ಅದ್ಬುತ ಮರಗಳು - 08

   ಭೂಮಿಯಲ್ಲಿ ಸಸ್ಯ ಸಂಪತ್ತು ಎಷ್ಟು ಹಿರಿದಾದ ಇತಿಹಾಸವನ್ನು ಹೊಂದಿದೆ ಎಂದರೆ ಅದನ್ನು ಬಿಚ್ಚಲು ಹೋದರೆ ಸುರುಳಿಯಾಕಾರದಲ್ಲಿ ತೆರೆದುಕೊಳ್ಳುತ್ತೆ. ಅದರ ಗಾತ್ರ, ವಯಸ್ಸು ಬೆಳವಣಿ ಹೀಗೆ ಹತ್ತು ಹಲವು ಕಾರಣಗಳಿಂದ ಮರಗಳ ವಿಂಗಡಣೆ ಮಾಡಬಹುದು ಈ ಕಾರಣದಿಂದಲೇ ಇವು ಅದ್ಬುತ ಮರಗಳು ಎನಿಸಿಕೊಡಿವೆ. ಇಂತಹ ಹತ್ತು ಮರಗಳನ್ನ ನಾವ್ ತೋರಿಸ್ತಿವಿ ನೋಡಿ.

10. ANGEL OAK 


ಸೌತ್ ಕೆರೊಲಿನ ದೇಶದಲ್ಲಿರುವ ಏಂಜಲ್ ಓಕ್ ಮರ ಸರಿ ಸುಮಾರು 1500 ವರ್ಷಗಳ ಇತಿಹಾಸವನ್ನು ಹೊಂದಿದೆ. ಇದು ಸುಮಾರು 17200 ಅಡಿ ಪ್ರದೇಶವನ್ನ ವಿಶಾಲವಾಗಿ ಹರಡಿಕೊಂಡು ಬೆಳೆದಿದೆ. ಜಗತ್ತಿನ ಅತೀ ಹಳೆಯದಾದ ಮತ್ತು ಹಿರಿದಾದ ಮರಗಳಲ್ಲಿ ಏಂಜಲ್ ಓಕ್ ಮರವು ಕೂಡ ಒಂದು. ಇದು ಹರಡಿಕೊಂಡಿರುವ ವಿಶಾಲತೆ ಮತ್ತು ಆಯಸ್ಸಿನಿಂದ ಅದ್ಬುತ ಮರಗಳಲ್ಲಿ ಒಂದೆನಿಸಿದೆ.
ಈ ಮರವನ್ನು ನೋಡಲು ದೂರದಿಂದ ಪ್ರವಾಸಿಗರು ತಂಡೋಪ ತಂಡವಾಗಿ ಬರುತ್ತಿರುತ್ತಾರೆ. ಮಿಸ್ಸೆಸ್ಪಿ ನದಿಯ ದಡದಲ್ಲಿರುವ ಈ ಮರ ನದಿಯೊಳಗು ತನ್ನ ಬೇರುಗಳನ್ನು ಚಾಚಿಕೊಂಡಿದೆ. ಯಾವುದೇ ಭೂಕಂಪ, ನದಿ ಪ್ರವಾಹಕ್ಕೂ ಮತ್ತು ಬರ ಪರಿಸ್ಥಿತಿಯಲ್ಲೂ ಎದೆಗುಂದದೆ ಅಚಲವಾಗಿ ಬೆಳೆದು ನಿಂತಿದೆ ಏಂಜಲ್ ಓಕ್. ಇದು ಸೃಷ್ಠಿಯ ವೈಚಿತ್ರ ಎಂದರೆ ತಪ್ಪಾಗಲಾರದು.

