ಅಪಾಯಕಾರಿ ರಸ್ತೆಗಳು - 02


ಇಡೀ ಪ್ರಪಂಚವನ್ನ ಹತ್ತಿರಕ್ಕೆ ತಂದಿರೋದು ರಸ್ತೆಗಳು, ಯಾವುದೇ ಸರಕುಗಳು ಇರಲಿ, ಸರಂಜಾಮುಗಳೇ ಇರಲಿ ಒಂದು ಕಡೆಯಿಂದ ಮತ್ತೊಂದು ಕಡೆಗೆ ಬಹಳ ಸುಲಭವಾಗಿ ಸಾಗಿಸೋಕೆ ಸಹಾಯವನ್ನ ಮಾಡುತ್ವೆ. ಎಲ್ಲಾ ಕಡೆ ರಸ್ತೆಗಳು ಒಂದೇ ತೆರನಾಗಿ ಇರೋದಿಲ್ಲ ಒಂದು ಕಡೆ ಇಳಿಜಾರಿದ್ದರೆ ಮತ್ತೊಂದು ಕಡೆ ನಿದಾನವಾಗಿ ಸಾಗುವ ಏರು ದಿಬ್ಬವಿರುತ್ತೆ, ಮತ್ತೊಂದು ಕಡೆ ಪ್ರಾಣಾಪಾಯವನ್ನ ತಂದೊಡ್ಡುತ್ತೆ ಇಂತಹ ಅಪಾಯಕಾರಿ 10 ರಸ್ತೆಗಳು ಇಲ್ಲಿವೆ ನೋಡಿ.

10. ಟ್ರಾನ್ಸ್ ಸೈಬೀರಿಯನ್ ಹೈವೆ 

ಟ್ರಾನ್ಸ್ ಸೈಬೀರಿಯನ್ ಹೈವೆ ರಷ್ಯಾದಿಂದ ಅಂಡೋರಾ ಮತ್ತು ಅಟ್ಲಾಂಟಿಕ್ ಸಾಗರ ಮತ್ತು ಜಪಾನಿನ ಸಮುದ್ರಗಳನ್ನ ಸೇರುತ್ತೆ, ಇದು ಸುಮಾರು 11.000 ಕಿಲೋ ಮೀಟರ್ ದೂರದ ವಿಸ್ತೀರ್ಣವವನ್ನು ಹೊಂದಿ, ಇಡೀ ಪ್ರಪಂಚದಲ್ಲೇ ಅತೀ ದೊಡ್ಡದಾದ ರಾಷ್ಟ್ರೀಯ ಹೆದ್ದಾರಿ ಎಂಬ ಖ್ಯಾತಿಯನ್ನ ಪಡೆದುಕೊಂಡಿದೆ. 

ಅತೀ ಹೆಚ್ಚು ವಾಹನಗಳು ಇಲ್ಲಿ ಸಂಚಾರ ಮಾಡುತ್ವೆ, ಜೊತೆಗೆ ಅನೇಕ ಸಮಸ್ಯಗಳಿಗೂ ಕೂಡ ಒಳಗಾಗುತ್ವೆ. ಅತೀ ಹೂಳು ತುಂಬಿಕೊಳ್ಳುವ ರಸ್ತೆಗಳನ್ನ ಅಲ್ಲಲ್ಲಿ ಹೊಂದಿದೆ ಟ್ರಾನ್ಸ್ ಸೈಬೀರಿಯನ್ ಹೆದ್ದಾರಿ. ಅನೇಕ ಬಸ್‍ಗಳು, ಲಾರಿಗಳು ಅದರೊಳಗೆ ಹೂತು ಕೊಳ್ಳುತ್ವೆ, ಮುಂದಕ್ಕೆ ಹೋಗಲಾರದೆ ಪಲ್ಟಿ ಹೊಡೆದ ಉದಾಹರಣೆಗಳು ತುಂಬಾನೇ ಇವೆ.

