನವ ಸಾಯುವಂತೆ ಮಾಡುತ್ತದೆ. ಕನಿಷ್ಟ ಪಾಶ್ರ್ವಾವಾಯು ಆಗುವುದಂತು ಕಂಡಿತ.
ವೈಪರ್ ಹಾವುಗಳಲ್ಲ್ಲಿ ಸರಿ ಸುಮಾರು 200 ಜಾತಿಯ ಹಾವುಗಳನ್ನ ಕಾಣ್ಬೋದು. ಅದರಲ್ಲಿ ಪ್ರಮುಖವಾಗಿ ಪಿಟ್ ವೈಪರ್ ಮತ್ತು ಓಲ್ಡ್ ವಲ್ರ್ಡ್ ವೈಪರ್ ಕಂಡುಬರುತ್ವೆ. ಇವುಗಳು 25 ಸೆಂಟಿ ಮೀಟರ್‍ನಿಂದ 3 ಮೀಟರ್‍ಗಳವರೆಗೆ ಬೆಳೆಯುತ್ವೆ. ಮರಳುಗಾಡಿನ ಮಳೆ ಕಾಡುಗಳು. ಬೂರ್ಜ ಮರಗಳ ಪೊಟರೆಗಳಲ್ಲಿ ಮೊಟ್ಟಗಳನ್ನಿಟ್ಟು ತನ್ನ ಸಂತತಿಯನ್ನ ಹೆಚ್ಚು ಮಾಡಿಕೊಳ್ಳುತ್ವೆ. 
ಮನುಷ್ಯನ ದೇಹವನ್ನು ಸೇರುವ ವಿಷ ಹೆಚ್ಚು ಅಪಾಯಕಾರಿಯನ್ನ ತಂದೊಡ್ಡುತ್ತದೆ. ಆದ್ದರಿಂದಲೇ ವೈಪರ್ ಹಾವನ್ನ ಹೆಚ್ಚು ವಿಷಕಾರಿ ಹಾವುಗಳಲ್ಲಿ ಎಂಟನೇ ಸ್ಥಾನವನ್ನ ನೀಡಲಾಗಿದೆ.

07. ಫಿಲಿಫೈನ್ಸ್ ನಾಗರ 

ಫಿಲಿಫೈನ್ಸ್ ನಾಗರ ಅಥವಾ ಫಿಲಿಫೈನ್ಸ್ ಕೋಬ್ರಾ ಎಂದು ಕರೆಯಲಾಗುವ ಈ ಹಾವು ಇತರೆ ವಿಷಪೂರಿತ ಹಾವುಗಳಿಗಿಂತ ತುಂಬಾನೆ ಡಿಫರೆಂಟ್ ಬೇರೆ ಹಾವುಗಳು ಕಚ್ಚಿದರೆ ಮಾತ್ರ ವಿಷವೇರುತ್ತೆ, ಅದರ ಗುಣವು ಕೂಡ ಕಚ್ಚೋದು ಆದರೆ ಈ ಹಾವು ವಿಷನನ್ನ ಹುಗುಳುತ್ತೆ. ಬೇಟೆಯಾಡೋದಕ್ಕೆ ಕೂಡ ಇದನ್ನ ಬಳಸಿಕೊಳ್ಳುತ್ವೆ.
ಇವು ಹೆಚ್ಚಾಗಿ ಮಳೆ ಆಶ್ರಿತ ಕಾಡುಗಳು, ಜನವಸತಿ ಪ್ರದೇಶಗಳು, ತಗ್ಗು ಬಯಲು, ಅರಣ್ಯಗಳು ಮತ್ತು ಹುಲ್ಲುಗಾವಲು, ಕೃಷಿ ಪ್ರದೇಶಗಳಲ್ಲಿ ಹೆಚ್ಚಾಗಿ ಕಂಡುಬರುತ್ವೆ. ಸಣ್ಣ ಸಸ್ತನಿಗಳು, ಕಪ್ಪೆ, ಸಣ್ಣ ಹಲ್ಲಿ, ಮೊಟ್ಟೆ ಮತ್ತು ಇತರೆ ಪಕ್ಷಿಗಳನ್ನ ಇವು ಆಹಾರವನ್ನಗಿ ಬಳಸುತ್ವೆ. ಅತೀ ರೋಮಾಚನಕಾರಿ ಅಪಾಯವನ್ನ ತಂದೊಡ್ಡುತ್ತವೆ ಈ ತಳಿಯ ಹಾವುಗಳು. ಇವು ಕಚ್ಚಿದ 30 ನಿಮಿಷದಲ್ಲಿ ಸಾವು ಕಟ್ಟಿಟ್ಟ ಬುತ್ತಿ.