09. ELIA BOUYBON, OLIVE TREE OF VOUVES 


ಆಲೀವ್ ಟ್ರೀ ಒಂದು ವಿಭಿನ್ನವಾದ ವಿಶೇಷವಾದ ಜನರಿಂದ ಹೆಚ್ಚು ಆಕರ್ಷಣೆಗೆ ಒಳಗಾಗಿರೋ ಮರ. ಇದರ ಆಯಸ್ಸು ಎಷ್ಟು ಅಂತೀರ ಬರೋಬರಿ 3500 ರಿಂದ 4000 ವರ್ಷಗಳ ವರೆಗೆ ಇಂದೆ ಎಂಬುದು ಚಿಂತಕರ ಮಾತು, ಈ ಮರದ ಅವಶೇಷಗಳನ್ನ ನೋಡಿದ್ರೆ ಗೊತ್ತಾಗುತ್ತೆ. ಇದರ ಬೇಸ್ ಸುಮಾರು 15 ಫಿಟ್ ಇದೆ. ದೊಡ್ಡದಾದ ಕಾಂಡ ಕುರುಚಲು ಗಿಡದಂತಿರುವ ಇದು ಜಗತ್ತಿನ ಮರಗಳಲ್ಲಿ ಅತ್ಯಂತ ಆಕರ್ಷಣೀಯ.
ಗಿಔUಗಿಇS  ಪ್ರದೇಶದ ಕ್ರೇಟ್ ಎಂಬ ಹಳ್ಳಿಯಲ್ಲಿ ಈ ಮರವಿದ್ದು ಇದನ್ನು ನೋಡಲು ಪ್ರತಿ ವರ್ಷ ಸುಮಾರು 20.000 ಹೆಚ್ಚು ಜನರು ಇಲ್ಲಿಗೆ ಬರುತ್ತಾರೆ. ಯಾವುದೇಶ ಅಂತ ಆಗಲಿ, ಯಾವುದೇ ಭಾಷೆ ಅಂತ ಆಗಲಿ ಅಲ್ಲ. ಪ್ರನಿತ್ಯ ಇಲ್ಲಿ ವಿವಿಧ ರೀತಿಯ ಪ್ರವಾಸಿರನ್ನ ಕಾಣ್ಬೋದು. ಇದರ ಇತಿಹಾಸ ಮತ್ತು ವಿಶೇಷತೆಗಳಿಂದ ಹೆಚ್ಚು ಆಕಷ್ಣೆಗೆ ಒಳಗಾಗಿದೆ ಈ ಮರ.

08. DRAGON’S BLOOD TREE


ಯೆಮನ್ ದೇಶದ ಪ್ರಮುಖ ಪ್ರವಾಸಿಗಳ ಆಕರ್ಷಣೀಯ ಕೇಂದ್ರಗಳಲ್ಲಿ ಒಂದು.  ಇಲ್ಲಿರುವಂತಹ DRAGON’S BLOOD TREE ಎಲ್ಲರನ್ನು ತನ್ನತ್ತ ನೋಡುವಂತೆ ಮಾಡಿದೆ. ಪ್ರಪಂಚದ ಅದ್ಬುತ 10 ಪ್ರದೇಶಗಳಲ್ಲಿ ಇದು ಕೂಡ ಒಂದು. ಹೀಗೆ ಹೆಸರು ಪಡೆಯಬೇಕಂದ್ರೆ ಅದರ ಸ್ಥಾನಗಳು ಹೇಗಿರಬೇಕು ಎಂಬುದನ್ನ ನೀವು ಗಮನಿಸ ಬೇಕು.
ಬೆಟ್ಟಗುಡ್ಡಗಳ ಸಾಲಿನಲ್ಲಿ ಬೆಳೆಯುವ ಈ ಮರಗಳು ನೋಡುವುದಕ್ಕೆ ಛತ್ರಿಯ ರೂಪದಲ್ಲಿ ಹರಡಿ ಕೊಂಡಿರುತ್ವೆ. ನೀಳವಾದ ಮರದ ಕಾಂಡ, ಒತ್ತಾತ್ತಾಗಿ ಅಂಟಿಕೊಂಡಿರುವ ಮರದ ಕೊಂಬೆಗಳು, ಒತ್ತೊತ್ತಾಗಿ ನೀಳವಾಗಿ ಅಂಟಿರುವ ಮರದ ಎಲೆ ಇವೆಲ್ಲವು ಈ ಮರದ ಲಕ್ಷಣಗಳು. ಇದರ ಮತ್ತೊಂದು ವಿಶೇಷತೆ ಅಂದ್ರೆ ಈ ಹಳ್ಳಿಯ 825 ಎಕರೆ ಪ್ರದೇಶದಲ್ಲಿ ವಿಶಾಲವಾಗಿ ಹರಡಿಕೊಂಡಿದೆ. ಜಗತ್ತಿನ ವಿಶೇಷವಾದ ಮರ ಎನಿಸಿಕೊಂಡಿದೆ.

