ಪ್ರಪಂಚದ ನಿಕೃಷ್ಟ ರಾಷ್ಟ್ರಗಳು - 12


  ಪ್ರಪಂಚದ ಎಲ್ಲಾ ದೇಶಗಳು ಸುಂದರವಾಗಿ ಇರೋದಲ್ಲ, ಸುಂದರವಾಗಿರೋ ದೇಶದಲ್ಲೂ ಕೆಲವೊಂದು ದೋಷಗಳು ಕಂಡುಬರುತ್ವೆ. ಇವುಗಳನ್ನ ಹೊರತು ಪಡಿಸಿದ್ರೆ ಇನ್ನೂ ಸಾಮಾನ್ಯ ಮಟ್ಟವನ್ನು ಬಿಟ್ಟು ಮೇಲೆ ಬರಲು ಒದ್ದಾಡುತ್ತಿರೋ ಕನಿಷ್ಟ ಸೌಲಭ್ಯಗಳನ್ನು ಹೊಂದುವಲ್ಲಿ ವಿಫಲವಾಗಿರೋ ನಿಕೃಷ್ಟ ದೇಶಗಳ ವರದಿ ಇಲ್ಲಿದೆ ನೋಡಿ. 


10. ಕೀನ್ಯಾ 

ಕೀನ್ಯಾ ಆಫ್ರಿಕಾ ಖಂಡದಲ್ಲಿರುವ ದೇಶಗಳಲ್ಲಿ ಒಂದು. ವಿಭಿನ್ನ ಸಂಸ್ಕøತಿ, ವಿಶಿಷ್ಟ ಆಚರಣೆಯಿಂದ ವಿಶೇಷವಾಗಿ ಕಂಡುಬರುತ್ತೆ. 1963ರಲ್ಲಿ ಸ್ವಾತಂತ್ರ್ಯ ಪಡೆದ ಕೀನ್ಯಾ ಸ್ವತಂತ್ರ ದೇಶದಂತೆ ಉದಯವಾಗಿ ಬೆಳವಣಿಗೆಯನ್ನ ಹೊಂದುತ್ತಿದೆ. ಆಫ್ರಿಕಾ ಖಂಡಗಳಲ್ಲಿ ಹೆಚ್ಚಿನ ಜನರು ವಾಸ ವಾಸಮಾಡುವ ದೇಶಗಳಲ್ಲಿ ಇದು ಒಂದು ಎನಿಸಿಕೊಂಡಿದೆ. ಇಲ್ಲಿನ ಜನರ ಆರ್ಥಿಕ ಸ್ಥಿತಿಯೂ ಕೆಳ ಮಟ್ಟದಾಗಿದ್ದು ನಿಕೃಷ್ಟ ಜೀವನ ನಡೆಸುತ್ತಿದ್ದಾರೆ.
ಕುಡಿಯು ನೀರಿನ ಸೌಲಭ್ಯವಿಲ್ಲ, ಚರಂಡಿ ವ್ಯವಸ್ಥೆ ಇಲ್ಲಾ, ಶೌಚಾಲಯದ ವ್ಯವಸ್ಥೆಗಳು ಮೊದಲೇ ಇಲ್ಲ, ಕೊಳಚೆ ಪ್ರದೇಶದಲ್ಲೇ ಬಹುತೇಕ ಜನರು ವಾಸ ಮಾಡುತ್ತಿದ್ದಾರೆ. ಮಕ್ಕಳು, ಮಹಿಳೆಯರ ಆರೋಗ್ಯದ ಸಮಸ್ಯೆ ಇಲ್ಲಿ ಸಾಮಾನ್ಯ, ಕೊಳಚೆ ಪ್ರದೇಶದಲ್ಲಿರುವ ಇವರು ತಮ್ಮ ನೈರ್ಮಲ್ಯವನ್ನ ಮರೆತಿದ್ದಾರೆ. ಇದರಿಂದಾಗೆ ಕೀನ್ಯಾ ನಿಕೃಷ್ಟ ದೇಶಗಳ ಸಾಲಿನಲ್ಲಿ ಹತ್ತನೇ ಸ್ಥಾನವನ್ನ ಪಡೆದುಕೊಂಡಿದೆ.

