ಪ್ರಪಂಚದ ನಿಷೇಧಿತ ಪ್ರದೇಶಗಳು - 11
ಜಗತ್ತಿನಲ್ಲಿ ನಿಷೇಧಕ್ಕೆ ಒಳಗಾದ, ಯಾರೂ ಹೋಗಲಾರದ ಸ್ಥಳಗಳ ಬಗ್ಗೆ ಹೇಳ್ತಾ ಇದಿನಿ. ಇಲ್ಲಿಗೆ ಯಾರೂ ಹೊಗೋದು ಇಲ್ಲ. ಹೋಗುವುದಕ್ಕೆ ಇಷ್ಟಾನು ಪಡೋದಿಲ್ಲ. ಇದರ ಹಿಂದಿನ ಕಥೆ ಏನು ಎಂಬುದರ ಅಸಲಿ ವಿಚಾರವನ್ನ ನಿಮ್ಮ ಮುಂದೆ ಬಿಚ್ಚಿಡುತ್ತಿದ್ದೇವೆ.
1. ಲಾಸ್ಕ್ ಹೌಸ್ ಗುಹೆಗಳು, ಫ್ರಾನ್ಸ್
ಪ್ರಾನ್ಸ್ ದೇಶದಲ್ಲಿನ ಲಾಸ್ಕ್ ಹೌಸ್ ಗುಹೆಗಳು. 17.300 ವರ್ಷಗಳ ಮುಂಚೆ ಸ್ಟೋನ್ ವ್ಯಾಲೆಡ್ಗಳಿಂದ, ಖನಿಜ ಬಣ್ಣಗಳಿಂದ ಗೋಡೆಯ ಮೇಲೆ ಬಿಡಿಸಿರುವ ಚಿತ್ರಗಳು ಇವು. ಇಲ್ಲಿ ಆ ಕಾಲದಲ್ಲಿದ್ದ ಅತೀ ದೊಡ್ಡ ಪ್ರಾಣಿಗಳ ಚಿತ್ರವನ್ನ, ಚಿಕ್ಕ ಪ್ರಾಣಿಗಳ ಚಿತ್ರಗಳನ್ನ ಹಾಗೂ ಆಗಿನ ಕೆಲವು ಮಹತ್ವ ಪೂರ್ಣ ಚಿತ್ರಗಳನ್ನ ಬಿಡಿಸಲಾಗಿದೆ.
ಈ ಗುಹೆಯನ್ನ 1940ರಲ್ಲಿ ಕಂಡುಹಿಡಿಯಲಾಯಿತು. 1948ರಿಂದ ಈ ಗುಹೆಗಳನ್ನ ನೋಡಲು ಪ್ರವಾಸಿಗರಿಗೆ ಅನುಮತಿ ನೀಡಲಾಯಿತು. ಪ್ರವಾಸಿಗರು ತಂಡೋಪ ತಂಡವಾಗಿ ಇಲ್ಲಿಗೆ ಬರಲು ಪ್ರಾರಂಭ ಮಾಡಿದರು. ನಂತರದ ದಿನಗಳಲ್ಲಿ ಗುಹೆಗಳಲ್ಲಿನ ಚಿತ್ರಗಳಿಗೆ ಹಾನಿಯಾಗುತ್ತೆ ಅಂತ ಗೊತ್ತಾಗಿ 1963ರಿಂದ ಈ ಗುಹೆಗಳಿಗೆ ಹೋಗುವ ಪ್ರವೇಶದ ದ್ವಾರವನ್ನು ಮುಚ್ಚಲಾಯಿತು. ಇದರ ಒಳಗೆ ಪ್ರವೇಶವನ್ನು ನಿಶೇಧಿಸಲಾಯಿತು. ಇತಿಹಾಸದ ಪುಟಗಳನ್ನು ತೆರೆದು ನೋಡಲು ಇರುವಂತಹ ಆಧಾರಗಳಲ್ಲಿ ಒಂದಾಗಿದ್ದ ಗುಹೆಯೊಳಗಿನ ಚಿತ್ರಗಳು ಹೆಚ್ಚು ಮಹತ್ವ ಪೂರ್ಣವು, ಮತ್ತು ಮಾಹಿತಿಯುಕ್ತವು ಆಗಿದ್ದವು. ಪ್ರವಾಸಿಗರ ಹಾನಿಯಿಂದ ಈಗ ಯಾರಿಗೂ ಅದರ ಮಾಹಿತಿ ಇಲ್ಲದಂತೆ ಆಗಿದೆ.
