ಲಿಂಗ ಅಸಮಾನತೆ ರಾಷ್ಟ್ರಗಳು - 09


   
ಲಿಂಗ ಅಸಮಾನತೆ ಭಾರತ ಮಾತ್ರವಲ್ಲ ಇಡೀ ಪ್ರಪಂಚವನ್ನೇ ಆವರಿಸಿದ ಒಂದು ಕೆಟ್ಟ ಪಿಡುಗು, ಇದನ್ನ ನಿರ್ಮೂಲನೆ ಮಾಡ್ಬೇಕು ಎಂದು ಹಲವಾರು ದೇಶಗಳು ಸತತ ಪ್ರಯತ್ನವನ್ನ ಮಾಡ್ತನೇ ಇವೆ. ಆದರೂ ಅವುಗಳ ಸಂಖ್ಯೆ ಮಾತ್ರ ಕಡಿಮೆ ಆಗಿಲ್ಲ. ಅಂತಹ ದೇಶಗಳಲ್ಲಿ ಹೆಚ್ಚು ಲಿಂಗ ಅಸಮಾನತೆ ಇರುವಂತಹ 10 ದೇಶಗಳನ್ನ ಬಗ್ಗೆ ನಾವ್ ಹೇಳ್ತಿದಿವಿ.

10. ಇರಾನ್
ಮಹಿಳೆಯರ ಮೇಲೆ ಹೆಚ್ಚು ದೌರ್ಜನ್ಯ, ಕಿರುಕುಳ ಮೊದಲಾದ ಸಮಸ್ಯಗಳಿಂದ ಬೇಯುತ್ತಿರುವ ರಾಷ್ಟ್ರ. ಹೆಚ್ಚಾಗಿ ಮುಸ್ಲಿಂ ಸಮುದಾಯವೇ ಇಲ್ಲಿ ನೆಸೆಸಿದ್ದಾರೆ. ಅವರ ಮೂಡ ಆಚಾರಗಳಿಂದ ಹೆಣ್ಣಿನ ಸಂಕುಲ ಇಲ್ಲಿ ನಾಶವಾಗುವ ಕಡೆ ಹೆಜ್ಜೆಯನ್ನು ಇಟ್ಟಿದೆ. ಇಲ್ಲಿರುವ ಸುಮಾರು 36 ವಿಶ್ವ ವಿದ್ಯಾಲಯಗಳಲ್ಲಿ ಹೆಣ್ಣು ಮಕ್ಕಳು ವಿದ್ಯಾಭ್ಯಾಸವನ್ನ ಮಾಡ್ತ ಇದಾರೆ. ಹೆಣ್ಣಿನ್ನು ಗುಲಾಮತನಕ್ಕೆ ಬಳಸಿಕೊಳ್ಳುವುದೆ ಹೆಚ್ಚಾಗಿದೆ.
ಇಲ್ಲಿರುವಂತಹ ಇಂಜಿನಿಯರಿಗ್ಸ್ ಮತ್ತು ತಾಂತ್ರಿಕ ಕೋರ್ಸ್‍ಗಳು ಕೇವಲ ಪುರುಷರಿಗೆ ಮಾತ್ರ ಸೀಮಿತವಾಗಿರುತ್ವೆ. ಯಾವುದೇ ಕಾರಣಕ್ಕೂ ಮಹಿಳೆಯರಿಗೆ ಅವಕಾಶವಿರುವುದಿಲ್ಲ. ಪ್ರಪಂಚದಲ್ಲಿ ಅತೀ ಹೆಚ್ಚು ಹೆಣ್ಣಿನ ಹತ್ಯೆ ನಡೆಯುತ್ತಿರುವುದು ಇರಾನ್ ದೇಶದಲ್ಲಿ. ಒಂದು ಅಂದಾಜಿನ ಪ್ರಕಾರ ಪ್ರತಿ ವರ್ಷ ಶಿಕ್ಷೆಗೆ ಒಳಗಾಗಿ 560 ಮಹಿಳೆಯರು ಸಾವನ್ನಪ್ಪುತ್ತಾರೆ.
09. ಚೀನಾ 