09. ಇಥಿಯೋಪಿಯ 

ಇತಿಯೋಪಿಯ ಆಫ್ರಿಕ ಖಂಡದ ಉತ್ತರಕ್ಕೆ ಇರುವ ಒಂದು ಪ್ರಾಚೀನ ದೇಶ. ಮೊದಲಿಗೆ ಇದು ಅಬಿಸೀನಿಯಾ ಎಂದು ಕರೆಯಲ್ಪಡುತಿತ್ತು. ಉತ್ತರಕ್ಕೆ ಎರಿಟ್ರಿಯ, ದಕ್ಷಿಣಕ್ಕೆ ಕೀನ್ಯಾ, ಪೂರ್ವಕ್ಕೆ ಸೋಮಾಲಿಯಾ ಹಾಗೂ ಪಶ್ಚಿಮಕ್ಕೆ ಸುಡಾನ್  ದೇಶಗಳೋಂದಿಗೆ ತನ್ನ ಗಡಿಯನ್ನು ಹಂಚಿಕೊಂಡಿದೆ ಇಥಿಯೋಪಿಯ. ಈ ದೇಶದ ಬಹುತೇಕ ಬಾಗಗಳು ಕಡಿದಾದ ಶಿಖರಗಳು. ಫಲವತ್ತಾದ ಪ್ರಸ್ಥಭೂಮಿ ಹೊಂದಿದೆ. ಆದರೂ ಪ್ರಪಂಚದ ಹಿಂದುಳಿದ ದೇಶಗಳೆಂದು ಹೆಸರು ಪಡೆದಿದೆ.
ಇಥಿಯೋಪಿಯ ಆಫ್ರಿಕಾದ ಅತ್ಯಂತ ಹಿಂದುಳಿದ ದೇಶ ಎಂದು ಕರೆಸಿಕೊಳ್ಳುವುದಕ್ಕೆ ಕಾರಣ ಅತೀ ಹೆಚ್ಚು ಕಾಲ ಇರುವ ಬರಗಾಲ ಮತ್ತು ಇಲ್ಲಿನ ಬುಡಕಟ್ಟು ಜನರ ನಡುವೆ ನಡೆಯುಂತಹ ಘರ್ಷಣೆಗಳು ಇಲ್ಲಿನ ಆರ್ಥಿಕತೆಯನ್ನು ಹಾಳುಗೆಡವಿದೆ. ಇಲ್ಲಿನ ಜನರು ಕೃಷಿಯನ್ನು ಪ್ರದಾನವಾದ ಉದ್ಯೂಗವನ್ನಾಗಿ ಮಾಡಿಕೊಂಡಿದ್ದಾರೆ. ಇಲ್ಲಿನ ಬಹುತೇಕ ಜನ ಬರಗಾಲ ಮತ್ತು ನಿರಕ್ಷರತೆಯಿಂದ ನರಳುತ್ತಿದ್ದಾರೆ. ಈ ದೇಶದ ಜನರು ಆರ್ಥಿಕವಾಗಿ ಹಿಂದುಳಿದಿರುವುದನ್ನು ಕಾಣಬಹುದು.


