ಆಲ್ ಟೈಮ್ ಹಿಟ್ ಹಾಲಿವುಡ್ ಸಿನಿಮಾಗಳು – 06


ಕೆಲವು ಸಿನಿಮಾಗಳು ಹಾಗೆ ಎಷ್ಟು ಸಾರಿ ನೋಡಿದ್ರು ನೋಡಬೇಕು ಅನ್ನಿಸುತ್ತೆ. ಮತ್ತೆ ಕೆಲವು ಸಿನಿಮಾಗಳು ಯಾವಾಗಲು ಹಿಟ್ ಸಿನಿಮಾಗಳೇ ಆಗಿ ಉಳಿದುಕೊಂಡಿರುತ್ವೆ. ಅಂತಹ ಹಾಲಿವುಡ್ ಸಿನಿಮಾಗಳ ಸರಣಿಯ 10 ಸಿನಿಮಾಗಳನ್ನ ನಿಮಗೆ ತೋರಿಸ್ತಿದಿವಿ. ಇದನ್ನ ನೋಡಿದ ಮೇಲೆ ನಿಮಗೆ ಈ ಸಿನಿಮಾಗಳನ್ನ ನೋಡಬೇಕು ಅನ್ನೋದರಲ್ಲಿ ಎರಡು ಮಾತಿಲ್ಲ.

10. ಆಪಾಕಲಿಪ್ಸ್ ನೌವ್ ( 1979 )

1979 ರಲ್ಲಿ ತೆರೆಕಂಡ ಅಪಾಕಲಿಪ್ಸ್ ನೌವ್ ಒಂದು ವಿಮರ್ಷತ್ಮಕ ಚಿತ್ರ ಎಂದರೆ ತಪ್ಪಾಗೊದಿಲ್ಲ. ಇದರ ಚಿತ್ರಕಥೆಯು 1969ರ ವಿಯೆಟ್ನಾ ಯುದ್ದದ ಹಾಗು ಹೋಗುಗಳ ಮೇಲೆ ಬೆಳಕನ್ನು ಚೆಲ್ಲುವಂತಹದ್ದು. ಯುದ್ದದ ಸ್ಥಿತಿ, ಸೈನಿಕರ ಮತ್ತು ಅಲ್ಲಿನ ಜನರ ನಡುವಿನ ತಿಕ್ಕಾಟ ಮತ್ತು ವೆವಸ್ಥೆಯ ಬಗ್ಗೆ ತಿಳಿಸಿ ಹೇಳುವಂತಹ ಚಿತ್ರ ಇದು. 
ಇದನ್ನು ಪ್ರಾನ್ಸಿಸ್ ಕೊಪ್ಟೊಲಾ ನಿರ್ದೇಶನದ ಜೊತೆಗೆ ನಿರ್ಮಾಣವನ್ನು ಕೂಡ ಮಾಡಿದ್ದಾರೆ. ಕಾರ್ಮೈನ್ ಕೊಪ್ಟೊಲಾ ಸಂಗೀತವನ್ನು ನೀಡಿದ್ದು. ವಿಕ್ಟೋರಿಯೋ ಸ್ಟಿರಿಯೋ ಛಾಯಾಗ್ರಹಣದ ಜವಾಬ್ದಾರಿಯನ್ನ ಹೊತ್ತಿದ್ದು. ಮರ್ಲಾನ್ ಬ್ರಾಂಡೋ, ರಾಬರ್ಟ್ ಡುವಲ್, ಮಾರ್ಟಿನ್ ಶೀನ್, ಫ್ರೆಡ್ರಿಕ್ ಫಾರೆಸ್ಟ್ ಮೊದಲಾದವರ ತಾರಾಗಣ ಚಿತ್ರದಲ್ಲಿರೋದನ್ನ ಕಾಣ್ಬೋದು. 
ಈ ಚಿತ್ರಕ್ಕೆ ಅತ್ಯತ್ತಮ ಗೋಲ್ಡ್ ಗ್ಲೋಬ್ ಪ್ರಶಸ್ತಿ ಮತ್ತು ಆಸ್ಕರ್ ಪ್ರಶಸ್ತಿಗೆ ನಾಮ ನಿರ್ದೇಶನವನ್ನು ಕೂಡ ಆಗಿತ್ತು. ಇವುಗಳಲ್ಲದೆ ಅನೇಕ ಪ್ರಶಸ್ತಿಗಳು ಈ ಚಿತ್ರವನ್ನು ಹರಸಿ ಬಂದಿರುವುದನ್ನ ಕಾಣ್ಬೋದು. ಆಗಿನ ಕಾಲಗಟ್ಟಕ್ಕೆ ಈ ಸಿನಿಮಾದ ಬಜೆಟ್ 31.5 ಮಿಲಿಯನ್ ಆದರೆ ಸಿನಿಮಾ ಗಳಿಸಿದ್ದು 150 ಮಿಲಿಯನ್. ಈ ಸಿನಿಮಾ ಅದ್ಬುತವಾಗಿ ಮೂಡಿಬಂದಿದೆ.