ಪ್ರಪಂಚದ ಅತೀ ಹೆಚ್ಚು ಜನಸಂಖ್ಯೆ ಹೊಂದಿರುವ ದೇಶ ಚೀನಾ ಈ ದೇಶದಲ್ಲಿ ದಂಪತಿಗಳಿಗೆ ಒಂದು ಮಗುವನ್ನು ಪಡೆಯಲು ಮಾತ್ರ ಅವಕಾಶವನ್ನು ನೀಡಿರುವುದು. ಅವರಲ್ಲಿ ಗಂಡು ಮಗುವನ್ನು ಪಡೆಯಬೇಕೆಂಬ ಆಸೆಯಿಂದ ಹೆಣ್ಣು ಬ್ರೂಣದ ಹತ್ಯಯಾಗುತ್ತಿದೆ. ಯಾವುದೇ ಅಭಿವೃದ್ದಿ ಹೊಂದಿದ ದೇಶಕ್ಕೂ ಹೋಲುವಂತಹ ಕಟು ನಿರ್ಧಾರಗಳು ಲಿಂಗ ಅಸಮಾನತೆಗೆ ಎಡೆಮಾಡಿಕೊಟ್ಟಿದೆ.
ಚೀನಾ ತಂತ್ರಜ್ಞಾನದಲ್ಲಿ, ಆರ್ಥಿಕ ವ್ಯವಸ್ಥೆಯಲ್ಲಿ ಎಷ್ಟೇ ಮುಂದುವರೆದರು ಲಿಂಗ ಅಸಮಾನತೆಯನ್ನು ತಡೆಯುವಲ್ಲಿ ವಿಫಲವಾಗಿದೆ. ಗರ್ಭದಲ್ಲಿರುವ ಮಗುವು ಗಂಡೂ ಹೆಣ್ಣೋ ಎಂದು ಸ್ಕ್ಯಾನಿಂಗ್ ಮಾಡಿ ಬ್ರೂಣದಲ್ಲೇ ಹೆಣ್ಣು ಮಗುವನ್ನು ಕೊಲ್ಲುವಂತಹ ಪರಿಸ್ಥಿತಿಗಳು ನಿರ್ಮಾಣವಾಗುತ್ತಿದೆ. ಮದುವೆ ಎನ್ನುವುದು ಸಂಪ್ರದಾಯ ಬದ್ದವಾಗಿದ್ದರು ಅದು ನಡೆಯುವುದು ಮಂದಗತಿಯಲ್ಲಿ. ಅಸಮಾನತೆ ಎನ್ನುವುದು ಚೀನಾ ದೇಶವನ್ನು ಬಿಟ್ಟಿಲ್ಲ.
08. ಡೆಮಾಕ್ರಟಿಕ್ ರಿಪಬ್ಲಿಕ್ ಆಫ್ ಕಾಂಗೋ 

ಡೆಮಾಕ್ರಟಿಕ್ ರಿಪಬ್ಲಿಕ್ ಆಫ್ ಕಾಂಗೋ ದೇಶದ ಮಹಿಳೆಯರಿಗೆ ಸ್ವಾತಂತ್ರ್ಯ ಎನ್ನುವುದೇ ಮರೀಚಿಕೆಯಾಗಿದೆ. ಹುಟ್ಟಿದಾಗಿನಿಂದ ತಂದೆಯ ಪೋಷಣೆ ಮತ್ತು ಮದುವೆಯ ನಂತರ ಗಂಡನ ಅದೀನದಲ್ಲಿ ಜೀವನ ನಡೆಸಬೇಕು ಅವಳು ಕೇವಲ ಮನೆಯ ಕೆಲಸ ಮಾಡಿಕೊಂಡು ಇರಬೇಕು ಅವಳು ಅದಕ್ಕೆ ಮಾತ್ರ ಅರ್ಹಳು ಎನ್ನುವ ಮಾತಿದೆ. 
ಒಂದು ಸರ್ವೆಯ ಪ್ರಕಾರ 3 ಮಿಲಿಯನ್ ಮಹಿಳೆಯರು ತೊಂದರೆಗಳಿಗೆ ಒಳಗಾಗಿದ್ದರೆ. ಕಿರುಕುಳಕ್ಕೆ ಒಳಗಾಗಿದ್ದರೆ. ಎಲ್ಲಾ ಹಿಂಸೆಯನ್ನು ಅನುಭವಿಸಿದ್ದಾರೆ. ಹೀಗಾಗಿ ಡೆಮಾಕ್ರಟಿಕ್ ರಿಪಬ್ಲಿಕ್ ಆಫ್ ಕಾಂಗೋ ಮಹಿಳೆಯರ ಮೇಲಿನ ದೌರ್ಜನ್ಯ, ಹೆಣ್ಣಿನ ಮೇಲೆ ನಡೆಯುವಂತಹ ಹಲ್ಲೆಗಳನ್ನ ತಡೆಯುವಲ್ಲಿ ವಿಫಲವಾಗಿದೆ.
07. ಅಮೇರಿಕ 