ಟ್ರಾನ್ಸ್ ಸೈಬೀರಿಯನ್ ಹೈವೆ ಎಷ್ಟು ದೊಡ್ಡದಿದೆಯೊ ಅಷ್ಟೇ ಭಯಾನಕ ಕೂಡ. ಅಪಘಾತಗಳು ಹೆಚ್ಚಾಗಿಯೇ ಸಂಭವಿಸುತ್ವೆ, ಆದ್ದರೀಂದಾನೇ ಪ್ರಪಂಚದ ಅತ್ಯಂತ ಅಪಾಯಕಾರಿ ರಸ್ತೆಗಳ ಸಾಲಿನಲ್ಲಿ 10ನೇ ಸ್ಥಾನವನ್ನ ಪಡೆದುಕೊಂಡಿದೆ. ಇಷ್ಟಾದರು ಅತ್ತ ಕಡೆ ಸಂಚರಿಸುವ ವಾಹನಗಳಿಗೇನು ಕಡಿಮೆ ಇಲ್ಲಾ. ಹಲವು ದೇಶಗಳಿಗೆ ಕೊಂಡಿಗಳಾಗಿದೆ ಟ್ರಾನ್ಸ್ ಸೈಬೀರಿಯನ್ ಹೈವೆ.

09. ಸ್ಟೆಲ್ವಿಯೋ ಪಾಸ್

ಸ್ಟೆಲ್ವಿಯೋ ಪಾಸ್ ಉತ್ತರ ಇಟಲಿಯಲ್ಲಿರುವ ನೋಡುವುದಕ್ಕೆ ಸುಂದರವಾಗಿ ಕಾಣುವ ರಸ್ತೆ, ಸುಮಾರು 9.042 ಅಡಿ ಸಮುದ್ರ ಮಟ್ಟದಿಂದ ಎತ್ತರದಲ್ಲಿರುವ ಇದು. ಪರ್ವತ ಪ್ರದೇಶಗಳನ್ನು ಸುತ್ತಿಕೊಂಡು ಸಾಗುವ ರಸ್ತೆ. ಸ್ಟೆಲ್ವಿಯೋ ಪಾಸ್ ಕೇವಲ 70 ಕಿ ಮೀ ಇದೆ. ಆದರೆ ಇದರ ಪ್ರಯಾಣ ಅತ್ಯಂತ ಬೀಕರವಾಗಿರುತ್ತೆ.

ಪ್ರತಿವರ್ಷ ಆಗಸ್ಟ್ ಕೊನೆಯ ವಾರ ಈ ಪ್ರದೇಶದಲ್ಲಿ ಬೈಕ್ ಡೇ ಆಚರಿಸಲಾಗುತ್ತೆ. ಆಗ ಇಲ್ಲಿ ಸ್ಪರ್ದೆಗೆ ಭಾಗವಹಿಸುವ ಬೈಕ್‍ಗಳನ್ನ ಹೊರತು ಪಡಿಸಿ ಬೇರೆ ವಾಹನಗಳಗೆ ಪ್ರವೇಶವಿರೋದಿಲ್ಲ. ಇದಕ್ಕೆ ಹೆಚ್ಚಾಗಿ ಜನ ಭಾಗವಹಿಸುತ್ತಾರೆ.

ನಿಸರ್ಗದ ಮಡಿಲಲ್ಲಿ, ಪರ್ವತ ಶ್ರೇಣಿಯ ಒಡಲಲ್ಲಿ ನೀರು ಹರಿದಂತೆ ನಿರ್ಮಾಣವಾಗಿರೋ ಈ ರಸ್ತೆ, ಇಲ್ಲಿ ನಡೆಯುವಂತ ಅಪಘಾತಗಳು, ಮತ್ತು ದುರ್ಗಮ ದಾರಿಯಿಂದಾಗಿ ಅತೀ ಅಪಾಯಕಾರಿ ರಸ್ತೆಗಳ ಸಾಲಿನಲ್ಲಿ 9ನೇ ಸ್ಥಾನದಲ್ಲಿದೆ. ಇಲ್ಲಿನ ಪ್ರಯಾಣ ಮೋಜು ತರಿಸುವಂತದ್ದಾದರು. ಅಪಾಯವಂತೂ ಕಂಡಿತಾ.