08. ಸಿಯೋರ್ ಲಿಯೋನ್ 

ಸಿಯೋರ್ ಲಿಯೋನ್ ಕೂಡ ಪಶ್ಚಿಮ ಆಫ್ರಿಕಾದ ಒಂದು ಸಂವಿಧಾನಿಕ ಗಣರಾಜ್ಯ. ಈ ದೇಶವು 18ನೇ ಶತಮಾನದಲ್ಲಿ ಆಫ್ರಿಕಾ ರಾಷ್ಟ್ರಗಳ ಗುಲಾಮಗಿರಿಯ ವಹಿವಾಟಿಗೆ ಒಂದು ಪ್ರಮುಖವಾದ ತಾಣವಾಗಿತ್ತು. ಇದರ ರಾಜದಾನಿ ಫ್ರಿಟೌನ್‍ಅನ್ನು ಅಮೇರಿಕಾದ ಕ್ರಾಂತಿಕಾರಿ  ಯುದ್ಧದಲ್ಲಿ  ಯುಕೆ ಪರವಾಗಿ ಹೋರಾಡಿ ಬಿಡುಗಡೆಗೊಂಡ ಗುಲಾಮರು ಸ್ಥಾಪನೆ ಮಾಡಿದ್ದರೆ ಎಂದು ಹೇಳಲಾಗುತ್ತದೆ.
ಈ ದೇಶವು ಅಭಿವೃದ್ಧಿ ಹೋಂದಲು ಸಾಕಷ್ಟು ಶ್ರವನ್ನ ಪಡುತ್ತಾ ಇದ್ರು ಇದನ್ನು ಅಭಿವೃದ್ಧಿ ಪಡಿಸುವಲ್ಲಿ ವಿಫಲವಾಗುತ್ತಾ ಇದೆ. ಸ್ಲಂ ಪ್ರದೇಶಗಳಿಂದನೆ ಸಾಕಷ್ಟು ಪ್ರದೇಶಗಳನ್ನು ಹೊಂದಿರುವ ಈ ದೇಶ. ಇಲ್ಲಿನ ಜನರ ಮೂಲ ಸೌಕರ್ಯವನ್ನ ಒದಗಿಸುವಲ್ಲಿ ವಿಫಲವಾಗಿದೆ ಮತ್ತು ಇವರ ಜೀವನ ಮಟ್ಟ ಮತ್ತು ಆರ್ಥಿಕ ಪರಿಸ್ಥಿತಿ ಕೂಡ ಸುಧಾರಿಸದೇ ಇರುವುದನ್ನ ಕಾಣ್ಬೋದು.

07. ಸಿರಿಯಾ 

ಸಿರಿಯಾ ಅರಬ್ ಗಣರಾಜ್ಯ ನೈರುತ್ಯ ಏಷ್ಯಾದಲ್ಲಿರುವ ಒಂದು ರಾಷ್ಟ್ರ. ಇದು ಏಪ್ರಿಲ್ 1946ರಲ್ಲಿ ಫ್ರಾನ್ಸ್ ದೇಶದಿಂದ  ಸ್ವಾತಂತ್ರ್ಯ ಪಡೆದುಕೊಂಡಿತು. ಅಂದಿನಿಂದ ಇಂದಿನ ವರೆಗೂ ಅನೇಕ ಏಳು ಬೀಳುಗಳನ್ನ ನೋಡುತ್ತಾ ಬಂದಿದೆ ಸಿರಿಯಾ. ಅನೇಕ ಅಂತರ್ ಯುದ್ದಗಳು, ಪ್ರಕೃತಿಯ ವಿಕೋಪಕ್ಕೆ ನಲುಗಿ ಹೋಗಿದೆ.
10 ಸಾವಿರ ಮಿಲಿಯನ್ ಜನರು ಪ್ರತಿ ವರ್ಷ ಅಪೌಷ್ಟಿಕತೆ ಮತ್ತು ನೀರಿನ ಲಭ್ಯತೆಯಿಲ್ಲದೆ ಸಾವನ್ನಪ್ಪುತ್ತಿದ್ದಾರೆ ಎಂಬ ಅಂಶವನ್ನ ಅಲ್ಲಿನ ಮರೆಯುವ ಹಾಗಿಲ್ಲ. ಅರಬ್ ರಾಷ್ಟ್ರಗಳಂತೆ ಇದನ್ನು ನೋಡುವುದು ತಪ್ಪಾದೀತು. ಯಾಕಂದ್ರೆ ಇಲ್ಲೂ ಕೂಡ ಸ್ಲಂ ಏರಿಯಾದಂತಹ ಪ್ರದೇಶಗಳಿವೆ. ಸ್ವಚ್ಚತೆಯಿಲ್ಲದೆ ಮಕ್ಕಳು ಬೆಳೆಯುತಿದ್ದಾರೆ. ಅನೇಕ ಖಾಯಿಲೆಗಳಿಗೆ ತುತ್ತಾಗುತ್ತಿದ್ದಾರೆ. ಹಿಂದುಳಿದ ರಾಷ್ಟ್ರಗಳಲ್ಲಿ ಸಿರಿಯಾ ಕೂಡ ಸ್ಥಾನ ಪಡೆದುಕೊಂಡಿದೆ.