06. ಟೈಗರ್ ಸ್ನೇಕ್ 

ಆಸ್ಟ್ರೇಲಿಯಾದ ದಕ್ಷಿಣ ಪ್ರದೇಶಗಳು ಸೇರಿದಂತೆ ಕರಾವಳಿ ಪ್ರದೇಶಗಳಲ್ಲಿ ಹೆಚ್ಚಾಗಿ ಕಂಡುಬರುವ ಟೈಗರ್ ಸ್ನೇಕ್ ಅತ್ಯಂತ ವಿಷಪೂರಿತ ಹಾವುಗಳಲ್ಲಿ ಆರನೇ ಸ್ತಾನವನ್ನ ಪಡೆದುಕೊಂಡಿದೆ. ಇವುಗಳು 20 ರಿಂದ 30 ಮರಿಗಳಿಗೆ ಜನ್ಮ ನೀಡಿ ಹಾವುಗಳ ಜಾತಿಗಳಲ್ಲೇ ವಿಶೇಷ ಎನಿಸಿಕೊಂಡಿವೆ. ಹೆಚ್ಚಾಗಿ ಬೇಸಿಗೆ ಕಾಲದಲ್ಲಿ ಮರಿಗಳಿಗೆ ಜನ್ಮ ನೀಡುವುದನ್ನ ಕಾಣ್ಬೋದು.
ಸಾಮಾನ್ಯ ಹುಲಿ ಹಾವು, ಪಶ್ಚಿಮ ಹುಲಿ ಹಾವು, ಚಾಪೆಲ್ ದ್ವೀಪ ಹುಲಿ ಹಾವು, ಕಿಂಗ್ ಐಲೆಂಡ್ ಮತ್ತು ಟ್ಯಾಸ್ಮೇನಿಯಂ ಟೈಗರ್ ಹಾವು, ಪೆನಿನ್ಸುಲಾ ಹುಲಿ ಹಾವು ಸೇರಿದಂತೆ ಇವುಗಳ ಹಲವು ವಿಧಗಳನ್ನ ಕಾಣ್ಬೋದು. ಇವುಗಳ ವಿಷಾ ತುಂಬಾ ಪರಿಣಾಮಕಾರಿ, ಉಸಿರುಕಟ್ಟಿಸುವಿಕೆ, ಪಾಶ್ರ್ವವಾಯು, ಕಾಲು ಮತ್ತು ಕತ್ತಿನ ಭಾಗದಲ್ಲಿ ಜುಮ್ಮೆನ್ನಿಸುವಿಕೆ ಸೇರಿದಂತೆ ಮರಗಟುವಿಕೆ ಮತ್ತು ತುಂಬಾ ಬೆವರು ಬರುವುದು ಇದರ ಲಕ್ಷಣ. ಒಂದು ಸಂಶೋದನೆಯ ಪ್ರಕಾರ ಇದರ ಕಡಿತದಿಂದ ಮರಣ ಹೊಂದಿದವರ ಪ್ರಮಾಣ ಶೇ 60 ರಷ್ಟು ದಾಖಲಾಗಿದೆ.