08. ಲಾಸ್ ಕ್ಯಾರಿಕಲ್ ಪಾಸ್ 

ಲಾಸ್ ಕ್ಯಾರಿಕಲ್ ಪಾಲ್ ಬೆಟ್ಟ ಗುಡ್ಡ ಮತ್ತು ಕಣಿವೆಗಳಲ್ಲಿ ಹಾದು ಹೋಗಿರುವಂತಹ ರಸ್ತೆ. ಒಂದು ಸಾರಿ ಎರಡು ವಾಹನಗಳು ಸಂಚಾರ ಮಾಡ್ಬೋದು,  ಇಲ್ಲಿ ಚಾಲನೆ ಮಾಡೋದು ಅಷ್ಟು ಸುಲಭದ ಕೆಲಸವೇನು ಅಲ್ಲಾ. ಸ್ವಲ್ಪ ಹೆಚ್ಚು ಕಮ್ಮಿ ಆದ್ರೂ ವೆಹಿಕಲ್ ಇರ್ಲಿ, ಬಾಡಿ ಸಿಗೋದು ಅನುಮಾನವೇ.

ಈ ರಸ್ತೆ ಇರೋದು ಚಿಲಿ ದೇಶದಲ್ಲಿ,  ಹಾವು ಸಾಗಿದ ದಾರಿಯಂತೆ ನಿರ್ಮಾಣ ಮಾಡಿದ್ದಾರೆ ಇದನ್ನ ಆಗಾಗ್ಗೆ ಕುಸಿಯುವ ಬೆಟ್ಟಗಳಿಂದ ರಸ್ತೆ ಹಾಳಾಗಬಾರದು ಅಂತ ತಡೆ ಗೋಡೆಯನ್ನ ನಿರ್ಮಾಣ ಮಾಡಲಾಗಿದೆ, ಅಂಡರ್ ಪಾಸ್ ನಿರ್ಮಾಣ ಕೂಡ ಜೊತೆಗಿದೆ. ಅಲ್ಲಲ್ಲಿ ಅಂಗಡಿಗಳೂ ಇರೋದ್ರಿಂದ ಪ್ರಯಾಣ ಮಾಡೋರಿಗೆ ಸ್ವಲ್ಪ ಸಮಯದ ವಿಶ್ರಾಂತಿ ಸಿಗೋದಂತು ಕಂಡಿತ.

ಎತ್ತರದ ಪ್ರದೇಶಕ್ಕೆ ಏರುವಾಗು ಅನೇಕ ಅವಘಡಗಳು ಸಂಭವಿಸುತ್ವೆ, ಇಲ್ಲಿ ಹೆಚ್ಚಾಗಿ ಟ್ರಕ್‍ಗಳು ಸಂಚಾರ ಮಾಡೋದ್ರಿಂದ ತುಂಬಾ ಎಚ್ಚರಿಕೆಯಿಂದ ಚಾಲನೆ ಮಾಡುತ್ತಾರೆ, ಆದರೂ ಲಾಸ್ ಕ್ಯಾರಿಕಲ್ ಪಾಸ್ ಅಪಾಯಕಾರಿ ರಸ್ತೆಗಳಲ್ಲಿ 08ನೇ ಸ್ಥಾನದಲ್ಲಿದೆ. 

07. ಸ್ಕಿಪೀಯರ್ಸ್ ಕ್ಯಾನಿಯನ್ ರೋಡ್

ವಾ/ಒ : ನ್ಯೂಜಿಲ್ಯಾಂಡ್ ದೇಶದಲ್ಲಿರೋ ಅತ್ಯಂತ ಅಪಾಯಕಾರಿ ರಸ್ತೆ ಅಂದ್ರೆ ಸ್ಕಿಪೀಯರ್ಸ್ ಕ್ಯಾನಿಯನ್ ರೋಡ್, ಇದರಲ್ಲಿ ಪ್ರಯಾಣ ಮಾಡ್ತಿನಿ ಅಂದ್ರೆ ಡಬಲ್ ಗುಂಡಿಗೆ ಬೇಕು ಅದರಲ್ಲೂ ಬೈಕ್ ರೈಡ್ ಮಾಡ್ತಿನಿ ಅಂದ್ರೆ ಗಟ್ಟಿ ಹೃದಯ ಇರ್ಲೇ ಬೇಕು ಯಾಕಂದ್ರೆ ಸುಲಭವಾದ ಟಾರ್ ಅಥವಾ ಕಾಂಕ್ರಿಟ್ ರೋಡ್ ಇದು ಕಂಡಿತಾ ಅಲ್ಲ ಕಲ್ಲು ಮಿಶ್ರಿತ ಮಣ್ಣು ರಸ್ತೆ.