06. ಉತ್ತರ ಕೊರಿಯಾ 

ಪೂರ್ವ ಏಷಿಯಾದ ಉತ್ತರ ಭಾಗದಲ್ಲಿರುವ ಪ್ರಮುಖ ದೇಶಗಳಲ್ಲಿ ಒಂದು. ಚೀನಾ, ರಷ್ಯಾ, ಮತ್ತು ದಕ್ಷಿಣ ಕೊರಿಯಾ ದೇಶಗಳೋಂದಿಗೆ ತನ್ನ ಗಡಿಯನ್ನು ಹಂಚಿಕೊಂಡಿದೆ. ಆರ್ಥಿಕವಾಗಿ ಮತ್ತು ಸಾಮಾಜಿಕವಾಗಿ ಅಭಿವೃದ್ಧಿಹೊಂದಿದೆ. ಆದರೆ ಅಲ್ಲಿರುವಂತಹ ಕಟ್ಟು ನಿಟ್ಟಿನ ನೀತಿ ನಿಯಮಗಳಿಂದಾಗಿ ಪ್ರಪಂಚದ ಕೆಂಗಣ್ಣಿಗೆ ಗುರಿಯಾಗಿರುವುದಂತು ನಿಜ.
ಉತ್ತರ ಕೊರಿಯಾದಲ್ಲಿ ಪ್ರತಿಯೊಬ್ಬನೂ 18ನೇ ವಯಸ್ಸಿಗೆ ಸೈನ್ಯಕ್ಕೆ ಸೇರುವುದು ಕಡ್ಡಾಯವಾಗಿದೆ. ಇದರಿಂದಾಗೇ ಇಲ್ಲಿನ ಸೈನ್ಯ ಭಲ 400000 ಇದೆ. ಇದಕ್ಕೆ ಶೇ 30 ರಷ್ಟು. ಹಣವನ್ನ ಈ ದೇಶ ಖರ್ಚು ಮಾಡುತ್ತೆ. ಪ್ರಪಂಚದ ಅನೇಕ ರಾಷ್ಟ್ರಗಳಿಗೆ ಟಾರ್ಗೇಟ್ ಆಗಿರುವ ಉತ್ತರ ಕೊರಿಯಾ ಯಾವ ಸಮಯಲ್ಲಿ ಯುದ್ದವನ್ನು ಆರಭ ಮಾಡುತ್ತೋ ಎಂಬ ಭಯದಲ್ಲಿವೆ ಕೆಲವು ರಾಷ್ಟ್ರಗಳು. ಮೂಲಭೂತ ಸೌಕರ್ಯ ಮತ್ತು ಶಾಂತಿಯುತ ಸಹಭಾಳ್ವೆಗಿಂತ ಬಂದೂಕಿಗೆ ಹೆಚ್ಚು ಪ್ರಾದಾನ್ಯತೆಯನ್ನ ಉತ್ತರ ಕೊರಿಯ ಕೊಡುತ್ತಿದೆ.