05. ಬ್ಲಾಕ್ ಮಂಬಾ ಹಾವು 

ಕಡು ಕಂದು ಮತ್ತು ಕಪ್ಪು ಮಿಶ್ರಿತವಾಗಿರುವ ಬ್ಲಾಕ್ ಮಂಬಾ ಹಾವು ಅಪಾಯಕಾರಿ ಹಾವುಗಳ ಸಾಲಿನಲ್ಲಿ ಇರುವುದಕ್ಕೆ ಪ್ರಮುಖ ಕಾರಣ ಅದರಲ್ಲಿ ವಿಷಕಾರಿ ಸ್ವಭಾವ. ಆಕ್ರಮಣಕಾರಿ ಗುಣಗಳು. ಅತೀವೇಗವಾಗಿ ಬೇಟೆಯ ಮೇಲೆ ಎರಗುವ ಮತ್ತು ಕಚ್ಚಿದ 30 ನಿಮಿಷದಲ್ಲಿ ಬೇಟೆಯನ್ನ ಸಂಪೂರ್ಣವಾಗಿ ಕೊಲ್ಲುವಂತ ಪ್ರೌವೃತ್ತಿಯನ್ನ ಹೊಂದಿರುವಂತಹ ಹಾವಿನ ಜಾತಿಗೆ ಸೇರಿದ್ದು.
ಪ್ರಪಂಚದ ಅತೀ ವೇಗವಾಗಿ ಚಲಿಸುವಂತ ಹಾವುಗಳಲ್ಲಿ ಮೊದಲ ಸ್ಥಾನವನ್ನ ಪಡೆದುಕೊಡಿದೆ. ಮರದ ಪೂಟರೆಗಳಲ್ಲಿ ಜೌಗು ಪ್ರದೇಶ, ಅರಣ್ಯ, ಹುಲ್ಲುಗಾವಲು ಸೇರಿದಂತೆ ಪೊದೆಯಂತಹ ಜಾಗಗಳಲ್ಲಿ ಹೆಚ್ಚಾಗಿ ಇವು ವಾಸವನ್ನ ಮಾಡುತ್ವೆ. ಹೊಂಚುಹಾಕಿ ಬೇಟೆಯನಾಡುವುದರಲ್ಲಿ ಇವು ಎತ್ತಿದ ಕೈ, ಸಸ್ತನಿಗಳು ಮತ್ತು ಸಣ್ಣ ಪಕ್ಷಿಗಳನ್ನು ಸೇರಿದಂತೆ ಮೊದಲಾದ ಪರಬಕ್ಷಕಗಳನ್ನು ಇವು ತಿನ್ನುತ್ವೆ.
ಈ ಹಾವುಗಳು ಜನನಿಬಿಡ ಪ್ರದೇಶಗಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುವುದಿಲ್ಲ, ಮನುಷ್ಯನ ಸಂಪರ್ಕದಿಂದ ಇವು ಆದೊಷ್ಟು ದೂರ ಇರುತ್ವೆ. ಆದ್ರೂ ಕೂಡ ಸಮೀಕ್ಷೆಯ ಪ್ರಕಾರ 1957 ರಿಂದ 1963 ರ ವರೆಗೆ ಸುಮಾರು 900 ಹಾವು ಕಡಿದ ಪ್ರಕರಣಗಳು ದಾಖಲಾಗಿದ್ದವನ್ನ ಕಾಣ್ಬೋದು.