ಕೇವಲ 22 ಕಿ.ಮೀ ಪ್ರಯಾಣಿಸ ಬಹುದಾದ ಅಂತರವಿರುವ ಈ ರಸ್ತೆ ಅತ್ಯಂತ ಅಪಾಯಾಕಾರಿ. ಬೆಟ್ಟ ಗುಡ್ಡ ಪರ್ವತ ಪ್ರದೇಶಗಳಿಂದ ಕೂಡಿರುವ ಈ ಪ್ರದೇಶವು ಕ್ವಿಂಗ್ಸ್‍ಟೌನ್ ಪ್ರದೇಶವನ್ನ ಸೇರುತ್ತೆ. ಈ ರಸ್ತೆಯು ಅನೇಕ ರಾಜ ಮನೆತನಗಳ ಆಳ್ವಿಕೆಗೆ ಒಳಪಟ್ಟಿದ್ದ ಉದಾಹರಣೆಗಳನ್ನ ಇಲ್ಲಿ ಕಾಣ್ಬೋದು.

06. ದಿ ಸೋಜಿ ಪಾಸ್, ಇಂಡಿಯಾ

ದಿ ಬ್ಯೂಟಿಫುಲ್ ಕಂಟ್ರಿ ಇಂಡಿಯಾದಲ್ಲೇನು ಡೇಂಜರಸ್ ರೋಡ್‍ಗಳು ಇಲ್ಲಾ ಅಂತ ಏನು ಅಲ್ಲಾ. ಇಲ್ಲಿ ಕೂಡ ತುಂಬಾನೇ ರೋಡ್ ಗಳು ಇವೆ. ಅದರಲ್ಲಿ ದಿ ಮೋಸ್ಟ್ ಡೇಂಜರಸ್ ರೋಡ್ ಅಂದ್ರೆ ಜಮ್ಮು ಕಾಶ್ಮೀರದ ದಿ ಸೋಜಿ ಪಾಸ್. ಅತ್ಯಂತ ಅಪಾಯಕಾರಿ ಮತ್ತು ಪ್ರಾಣ ಹಾನಿ ರಸ್ತೆ ಎನಿಸಿಕೊಂಡಿದೆ.

ಇದು ಸಮುದ್ರ ಮಟ್ಟದಿಂದ 13.0000 ಅಡಿ ಎತ್ತರದಲ್ಲಿದೆ. ಪರ್ವತ ಪ್ರದೇಶದ್ಲಲಿನ ಸುಂದರ ಪ್ರದೇಶ ಅಷ್ಟೇ ಅಪಾಯಕಾರಿ. ಈ ರಸ್ತೆ ಕಾಶ್ಮೀರ ಕಣಿವೆಯ ಲಡಾಕ್ ಪ್ರದೇಶಕ್ಕೆ ಸಂಪರ್ಕವನ್ನ ಕಲ್ಪಿಸುತ್ತೆ. ಅಲ್ಲದೆ ಟಿಬೆಟ್, ಚೀನಾ, ಮತ್ತು ಮಧ್ಯ ಏಷ್ಯಾ ಪ್ರದೇಶದ ಕಡೆಗೆ ಸಂಪರ್ಕವನ್ನ ಹೊಂದಿದೆ. 

ಸುಮಾರು 3528 ಕಿ.ಮೀ ಉದ್ದವಿರುವ ದಿ ಸೋಜಿ ಪಾಸ್. ಯೂರಿ, ಶ್ರೀ ನಗರ, ಲೇಹ್ ಹೆದ್ದಾರಿಗಳ ನಡುವೆ ಹಾದು ಹೋಗಿದೆ. ಸುಂದರ ಪ್ರದೇಶದಲ್ಲಿರುವ ಈ ದಾರಿಯಲ್ಲಿ ಹೆಚ್ಚಾಗಿ ಇಂಡಿಯನ್ ಆರ್ಮಿ ಮತ್ತು ಖಾಸಗಿ ವಾಹನಗಳು ಓಡಾಡುತ್ವೆ. ಹಚ್ಚು ಪ್ರವಾಸಿಗರನ್ನು ಆಕರ್ಷಿಸುತ್ತವೆ ಇಲ್ಲಿನ ಪ್ರೇಕ್ಷಣೀಯ ಸ್ಥಳಗಳು. ಮಳೆಗಾಲದಲ್ಲಿ ರಸ್ತೆಯ ತುಂಬೆಲ್ಲಾ ನೀರು ಹರಿದು ಕೊಚ್ಚೆಯ ರೀತಿ ಕಂಡ್ರೆ ಬಿರು ಬೇಸಿಗೆಯಲ್ಲಿ ಧೂಳು ಕಣ್ಣನನ್ನ ತುಂಬುತ್ತೆ. ಅತ್ಯಂತ ಅಪಾಯಕಾರಿ ರಸ್ತೆಯಲ್ಲಿ 6ನೇ ಸ್ಥಾನವನ್ನ ಪಡೆದುಕೊಂಡಿದೆ ದಿ ಸೋಜಿ ಪಾಸ್.