07. EL ARBOL DEL TULE, TULE TREE 


ಮೆಕ್ಸಿಕೋ ದೇಶದಲ್ಲಿರುವ EL ARBOL DEL TULE, TULE TREE ಇಂದೊಂದು ಇಂಡಿಪೆಂಡೆಂಟ್ ಟ್ರೀ ಅಂತಾನೇ ಹೇಳ್ಬೋದು. ಯಾಕಂದ್ರೆ ಇದೊಂದೆ ಟ್ರೀ ದಪ್ಪನಾಗಿದ್ದು ಮದ್ಯಮ ಗಾತ್ರದ ಎತ್ತರವನ್ನ ಇದು ಹೊಂದಿದೆ. ಈ ಮರದ ಸುತ್ತಳತೆ ಸುಮಾರು 119 ಫೀಟ್ ಇದೆ. ಏಕಾಂಗಿಯಾಗಿ ನೂರಾರು ವರ್ಷಗಳ ಕಾಲ ಬದುಕಿರುವಂತಹ ಮರ ಇದು.
ಇದಕ್ಕಾಗೆ ನಿರ್ಮಾಣವಾಗಿದೆ ಇಲ್ಲೊಂದು ಪಾರ್ಕ್ ಈ ಮರವನ್ನ ನೋಡಲು ಪ್ರತಿ ದಿನ ತಂಡೋಪ ತಂಡವಾಗಿ ಜನರು ಇಲ್ಲಿಗೆ ಬರುತ್ತಾರೆ. ಈ ಮರ ಪ್ರತಿಯೊಂದರಲ್ಲು ವಿಶೇಷವಾಗಿರೋದನ್ನ ನೀವು ನೋಡ್ಬೋದು. ಮರದ ತೊಗಟೆ, ಕಾಂಡ, ಎಲೆ, ರೆಂಬೆ ಕೊಂಬೆಗಳು ಒಂದಕ್ಕಿಂತ ಮತ್ತೊಂದು ವಿಭಿನ್ನವಾಗಿ ಇದೆ. ಇಂತಹ ಮರಗಳು ಅಪರೂಪದಲ್ಲಿ ಅಪರೂಪ ಎನ್ನುವಷ್ಟರ ಮಟ್ಟಿಗೆ ಬೆಳೆದಿರೋದನ್ನ ಕಾಣ್ಬೋದು.
06. TEAPOT BAOBAB 

