2016-2017 ಸಾಲಿನಲ್ಲಿ ಹೆಚ್ಚು ಮಾರಾಟವಾದ ಬೈಕ್ ಗಳು - 10


  ಅತಿ ಹೆಚ್ಚು ಮಾರಾಟಗೊಳ್ಳುತ್ತಿರುವ ಟಾಪ್ 10 ಬೈಕ್‌ಗಳು ಇವು.  ಸುಧಾರಿತ ತಂತ್ರಜ್ಞಾನ ಹಾಗೂ ಕೈಗೆಟುಕುವಂತಹ ದರದಲ್ಲಿ ಮಧ್ಯಮ ವರ್ಗಗದವರನ್ನು ಸೆಳೆಯುವಲ್ಲಿ ಯಶಸ್ವಿಯಾಗಿರುವ ದ್ವಿಚಕ್ರ ವಾಹನಗಳ ಸಂಪೂರ್ಣ ಮಾಹಿತಿ ಇಲ್ಲಿದೆ.
2016-17ರ ಹಣಕಾಸು ವರ್ಷದಲ್ಲಿ ದ್ವಿಚಕ್ರ ವಾಹನಗಳ ಮಾರಾಟ ಪ್ರಕ್ರಿಯೆ ಜೋರಾಗಿದ್ದು, ಪ್ರಮುಖ ಸಂಸ್ಥೆಗಳ ಕೆಲವು ದ್ವಿಚಕ್ರ ಮಾದರಿಗಳು ಅತಿಹೆಚ್ಚು ಜನಪ್ರಿಯಗೊಳ್ಳುವ ಮೂಲಕ ಮಾರಾಟದಲ್ಲಿ ಹೊಸ ದಾಖಲೆ ನಿರ್ಮಿಸಿವೆ. ಇವುಗಳ ಡಿಸೈನ್ ನ ಆಕರ್ಷಣೆ ಮತ್ತು ಬೆಲೆಯಿಂದಾಯಿ ಗ್ರಾಹಕರನ್ನ ಸೆಳೆಯುವಲ್ಲಿ ಗೆದ್ದಿವೆ.

10. ಬಜಾಜ್ ಸಿಟಿ 100


ಮೈಲೇಜ್ ವಿಚಾರವಾಗಿ ಗ್ರಾಹಕರನ್ನು ಸೆಳೆಯುವಲ್ಲಿ ಯಶಸ್ವಿಯಾಗಿರುವ ಬಜಾಜ್ ಸಂಸ್ಥೆಯು, ತನ್ನ ಹೊಸ ಬೈಕ್ ಆವೃತ್ತಿ ಸಿಟಿ 100 ಮಾರಾಟದಲ್ಲಿ ಸಾಕಷ್ಟು ಪ್ರಗತಿ ಕಂಡಿದ್ದು, ಪ್ರಸಕ್ತ ವರ್ಷದಲ್ಲಿ ಒಟ್ಟು 4,52,712 ಯುನಿಟ್‌ಗಳನ್ನು ಮಾರಾಟ ಮಾಡಿದೆ. ಭಾರತದಲ್ಲಿ ಹೆಚ್ಚು ಜನರು ಇದನ್ನು ಕೊಂಡಿದ್ದಾರೆ. ಬೈಕ್ ವಿನ್ಯಾಸ ಮತ್ತು ಮೈಲೇಜ್ ಮೂಲಕ ಗ್ರಾಹಕರ ಮೆಚ್ಚುಗೆಗೆ ಪಾತ್ರವಾಗಿದೆ.
ಹೆಚ್ಚು ಜನರು ಬಜಾಜ್ ಸಿಟಿ 100 ಕೊಂಡುಕೊಳ್ಳುವುರ ಉದ್ದೇಶ ಮೈಲೇಜ್. ಲೀಟರ್ ಗೆ 90 ಕಿ.ಮೀ ಗಿಂತ ಹೆಚ್ಚಿನ ಮೈಲೆಜ್ ಕೊಂಡುವಂತಹ ಬೈಕ್ ಇದಾಗಿರುವುದರಿಂದ ಮತ್ತು ಬಳಸಲು ಸುಲಭವಾಗಿರುವುದು ಹಾಗೂ ಇದರ ಬೆಲೆಯೂ ಸಹ ಕಡಿಮೆಯಾಗಿರುವುದರಿಂದ ಹೆಚ್ಚು ಜನರು ಇದರ ಕಡೆ ಒಲವು ತೋರಿದ್ದಾರೆ.