09. ದಿ ವಿಜರ್ಡ್ ಆಫ್ ಆಸ್ 

ವಿಕ್ಟರ್ ಪ್ಲೆಮ್ಮಿಂಗ್ ನಿದೇಶನದಲ್ಲಿ 1939ರಲ್ಲಿ ತೆರೆಕಂಡಂತಹ ಚಿತ್ರ ದಿ ವಿಜರ್ಡ್ ಆಫ್ ಆಸ್. ಹಾಸ್ಯ ಭರಿತ ಫ್ಯಾಂಟಸಿ ಕಥೆಯನ್ನ ಹೊಂದಿರೋ ಚಿತ್ರ. ಮೂಲತಃ ವಂಡರ್‍ಫುಲ್ ವಿಜಾರ್ಡ್ ಆಫ್ ಓಜ್ ಎಂಬ ಕಾದಂಬರಿ ಆಧಾರಿತವಾದ ಚಿತ್ರ. ಈ ಚಿತ್ರದ ಕಥೆ, ಸಂಗೀತ ಮತ್ತು ಪಾತ್ರಗಳು ಕಾಲಕ್ರಮೇಣ ಪಾಪ್ ಸಂಸ್ಕøತಿ ಐಕಾನ್ ಆಗಿ ಮಾರ್ಪಟ್ಟಿತು.
ಜ್ಯೂಡಿ ಗಾಲ್ರ್ಯಾಂಡ್, ಫ್ರಾಂಕ್ ಮಾರ್ಗಾನ್, ರೇ ಬೋಲ್ಗರ್, ಬರ್ಟ್ ಲಹರ್ ಸೇರಿದಂತೆ ಅನೇಕ ತಾರಾಗಣವನ್ನ ಈ ಚಿತ್ರದಲ್ಲಿ ಕಾಣ್ಬೋದು. 2.8 ಮಿಲಿಯನ್ ಖರ್ಚು ಮಾಡಿ ನಿರ್ಮಾಣ ಮಾಡಿದ ಈ ಚಿತ್ರಕ್ಕೆ 3 ಮಿಲಿಯನ್ ಮಾತ್ರ ಲಾಭಗಳಿಸಲಿಕ್ಕೆ ಸಾದ್ಯವಾಯಿತು. ನಂತರ ಮರು ಬಿಡುಗಡೆಯಾಗಿ 23.3 ಮಿಲಿಯನ್ ಗಲ್ಲಾಪೆಟ್ಟಿಗೆ ತುಂಬಿಸಿಕೊಡ್ತು.
ಈ ಚಿತ್ರ ಕಥೆ ಮತ್ತು ಅಭಿನಯದ ಮೂಲಕ ಉತ್ತಮ ಚಿತ್ರಗಳ ಸಾಲಿಗೆ ಸೇರಿದೆ. ಜೊತೆಗೆ ವಿಮರ್ಶಕರ ಮೆಚ್ಚುಗಗೆ ಕೂಡ ಪಾತ್ರವಾಗಿದೆ. ಅತ್ಯುತ್ತಮ ಸಂಗೀತ ನಿರ್ದೇಶನ, ಅತ್ಯುತ್ತಮ ಚಿತ್ರ, ಅತ್ಯುತ್ತಮ ಕಲಾ ನಿರ್ದೇಶನ, ಅತ್ಯುತ್ತಮ ಛಾಯಾಗ್ರಾಹಕ ಮೊದಲಾದ ಗೌರವಗಳಿಗೆ ಪಾತ್ರವಾಗಿದೆ ದಿ ವಿಜರ್ಡ್ ಆಫ್ ಆಸ್