ವಿಶ್ವದ ದೊಡ್ಡಣ್ಣ ಅಮೇರಿಕಾವನ್ನು ಬಿಟ್ಟಿಲ್ಲ ಈ ಲಿಂಗ ಅಸಮಾನತೆ. ಆರ್ಥಿಕವಾಗಿ ಮುಂದುವರೆದಿರುವ ಅಮೆರಿಕಾ ಮಹಿಳೆಯರ ಮೇಲಿನ ಹಿಂಸೆಯನ್ನು ತಡೆಯುವಲ್ಲಿ ವಿಫಲವಾಗಿದೆ. ಕೆಲವು ಸೀಮಿತವಾದ ಕಾನೂನುಗಳನ್ನ ಹೊಂದಿದೆ. ಉದಾಹರಣೆ ಎಂದರೆ ಸುಮಾರು 30 ರಾಜ್ಯಗಳಲ್ಲಿ ರೇಪ್ ಮಾಡಿ ತಪ್ಪಿಸಿಕೊಂಡವರಿಗೆ ಇನ್ನೂ ಶಿP್ವ್ಷಯಾಗಿಲ್ಲ. ಲೈಂಗಿಕ ಕಿರುಕುಳಕ್ಕೆ ಒಳಗಾದವರು ಅನೇಕ ಸಮಸ್ಯಗಳನ್ನ ಎದುರಿಸುತ್ತಿದ್ದಾರೆ.
ಇನ್ನೂ ದೊಡ್ಡ ದುರಂತವೆಂದರೆ ಸ್ತ್ರೀ ಮತ್ತು ಪರುಷರ ನಡುವಿನ ತಾರತಮ್ಯ. ಇದು ಇಲ್ಲಿನ ಬಹುದೊಡ್ಡ ಸಮಸ್ಯಗಳಲ್ಲಿ ಒಂದಾಗಿ ಬೆಳೆದಿದೆ. ಶೇಕಡಾ 40% ರಲ್ಲಿ 1% ಮಾತ್ರ ಗೃಹಬಳಕೆ ಪುರುಷರ ಬಳಕೆ ಮಾಡಿಕೊಳ್ಳಲಾಗುತ್ತದೆ. ಉಳಿದಂತೆ ಮಹಿಳೆಯರು ಎಲ್ಲಾ ಕ್ಷೇತ್ರಗಳಲ್ಲಿ ಇರುತ್ತಾರೆ. ಒಟ್ಟಾರೆಯಾಗಿ ಅಭಿವೃದ್ದಿ ಹೊಂಡಿದಂತಹ ರಾಷ್ಟ್ರಗಳನ್ನು ಬಿಟ್ಟಿಲ್ಲ ಈ ಲಿಂಗ ಅಸಮಾನತೆ.
06. ರಷ್ಯಾ 

ಲಿಂಗ ಅಸಮಾನತೆಗೆ ಸಂಬಂದಿಸಿದಂತೆ ಸೋವಿಯತ್ ರಷ್ಯಾದಲ್ಲಿ ದೊಡ್ಡ ಮಟ್ಟದ ಹೋರಾಟಗಳೆ ನಡೆದಿವೆ. 2015ರಲ್ಲಿ ಹೊಸ ಯೋಜನೆಗಳನ್ನು ಜಾರಿ ಮಾಡಿದ ರಷ್ಯಾ ಸರ್ಕಾರ ಸಮಾನತೆಯ ಹಾದಿಯ ಕಡೆ ನೆಟ್ಟಿದೆ. ಮಹಿಳೆಯರ ಸಬಲೀಕರಣಕ್ಕೆ ಸೂಕ್ತ ಕ್ರಮಗಳನ್ನ ಕೈಗೊಂಡಿದೆ.
ತಾತ್ರಿಕತೆ, ಆರ್ಥಿಕ ವರ್ಗ, ಸಾಮಾಜಿಕ, ರಾಜಕೀಯ ಸೇರಿದಂತೆ ಹಲವು ವಿಭಾಗಗಲ್ಲಿ ಉದ್ಯೂಗವಕಾಶಗಳನ್ನು ಸೃಷ್ಠಿಸಿದೆ. ಆದರು ರಷ್ಯಾ ಇಡೀ ಪ್ರಪಂಚದಲ್ಲಿ ಲಿಂಗ ಅಸಮಾನತೆ ಹೊಂದಿರುವಂತಹ ದೇಶಗಳಲ್ಲಿ ಆರನೇ ಸ್ಥಾನವನ್ನ ಪಡೆದಕೊಂಡಿದೆ. ಈ ಕಪ್ಪು ಚುಕ್ಕೆಯಿಂದ ಹೊರಬರಲು ಸಾಕಷ್ಟು ಸ್ತ್ರೀ ಪರವಾದ ಕೆಲಸವನ್ನು ಮಾಡುತ್ತಿದೆ.
05. ನೈಜೀರಿಯ 