05. ನೈಜೀರಿಯಾ 

ಪಶ್ಚಿಮ ಆಫ್ರಿಕಾದಲ್ಲಿನ ದೇಶಗಳಲ್ಲಿ ಒಂದು ನೈಜೀರಿಯಾ, ಏಕತೆ ಮತ್ತು ನಂಬಿಕೆ, ಶಾಂತಿ ಮತ್ತು ಪ್ರಗತಿ ಎಂಬ ದ್ಯೇಯ ವಾಕ್ಯವನ್ನು ಇಟ್ಟುಕೊಂಡು ಅಭಿವೃದ್ಧಿ ಹೊಂದುತ್ತಿರುವ ರಾಷ್ಟ್ರ. ಆಫ್ರಿಕನ್ ರಾಷ್ಟ್ರಗಲ್ಲಿಯೇ ಹೆಚ್ಚು ಹಿಂದುಳಿದ ಮತ್ತು ಕೆಟ್ಟ ರಾಷ್ಟ್ರಗಳೆಂದು ಹೆಸರನ್ನು ಪಡೆದಂತಹ ರಾಷ್ಟ್ರಗಳಲ್ಲಿ ಒಂದು ಎನಿಸಿಕೊಂಡಿದೆ.
ಇಲ್ಲಿನ ಜನರು ಭಯೋತ್ಪಾದನೆಗೆ ಸೇರಿಕೊಳ್ಳುವುದರ ಮೂಲಕ ದೇಶದಲ್ಲಿನ ಅನೇಕ ಚರ್ಚ್‍ಗಳನ್ನ, ಶಾಲೆಗಳನ್ನ ನಾಶ ಮಾಡಿ ತಮ್ಮ ಸಾರ್ವಭೌಮತ್ವನ್ನು ಸಾದಿಸಿಕೊಳ್ಳುವತ್ತ ನಡೆದುಕೊಳ್ಳುತ್ತಿದ್ದಾರೆ. ಹೆಚ್ಚಿನ ವಿದ್ಯಾಬ್ಯಾಸವಿಲ್ಲ. ಸರ್ಕಾರದ ನಿಯಂತ್ರಣವಿಲ್ಲ, ಮೂಲಭೂತ ಸೌಕರ್ಯಗಳು ಮೊದಲೇ ಇಲ್ಲ. ಇಲ್ಲಿನ ಜನರ ಪರಿಸ್ಥಿತಿ ಅಧೋಗತಿಗೆ ತಲುಪಿದೆ. ಕೆಟ್ಟ ರಾಷ್ಟ್ರಗಳ ಪಟ್ಟಿಯಲ್ಲಿ ನೈಜೀರಿಯಾ 5ನೇ ಸ್ಥಾನವನ್ನ ಪಡೆದುಕೊಂಡಿರುವುದರಲ್ಲಿ ಯಾವುದೇ ಆಶ್ಚರ್ಯವಿಲ್ಲ.

04. ಐವರಿ ಕೋಸ್ಟ್  

ಆಫ್ರಿಕಾ ಖಂಡದಲ್ಲಿನ ದೇಶಗಳಲ್ಲಿ ಒಂದಾದ ಐವರಿ ಕೋಸ್ಟ್ 2002 ರಿಂದ 2007ರ ವರೆಗೆ ನಡೆದ ಅಂತಃ ಕಲಹದಿಂದಾಗಿ ಇಲ್ಲಿನ ಆರ್ಥಿಕ ಸಾಮಾಜಿಕ ಮತ್ತು ರಾಜಕೀಯವಾಗಿ ಅಬಿವೃದ್ಧಿ ಕುಂಠಿತವಾಗಿ ನಡೆಯುತ್ತಿದೆ. ಭಯೋತ್ಪಾದನೆ, ಒಂದು ದೊಡ್ಡ ಪಿಡುಗಾಗಿ ಬೆಳೆದು ದೇಶದ ಅಭಿವೃದ್ದಿಗೆ ಮಾರಕವಾಗಿ ಪರಿಣಮಸಿದೆ.
ಕೊಳಚೆ ಪ್ರದೇಶಗಳು ಸಾಮಾನ್ಯ ಜನರು ಮೂಲಭೂತ ಸೌಕರ್ಯಗಳು ವಂಚಿತರಾಗಿದ್ದಾರೆ. ಬೀಚ್ ಪಕ್ಕದಲ್ಲೇ ಬಿದ್ದ ಕಸದ ರಾಶಿ, ಕೊಳೆ ಪ್ರದೇಶದಲ್ಲಿ ವಾಸ ಮಾಡುವ ಜನರು ಚಿಕ್ಕ ಮಕ್ಕಳು ಸ್ಮೋಕ್ ಮಾಡುವುದು ಸಾಮಾನ್ಯ ಎನಿಸಿಬಿಟ್ಟಿದೆ. ಶಿಕ್ಷಣದ ಕೊರತೆ ಮತ್ತು ಮಾಲಿನ್ಯದಲ್ಲಿ ಬದುಕುವಂತಹ ಸ್ಥಿತಿಯಲ್ಲಿ ಜನರು ಇದ್ದಾರೆ.