08. ಗಾನ್ ವಿತ್ ದ ವಿಂಡ್ 

ಗಾನ್ ವಿತ್ ದ ವಿಂಡ್ ಅಮೇರಿಕನ್ ಅಂರ್ತಯುದ್ಧ ಮತ್ತು ಅದರ ಪುನರ್ ನಿರ್ಮಾಣದ ಬಗ್ಗೆ ಇದು ಹೇಳುತ್ತೆ. ಜಾರ್ಜಿಯ ತೋಟದ ಮಾಲೀಕ ಮತ್ತು ಅವನ ಸುಂದರವಾದ ಮಗಳು, ಮಗಳನ್ನು ವರಿಸಲು ನಡೆಸುವ ಹಲವು ಯುವಕರ ಪ್ರಯತ್ನ ಮೊದಲಾದವುಗಳು ಚಿತ್ರದಲ್ಲಿ ಕಂಡುಬರುತ್ತೆ. ಇದು ಬಿಡುಗಡೆಯಾದ ಆರಂಭದಲ್ಲಿ ಅಮೇರಿಕನ್ ಮೇಲ್ವರ್ಗ ಮತ್ತು ಗುಲಾಮರ ನಡುವಿನ ಸಂಘರ್ಷಕ್ಕೆ ಅನುಮಾಡಿಕೊಟ್ಟಿದಂತು ನಿಜ.
ವಿಕ್ಟರ್ ಪ್ಲೆಮಿಂಗ್ ನಿರ್ದೇಶನದಲ್ಲಿ ಮೂಡಿ ಬಂದಿರುವ ಗಾನ್ ವಿತ್ ದ ವಿಂಡ್ ಮೂಲತಃ ಮಾರ್ಗರೆಟ್ ಮಿಚೆಲ್ ಬರೆದಿರುವ ವಿಂಡ್ ಗಾನ್ ಕಾದಂಬರಿ ಆಧಾರಿತವಾದದ್ದು. ಈ ಚಿತ್ರದಲ್ಲಿ ಕ್ಲಾರ್ಕ್ ಗೇಬಲ್, ವಿವಿಯನ್ ಲೀ, ಲೆಸ್ಲಿ ಹೂವಾರ್ಡ್ ಸೇರಿದಂತೆ ಹಲವಾರು ಅನುಭವಿ ನಟರು ಇದರಲ್ಲಿ ಅಭಿನಯಿಸಿದ್ದಾರೆ.
ಕ್ಲಾರ್ಕ್ ಗೇಬಲ್ ಅವರಿಗೆ ಅತ್ಯತ್ತಮ ನಟ ಪ್ರಶಸ್ತಿ, ವಿವಿಯನ್ ಲೀ ಅವರಿಗೆ ಅತ್ಯುತ್ತಮ ನಟಿ ಪ್ರಶಸ್ತಿ ಮತ್ತು ನಿರ್ದೇಶಕ ವಿಕ್ಟರ್ ಪ್ಲೆಮಿಂಗ್ ಅವರಿಗೆ ಅತ್ಯುತ್ತಮ ನಿರ್ದೇಶಕ ಪ್ರಶಸ್ತಿಯನ್ನ ಪಡೆದುಕೊಂಡಿದ್ದಾರೆ. ಹಲವಾರು ಪ್ರಶಸ್ತಿಗಳು ಈ ಚಿತ್ರವನ್ನ ಹುಡುಕಿಕೊಂಡು ಬಂದಿವೆ. 1939ರಲ್ಲಿ ತೆರೆಕಂಡ ಈ ಚಿತ್ರಕ್ಕೆ 3.85 ದಶಲಕ್ಷ ಕರ್ಚು ಮಾಡಲಾಗಿತ್ತು 3.90 ಬಿಲಿಯನ್ ಗಳಿಸಿಕೊಟ್ಟಿತ್ತು. 