ಪ್ರಪಂಚದ ಮಹಿಳೆಯರ ಸ್ಥಿಗತಿಯೇ ಒಂದು ತೆರನಾಗಿದ್ರೆ ನ್ಶೆಜೀರಿಯಾದ ಮಹಿಳೆಯರ ಸ್ಥಿತಿ ಗತಿಗಳೇ ಬೇರೆಯಾಗಿರುತ್ವೆ. ಇಲ್ಲಿ ಹೆಣ್ಣು ಗಂಡಿಗೆ ಅಧಿನಳಾಗೆ ಇರಬೇಕಾದಂತದ ಸ್ಥಿತಿ ಇದೆ. ಹೆಂಡತಿ ತನ್ನ ಗಂಡನಿಗೆ ಮಾತ್ರ ಬದುಕನ್ನು ನಡೆಸುವ ಉದ್ದೇಶವನ್ನು ಹೊಂದಿದವಳಾಗಿರ ಬೇಕು. ಎಂದು ಇಲ್ಲಿನ ಕೆಲವು ಕಾನೂನುಗಳು ಹೇಳುತ್ವೆ.
ಒಂದು ಅಂದಾಜಿನ ಪ್ರಕಾರ ಪ್ರತಿ ದಿನ 3 ಜನ ಮಹಿಳೆಯರರು ಸಾವನ್ನಪ್ಪುತ್ತಿರುವುದು ಬೆಳಕಿಗೆ ಬಂದಿದೆ. 2008ರ ಒಂದು ಸರ್ವೆಯ ಪ್ರಕಾರ ಶೇಕಡಾ 30ರಷ್ಟು ಮಹಿಳೆಯರು ಲೈಂಗಿಕತೆಯಿಂದ ದೂರ ಉಳಿದಿದ್ದಾರೆ. ಬ್ರೂಣ ಹತ್ಯ ಕೂಡ ಇಲ್ಲಿ ಇರುವುದರಿಂದ ಹೆಣ್ಣಿನ ಬಗೆಗಿನ ಗೌರವ ಮತ್ತು ಹೆಣ್ಣು ಸಂತತಿಯ ಉಳಿವಿನ ಅರಿವು ನಡೆಯಬೇಕಿದೆ.
04. ಯೆಮನ್ 

ಯೆಮೆನ್ ದೇಶದಲ್ಲಿನ ಕೆಲವು ಕಾನೂನುಗಳು ಮಹಿಳೆಯ ವಿರುದ್ದವಾಗಿರುವುದರಿಂದ. ಅಲ್ಲಿ ನಡೆಯುವಂತಹ ದೌರ್ಜನ್ಯಗಳು ಇನ್ನೂ ಕಡಿಮೆಯಾಗಿಲ್ಲ. ತಪ್ಪು ಮಾಡಿದವರು ಸುಲಭವಾಗಿ ತಪ್ಪಿಸಿಕೊಳ್ಳುತ್ತಿದ್ದಾರೆ. ರೇಪ್ ಅನ್ನೋದು ಅಲ್ಲಿ ಲೀಗಲ್ ಆಗಿ ಹೋಗಿದೆ. ಸ್ತ್ರೀ ಪರವಾದ ಗೌರವ ಮತ್ತು ಅವರ ಮೇಲಿನ ಕಾಳಜಿ ಇಲ್ಲವಂತವಾಗಿದೆ.
ಇಲ್ಲಿನ ಮತ್ತೊಂದು ದುಸ್ಥಿತಿ ಏನಪ್ಪ ಅಂದ್ರೆ ಶೇಕಡಾ 14ರಷ್ಟು ಹೆಣ್ಣು ಮಕ್ಕಳು 15 ವರ್ಷ ತುಂಬುವುದರೊಳಗೆ ವಯಸ್ಸಾದ ಮುದುಕನನ್ನು ಮದುವೆಯಾಗುತ್ತಾರೆ. ಅದು ಅರೇಂಜ್ ಮ್ಯಾರೆಜ್. ಇದು ಇಲ್ಲಿನ ಜನರ ಒಂದು ದೊಡ್ಡ ಸಮಸ್ಯಯಾಗಿದೆ. ಯೆಮನ್ ಒಂದು ದೇಶವಾಗಿ ಸ್ತ್ರೀಯರ ಮೇಲಿನ ದೌರ್ಜನ್ಯ ತಡೆಯುವಲ್ಲಿ ವಿಫಲವಾಗಿದೆ.
03. ಅಲ್ ಸಾರ್ವಡೋರ್ 