03. ಡೆಮಾಕ್ರಟಿಕ್ ರಿಪಬ್ಲಿಕ್ ಆಫ್ ಕಾಂಗೋ

ಆಫ್ರಿಕಾದ ಮೂರನೇ ದೊಡ್ಡ ರಾಷ್ಟ್ರವಾಗಿರುವ ಕಾಂಗೋ ಒಂದು ಕಾಲದಲ್ಲಿ ಬೆಲ್ಜಿಯಂನ ಹೊಸಹಾತು ರಾಷ್ಟ್ರವಾಗಿತ್ತು. 2007ರ ಜನಗಣತಿಯಂತೆ 63.655.000 ಜನಸಂಖ್ಯೆಯನ್ನ ಹೊಂದಿದೆ ಕಾಂಗೋ. ಸಿವಿಲ್ ವಾರ್, ಭ್ರಷ್ಟಾಚಾರ, ಮಾರಣಾಂತಿಕ ಕಾಯಿಲೆಗಳು ಇಲ್ಲಿನ ಜನರನ್ನ ಕಾಡುತ್ತಿವೆ. ಪ್ರತಿ ವರ್ಷ ಇಲ್ಲಿನ ವೈಲೆನ್ಸ್‍ನಿಂದ ಪ್ರಪಂಚದ ಗಮನವನ್ನ ಸೆಳೆಯುತ್ತಿದೆ ಕಾಂಗೋ.
ಮಳೆಬಂದರೆ ಸಾಕು ಜನವಾಸದ ಕೇರಿಯಲ್ಲ ನೀರಿನಲ್ಲಿ ಮುಳುಗಿರುತ್ವೆ. ಮೂಲಭೂತ ಸೌಲಭ್ಯಗಳು ಸೌಕರ್ಯಗಳು ದೂರದ ಮಾತು. ನಿರಂತರವಾಗಿ ನಡೆಯುವ ಇಲ್ಲಿನ ಜನರ ನರಕ ಸದೃಶ್ಯ ಸ್ಥಿತಿ ಶೋಚನೀಯವಾಗಿದೆ. ಜನರು ವಾಸ ಮಾಡುವಂತಹ ಪರಿಸ್ಥಿತಿ ಇಲ್ಲಿ ನಿರ್ಮಾವಾಗಿಲ್ಲ. ನಗರ ಪ್ರದೇಶಗಳ ಪರವಾಗಿಲ್ಲ ಎನ್ನುವಂತಿದ್ದರೆ. ಅಲ್ಲೆ ಪಕ್ಕದಲ್ಲೇ ಇದ್ದ ಸ್ಲಂಗಳದ್ದು ಹೇಳತೀರದು.

02. ಸೋಮಾಲಿಯ

ಒಂದು ವರದಿಯ ಪ್ರಕಾರ ಸೋಮಾಲಿಯ ಪ್ರದೇಶದಲ್ಲಿ ಮಹಿಳೆಯರು ಮತ್ತು ಮಕ್ಕಳು ಸೇರಿದಂತೆ ಸುಮಾರು 10000 ಜನರು ಸಾವನ್ನಪ್ಪುತ್ತಿದ್ದಾರೆ. ಸಿವಿಲ್ ವಾರ್, ಕಿಡ್ನಾಪ್, ಮಾನವ ಹಕ್ಕುಗಳ ಉಲ್ಲಂಘನೆ ಮತ್ತು ರೇಪ್ ಮೊದಲಾದ ಪ್ರಕರಣಗಳು ಇಲ್ಲಿ ಸರ್ವೆ ಸಾಮಾನ್ಯ ಎನಿಸಿಬಿಟ್ಟಿವೆ. ಸೋಮಾಲಿಯ ಪ್ರಪಂಚದ ವಷ್ರ್ಟ್ ದೇಶಗಳ ಸಾಲಿನಲ್ಲಿ ಎರಡನೇ ಸಾಲಿನಲ್ಲಿದೆ.