2. ಕೊಡಿಗ್ಲಿಯಾ ದ್ವೀಪ, ಇಟಲಿ
2000 ವರ್ಷಗಳ ಹಿಂದೆಯೇ ಅಲ್ಲಿನ ಪುರಾಣಗಳಲಿ ಕೊಡಿಗ್ಲಿಯಾ ದ್ವೀಪದ ಅನೇಕ ವಿಷಯಗಳ ಬಗ್ಗೆ ಬರೆಯಲಾಗಿದೆ. 1348ರಲ್ಲಿ ಇಟಲಿಯ ವೆನಿಸ್ ಎಂಬ ನಗರದಲ್ಲಿ ಪ್ಲೇಗ್ ರೋಗದಿಂದ ಬಳಲುತ್ತಿದ್ದ ಸಾವಿರಾರು ಜನರನ್ನ ಕೊಡಿಗ್ಲಿಯಾ ದ್ವೀಪಕ್ಕೆ ಸ್ಥಾಳಾಂತರಿಸಲಾಗಿತ್ತು.
1793ರಲ್ಲಿ ಹಾಗೂ 20ನೇ ಶತಮಾನದಲ್ಲೂ ಸಹ ಇದೇ ರೋಗದಿಂದ ಬಳುತ್ತಿದ್ದ ಸಾವಿರ ಜನರನ್ನು ಇದೇ ಪ್ರದೇಶಕ್ಕೆ ಸ್ಥಳಾಂತರ ಮಾಡಲಾಗಿತ್ತು. 1922ರಲ್ಲಿ ಅಲ್ಲಿ ಕಟ್ಟಡಗಳನ್ನ ನಿರ್ಮಿಸಿ ಬದುಕುಳಿದ ರೋಗಿಗಳಿಗೆ ಚಿಕಿತ್ಸೆ ನೀಡುವ ಪರಿಪಾಟವನ್ನು ನಡೆಸಿಕೊಂಡು ಬರಲಾಗುತ್ತಿತ್ತು. ಇದೇ ಸಮಯದಲ್ಲಿ ಆ ರೋಗದಿಂದ ಬಳಲಿ ಸತ್ತವರ ಆತ್ಮಗಳು ತಿರುಗುತ್ತಾ, ಆದ್ವೀಪಕ್ಕೆ ಬಂದವರನ್ನ ಸಾಯಿಸುತ್ತಿವೆ, ಮತ್ತು ಕಾಟಗಳನ್ನು ಕೊಡುತ್ತಿವೆ ಎಂದು 1968ರಲ್ಲಿ ಅಲ್ಲಿದ್ದ ಎಲ್ಲಾ ಕಟ್ಟಡಗಳನ್ನ ಮುಚ್ಚಿ ವಾಪಸ್ ಬರಲಾಯಿತು. ಅಲ್ಲಿಂದ ಕೊಡಿಗ್ಲಿಯಾ ದ್ವೀಪಕ್ಕೆ ಯಾರಿಗೂ ಪ್ರವೇಶವಿಲ್ಲದಂತೆ ನಿರ್ಭಂದ ಹೇರಲಾಗಿದೆ.