07. ದಿ ಶಾಂಷೇಕ್ ರೆಡಂಪ್ಶಂನ್ 

ಜೈಲು, ಜೈಲಿನಲ್ಲಿರುವ ಖೈದಿಗಳು ಮತ್ತು ಅವರ ಜೀವನದ ಜೊತೆಗೆ ಅಲ್ಲಿಗೆ ತನ್ನ ಹೆಂಡಿತಿ ಮತ್ತು ಅವಳ ಪ್ರಿಯಕರನ್ನು ಕೊಲೆ ಮಾಡಿ ಬರುವ ಕಥಾ ನಾಯಕನ ಸುತ್ತ ಸುತ್ತುವ ಚಿತ್ರ ಕಥೆ ಒಂದು ವಿಭಿನ್ನವಾಗಿ ತೋರುತ್ತದೆ. ತಾನು ಹೊರಗೆ ಬರಲು ಏನು ಮಾಡಬೇಕು ಎಂಬುದನ್ನೇ ಯೋಚನೆ ಮಾಡುವ ಕಥಾ ನಾಯಕ ಇಲ್ಲಿನ ಕೇಂದ್ರ ಬಿಂದು. 
ಈ ಚಿತ್ರಕ್ಕೆ ಎಎಫ್‍ಐ ನ 100 ವರ್ಷಗಳು 100 ಚಲನಚಿತ್ರಗಳು ಪ್ರಶಸ್ತಿ, ಎಎಫ್‍ಐ ನ 100 ವರ್ಷಗಳು 100 ನಾಯಕ ನಟ ಮತ್ತು ಖಳನಟರು. 100 ಸಾಂಗ್ಸ್, 2008ರಲ್ಲಿ 500 ಸಾರ್ವಕಾಲಿಕ ಚಿತ್ರಗಳಿಗೆ ಆಯ್ಕೆ, ಮತ್ತು ನಾಷನಲ್ ಫಿಲ್ಮ ರೆಜಿಸ್ಟ್ರಿ ಈ ಚಿತ್ರಕ್ಕೆ ಸಂದಿರುವ ಗೌರವಗಳು.
ಫ್ರಾಂಕ್ ದರ್‍ಬೋಟ್ ನಿರ್ದೇಶದಲ್ಲಿ ಮೂಡಿಬಂದಿರುವ ದಿ ಶಾಂಷೇಕ್ ರೆಡಂಪ್ಶಂನ್ ಮೂಲ ಕಥೆ ಸ್ಟೀಫನ್ ಕಿಂಗ್ ಬರೆದಿರುವ ರೀಟಾ ಹೇವರ್ತ್ ಮತ್ತು ಶಾಂಷೇಕ್ ರೆಡಂಪ್ಶಂನ್ ಎಂಬುವುದರ ಮೂಲಕ ಆಯ್ಕೆ ಮಾಡಿಕೊಳ್ಳಲಾಗಿದೆ. ಚಿತ್ರದಲ್ಲಿ ಟಿಮ್ ರಾಬಿನ್ಸ್, ಮಾರ್ಗನ್ ಫ್ರೀಮನ್, ಬಾಬ್ ಗುಂಟೊನ್, ವಿಲಿಯಂ ಸ್ಯಾಡ್ಲರ್ ಸೇರಿದಂತೆ ಅನೇಕ ನಟರು ಅಭಿನಯಿಸಿದ್ದಾರೆ. ಇದಕ್ಕೆ ಒಟ್ಟು 25 ಮಿಲಿಯನ್ ಖರ್ಚಾಗಿದ್ರೆ. 58 ಮಿಲಿಯನ್ ಲಾಭಗಳಿಸಿದ್ದನ್ನ ಕಾಣ್ಬೋದು.