ಇಡೀ ಪ್ರಪಂಚದ ಗರ್ಭಪಾತ ವಿರೋಧಿ ಕಾನೂನುಗಳನ್ನು ಜಾರಿ ಮಾಡಿರುವ ಮೊದಲ ದೇಶ ಅಲ್ ಸಾರ್ವಡೋರ್. ಅದೇ ಇಲ್ಲೇ ಅತೀ ಹೆಚ್ಚು ಗರ್ಭಪಾತ ಪ್ರಕರಣಗಳು ಕಂಡುಬರುತ್ತಿವೆ. ಅದು ಮಹಿಳೆಯರೇ ಸ್ಕ್ಯಾನಿಂಗ್ ಮೂಲಕ ಚೆಕ್ ಮಾಡಿಸಿ ಗರ್ಭಪಾತ ಮಾಡಿಸುವಂತಹ ಕೆಲಸ ಮಾಡುತ್ತಿದ್ದಾರೆ. ಮುಗು ಹುಟ್ಟುವ ಮೊದಲೇ ಕೊಲ್ಲುವ ಕೆಲಸ ನಡೆಯುತ್ತಿದೆ.
ಇಂತಹ ಪ್ರಕರಣಗಳು ಹೆಚ್ಚಾಗಿದ್ದು ಯುವ ಸಮುದಾಯದಲ್ಲಿ ಕಂಡು ಬರುತ್ತಿದೆ. ಗರ್ಭದಲ್ಲಿರುವ ಮಗುವನ್ನೇ ಕೊಲ್ಲುವಂತಹ ಕೃತ್ಯಕ್ಕೆ ಕೈ ಹಾಕಿದ್ದಾರೆ. ಇಂತಹವುಗಳನ್ನ ಕಡಿಮೆ ಮಾಡುವುದಕ್ಕೆ ಕಾನೂನುಗಳನ್ನು ತಂದರೂ ಪ್ರಯೋಜನವಾಗಿಲ್ಲ. ಬದಲಾಗಬೇಕಿರುವುದು ಜನರ ಮನಸ್ಥಿತಿ. ಎಂಬುದು ಇವರ ಅರಿವೆಗೆ ಬರಬೇಕಿದೆ. 
02. ಭಾರತ 

ಹೆಣ್ಣನ್ನು ಗೌರವದಿಂದ ಕಾಣುವ ದೇಶ, ಭೂಮಿಯನ್ನು, ನೀರನ್ನು, ಇಡೀ ದೇಶವನ್ನೇ ಹೆಣ್ಣಿಗೆ ಹೋಲಿಸಿರುವ ಭಾರತ ದೇಶದಲ್ಲಿ ಲಿಂಗ ಅಸಮಾನತೆ ಇಲ್ಲ ಎಂದರೆ ತಪ್ಪಾಗುತ್ತೆ. ಮೊದಲಿನಷ್ಟು ಇಲ್ಲ, ಸಾಕಷ್ಟು ಸುಧಾರಿಸಿದೆ ಎಂದರೆ ಅಲ್ಪ ಮಟ್ಟಿಗಾದರು ಇರುವುದನ್ನ ಕಾಣ್ಬೋದು. ಇನ್ನೂ ಬಾಲ್ಯ ವಿವಾಹ, ವರದಕ್ಷಿಣೆ ಪ್ರಕರಣಗಳು ಇಲ್ಲಿ ಸಾಮಾನ್ಯ, ಇನ್ನೋ ಆಸಿಡ್ ಆಟ್ಯಾಕ್, ಸುಸೈಡ್ಸ್ ಸಾಮಾನ್ಯವಾಗಿಬಿಟ್ಟಿವೆ.
ನ್ಯಾಷನಲ್ ಕ್ರೈಮ್ ರೆಕಾರ್ಡ್ ಬ್ಯೂರೊ ಪ್ರಕಾರ 2010ರಲ್ಲಿ 8391 ವರದಕ್ಷಿಣೆ ಕಿರುಕುಳದಿಂದ ಸಾವನ್ನಪ್ಪಿದ ಪ್ರಕರಣಗಳು ವರದಿಯಾಗಿವೆ. ಭಾರತದಲ್ಲಿನ ಅಸಮಾನತೆಯು ಮಹಿಳೆಯರ ಶೋಷಣೆ ಮತ್ತು ಅವರ ಮಾರಣಾಂತಿಕ ಸಾವಿಗೆ ಕಾರಣವಾಗುತ್ತಿದೆ. ಶೇಕಡಾ 30% ಮಹಿಳೆಯರು ವರದಕ್ಷಿಣೆ ಕಿರುಕುಳದಿಂದ ಸಾವನ್ನಪ್ಪಿದ್ದಾರೆ.
01. ಸೌದಿ ಅರೇಬಿಯಾ 