3. ವ್ಯಾಟಿಕನ್ ಪ್ರಾಚೀನ ರಹಸ್ಯ ಗ್ರಂಥಾಲಯ
ಸುಮಾರು 52 ಮೈಲಿ ಉದ್ದದ ಕಪಾಟುಗಳನ್ನು ಹೊಂದಿರುವಂತಹ ಈ ಪ್ರಾಚೀನ ರಹಸ್ಯ ಗ್ರಂಥಾಲಯದಲ್ಲಿ ಕ್ಯಾತೋಲಿಕ್ ಚರ್ಚ್ ಮತ ಪರವಾಗಿ ಬರೆದ ಹಳೆಯ ಕೈ ಬರಹದ ಪತ್ರಗಳು ಭದ್ರವಾಗಿವೆ ಎಂದು ಹೇಳಲಾಗುತ್ತಿದೆ. ಧಾರ್ಮಿಕತೆಗೆ ಹೆಚ್ಚಿನ ಸಂಭದಿಸಿದ ವಿಚಾರಗಳು, ಚರ್ಚ್ ಸಂಬಂದಿಸ ವಿಚಾರಗಳಿಗೆ ಇದನ್ನು ಮೀಸಲಿಡಲಾಗಿದೆ.
ಈ ಪ್ರಾಚೀನವಾದ ಗ್ರಂಥಾಲಯ ಮತ ಪ್ರಚಾರ ಮಾಡುತ್ತಿದ್ದ ಕಾಲದಿಂದಲೂ ಇದೆಯಂತೆ 1881ರ ವರೆಗೂ ಇದರರೊಳಗೆ ಪೋಪ್ ಒಬ್ಬರು ಹೋಗಲು ಅವಕಾಶವಿತ್ತಂತೆ. ಈಗಲೂ ಇದರೊಳಗೆ ಯಾರಾದರು ಹೋಗಬೇಕೆಂದಿದ್ದರೆ. ಅದರದೇ ಆದಂತಹ ನೀತಿ ನಿಯಮಗಳನ್ನ ಅನುಸರಿಸಬೇಕಂತೆ.
ಇಡೀ ಪ್ರಪಂಚದಲ್ಲೇ ವಿಶೇಷವಾದ ಸ್ಥಾನವನ್ನು ಪಡೆದುಕೊಂಡಿದೆ ಈ ಗ್ರಂಥಾಲಯ. ಇಷ್ಟು ಹಳೆಯದಾದ ಕಡತಗಳನ್ನು ಇದು ಹೊಂದಿ. ಮತ ಪ್ರಚಾರದ ಕುರುಹುಗಳನ್ನ ಉಳಿಸಿಕೊಂಡಿದೆ. ಆಗಿನ ಕೈ ಬರಹದ ಪತ್ರಗಳ ದಾಖಲೆಗಳು ಇಲ್ಲವೆ. ಆದರೆ ಒಳಗೆ ಹೋಗಲು ಮಾತ್ರ ಸಾಕಷ್ಟು ಸರ್ಕಸ್ ಮಾಡಬೇಕಾಗುತ್ತೆ. ಅದರಿಂದಾಗಿಯೇ ಇದರ ಒಳಗೆ ಹೋಗಲು ಯಾರು ಇಷ್ಟ ಪಡುವುದಿಲ್ಲ. ಅದಕ್ಕಾಗಿಗೆ ನಿಶೇಧಿತ ಪ್ರದೇಶವಾಗಿ ಉಳಿದಿದೆ.
4. ಅವರ್ ಲೇಡಿ ಮೇರಿ ಆಫ್ ಜಿಯಾನ್ ಚರ್ಚ್, ಇಥಿಯೋಪಿಯಾ
4ನೇ ಶತಮಾನದಲ್ಲಿ ಆಫ್ರಿಕಾ ಪ್ರದೇಶದಲ್ಲಿ ಪರಿಪಾಲನೆ ಮಾಡಿದ ಕ್ರೈಸ್ತ ಚಕ್ರವರ್ತಿಯೊಬ್ಬ ಈ ಚರ್ಚ್ನ್ನು ನಿರ್ಮಿಸಿದ್ದಾನೆ. ಈ ಚರ್ಚ್ನ ನಿಬಂಧನೆಗಳನ್ನು ಪೂರೈಸಲು ಒಬ್ಬರು ಗುರುವನ್ನ ನೇಮಿಸಲಾಗಿದೆ. ಅವರಿಗೆ ಮಾತ್ರ ಈ ಚರ್ಚ್ನೊಳಗೆ ಹೋಗಲು ಅಲ್ಲಿ ಪ್ರಾರ್ಥಿಸಲು, ಮೂಂಬತ್ತಿಗಳನ್ನ ಬೆಳಗಲು ಅನುಮತಿ ನೀಡಲಾಗಿದೆ.