06. ದಿ ಡಾರ್ಕ್ ನೈಟ್ 

ಕಾಮಿಕ್ ಪುಸ್ತಕಗಳಲ್ಲಿ ಪ್ರಕಟವಾಗುವ ಪಾತ್ರಗಳನ್ನೇ ಆಧಾರವಾಗಿಟ್ಟುಕೊಂಡು ನಿರ್ಮಾಣ ಮಾಡಿದಂತ ಸಿನಿಮಾ ದಿ ಡಾರ್ಕ್ ನೈಟ್. ಈ ಚಿತ್ರಕ್ಕೆ ಕ್ರಿಸ್ಟಫರ್ ನೂಲನ್ ನಿರ್ದೇಶನ ವ್ಯಾಲಿ ಪಿಫಿಸ್ಟರ್ ಛಾಯಾಗ್ರಣ ಚಿತ್ರಕ್ಕಿದೆ. ತಾರಗಣದಲ್ಲಿ ಕ್ರಿಶ್ಚಿಯನ್ ಬೇಲ್, ಮೈಕೆಲ್ ಕೈನೆ, ಹೀತ್ ಲೆಡ್ಜರ್, ಗ್ಯಾರಿ ಓಲ್ಡ್ ಮ್ಯಾನ್ ಮೊದಲಾದವರು ಚಿತ್ರದಲ್ಲಿ ಅಭಿನಯಿಸಿದ್ದಾರೆ.
ಡಾರ್ಕ್ ನೈಟ್ ಉತ್ತರ ಅಮೇರಿಕಾದಲ್ಲಿ ತೆರೆಕಂಡು 534.9 ಮಿಲಿಯನ್ ಮತ್ತು ಜಗತ್ತಿನಾದ್ಯಂತ 469.7 ಮಿಲಿಯನ್ ಗಳಿಕೆಯನ್ನ ತಂದುಕೊಟ್ಟಿತ್ತು. ಇದು ಅತೀ ಹೆಚ್ಚು ಗಳಿಕೆಯ ಚಿತ್ರಗಳ ಸಾಲಿನಲ್ಲಿ 28ನೆಯ ಸ್ಥಾನವನ್ನ ಪಡೆದುಕೊಂಡಿದೆ. ಒಂದು ಶತಕೋಟಿ ಗಳಿಸಿದ 4ನೇ ಚಿತ್ರ ಮತ್ತು ಸಾರ್ವಕಾಲಿಕ ಪಟ್ಟಿಯಲ್ಲಿ ನಾಲ್ಕನೇ ಸ್ಥಾನವನ್ನ ಪಡೆದುಕೊಡಿದೆ.
ಜೋಕರ್ ಮತ್ತು ಸೂಪರ್ ಹೀರೋ ಮಧ್ಯೆ ನಡೆಯುವ ಕದನದ ಕಥಾವಸ್ತುವನ್ನ ಹೊಂದಿರೋ ಚಿತ್ರ ಇದು. ಇದರ ಸಂಪೂರ್ಣ ಚಿತ್ರವನ್ನ ಅರ್ಥ ಮಾಡಿಕೊಳ್ಳಬೇಕಾದ್ರೆ ಸಿನಿಮಾವನ್ನೆ ನೋಡ್ಬೇಕು.

05. ಸ್ಟಾರ್ ವಾರ್ ಎಫಿಸೋಡ್ 5 ದಿ ಎಂಪೈಯರ್ ಸ್ಟ್ರೈಕ್ಸ್ ಬ್ಯಾಕ್ 1980 

ಇರ್ವಿನ್ ಕೆಶ್ರ್ನರ್  ನಿರ್ದೇಶನದಲ್ಲಿ ಮೂಡಿಬಂದಿರುವ ಸ್ಟಾರ್ ವಾರ್ ಎಫಿಸೋಡ್ 5 ದಿ ಎಂಪೈಯರ್ ಸ್ಟ್ರೈಕ್ಸ್ ಬ್ಯಾಕ್ ಆಕ್ಷನ್, ಥ್ರಿಲ್ಲರ್ ಲವ್ ಇರೊ ಅಂತಹ ಸಿನಿಮಾ ಅನ್ನೋದರಲ್ಲಿ ಎರಡು ಮಾತಿಲ್ಲ. ಈ ಚಿತ್ರಕ್ಕೆ ಜಾರ್ಜ್ ಲ್ಯೂಕಾಸ್ ಕಥೆಯನ್ನ ಬರೆದಿದ್ರೆ ಗ್ಯಾರಿ ಕಟ್ರ್ಜ್ ನಿರ್ಮಾಣದಲ್ಲಿ ಮೂಡಿಬಂದಿತ್ತು. 
1980ರಲ್ಲಿ ತೆರೆಕಂಡ ಈ ಚಿತ್ರ ಹಲವು ವಿಶೇಷತೆಗಳಿಂದ ವಿಮರ್ಶೆಗೆ ಒಳಪಟ್ಟಿತ್ತು. ಸಾರ್ವಕಾಲಿಕ ಮಹಾನ್ ಚಿತ್ರಗಳ ಸಾಲಿನ 500 ಚಿತ್ರಗಳಲ್ಲಿ ಒಂದು ಎನಿಸಿದೆ. 18.33 ಮಿಲಿಯನ್‍ನಲ್ಲಿ ತಯಾರಾದ ಈ ಚಿತ್ರ ಮತ್ತೆ ಮತ್ತೆ ಮರುಬಿಡುಗಡೆಯಾಗುತ್ತಾ 534 ಮಿಲಿಯನ್‍ಗೂ ಹೆಚ್ಚು ಲಾಭವನ್ನ ಗಳಿಸಿತ್ತು.
ಪ್ರೇಕ್ಷಕರಿಗೆ ಉತ್ತಮ ಮನರಂಜನೆಯನ್ನು ನೀಡುವ ಮೂಲಕ ತೆರೆಕಂಡ ಈ ಚಿತ್ರ. ಕೊಟ್ಟ ಮಾತನ್ನು ಉಳಿಸಿಕೊಳ್ತು. ಮತ್ತು ಇಡೀ ಪ್ರಪಂಚದಾದ್ಯಂತ ತೆರೆಕಂಡು ಒಳ್ಳೆ ಕಲೆಕ್ಷನ್ ಕೂಡ ಮಾಡಿತ್ತು. ಹಲವಾರು ಪ್ರಶಸ್ತಿಗಳನ್ನು ಬಾಚಿಕೊಳ್ಳುವುದರ ಮೂಲಕ ಆಲ್ ಟೈಮ್ ಹಿಟ್ ಸಿನಿಮಾಗಳ ಸಾಲಿನಲ್ಲಿ 5ನೇ ಸಾಲಿನಲ್ಲಿ ನಿಲ್ಲುತ್ತೆ.