ಈ ಮರದ ಮೂಲ ಆಫ್ರಿಕಾ, ಇದು ಮಿನ್‍ಲ್ಯಾಂಡ್ ಪ್ರದೇಶದ ಆಫ್ರಿಕಾದಲ್ಲಿ ಹೆಚ್ಚು ಕಂಡುಬರುವ ಮರಗಳು, ಇದು ಬರೀ ಆಫ್ರಿಕಾದಲ್ಲಿ ಮಾತ್ರವಲ್ಲ ಏಷ್ಯಾ ಖಂಡದಲ್ಲೂ ಕೂಡ ಕಂಡುಬರತ್ತವೆ. ಈ ಮರಗಳು ನೋಡುವುದಕ್ಕೆ ವಿಚಿತ್ರ ಮತ್ತು ವಿಭಿನ್ನ. ವಿವಿದ ಆಕಾರಗಳಲ್ಲಿ ಇವೆ. ಸಾಮಾನ್ಯ ಮರಗಳಂತೆ ಇದ್ದರು ಅಸಮಾನ್ಯ ಗುಣಲಕ್ಷಣಗಳನ್ನ ಹೊಂದಿದೆ. 
ಈ ಮರಗಳು ನೀಳವಾಗಿದ್ದು ದಪ್ಪವಾದ ತೊಗಟೆಯನ್ನ ಹೊಂದಿವೆ, ಎಣಿಕೆ ಮಾಡಬಹುದಾದಂತ ರೆಂಬೆಕೊಂಬೆಗಳು ಇದರಲ್ಲಿವೆ. ವಿಶಾಲವಾದ ಪ್ರದೇಶದಲ್ಲಿ ಅಲ್ಲಲ್ಲಿ ಕಂಡುಬರುವ ಈ ಮರಗಳು. ನೋಡುವುದಕ್ಕೆ ಆಕರ್ಷಣೀಯವಾಗಿವೆ. ಇವುಗಳನ್ನ ನೋಡಲು ಕೂಡ ಪ್ರವಾಸಿಗರು ಆಗಮಿಸುವುದು ಉಂಟು. ಬರಿ ಪ್ರವಾಸಕ್ಕೆ ಮಾತ್ರವಲ್ಲ ಈ ಮರಗಳ ಇತಿಹಾಸದ ಬಗ್ಗೆ ಸಂಶೋದನೆಯನ್ನು ಕೂಡ ಮಾಡಲು ಅನೇಕ ಮಂದಿ ಇಲ್ಲಿಗೆ ಬರುತ್ತಾರೆ.

05. THE TREES FROM TA PHROM 


ಈ ಮರದ ಬಗ್ಗೆ ಹೇಳಲೇ ಬೇಕು ಯಾಕಂದ್ರೆ ಇಂದು ಪ್ರವಾಸಿಗರಿಂದ ಹೆಚ್ಚೆಂದರೆ ಹೆಚ್ಚು ಆಕರ್ಷಣೀಯವಾದ ಮರ. ಇದು ಇರುವುದು ಕಾಂಬೋಡಿಯಾದ ಪಾಳುಬಿದ್ದ ಐತಿಹಾಸಿಕ ದೇವಾಲಯದಲ್ಲಿ. ಇಡೀ ದೇವಾಲಯವನ್ನು ಸೇರಿಸಿಕೊಂಡಂತೆ ಗಗನಕ್ಕೆ ಚುಮ್ಮುವಂತೆ ಬೆಳೆದು ನಿಂತಿವೆ ಈ ಮರಗಳು.
ಈ ಐತಿಹಾಸಿಕ ಸ್ಮಾರಕವನ್ನು ನೋಡಲು ಬರುವ ಜನರಿಗೆ ಈ ಮರವು ಕೂಡ ಒಂದು ಆಕರ್ಷಣೀಯ ಕೇಂದ್ರ ಬಿಂದುವೆನಿಸಿಕೊಂಡಿದೆ. ತನ್ನ ಬೇರುಗಳಿಂದ ಕಟ್ಟಡಗಳನ್ನು ಬಿಗಿದಪ್ಪಿ ನಿಂತಿದೆ ಈಮರ. ಈ ಕಟ್ಟಡಕ್ಕೆ ಎಷ್ಟು ವರ್ಷಗಳ ಇತಿಹಾಸವಿದೆಯೋ ಅಷ್ಟೇ ಇತಿಹಾಸವನ್ನು ಈ ಮರಕ್ಕೆ ಹೋಲಿಸಬಹುದು. ಕಾಂಬೋಡಿಯ ಇದಕ್ಕೂ ಹೆಸರುವಾಸಿ ಎನ್ನುವುದರಲ್ಲಿ ಎರಡು ಮಾತಿಲ್ಲ.