05. ಗೂಲಿಂಗ್ ಟ್ಯೂನಲ್ ರೋಡ್ - ಚೀನಾ

ಚೀನಾ ದೇಶಲ್ಲೇ ಇರಬಹುದು ತುಂಬಾ ಅಪಾಯಕಾರಿ ರಸ್ತೆಗಳು, ಅದರಲ್ಲಿ 05ನೇ ಸ್ಥಾನವನ್ನ ಪಡೆದುಕೊಂಡಿದೆ ಗೊಲಿಂಗ್ ಟ್ಯೂನಲ್ ರೋಡ್, ಬಂಡೆಯನ್ನು ಕೊರೆದು ನಿರ್ಮಾಣ ಮಾಡಿರುವ ಈ ರೋಡ್ ನೋಡುವುದಕ್ಕೆ ತುಂಬಾ ಸುಂದರವಾಗಿ ಕಾಣುತ್ತೆ ಅಷ್ಟೇ ಅಪಾಯಕಾರಿ ಕೂಡ. 

ಹಳ್ಳಿಗಳ ನಡುವೆ ಕೊಂಡಿಯನ್ನ ಸ್ಥಾಪಿಸಲು ಉತ್ತಮ ಸಂಬಂಧವನ್ನ ನಿರ್ಮಾಣ ಮಾಡಲು ಹಳ್ಳಿಯ ಜನರೇ ಸೇರಿ ಕಟ್ಟಿರುವ ರಸ್ತೆ ಇದು. ಯಾವುದೇ ಯಂತ್ರಗಳನ್ನ ಬಳಸಿಕೊಳ್ಳದೆ. ಸುತ್ತಿಗೆ ಮತ್ತು ಉಳಿಯನ್ನ ಬಳಸಿಕೊಂಡು ನಿರ್ಮಾಣ ಮಾಡಲಾಗಿದೆ. 

1972ರಲ್ಲಿ ನಿರ್ಮಾಣವಾದ ಈ ರಸ್ತೆ 1977ರಲ್ಲಿ ಸಂಚಾರಕ್ಕೆ ಅನುವುವಾಯಿತು. 1.2 ಕಿ. ಮೀ ದೂರದ ಸಂಪರ್ಕವನ್ನ ಹೊಂದಿರೋ ಇದನ್ನ ನೋಡಲು ಪ್ರವಾಸಿಗರು ಇತ್ತೀಚಿನ ದಿನಗಳಲ್ಲಿ ಹೆಚ್ಚಾಗಿ ಬರ್ತಿದ್ದಾರೆ. ಮತ್ತು ಇಲ್ಲಿ ಚಲನಚಿತ್ರಗಳ ಚಿತ್ರೀಕರಣ ಕೂಡ ನಡೆಯುತ್ತಿದೆ. ಪರ್ವತಗಳನ್ನ ಕೊರೆದು ರಸ್ತೆಯ ನಿರ್ಮಾಣ ಮಾಡಿರುವ ಇಲ್ಲಿನ ಜನರ ಸಾಹಸವನ್ನ ಮೆಚ್ಚಬೇಕು ಆದರು ಈ ರಸ್ತೆ ಅಪಾಯಕಾರಿ ರಸ್ತೆಗಳ ಸಾಲಿನಲ್ಲಿ ಸೇರಿ ಹೋಗಿದೆ. 