04. ಸೈಕೊ 1960

ಮಾನಸಿಕ ಭಯಾನಕ ಸಿನಿಮಾಗಳಲ್ಲಿ ಸೈಕೊ ಒಂದು ವಿಭಿನ್ನವಾದ ಸಿನಿಮಾ ಅನ್ನೋದರಲ್ಲಿ ಅನುಮಾನವೇ ಇಲ್ಲ. ಪ್ರತಿ ದೃಶ್ಯಗಳು ಕುತೂಹಲವನ್ನ ಮೂಡಿಸುತ್ವೆ. ನೋಡುಗರನ್ನು ಪಕ್ಕಕ್ಕೆ ಕದಲದಂತೆ ಹಿಡಿದಿಡುತ್ತೆ. ಕಪ್ಪು ಬಿಳುಪು ಬಣ್ಣಗಳಿಂದ ತಯಾರಾದ ಈ ಚಿತ್ರ ಆಲ್ ಟೈಮ್ ಹಿಟ್ ಸಿನಿಮಾಗಳ ಸಾಲಿನಲ್ಲಿ 4 ನೇ ಸಾಲಿನಲ್ಲಿ ನಿಲ್ಲುವುದಕ್ಕೆ ಇದರಲ್ಲಿನ ಹಲವಾರು ವಿಶೇಷತೆಗಳೆ ಕಾರಣ ಎನ್ನುವುದರಲ್ಲಿ ಅನುಮಾನವಿಲ್ಲ.
1960ರಲ್ಲಿ ತೆರೆಕಂಡ ಈ ಚಿತ್ರ ಹಲವು ಹೊಸತನನವನ್ನು ಒಳಗೊಂಡಿತ್ತು. ಮೇರಿಯನ್ ಕ್ರೇನ್ ಹೊಟೆಲ್ ಮಾಲೀಕನಿಂದ ಹಣ ಕದಿಯು ದೃಶ್ಯದಿಂದ ಆರಂಭವಾಗುವ ಚಿತ್ರಕಥೆ ಅತ್ಯವನ್ನು ಕಾಣುವುದು ಒಂದು ರೋಮಾಂಚನವೇ ಸರಿ. ಅತ್ಯುತ್ತಮ ಪೋಷಕ ನಟ, ಅತ್ಯುತ್ತಮ ನಿರ್ದೇಶಕ ಮೊದಲಾದ ಬಹುಮಾನಗಳು ಈ ಚಿತ್ರಕ್ಕೆ ಸಂದ ಗೌರವವಾಗಿವೆ.
ಅಲ್ಟ್ರೆಡ್ ಹಿಚ್ಕಾಕ್ ನಿರ್ದೇಶನ ಚಿತ್ರಕ್ಕಿದ್ದರೆ ಆಂಥನಿ ಪರ್ಕಿನ್ಸ್, ವೆರಾ ಮೈಲ್ಸ್, ಜಾನ್ ಗೇವಿನ್ ಸೇರಿದಂತೆ ಹಲವಾರು ಕಲಾವಿದರು ಚಿತ್ರದಲ್ಲಿ ಅಭಿನಯಿಸಿದ್ದಾರೆ. ಈ ಚಿತ್ರಕ್ಕೆ ಬರ್ನಾಡ್ ಹರ್ಮನ್ನ್ ಸಂಗೀತವಿದೆ ಜಾನ್ ಎಲ್ ರಸ್ಸೆಲ್ ಛಾಯಾಗ್ರಹಣ ಚಿತ್ರಕ್ಕೆ ಇದೆ.