04.  METHUSELAH 


ಜಗತ್ತಿನ ಅತ್ಯಂತ ಹಳೆಯ ಮರಗಳಲ್ಲಿ ಒಂದು ಈ ಒಇಖಿಊUSಇಐಂಊ. ಈ ಮರದ ವಯಸ್ಸು ಸರಿ ಸುಮಾರು 4836 ವರ್ಷ. ಕ್ಯಾಲಿಪೋರ್ನಿಯದ ಬಿಷಪ್ ಪ್ರದೇಶದಿಂದ 300 ಕಿಮೀನಲ್ಲಿದೆ ಈ ಮರ. ಇದನ್ನ ನೋಡಿದ್ರೆ ಗೊತ್ತಾಗಿತ್ತೆ. ಎಷ್ಟು ತಲೆಮಾರುಗಳನ್ನ ಕಂಡಿದೆ ಎಂದು. ಎಲೆಗಳೆಲ್ಲ ಉದುರಿ ಹೋಗಿ, ಬರಿದಾಗಿ ಒಣಗಿ ನಿಂತಿದೆ ಈಮರ.
ಬೆಟ್ಟ ಗುಡ್ಡಗಳ ಮಧ್ಯೆ ಆಕರ್ಷಣೀಯವಾಗಿ ನಿಂತಿದೆ ಈ ಮರ ತುಂಬಾ ಹಳೆಯದಾದ ಇತಿಹಾಸವನ್ನು ಹೊಂದಿರುವ ಇದು ಪ್ರಪಂಚದ ಸಂಶೋಧಕರ ಪರೀಕ್ಷಾ ವಸ್ತುವಾಗಿದೆ. ಎಲ್ಲಾ ರೀತಿಯಂತಲ್ಲ ಈ ಮರ ತುಂಬಾನೆ ಡಿಫರೆಂಟ್ ಅಂತಾ ತೋರಿಸಿಕೊಳ್ಳುತ್ತೆ ಅದರ ಕಾಂಡದ ತೊಗಟೆಯ ಮೂಲಕ. ಮರಗಳ ಇತಿಹಾದಸಲ್ಲೇ ಇದನ್ನ ಅತ್ಯಂತ ಹಳೆಯದೆನ್ನಬಹುದು. ಅಷ್ಟರ ಮಟ್ಟಿಗೆ ಬೆಳೆದು ಈಗ ಮರೆಯಾಗುತ್ತಿದೆ.