04. ಕರಕೊರಮ್ ಹೈವೆ-ಪಾಕಿಸ್ತಾನ

ವಾ/ಒ : ಪಾಕಿಸ್ತಾನ ಮತ್ತು ಚೀನಾ ದೇಶಗಳ ನಡವಿನ ಸ್ನೇಹದ ಕೊಂಡಿಯಾಗಿ 1959 ರಲ್ಲಿ ಕರಕೊರಮ್ ಹೈವೆಯ್ನ ನಿರ್ಮಾಣ ಮಾಡಲಾಯ್ತು. ಇದು 1300 ಕಿ.ಮೀ ಉದ್ದನೆಯ ರಹದಾರಿಯನ್ನ ಹೊಂದಿದೆ. ಇದನ್ನ ವಿಶ್ವದ ಎಂಟನೆಯ ಅದ್ಭುತ ಎಂದು ಕರಿತಾರೆ. ಇದು ಏಷ್ಯಾದ ಹೆದ್ದಾರಿಯ ಒಂದು ಭಾಗವಾಗಿದೆ ಅಂತಾನೇ ಹೇಳ್ಬೊದು.

ಇದನ್ನ ನಿರ್ಮಾಣ ಮಾಡುವಾಗ ಅಂದರೆ 1979ರಲ್ಲಿ ಸುಮಾರು 810 ಪಾಕಿಸ್ತಾನಿಯರು ಮತ್ತು 200 ಜನ ಚೀನಿ ಕೆಸಲಗಾರರು ಮರಣ ಹೊಂದಿದ್ದಾರೆ ಎಂಬ ಉಲ್ಲಖವಿದೆ. ಯಾಕೆಂದ್ರೆ ರಸ್ತೆಯ ನಿರ್ಮಾಣದಲ್ಲಿ ಮಣ್ಣಿನ ಸವಕಳಿ, ಗುಡ್ಡಗಳ ಕುಸಿತ ಮತ್ತು ಅಪಾಯಕಾರಿ ಜಾಗಗಳಲ್ಲಿ ಕೆಸಲ ಮಾಡಿ ಸತ್ತಿರುವುದು ದಾಖಲೆಯಲ್ಲಿ ಸಿಗುತ್ತೆ. 

ಸಿಂದೂ ಕಣಿವೆ ಮತ್ತು ಗಿಲ್ಗಿಟ್ ಪ್ರದೇಶಗಳನ್ನ ಒಳಗೊಂಡಿದೆ ಈ ಕರಕೊರಮ್ ಹೈವೆ. ಅತೀ ಸೂಕ್ಷ್ಮ ಮತ್ತು ಅಪಾಯಕಾರಿ ರಸ್ತೆ ಎನಿಸಿಕೊಂಡಿದೆ. ಇಲ್ಲಿ ಹೆಚ್ಚು ವ್ಯಾಪಾರ ಮತ್ತು ಸಾರಿಗೆ ಸಂಪರ್ಕ ವ್ಯವಸ್ಥೆ ಚೀನಾ ಮತ್ತು ಪಾಕಿಸ್ತಾನದ ನಡುವೆ ಸೇತುವೆಯಾಗಿ ಕಾರ್ಯನಿರ್ವಹಿಸುತ್ತೆ.  

03. ಜೇಮ್ಸ್ ಡಲ್ಟನ್ ಹೈವೆ – ಅಲಸ್ಕಾ

ಜೇಮ್ಸ್ ಡಬ್ಲೂ ಡಾಲ್ಟನ್ ಹೆದ್ದಾರಿಯನ್ನ ಸಾಮಾನ್ಯವಾಗಿ ಡಾಲ್ಟನ್ ಹೆದ್ದಾರಿ ಎಂದು ಕರೆಯುತ್ತಾರೆ. ಇದು ಅತ್ಯಂತ ಅಪಾಯಕಾರಿ ರಸ್ತೆ ಅಂತಾನೇ ಹೆಸರು ಪಡೆದುಕೊಂಡಿದೆ. ಸುಮಾರು 666 ಕಿ. ಮೀ ಸುದೀರ್ಘ ಸಂಪರ್ಕವನ್ನ ಹೊಂದಿದೆ. ಇದು ಎಲಿಯಟ್ ಹೆದ್ದಾರಿಯಲ್ಲಿ ಆರಂಭಗೊಂಡು ಈಸ್ಟ್ ಲೇಕ್ ಕೊಲ್ಲಿನ್ ಡ್ರೈವ್ ಕೊನೆಯಲ್ಲಿ ಮುಕ್ತಾಯಗೊಳ್ಳುತ್ತೆ. 