03. ಫುಲ್ಪ್ ಫಿಕ್ಷನ್ 1994

ಕ್ವೆಂಟಿನ್ ಟ್ಯಾರಂಟಿನೊ ನಿರ್ದೇಶಿಸಿರುವ ಹಾಸ್ಯ ಮತ್ತು ಅಪರಾಧದ ಕಥಾ ಹಂದರವನ್ನ ಹೊಂದಿರೋ ಚಿತ್ರ ಫುಲ್ಸ್ ಫಿಕ್ಷನ್. ನೋಡುವ ಪ್ರೇಕ್ಷಕನಿಗೆ ಹೆಚ್ಚು ಮನರಂಜನೆಯನ್ನ ನೀಡುತ್ತೆ. ನಿಯತಕಾಲಿಕೆಗಳು, ಅಪರಾದವನ್ನ ಮಾಡುವ ಅಪರಾಧಿಗಳು. ವಿಶೇಷವಾದ ವಿಷಯ ಮತ್ತು ಹಾಸ್ಯಭರಿತ ದೃಶ್ಯಗಳನ್ನೊಳಗೊಂಡಿದೆ. 
1994ರಲ್ಲಿ ತೆರೆ ಕಂಡ ಈ ಚಿತ್ರಕ್ಕೆ ಅದೇ ವರ್ಷ ನಡೆದ ಕ್ಯಾನೆಸ್ ಚಲನಚಿತ್ರೋತ್ಸವದಲ್ಲಿ ಭಾಗವಹಿಸಿ ಪ್ರಶಸ್ತಿಗೆ ಬಾಜನವಾಗಿತ್ತು. ಪಾಲ್ಮೆಡಿ ಓರ್ ಪ್ರಶಸ್ತಿಗೆ ಕೂಡ ಈ ಚಿತ್ರ ಪಡೆದುಕೊಂಡಿದ್ದನ್ನು ಇಲ್ಲಿ ಕಾಣ್ಬೋದು. ಕಥೆಯಲ್ಲಿಯೇ ಆಗಲಿ. ಕಥೆಯ ನಿರೋಪಣೆಯಲ್ಲಿಯೇ ಆಗಲಿ ನಿರ್ದೇಶಕರು ಇಲ್ಲಿ ಎಡವಿದ್ದು ಕಂಡುಬರುವುದಿಲ್ಲ. ಚಿತ್ರ ಅದ್ಬುತವಾಗಿ ಮೂಡಿಬಂದಿದೆ.
ಇನ್ನೂ ಉಳಿದಂತೆ ಚಿತ್ರದಲ್ಲಿ ಜಾನ್ ಟ್ರಾವಲ್ಟ್, ಸ್ಯಾಮ್ಯುಯೆಲ್ ಎಲ್ ಜಾಕ್ಸನ್, ಉಮಾ ಥರ್ಮನ್, ಹಾರ್ವೆ ಕಿಟೆಲ್ ಸೇರಿದಂತೆ ಹಲವಾರು ನಟ ನಟಿಯರು ಈ ಚಿತ್ರದಲ್ಲಿ ಬಣ್ಣ ಹಚ್ಚಿದ್ದಾರೆ. ಆಂಡ್ರೆಜ್ ಚಿತ್ರಕ್ಕೆ ಕ್ಯಾಮರ ಹಿಡಿದಿದ್ರೆ, ಲಾರೆನ್ಸ್ ಬೆಂಡರ್ ನಿರ್ಮಾಣದಲ್ಲಿ ಈ ಚಿತ್ರ ಮೂಡಿಬಂದಿತ್ತು.