01. ಇರಾಕ್ 

ವಾಯುವ್ಯ ಏಷ್ಯಾದಲ್ಲಿರುವ ಒಂದು ರಾಷ್ಟ್ರ ಇರಾಕ್ 2005ರ ಜನಗಣತಿಯಂತೆ 28.807.000 ಜನಸಂಖ್ಯೆಯನ್ನು ಹೊಂದಿರುವ ಈ ದೇಶ ಇಂದು ಜಗತ್ತಿನ ಕೆಟ್ಟ ರಾಷ್ಟ್ರಗಳ ಸಾಲಿನಲ್ಲಿ ಮೊದಲನೆಯದಾಗಿ ನಿಲ್ಲುತ್ತೆ. ಒಂದು ಕಡೆ ಭಯೋತ್ಪಾದನೆ ಈ ದೇಶವನ್ನ ಕಿತ್ತು ತಿನ್ನುತ್ತಿದ್ರೆ ಮತ್ತೊಂದು ಕಡೆ, ಬಡತನ, ಅಸುರಕ್ಷತೆ, ಶಿಕ್ಷಣವಿಲ್ಲದೆ ಜನರು ಅಸಹಾಯ ಸ್ಥಿತಿಗೆ ತಲುಪಿದ್ದಾರೆ. ಇದರ ಆರ್ಥಿಕ ವೆವಸ್ಥೆ ಕುಸಿತವನ್ನು ಕಂಡಿದೆ.
ಪ್ರತಿನಿತ್ಯ ಸಾವಿಗೆ ಇಲ್ಲಿ ಬರವೇನು ಇಲ್ಲ ಒಂದು ಕಡೆ ಭಯೋತ್ಪಾದನೆಯಾದರೆ ಮತ್ತೊಂದು ಕಡೆ ಸೈನಿಕ ದಾಳಿಗಳು ನಡೆದು ನಾಗರೀಕರಿಗೆ ಭಯವನ್ನು ಹುಟ್ಟುಹಾಕಿವೆ. ಕೊಳಚೆ ಪ್ರದೇಶಗಳು, ಸಾಂಕ್ರಾಮಿಕ ರೋಗಗಳು, ಇಲ್ಲಿನ ಜನರನ್ನು ಕಾಡ್ತಿವೆ. ಕನಿಷ್ಟ ಮಟ್ಟದ ಮೂಲ ಸೌಕರ್ಯವನ್ನು ನೀಡದೆ. ಜನರು ಕಷ್ಟದ ಪರಿಸ್ಥಿತಿಯನ್ನು ಅನುಸರಿಸುತ್ತಾ ಬರುತ್ತಿದ್ದಾರೆ. ಇಂತಹ ಕೆಟ್ಟ ಪ್ರದೇಶಗಳ ಅಥವಾ ದೇಶಗಳ ಸಾಲಿನಲ್ಲಿ ಇರಾಕ್ ಮೊದಲನೆ ಸಾಲಿನಲ್ಲಿ ನಿಂತಿರುವುದು ಸುಳ್ಳಲ್ಲ.

ಮಂಜುನಾಥ್ ಜೈ
manjunathahr1991@gmail.com

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಪ್ರಪಂಚದ 10 ಎತ್ತರದ ಪರ್ವತಗಳು - 26

ಭಾರತದ 10 ಪ್ರಸಿದ್ಧ ರಾಜರು - 22

ಕರ್ನಾಟಕದ 10 ಸುಂದರ ಬೆಟ್ಟಗಳು - 25