ಈ ಚರ್ಚ್ಗೆ ಸಂಬಂಧಿಸಿದಂತೆ ಇದರ ಮತದ ಗುರು ಮರಣ ಹೊಂದುವವರೆಗೂ ಆ ಚರ್ಚ್ನಲ್ಲೇ ವಾಸಿಸಬೇಕು ತಾನು ಮರಣಹೊಂದುವ ದಿನ ತನ್ನ ಉತ್ತರಾಧಿಕಾರಿಯಾಗಿ ಯಾರನ್ನಾದರು ನೇಮಿಸಬೇಕು ಎಂಬ ನಿಯಮ ಅವರ್ ಲೇಡಿ ಮೇರಿ ಆಫ್ ಜಿಯಾನ್ ಚರ್ಚ್ಗೆ ಇದೆ.
ಆ ಕ್ರೈಸ್ತ ಚಕ್ರವರ್ತಿ ಇರುವುದಕ್ಕೆ ಹೇಗೆ ಸಾದ್ಯವಾಯಿತೋ ಗೊತ್ತಿಲ್ಲ. ಆದರೆ ಆ ನಂತರದ ದಿನಗಳಲ್ಲಿ ಗೊತ್ತಾಯ್ತು ಆ ಚರ್ಚ್ನ ಒಳಗೆ ಹೋಗೋಕೆ, ಅದರಲ್ಲಿ ವಾಸಿಸೋಕೆ, ಹೊರಬರೋದಕ್ಕೆ ಯಾವ ದಾರಿಯು ಇಲ್ಲಾ ಅಂತ. ಆ ಚರ್ಚ್ಗಳಲ್ಲಿನ ನಿಬಂದನೆಗಳ ಅಂಗೀಕಾರ ಕುರಿತು ಯಾರಿಗೂ ಸರಿಯಾಗಿ ತಿಳಿದಿಲ್ಲದ ಕಾರಣ ಒಳಗೆ ಪ್ರವೇಶಿಸಲು ಅನುಮತಿ ನೀಡಿಲ್ಲ. ಮುಂದೆಯು ಅನುಮತಿಯನ್ನು ನೀಡೋಲ್ಲ.
5. ಜಿಯಾಂಗ್ ಶೋ ಖ್ಯಾತಿಯ ರಕ್ಷಣಾ ಮ್ಯೂಸಿಯಂ, ಚೀನಾ
ಚೀನಾದ ನಸ್ರಿಂ ನಗರದಲ್ಲಿರೋ ಈ ಮ್ಯೂಸಿಯಂನಲ್ಲಿ ಚೈನಾ ಜಗತ್ತಿನ ವಿವಿಧ ದೇಶಗಳ ಮೇಲೆ ಗೂಡ ಚರ್ಯೆನಡೆಸಿದ ಪತ್ರಗಳು ಗೂಡಚರ್ಯೆಗೆ ಬಳಸಿದ ವಸ್ತುಗಳನ್ನು ಭದ್ರವಾಗಿ ಇರಿಸಲಾಗಿದೆ. ಪೆನ್ನುಗಳು, ಗೂಡ ಚರ್ಯೆ ಹೇಗೆ ನಡೆಸಿದ್ರು ಅಂತ ಬರೆದ ಪತ್ರಗಳು ಮತ್ತು ಮ್ಯಾಫ್ಗಳು ಸಹ ಇವೆ. ಈ ಮ್ಯೂಸಿಯಮ್ ವೀಕ್ಷಿಸಲು ವಿದೇಶಿಯರಿಗೆ ಅನುಮತಿಯನ್ನು ನೀಡಿಲ್ಲ.