02. ಸಿಟಿಸನ್ ಕೇನ್ 1941

1941ರಲ್ಲಿ ಆರ್ಸನ್ ವೆಲ್ಲಸ್ ನಟಿಸಿ ನಿರ್ದೇಶನ ಮಾಡಿದಂತಹ ಚಿತ್ರ ಸಿಟಿಸನ್ ಕೇನ್. ಇದು ಎಲ್ಲಾ ಸಮಯದಲ್ಲೂ, ಎಲ್ಲಾ ಕಾಲದಲ್ಲೂ ನೋಡಬಹುದಾದಂತಹ ಅದ್ಬುತ ಚಿತ್ರ ಎನ್ನುವಂತಹಗಳ ಸಾಲಿನಲ್ಲಿ ಸೇರಿದೆ. 2012ರ ವರ್ಟಿಗೊ ಸಮೀಕ್ಷೆಯಲ್ಲಿ ಈ ಚಿತ್ರ ಅಗ್ರಸ್ಥಾನದಲ್ಲಿ ನಿಲ್ಲುತ್ತೆ. ಅಮೇರಿಕನ್ ಫಿಲ್ಮ್ ಇನ್ಸ್ಟಿಟ್ಯೂಟ್ ಅವರ 100ವರ್ಷ 100 ಚಲನಚಿತ್ರಗಳಲ್ಲಿ ಇದು ಒಂದೆನೆಸಿದೆ. 
ಆರ್ಸನ್ ವೆಲ್ಲಸ್ ಹೊರತು ಪಡಿಸಿ ಜೊಸೆಫ್, ಡೊರೊಥಿ, ಎವರೆಂಟ್ ಸ್ಲೋಯನ್ ಮೊದಲಾದವರು ಅಭಿನಯಿಸಿದ್ದಾರೆ. ಗ್ರೇಕ್ ಟೊಲ್ಯಾಂಡ್ ಛಾಯಾಗ್ರಹಣವನ್ನ ಮಾಡಿದ್ರೆ ಬರ್ನಾಡ್ ಹರ್ಮನ್ಸ್ ಸಂಗೀತವನ್ನು ನೀಡಿದ್ದಾರೆ. ಚಿತ್ರ ಅದ್ಬುತವಾಗಿ ಮೂಡಿಬಂದಿದ್ದು. ಆ ಕಾಲಗಟ್ಟದಲ್ಲಿ ಉತ್ತಮ ಪ್ರತಿಕ್ರಿಯೆಯನ್ನ ಗಳಿಸಿತ್ತು.

01. ಬ್ಯಾಕ್ ಟು ದಿ ಫ್ಯೂಚರ್ 1985

ರಾಬರ್ಟ್ ಜೆಮೆಕಿಸ್ 1985ರಲ್ಲಿ ನಿರ್ದೇಶನಮಾಡಿದ ಬ್ಯಾಕ್ ಟು ದಿ ಫ್ಯೂಚರ್. 1942ರಲ್ಲಿ ಮೈಕೆಲ್ ಕ್ರಿಸ್ಟೀಸ್ ನಿರ್ದೇಶನದಲ್ಲಿ ತೆರೆಕಂಡ ಕಾಸಾಬ್ಲಾಂಕ, ಎಲಿಯನ್ ಕರ್ಜನ್ ನಿರ್ದೇಶಕನಾಗಿ ಮತ್ತು ಮರ್ಲಾನ್ ಬ್ರಾಂಡೊ ನಾಯಕ ನಟನಾಗಿ ಕಾಣಿಸಿಕೊಂಡಿರುವ ಚಿತ್ರ ವಾಟರ್ ಫ್ರಂಟ್.  ಒಂದು ರಿಂಗಿನ ಸುತ್ತಾ ಸುತ್ತುವ ದಿ ಲಾರ್ಡ್ ಆಫ್ ದ ರಿಂಗ್ಸ್ ದಿ ರಿಟರ್ನ್ ಆಫ್ ದಿ ಕಿಂಗ್ಸ್ ಜಗತ್ತಿನ ಅದ್ಬುತ ಚಿತ್ರಗಳಲ್ಲಿ ಒಂದು. 
1972ರಲ್ಲಿ ತೆರೆಕಂಡ ಗಾಡ್ ಫಾದರ್ ಮತ್ತು ಮೆಟೋಪೊಲೆಸ್ ಸೇರಿದಂತೆ ಬಹುತೇಕ ಹಾಲಿವುಡ್ ಸಿನಿಮಾಗಳು ನಂಬರ್ ಒಂನ್  ಸ್ಥಾನದಲ್ಲಿ ನಿಲ್ಲುತ್ವೆ. ಇದರಲ್ಲಿ ಕಥೆ ಚಿತ್ರಕಥೆ ಮತ್ತು ಪಾತ್ರಗಳ ನಟನೆಯ ಬಗ್ಗೆ ಅವಲೋಕನ ಮಾಡಿದ್ರೆ ಇವುಗಳ ವಿಶೇಷತೆಯ ಬಗ್ಗೆ ತಿಳುವಳಿಕೆ ಮೂಡುತ್ತೆ. 

ಮಂಜುನಾಥ್ ಜೈ
manjunathahr1991@gmail.com



ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಪ್ರಪಂಚದ 10 ಎತ್ತರದ ಪರ್ವತಗಳು - 26

ಭಾರತದ 10 ಪ್ರಸಿದ್ಧ ರಾಜರು - 22

ಕರ್ನಾಟಕದ 10 ಸುಂದರ ಬೆಟ್ಟಗಳು - 25