ಲಿಂಗ ಅಸಮಾನತೆಯಲ್ಲಿ ಮೊದಲನೇ ಸ್ಥಾನದಲ್ಲಿ ಇರೋದು ಸೌದಿ ಅರೇಬಿಯ, ಅಲ್ಲಿನ ಕಾನೂನುಗಳು, ಸಂಪ್ರದಾಯಗಳು ಮಹಿಳೆಯರ ಪಾಲಿಗಳತೂ ಮುಳ್ಳಾಗಿರುವುದು ಸುಳ್ಳಲ್ಲ. ನಾಲ್ಕು ಚಕ್ರದ ವಾಹನಗಳನ್ನ ಚಲಾವಾಣೆ ಮಾಡದೇ ಇರುವುದು. ಮನೆಯಲ್ಲಿ ಗುಲಾಮಳಂತೆ ಇರವುದು ಸೇರಿದಂತೆ ಹಲವು ನಿರ್ಭಂದಗಳು ಸೌದಿ ಅರೇಬಿಯ ರಾಷ್ಟ್ರದಲ್ಲಿ ಕಂಡುಬರುತ್ತದೆ.
ಇಷ್ಟು ಮಾತ್ರವಲ್ಲದೆ ಅನೇಕ ಪ್ರದೇಶಗಳಿಗೆ ಮಹಿಳೆಯರ ನಿಶೇಧವಿದೆ ಮತ್ತು ಮತದಾನ ಮಾಡುವುದರಲ್ಲಿ ಕೂಡ ಬೇದಬಾವವಿದೆ. ಇದು ಸೌದಿ ಅರೇಬಿಯ ದೇಶದ ಲಿಂಗ ಅಸಮಾನತೆಯ ಕರಾಳ ಮುಖ. ಈ ಹತ್ತು ದೇಶಗಳಲ್ಲಿ ಈ ರಾಷ್ಟ್ರ ಮಹಿಳೆಯ ಶೋಷಣೆಯಲ್ಲಿ ಮೊದಲನೆಯದಾಗಿ ಮತ್ತು ಲಿಂಗ ಅಸಮಾನತೆಯಲ್ಲಿ ಕುಖ್ಯಾತಿ ಪಡೆದಿದೆ.
ಒಂದೊಂದು ದೇಶದ್ದು ಅದರದೇ ಆದ ಕಥೆ, ಅದರದ್ದೇ ಆದ ಲಿಂಗ ಅಸಮಾನತೆ ಸ್ತ್ರೀಯರ ಮೇಲಿನ ದೌರ್ಜನ್ಯ ಇವು ಈ ದೇಶಕ್ಕೆ ಅಂಟಿಕೊಂಡ ಕಳಂಕಗಳು ಎಂದ್ರೆ ತಪ್ಪಾಗೋದಿಲ್ಲ. ಇದು ಬದಲಾದಗ ಮಾತ್ರ ಪೂರ್ಣ ಪ್ರಮಾಣದಲ್ಲಿ ದೇಶ ಬೆಳೆಯೋದಕ್ಕೆ ಸಾದ್ಯ. 
                                                                                                                  ಮಂಜುನಾಥ್ ಜೈ

ಕಾಮೆಂಟ್ ಮಾಡಿ, ಶೇರ್ ಮಾಡಿ..

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಪ್ರಪಂಚದ 10 ಎತ್ತರದ ಪರ್ವತಗಳು - 26

ಭಾರತದ 10 ಪ್ರಸಿದ್ಧ ರಾಜರು - 22

ಕರ್ನಾಟಕದ 10 ಸುಂದರ ಬೆಟ್ಟಗಳು - 25