ಮಂಜು ಕವಿದ ಬೆಟ್ಟ ಗುಡ್ಡಗಳ ಮಧ್ಯಯೇ ಸಾಗುವ ಡಲ್ಟನ್ ಹೆದ್ದಾರಿ ಒಂದು ರೋಮಾಂಚನಕರಿಯಾದ ಪ್ರಯಾಣ, ಇಲ್ಲಿ ವಾಹನ ಚಲಾವಣೆ ಮಾಡುವಾಗ ಒಂದು ವಾಹನಕ್ಕೂ ಮತ್ತೊಂದು ವಾಹನಕ್ಕೂ ಅಂತರವನ್ನು ಕಾಯ್ದುಕೊಳ್ಳುವುದು ಉತ್ತಮ ಎನ್ನಿಸುತ್ತೆ. ಸ್ವಲ್ಪ ಯಾಮಾರಿದರು ಅಪಘಾತ ಕಟ್ಟಿಟ್ಟ ಬುತ್ತಿ ಎನ್ನುವುದರಲ್ಲಿ ಎರಡು ಮಾತಿಲ್ಲ.

02. ಕಾಬೂಲ್ ಜಲಾಲಬಾದ್ ರೋಡ್ – ಅಫ್ಘಾನಿಸ್ಥಾನ 

ಕಾಬೂಲ್ ಮತ್ತು ಜಲಾಲಬಾದ್ ನಡುವೆ ಒಂದು ಕೊಂಡಿಯಾಗಿ ವ್ಯಾಪಾರ ವಹಿವಾಟುಗಳಲ್ಲಿ ಮುಖ್ಯ ಪಾತ್ರ ವಹಿಸಿದೆ ಈ ಹೆದ್ದಾರಿ, ಪ್ರಮುಖ ಆಕರ್ಷಣೀಯ ಮತ್ತು ಹೆಚ್ಚು ಸಾರಿಗೆ ವ್ಯವಸ್ಥೆಯನ್ನ ಇಲ್ಲಿನ ಜನರು ಪಡೆದುಕೊಂಡಿದ್ದಾರೆ. ಸರಕು ಸಾಗಾಣಿಕೆಯ ಕೇಂದ್ರ ಇದು ಎಂದರೆ ತಪ್ಪಾಗುವುದಿಲ್ಲ ಅಷ್ಟರ ಮಟ್ಟಿಗೆ ಇಲ್ಲಿನ ಜನರಿಗೆ ಸಹಕಾರಿಯಾಗಿದೆ.

ಈ ಹೆದ್ದಾರಿ ಎಷ್ಟು ಸಹಕಾರಿಯಾಗಿದೆ ಎಂಬುದರ ಜೊತೆಗೆ ಅತೀ ಅಪಾಯಕಾರಿ ಎಂಬ ಕುಖ್ಯಾತಿಯನ್ನ ಪಡೆದುಕೊಂಡಿದೆ. ಹೆಚ್ಚಾಗಿ ಟ್ರಕ್‍ಗಳು ಸಂಚಾರ ಮಾಡುತ್ವೆ, ಜೊತೆಗೆ ಖಾಸಗಿವಾಹನಗಳನ್ನ ಇಲ್ಲಿ ಕಾಣ್ಬೋದು. ಇದು ತಾಲಿಬಾನ್ ಪತನದ ನಂತರ ಮರುನಿರ್ಮಾಣಗೊಂಡಿದೆ. ಅತೀ ಅಪಾಯಕಾರಿ ರಸ್ತೆಗಳ ಪಟ್ಟಿಯಲ್ಲಿ ಎರಡನೇ ಸ್ಥಾನವನ್ನ ಪಡೆದುಕೊಂಡಿದೆ.