ಹಾಗೂ ಚೈನಾ ದೇಶದ ಪ್ರಜೆಗಳಿಗೆ ಅವಕಾಶವಿದ್ದರು ಹಲವು ಷರತ್ತುಗಳನ್ನು ವಿಧಿಸಿದ್ದು ಅವುಗಳನ್ನೆಲ್ಲಾ ಪೂರೈಸಿ ಹೋಗಬೇಕಾಗುತ್ತೆ. ಇದರಿಂದಾಗಿ ಈ ಮ್ಯೂಸಿಯಂ ಒಳಗೆ ಯಾರೂ ಹೋಗುವುದಕ್ಕೆ ಇಷ್ಟ ಪಡುವುದಿಲ್ಲ. ಇದೊಂದು ಯಾರು ಹೋಗಲಾರದ ಒಂದು ಸ್ಥಳವಾಗಿದೆ ನಿರ್ಮಾಣವಾಗಿದೆ.
ಜಗತ್ತಿನ ದೊಡ್ಡ ರಾಷ್ಟ್ರಗಳ ಸಾಲಿನಲ್ಲಿ ನಿಲ್ಲಬೇಕಾದರೆ. ಅದರ ಶಕ್ತಿ ಸಾಮಾಥ್ರ್ಯವನ್ನ ಅಳೆಯಬೇಕಾದರೆ ಎದುರಾಳಿಯ ಬಲವನ್ನ ತಿಳಯ ಬೇಕಾದ ಅವಶ್ಯಕತೆ ಇರುವುದರಿಂದ ಚೀನಾ. ತನ್ನ ಅಗತ್ಯತೆಗೆ ತಕ್ಕಂತೆ. ಸೈನ್ಯದ ಹಲವು ಗುಪ್ತ ಮಾಹಿತಿಗಳನ್ನು ಇದೆ ಮ್ಯೂಸಿಯಂನಲ್ಲಿ ಇಟ್ಟು ಕಾಪಾಡಿಕೊಂಡು ಬಂದಿದೆ. ಇದರ ಒಳಗೆ ಹೋಗುವುದು ಅಷ್ಟು ಸುಲಭದ ಮಾತಲ್ಲ.
6. ಪೈನ್ ಗ್ಯಾಪ್, ಆಸ್ಟ್ರೇಲಿಯಾ
ಆಸ್ಟ್ರೇಲಿಯಾದ ಉತ್ತರ ಭಾಗದಲ್ಲಿ ಅಸ್ಟ್ರೇಲಿಯಾ ಮತ್ತು ಅಮೇರಿಕಾ ಜಂಟಿಯಾಗಿ ನಿರ್ಮಿಸಿ ನಡೆಸುತ್ತಿರುವಂತಹ ಸ್ಯಾಟಲೈಟ್ ಟ್ರಾಕಿಂಗ್ ಸ್ಟೇಷನ್ ಪೈನ್ ಗ್ಯಾಪ್. ಇದನ್ನು ಬಹು ಮುಖ್ಯವಾಗಿ ಬಳಸುತ್ತಿರುವುದೇ ಅಮೇರಿಕಾ. ಅಮೇರಿಕಾದ ಉಪಗ್ರದಿಂದ ಬರುವ ಗೂಡಾಚಾರಗಳ ವಿಷಯಗಳನನ್ನು ಹಾಗೂ ಪ್ರಪಂಚದ ಕಣ್ಗಾವಲಿನ ಸಂಪರ್ಕದಿಂದ ಬರುವ ಸುದ್ದಿಗಳನ್ನ ಶೇಖರಿಸುವ ಒಂದು ವ್ಯವಸ್ಥೆಯು ಇದರದ್ದಾಗಿದೆ.