03. SILK  FLOSS TREE 

ಸಿಲ್ಕ್ ಫ್ಲೋ ಟ್ರೀ ಇಡೀ ಮರಗಳ ಪ್ರಪಂಚದಲ್ಲೆ ಅತ್ಯಂತ ಸುಂದರವದ ಟ್ರೀ ಅಂತಾನೇ ಹೇಳ್ಬೋದು. ಸೌತ್ ಅಮೇರಿಕಾದ ಹಲವಾರು ಭಾಗಗಳಲ್ಲಿ ಕಂಡುಬರುವ ಈ ಮರ ಒಂದು ಅದ್ಬುತವಾದ ಚಿತ್ರಣವನ್ನ ನೀಡುತ್ತೆ. ಈ ಮರ ಸುಮಾರು 81 ಅಡಿಯವರೆಗೆ ಬೆಳೆಯುತ್ತದೆ. ಈ ಮರದಲ್ಲಿ ಪಿಂಕ್ ಮತ್ತು ಪರ್ಪಲ್ ಬಣ್ಣಗಳ ಹೂಗಳು ಬಿಡುತ್ವೆ. ಇದು ಜನಾಕರ್ಷಣೆಯ ವಸ್ತು.
ಈ ಮರದ ಕಾಂಡವು ಚೂಪಾದ ಮುಳ್ಳುಗಳಿಂದ ಕೂಡಿದ್ದು. ರೆಂಬೆ ಕೊಂಬೆಗಳು ಅಂಟಿಕೊಂಡಿದ್ದು ವಿಶಾಲವಾಗಿ ಹರಡಿಕೊಂಡಿವೆ. ಸುಂದರವಾದ ಹೂಗಳಿಂದಲೇ ಎಲ್ಲರನ್ನ ಸೆಳೆಯುತ್ತೆ ಈ ಮರ. ಇದರಲ್ಲಿನ ಹೂಗಳೇ ಪ್ರಮುಖ ಆಕರ್ಷಣೆ. ಸಾವಿರಾರು ಮರಗಳಿದ್ದರು ಸುಲಭವಾಗಿ ಈ ಮರವನ್ನು ಗುರ್ತಿಸಬಹುದು. ಅಷ್ಟು ಸುಂದರವಾಗಿದೆ ಜೊತೆ ಅಷ್ಟೇ ಮುಳ್ಳನ್ನು ಹೊಂದಿದೆ.
02. RAINBOW EUCALYPTUS 


RAINBOW EUCALYPTUS  ಮರಕ್ಕೆ  ಪ್ರಕೃತಿ ನೀಡಿರುವ ಕೊಡುಗೆ ಬಣ್ಣ. ಹೌದು ಈ ಮರ ಸಂಪೂರ್ಣವಾಗಿ ಬಣ್ಣ ಬಣ್ಣಗಳಿಂದಲೇ ನಿರ್ಮಾಣವಾಗಿರೋದು. ಸುಮಾರು 246 ಅಡಿಯಷ್ಟು ಎತ್ತರವಿರುವ ಈ ಮರ ತನ್ನ ಬಣ್ಣದಿಂದ ಪ್ರವಾಸಿಗರನ್ನ ತನ್ನತ್ತ ಬರುವಂತೆ ಮಾಡಿದೆ. ಇದನ್ನು ಜನರು ನೋಡಲು ಬರುತ್ತಿದ್ದರೆ.
ನೀಲಗಿರಿ ಮರದ ಜಾತಿಗೆ ಸೇರಿರುವ ಈ ಮರವು ಗ್ರೀನ್, ಎಲ್ಲೋ, ಪಿಂಕ್, ರೆಡ್, ಪರ್ಪಲ್ ಮತ್ತು ಆರೆಂಜ್ ಬಣ್ಣಗಳು ಇದಕ್ಕೆ ಅಂಟಿಕೊಂಡಿವೆ. ಇತರೆ ಮರಗಳಿಗಿಂತ ಇದು ವಿಭಿನ್ನ ಎಂದು ತೋರಿಸಿಕೊಂಟ್ಟಿದೆ ಈ ಕಾಮನಬಿಲ್ಲು ನೀಲಗಿರಿ. ಮರವು ಬೆಳೆದಂತೆ ಅದರ ತೊಗಟೆಯು ಬಿಚ್ಚಿಕೊಳ್ಳುತ್ತದೆ. ಅದರ ಬಣ್ಣ ಮಾತ್ರ ಬದಲಾಗೋದಿಲ್ಲ. ಅಷ್ಟಕ್ಕೂ ಇದು ಇರೋದು ಇಂಡೋನೇಷ್ಯದಲ್ಲಿ.