01. ನಾರ್ತ್ ಹ್ಯೂಂಗಸ್ ರೋಡ್ - ಬೋಲವಿಯ   

ನಾರ್ತ್ ಹ್ಯೂಂಗಸ್ ರೋಡ್ ಇದನ್ನ ಡೆತ್ ರೋಡ್ ಅಂತಾನೇ ಕರಿತಾರೆ ಜೊತಗೆ 1995ರಲ್ಲಿ ಇಂಟರ್ ಅಮೇರಿಕನ್ ಡೆವಲಪ್‍ಮೆಂಟ್ ಬ್ಯಾಂಕ್ ವಿಶ್ವದ ಅತ್ಯಂತ ಅಪಾಯಕಾರಿ ರೋಡ್ ಎಂದು ನಾಮಕರಣ ಮಾಡಿದೆ. 2006ರಲ್ಲಿ ಒಂದು ಅಂದಾಜಿನ ಪ್ರಕಾರ 200 ರಿಂದ 300 ಪ್ರಯಾಣಿಕರ ವಾಹನಗಳು ಕೆಳಗೆ ಬಿದ್ದು ಸತ್ತಿದ್ದಾರೆ ಎಂಬ ಅಂದಾಜಿದೆ. 

56 ಕಿ. ಮೀ. ದೂರದ ಸಂಪರ್ಕವನ್ನು ಕೊಂದಿರೋ ನಾರ್ತ್ ಹ್ಯೂಂಗಸ್ ರೋಡ್  ಹ್ಯೂಂಗಸ್‍ನಿಂದ ಲಾ ಪಸ್ ವರೆಗೂ ಸಾಗುತ್ತೆ, ಇದು ಸಾಗುವ ದಾರಿ ಅತ್ಯಂತ ಅಪಾಯಕಾರಿ. ಇಲ್ಲಿನ ರಸ್ತೆಯು ಒಂದು ಕಡೆ ಕಿರಿದಾಗಿರುತ್ತೆ ಮತ್ತೊಂದು ಕಡೆ ಕಲ್ಲು ಮಣ್ಣಿನ ದಾರಿ, ಬೆಟ್ಟ ಗುಡ್ಡಗಳಿಂದ ಹರಿಯುವ ನೀರು ರಸ್ತೆಯ ಮೇಲೆ ಹರಿಯುತ್ತವೆ. ಆಗಾಗ ಗುಡ್ಡಗಳು ಕುಸಿಯುವುದು ಉಂಟು. 

ಇದು ಅತ್ಯಂತ ಅಪಾಯಕಾರಿ ರಸ್ತೆ ಅಂತ ಗೊತ್ತಿದ್ದರು ಕೂಡ ಅನೇಕ ಪ್ರವಾಸಿಗರು ಇಲ್ಲಿಗೆ ಪ್ರವಾಸಕ್ಕೆಂದು ಬರುತ್ತಾರೆ. ಇದರಿಂದಾನೇ ಇದು ಒಂದು ಪ್ರವಾಸಿ ತಾಣವಾಗಿ ಮಾರ್ಪಟ್ಟಿದೆ. ಜೊತೆಗೆ ಬೈಕ್ ರೈಡ್ ಮಾಡುವುದನ್ನು ಹವ್ಯಾಸ ಮಾಡಿಕೊಂಡ ಹವ್ಯಾಸಿಗಳು ಇಲ್ಲಿಗೆ ಬರುವುದು ಉಂಟು. ಇಷ್ಟೆಲ್ಲಾ ಅಪಖ್ಯಾತಿಯ ಜೊತೆಗೆ ಹೆಚ್ಚು ಜನರನ್ನು ಆಕಷಿಸುತ್ತಿದೆ ನಾರ್ತ್ ಹ್ಯೂಂಗಸ್ ರೋಡ್. ಅತ್ಯಂತ ಅಪಾಯಕಾರಿ ರಸ್ತೆಗಳಲ್ಲಿ ಮೊದಲನೆ ಸ್ಥಾನವನ್ನ ಪಡೆದುಕೊಂಡಿದೆ.

ಮಂಜುನಾಥ್ ಜೈ
manjunathahr1991@gmail.com

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಪ್ರಪಂಚದ 10 ಎತ್ತರದ ಪರ್ವತಗಳು - 26

ಭಾರತದ 10 ಪ್ರಸಿದ್ಧ ರಾಜರು - 22

ಕರ್ನಾಟಕದ 10 ಸುಂದರ ಬೆಟ್ಟಗಳು - 25