ಆಸ್ಟ್ರೇಲಿಯಾ ಮತ್ತು ಅಮೇರಿಕಾದ ಜಂಟಿಯಲ್ಲಿ ನಡೆಯುತ್ತಿರುವ ಈ ಗುಪ್ತಚರ ಮಾಹಿತಿ ಕಲೆಹಾಕುವ ಒಂದು ತಂತ್ರಜ್ಞಾನ ಹಲವಾರು ವಿಶೇಷತೆಯನ್ನ ಒಳಗೊಂಡು ಎರಡು ದೇಶಗಳ ನಡುವಿನ ಬಾಂದವ್ಯದ ಮತ್ತು ರಕ್ಷಣಾ ಕೊಂಡಿಯಾಗಿ ಬೆಳೆದಿದೆ. ಇದರ ಮೂಲಕವಾಗಿ ತಮ್ಮ ರಾಷ್ಟ್ರಗಳ ರಕ್ಷಣಾ ವ್ಯವಸ್ಥೆಯನ್ನು ಬಲಪಡಿಸಿಕೊಂಡಿವೆ.
ಈ ಪ್ರದೇಶಕ್ಕೆ ಅತಿಕ್ರಮವಾಗಿ ಯಾರು ಕೂಡ ಪ್ರವೇಶವನ್ನು ಮಾಡುವಂತಿಲ್ಲ. ಒಂದು ವೇಳೆ ಅತಿಕ್ರಮವಾಗಿ ಪ್ರವೇಶಿಸಲು ಯತ್ನಿಸಿದವರನ್ನು ಬಂಧಿಸಿ ಶಿಕ್ಷೆಗೆ ಒಳಪಡಿಸಲಾಗುತ್ತೆ. ಇದನ್ನು ಮನಗಂಡು ಯಾರು ಕೂಡ ಇಲ್ಲಿಗೆ ಹೋಗುವುದಿಲ್ಲ.
7. ಇಸೆ ಗ್ರಾಂಡ್ ಸೇನ್, ಜಪಾನ್
ಜಪಾನ್ನಲ್ಲಿ ಶಿಂಟೋ ಮತದವರ ಅತ್ಯಂತ ಪವಿತ್ರವಾದ ಮಂದಿರ ಇಸೆ ಎಂಬ ನಗರದಲ್ಲಿ ಇರುವ ಕಾರಣ ಈ ಮಂದಿರಕ್ಕೆ ಈ ಹೆಸರು ಬಂದಿದೆ. ಜಪಾನ್ನಲ್ಲಿ ಶಿಂಟೋ ಮತ ಮಂದಿರಗಳಿಗೆಲ್ಲಾ ಇದು ಕೇದ್ರ ಸ್ಥಾನ ಈ ಮಂದಿರವನ್ನ ವಿಶ್ವಕ್ಕೆ ದೇವತೆಯಾಗಿ ಸಮರ್ಪಿಸಿಕೊಂಡಿದ್ದಾರೆ. ಈ ಮತಕ್ಕೆ ಸೇರಿದವರು ಪ್ರಕೃತಿಯೇ ದೇವರೆದಂದು ಭಾವಿಸಿ ಮಳೆ, ಸಮುದ್ರ ಹಾಗೂ ಸೂರ್ಯನ್ನು ದೇವರನ್ನಾಗಿ ಪೂಜಿಸುತ್ತಾರೆ. 2000 ವರ್ಷಗಳ ಹಿಂದೆ ಪ್ರಕೃತಿ ನೀಡಿದ ಕೆಲವು ವಸ್ತುಗಳನ್ನ ಭದ್ರವಾಗಿ ಇಲ್ಲಿ ಇಡಲಾಗಿದೆ. ಮತ್ತು ಅಲ್ಲಿಗೆ ಯಾರೂ ಕೂಡ ಹೋಗಕೂಡದು ಎಂಬ ಬಲವಾದ ವಾದವೂ ಕೂಡ ಇದೆ. ಜಪಾನ್ನಲ್ಲಿ ಶಿಂಟೋ ಮತಸ್ತರೇ ಮಂದಿರದ ಹೊರಗೆ ನಿಂತು ಪ್ರಾರ್ಥಿಸಿಕೊಳ್ಳಬೇಕಂತೆ. ಪ್ರತಿನಿತ್ಯ ಇಲ್ಲಿ ನೂರಾರು ಜನ ಪ್ರವಾಸಿಗರು ಆಗಮಿಸುತ್ತಾರೆ. ಪ್ರಾರ್ಥನೆಯನ್ನು ಮಾಡುತ್ತಾರೆ. ಇದೊಂದು ಜಪಾನ್ ದೇಶದ ಪ್ರಮುಖ ಧಾರ್ಮಿಕ ಕೇಂದ್ರಗಳಲ್ಲಿ ಒಂದು ಎನಿಸಿಕೊಂಡಿದೆ.