04. ಟೈಫಾನ್ಸ್ ಹಾವು 

ಚೀನಾದ ಕರಾವಳಿ ಪ್ರದೇಶಗಳಲ್ಲಿ ಹೆಚ್ಚಾಗಿ ಕಂಡು ಬರುವ ಈ ಹಾವು ಹೆಚ್ಚು ಅಪಾಯಕಾರಿ ಮತ್ತು ವಿಷಪೂರಿತ ಹಾವುಗಳಲ್ಲಿ ತನ್ನ ಹೆಸರನ್ನ ನೊಂದಾಯಿಸಿಕೊಂಡಿದೆ.  ಪ್ರಮುಖವಾಗಿ ಇಂತಹ ಹಾವುಗಳು. ಕ್ವೀನ್ಸಾಂಡ್, ಆಸ್ಟ್ರೇಲಿಯಾ, ಕೇಪ್ ಯಾರ್ಕ್ ಮೊದಲಾದ ದೇಶಗಳಲ್ಲಿ ಕಂಡುಬರುತ್ವೆ. ಹೆಚ್ಚು ವಿಷಪೂರಿತ ಮತ್ತು ಅತೀ ವೇಗವಾಗಿ ಚಲಿಸುವ ಹಾವು ಇದು.
ಸಸ್ತನಿಗಳು, ಪುಟ್ಟ ಪಕ್ಷಿಗಳು ಇವುಗಳಿಗೆ ಆಹಾರವಾಗುತ್ವೆ. ಟೈಫಾನ್ಸ್ ಹಾವು ಕಚ್ಚಿದ್ರೆ ಇಡೀ ನರಮಂಡಲವೇ ತನ್ನ ಸ್ವಾದೀನವನ್ನ ಕಳೆದುಕೊಳ್ಳುತ್ತೆ, ರಕ್ತ ಹೆಪ್ಪುಕಟ್ಟುತ್ತೆ, ಇಡೀ ದೇಹವೇ ತನ್ನ ಸ್ವಾದೀನವನ್ನ ಕಳೆದುಕೊಳ್ಳುತ್ತೆ. ಈ ರೀತಿಯಾಗಿ ವಿಷಪೂರಿತ ಹಾವುಗಳ ಸಾಲಿನಲ್ಲಿ ಟೈಫಾನ್ ನಾಲ್ಕನೇ ಸ್ಥಾನವನ್ನ ಸೇರುತ್ತೆ.
ಕಾಣಿಸಿಕೊಳ್ಳುವುದು ಕೆಲವು ದೇಶಗಳಲ್ಲಿ ಮಾತ್ರವಾದರೂ ಇದರ ಬಗ್ಗೆ ಎಲ್ಲರು ತಿಳಿದುಕೊಳ್ಳುವಂತೆ ಮಾಡಿದೆ. ಇದರಿಂದ ಕಚ್ಚಿಸಿಕೊಂಡವರು ಬದುಕುವುದು ಕಷ್ಟ ಸಾದ್ಯ ಎನ್ನುವ ಮಟ್ಟಿಗೆ ಪ್ರವಾವವನ್ನು ಬೀರಿದೆ ಟೈಫಾನ್.

03. ಬ್ಲೂ ಕ್ರೈಟ್ ಅಥವಾ ಕಟ್ ಹಾವು 

ಬ್ಲೂ ಕ್ರೈಟ್ ಅಥವಾ ಕಟ್ ಹಾವು ಎಂದು ಕರೆಯವಾಗುವ ಈ ಹಾವು ಭಾರತ ದೇಶದಲ್ಲಿ ಹೆಚ್ಚಾಗಿ ಕಂಡುಬರುವ ಹಾವುಗಳಲ್ಲಿ ಒಂದು ಅತ್ಯಂತ ಅಪಾಯಕಾರಿ, ವಿಷಪೂರಿತ ಹಾವುಗಳಲ್ಲಿ ಮೂರನೇ ಸ್ಥಾನದಲ್ಲಿದೆ. ಭಾರತೀಯ ವಿವಿಧ ಭಾಷೆಗಳಲ್ಲಿ ವಿವಿಧ ರೀತಿಯಲ್ಲಿ ಕರೆಯಲಾಗುತ್ತೆ. ಕಾಡು, ಜೌಗು ಪ್ರದೇಶ, ಮತ್ತು ವ್ಯವಸಾಯ ಪ್ರದೇಶಗಲ್ಲಿ ಕಂಡು ಬರುತ್ವೆ. ಇವಗಳು ಮಾನವರ ಮೇಲೆ ಎರಗಿ ಅಪಾಯನ್ನುಂಟು ಮಾಡಿದ ಅನೇಕ ನಿದರ್ಶನಗಳನ್ನ ಕಾಣ್ಬೋದು.
ಇದರ ಸರಾಸರಿ ಉದ್ದ 0.9 ಮೀಟರ್‍ನಿಂದ 1.75 ಮೀಟರ್ ಉದ್ದವಿರುತ್ತೆ. ನೀಲಿ ಬಣ್ಣವು ದೇಹವನ್ನು ಆವರಿಸಿದ್ರೆ ಅಲ್ಲಲ್ಲಿ ಬಿಳಿ ಬಣ್ಣವನ್ನ ಕಾಣಬಹುದು ಮದ್ಯಮ ಗಾತ್ರದ ಆಕಾರವನ್ನು ಹೊಂದಿರುವ ಇದು. ಸಿಲಿಂಟರ್ ಆಕೃತಿಯ ದೇಹವನ್ನು ಹೊಂದಿದೆ. ಮಿಂಚಿನ ವೇಗ ಮತ್ತು ಗ್ರಹಣ ಶಕ್ತಿಯನ್ನ ಹೊಂದಿ. ಅಷ್ಟೇ ವೇಗವಾಗಿ ಬೇಟೆಯಾಡುವ ಹಾವು ಇದಾಗಿದೆ. ಮಾನವರಿಗೆ ಹೆಚ್ಚಿನ ತಲೆ ನೋವನ್ನ ನೀಡುತ್ತೆ, ಭಯವನ್ನ ಹುಟ್ಟಿಸುತ್ತೆ.