01. TREE OF LIFE 


ಪ್ರಪಂಚದ ದೀರ್ಘ ಕಾಲವಾಗಿ ಬದುಕುವಂತಹ ಅಥವಾ ಆಯಸ್ಸನ್ನು ಹೊಂದಿರುವಂತಹ ಮರಗಳ ಸಾಲಿನಲ್ಲಿಮೊದಲನೆಯದಾಗಿ ನಿಲ್ಲುವಂತಹ ಟ್ರೀ TREE OF LIFE. ಅಂತಹ ತಳಿಯ ಬೀಜವನ್ನು ಹೊಂದಿ ಬಹು ದೀರ್ಘ ಕಾಲವಾಗಿ ಬದುಕುತ್ತವೆ. ಸುಮಾರು 400 ವರ್ಷಗಳಷ್ಟು ಹಳೆಯದಾದ ಮರ ಇದು ಮರು ಭೂಮಿಯಲ್ಲಿ ಯಾವುದೇ ನೀರಿನ ಸಂಪರ್ಕವಿಲ್ಲದೆ ಬದುಕುವ ಸಾಮಥ್ಯೆವನ್ನು ಹೊಂದಿದೆ ಈ ಮರ.
ಈ ಮರವು ಯಾರ ತಂಟೆ ತಕರಾರಿಲ್ಲದೆ ಏಕಾಂಗಿಯಾಗಿ ನೂರಾರು ವರ್ಷಗಳವರೆಗೆ ಬದುಕನ್ನ ನಡೆಸುತ್ತದೆ. ಬಹರೇನ್‍ನಲ್ಲಿರುವ ಅತೀ ಪ್ರಾಚೀನವಾದ ಪ್ರಪಂಚದ ಅದ್ಬುತಗಳಲ್ಲಿ ಇದು ಒಂದು. ಜೇಬೆಲ್ ದುಖಾನ್ ಪ್ರದೇಶದಿಂದ 2 ಕಿ ಮೀ ದೂರದಲ್ಲಿರುವ ಈ ಪ್ರದೇಶ. ಹಲವಾರು ವಿಶೇಷತೆಗಳಿಂದ ವಿಭಿನ್ನವಾಗಿ ಕಂಡುಬರುತ್ತದೆ.
                                                                                                                                 ಮಂಜುನಾಥ್ ಜೈ









ಕಾಮೆಂಟ್‌ಗಳು

  1. Great post, but I wanted to know if you can write
    something else on this topic? I would really appreciate it if you can explain this.
    A bit more. Appreciation
    filebot crack
    vector magic crack
    roguekiller crack

    ಪ್ರತ್ಯುತ್ತರಅಳಿಸಿ
  2. Your website is fantastic. The colors and theme are fantastic.
    Are you the one who created this website? Please respond as soon as possible because I'd like to start working on my project.
    I'm starting my blog and I'm curious as to where you got this from or what theme you're using.
    Thank you very much! mobaxterm professional crack
    tuneskit drm crack
    teracopy pro crack
    god of war crack

    ಪ್ರತ್ಯುತ್ತರಅಳಿಸಿ
  3. etBrains CLion 2022.3.3 Crack is a program that assists individuals with further developing their composing abilities. It has been generally welcomed by PC clients who have viewed it as a compelling instrument in further developing exactness and speed.

    ಪ್ರತ್ಯುತ್ತರಅಳಿಸಿ
  4. I guess I am the only one who came here to share my very own experience. Guess what!? I am using my laptop for almost the past 2 years, but I had no idea of solving some basic issues. I do not know how to Crack Softwares Free Download But thankfully, I recently visited a website named Crackedfine
    Tuneskit Drm M4v Converter Crack
    TeamViewer Crack

    ಪ್ರತ್ಯುತ್ತರಅಳಿಸಿ

ಕಾಮೆಂಟ್‌‌ ಪೋಸ್ಟ್‌ ಮಾಡಿ

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಪ್ರಪಂಚದ 10 ಎತ್ತರದ ಪರ್ವತಗಳು - 26

ಭಾರತದ 10 ಪ್ರಸಿದ್ಧ ರಾಜರು - 22

ಕರ್ನಾಟಕದ 10 ಸುಂದರ ಬೆಟ್ಟಗಳು - 25