8. ಮೆಟ್ರೋ ಟು ರಷ್ಯಾ, ರಷ್ಯಾ
ಮಾಸ್ಕೋ ನಗರದಲ್ಲಿ ಈಗಿರುವ ಮೆಟ್ರೋ ಲೈನ್ಗೆ ಸಮಾನವಾಗಿ ಮೆಟ್ರೋ ಟೂ ಲೈ ವೇ ಇದೆ ಎಂದು ಹೇಳುತ್ತಾರೆ. ಇದು ರಾಷ್ಟ್ರದ ರಹಸ್ಯ ರೈಲು ಮಾರ್ಗವಾಗಿದ್ದು ಇದನ್ನು ರಷ್ಯಾ ಗೂಡಾಚಾರ್ಯ ಸಂಸ್ಥೆ ಕೆಜಿಬಿ ಉಪಯೋಗಿಸುತ್ತಿದೆ ಎಂಬ ವದಂತಿಗಳು ಈ ಟ್ರೈನು ಮಾರ್ಗದ ಪರವಾಗಿ ಕೇಳಿಬರುತ್ತಿವೆ.
ಈ ರೈಲ್ವೇ ಲೈನ್ನ್ನ ಸ್ಟಾಲಿನ್ ಅವಧಿಯಲ್ಲಿ ಅವನ ಪರಿಪಾಲನೆಯಲ್ಲಿ ಹಾಕಿದ್ದಾರೆ ಎಂದು. ಹಾಗೂ ಇದರ ರಹಸ್ಯ ಡಿ6 ಎಂದು ರಷ್ಯಾ ಮತ್ತು ಇದನ್ನು ರಕ್ಷಣಾ ಶಾಖೆ ನಡೆಸುತ್ತಿದೆ ಎಂದು ಹೇಳುತ್ತಾರೆ. 1994ರಲ್ಲಿ ರಷ್ಯಾ ನಗರಾನ್ವೇಷಣೆ ಸಮೂಹದ ಒಬ್ಬ ವ್ಯಕ್ತಿ ಪಾತಾಳ ಲೋಕದ ಶೋದಕ್ಕಾಗಿ ಭೂಮಿಯನ್ನ ಅಗೆಯುವಾಗ ಈ ರೈಲು ಮಾರ್ಗವನ್ನ ಕಂಡುಹಿಡಿದಿದ್ದಾರೆ ಎಂದು ಹೇಳಲಾಗುತ್ತಿದೆ.
ಆದರೆ ರಷ್ಯಾ ಮಾತ್ರ ಆ ತರಹದ್ದೇನು ಇಲ್ಲಾ ಎಂದು ಹೇಳ್ತಿದೆ. ಹಾಗೆ ಯಾರು ಸಹ ಈ ರೈಲು ಮಾರ್ಗದ ಕುರಿತು ಸರಿಯಾಗಿ ಮಾಹಿತಿಯನ್ನ ನೀಡ್ತಾ ಇಲ್ಲ. ಇದು ಎಷ್ಟರ ಮಟ್ಟಿಗೆ ನಿಜವೋ ಸುಳ್ಳೋ ಗೊತ್ತಿಲ್ಲ ಆದರೆ ಟ್ರೈನ್ ಮಾರ್ಗವಂತು ಇರೋದು ನಿಜ ಇಲ್ಲಿಗೆ ಸಾಮನ್ಯ ಜನರ ನಿಷೇಧವಿರೋದು ಅಷ್ಟೇ ನಿಜ.
ಮಂಜುನಾಥ್ ಜೈ
ಕಾಮೆಂಟ್ಗಳು
ಕಾಮೆಂಟ್ ಪೋಸ್ಟ್ ಮಾಡಿ