02. ಈಸ್ರ್ಟನ್ ಬ್ರೌನ್ ಸ್ನೇಕ್ 

ಈಸ್ರ್ಟನ್ ಬ್ರೌನ್ ಸ್ನೇಕ್ ವಿಶ್ವದ ಅತ್ಯಂತ ವಿಷಪೂರಿತ ಹಾವುಗಳಲ್ಲಿ ಎರಡನೆಯದು. ಆಸ್ಟ್ರೇಲಿಯಾ, ಇಂಡೋನೇಷ್ಯಾ, ನ್ಯೂಗಿನಿಯಾ ಸೇರಿದಂತೆ ಪ್ರಪಂಚದ ಹಲವಾರು ದೇಶಗಳಲ್ಲಿ ಈ ಸಂತತಿಯ ಹಾವುಗಳು ಕಂಡುಬರುತ್ವೆ. ಕಪ್ಪು, ಹಳದಿ, ಮತ್ತು ಬೂದು ಬಣ್ಣಗಲ್ಲಿ ಇವು ಇರುತ್ವೆ. ಇದರ ಬಾಲವು ದೇರಿದಂತೆ ಸರಾಸರಿ ಉದ್ದ 3.6 ರಿಂದ 5.9 ಅಡಿ ಉದ್ದವಿರುತ್ವೆ. 
ನೀಲಗಿರಿ ಕಾಡುಗಳು, ಕರಾವಳಿ ಶ್ರೇಣಿಗಳು, ಸವಾನ್ನ ಕಾಡು, ಹುಲ್ಲುಗಾವಲು ಮತ್ತು ಕೃಷಿ ಪ್ರದೇಶಗಳಲ್ಲಿ ಇದು ಕಂಡುಬರುತ್ತೆ. ಹೆಚ್ಚು ಮಳೆ ಬೀಳುವ ಪ್ರದೇಶದಲ್ಲಿ ಇವು ಇರುವುದಿಲ್ಲ, ಮರುಭೂಮಿಯ ಪ್ರದೇಶಗಳಲ್ಲಿ ಕಂಡುಬರುತ್ವೆ. ಇದು ವೇಗವಾಗಿ ಚಲಿಸುವುದಕ್ಕೆ ಮತ್ತು ಆಕ್ರಮಣ ಮಾಡುವುದಕ್ಕೆ ಹೆಚ್ಚು ಹೆಸರುವಾಸಿಯಾಗಿದೆ. ಇವುಗಳು ಇಲಿ, ಮೊಟ್ಟೆ ಮತ್ತು ಸಣ್ಣ ಪಕ್ಷಿಗಳನ್ನ ಆಹಾರವನ್ನಾಗಿ ತಿನ್ನುತ್ವೆ.

01. ಇನ್‍ಲ್ಯಾಂಡ್ ತಿಪೆನ್  

ಜಗತ್ತಿನ ಮೊದಲ ವಿಷಪೂರಿತ ಹಾವು ಎಂದು ಗುರ್ತಿಸಿಕೊಂಡಿರೋದು ಇನ್‍ಲ್ಯಾಂಡ್ ತಿಪೆನ್, ಇದರ ವಿಷ ಇತರೆ ಹಾವಿನ ವಿಷಕ್ಕಿಂತ ಹೆಚ್ಚು ಇರೋದನ್ನ ಕಾಣ್ಬೋದು. ಆಸ್ಟ್ರೇಲಿಯಾವನ್ನ ಇದರ ಮೂಲ ಸ್ಥಾನ ಎಂದು ಗುರುತು ಮಾಡಲಾಗಿದೆ. ಯಾವುದೇ ಸರಿಸೃಪದ ಮೇಲೆ ಹೆಚ್ಚು ಹಿಡಿತವನ್ನು ಸಾದಿಸುವ ಮತ್ತು ಅಷ್ಟೇ ವೇಗವಾಗಿ ಕೊಲ್ಲುವ ಸಾಮಥ್ರ್ಯ ಇದಕ್ಕಿದೆ. 30 ರಿಂದ 45 ನಿಮಿಷಗಳಲ್ಲಿ ವ್ಯಕ್ತಿಯನ್ನು ಕೊಲ್ಲುವಂತ ವಿಷವನ್ನ ಹೊಂದಿದೆ ಈ ಹಾವು.
ಇನ್‍ಲ್ಯಾಂಡ್ ತೈಪೆನ್ ಹಾವಿನ ಮತ್ತೊಂದು ವಿಶೇಷತೆ ಏನಂದ್ರೆ ಇದು ಕಾಲಗಳಿಗೆ ತಕ್ಕಂತೆ ಬದಲಾವಣೆಯಾಗುತ್ತೆ, ಚಳಿಗಾಲದಲ್ಲಿ ಬ್ರೌನ್ ಬಣ್ಣವನ್ನ ಹೊಂದಿದ್ರೆ ಬೇಸಿಗೆ ಕಾಲದಲ್ಲಿ ಆಲಿವ್ ಬಣ್ಣದಿಂದ ಕೂಡಿರುತ್ತೆ ಮತ್ತು ಚಳಿಗಾಲದಲ್ಲಿ ಬೆಳಕನ್ನು ಹೀರಿಕೊಳ್ಳುವ ಉದ್ದೇಶದಿಂದ ಬಣ್ಣ ಬದಲಾವಣೆ ಹೆಚ್ಚು ಪ್ರಮುಖವಾಗಿರುತ್ತೆ. 
ಈ ಸಂತತಿಯ ಹಾವುಗಳು ಆಹಾರಕ್ಕೆ ಅನುಗುಣವಾಗಿ ಮೊಟ್ಟೆಗಳನ್ನ ಇಡುತ್ವೆ. ಹೆಚ್ಚು ಆಹಾರವನ್ನ ಸೇವಿಸಿದ್ರೆ ಹೆಚ್ಚು ಮೊಟ್ಟೆಗಳನ್ನ ಇಟ್ಟು ಪೋಷಿಸುತ್ವೆ. ಕಡಿಮೆ ಆಹಾರವನ್ನ ತಿಂದ್ರೆ ಕಡಿಮೆ ಮೊಟ್ಟೆಯನ್ನ ಇಡುತ್ವೆ. ಮತ್ತು ಬಂದನದಲ್ಲಿರುವ ಹಾವುಗಳು 10 ರಿಂದ 15 ವರ್ಷಗಳು ಬದುಕಿದ್ರೆ. ಸ್ವತಂತ್ರವಾಗಿ ಕಾಡುಗಳಲ್ಲಿ ವಾಸಿಸುವ ಹಾವುಗಳು ಸುಮಾರು 20 ವರ್ಷಗಳವರೆಗೆ ಬದುಕುತ್ವೆ.

ಮಂಜುನಾಥ್ ಜೈ
manjunathahr1991@gmail.com

ಕಾಮೆಂಟ್‌ಗಳು

ಕಾಮೆಂಟ್‌‌ ಪೋಸ್ಟ್‌ ಮಾಡಿ

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಪ್ರಪಂಚದ 10 ಎತ್ತರದ ಪರ್ವತಗಳು - 26

ಭಾರತದ 10 ಪ್ರಸಿದ್ಧ ರಾಜರು - 22

ಕರ್ನಾಟಕದ 10 ಸುಂದರ ಬೆಟ್ಟಗಳು - 25