09. ಬಜಾಜ್ ಪಲ್ಸರ್ 

ಭಾರತೀಯ ಮಾರುಕಟ್ಟೆಯಲ್ಲಿ ಅತಿಹೆಚ್ಚು ಮಾರಾಟಗೊಳ್ಳುತ್ತಿರುವ ದ್ವಿಚಕ್ರಗಳ ವಿಭಾಗದಲ್ಲಿ ಬಜಾಜ್ ಪಲ್ಸರ್ ಕೂಡಾ ಒಂದು. 2016-17ರ ಆರ್ಥಿಕ ವರ್ಷದಲ್ಲಿ 9ನೇ ಸ್ಥಾನದಲ್ಲಿರುವ ಬಜಾಜ್ ಪಲ್ಸರ್ 5,82,912 ಯುನಿಟ್ ಮಾರಾಟ ಮಾಡಿ ಮುನ್ನಡೆ ಕಾಯ್ದುಕೊಂಡಿದೆ.
ಭಾರತದಲ್ಲಿ ಅತೀ ಹೆಚ್ಚು ಜನರು ಖರೀದಿಸುವಂತ ಮತ್ತು ಹೆಚ್ಚು ಜನರು ಬಳಸುವಂತಹ ಬೈಕ್ ಗಳಲ್ಲಿ ಬಜಾಜ್ ಪಲ್ಸರ್ ಕೂಡ ಒಂದು ಸ್ಥಾನವನ್ನು ಪಡೆದುಕೊಂಡಿದೆ. ಸಿಟಿಗಳಲ್ಲಿ ಮಾತ್ರವಲ್ಲದೆ ಹಳಿಗಾಡಿನಲ್ಲೂ ಹೆಚ್ಚು ಜನರು ಇದನ್ನು ಬಳುತ್ತಿದ್ದಾರೆ. ಯುವ ಜನತೆಯನ್ನ ಸೆಳೆದಿದೆ ಬಜಾಜ್ ಪಲ್ಸರ್. ಬೈಕ್ ನ ಗುಣಮಟ್ಟಕ್ಕೆ ಜನರು ಮಾರುಹೋಗಿದ್ದಾರೆ.

08. ಟಿವಿಎಸ್ ಜೂಪಿಟರ್ 


ದ್ವಿಚಕ್ರ ವಾಹನ ಮಾರಾಟದಲ್ಲಿ ಟಿವಿಎಸ್ ಜೂಪಿಟರ್ ಸ್ಕೂಟರ್ ಕೂಡಾ ಮುಂಚೂಣಿಯಲ್ಲಿದೆ. ಪ್ರಸಕ್ತ ಆರ್ಥಿಕ ವರ್ಷದಲ್ಲಿ 6,13,817 ಯುನಿಟ್ ಮಾರಾಟಗೊಳಿಸಿ ಗ್ರಾಹಕರ ಬೇಡಿಕೆಯಲ್ಲಿ ಯಥಾಸ್ಥಿತಿ ಕಾಯ್ದುಕೊಂಡಿದೆ. ಭಾರತದ ಹೆಚ್ಚು ಮಾರಟವಾಗುವ ಸ್ಕೂಟರ್ ನಲ್ಲಿ 8 ನೇ ಸ್ಥಾನವನ್ನ ಗಳಿಸಿರೋದು ಇದರ ಹೆಗ್ಗಳಿಕೆ.
ಆರಾಮದಾಯಕ ಸೀಟ್, ಕಂಟ್ರೋಲ್ ಬ್ರೇಕ್, ಈಸಿ ಎಕ್ಸಲೇಟ್ ಮತ್ತು ಮಹಿಳೆಯರು ಹೆಚ್ಚು ಇಷ್ಟ ಪಡುವಂತಹ ಚಲಾಯಿಸಲು ಸುಲಭವೆನಿಸುವ ಸ್ಕೂಟರ್ ದಾಗಿದ್ದು. ಮಿತವ್ಯಯದಾಗಿದೆ. ಯತಾಸ್ಥಿತಿಯಂತೆ ಬೇಡಿಕೆಯನ್ನು ಉಳಿಸಿಕೊಂಡಿದೆ. ಗ್ರಾಹಕರು ಬೈಕ್ ಕೊಳ್ಳಲು ಮುಂದೆ ಬಂದಿರುವುದು. ಇದರ ತಯಾರಿಕೆಗೆ ಹೊಸ ಹುಮ್ಮಸ್ಸನ್ನು ನೀಡಿದೆ. ಬಣ್ಣ ಬಣ್ಣಗಳಲ್ಲಿ ಇವು ತಯಾರಾಗಿ ಆಕರ್ಷಕವಾಗಿವೆ.

07. ಹೀರೊ ಗ್ಲ್ಯಾಮರ್ 

ಮಧ್ಯಮ ವರ್ಗಗಳನ್ನು ಸೆಳೆಯಲು ಯಶಸ್ವಿಯಾಗಿರುವ ಹೀರೊ ಮೋಟಾರ್ ಕಾರ್ಪ್ ಸಂಸ್ಥೆಯು ತನ್ನ ಗ್ಲ್ಯಾಮರ್ ಬೈಕ್ ಆವೃತ್ತಿಯನ್ನು ಹೆಚ್ಚು ನವೀಕರಿಸಿದ್ದು, ಮಾರಾಟ ವಿಭಾಗದಲ್ಲಿ ಹೊಸ ದಾಖಲೆ ನಿರ್ಮಾಣ ಮಾಡಿದೆ. ಇದೇ ಕಾರಣಕ್ಕೆ ಪ್ರಸಕ್ತ ವರ್ಷದಲ್ಲಿ 7,43,798 ಯುನಿಟ್‌ಗಳನ್ನು ಮಾರಾಟಗೊಳಿಸಲು ಶಕ್ತವಾಗಿದೆ.
ಹೊಸ ಮಾದರಿಯಿಂದ ಇಡೀ ಯುವ ಸಮುದಾಯವನ್ನು ಮರಳು ಮಾಡುವಲ್ಲಿ ಹೀರೋ ಗ್ಲಾಮರ್ ಯಶಸ್ವಿಯಾಗಿದೆ. ಹೊಸ ಅಲೆಯನ್ನು ಎಬ್ಬಿಸುವ ಮೂಲಕ ಭಾರತದಲ್ಲಿ ತನ್ನದೇ ಆದ ಮಾರುಕಟ್ಟೆಯನ್ನ ನಿರ್ಮಾಣ ಮಾಡಿಕೊಂಡಿದೆ. ಇತರೆ ಬೈಕ್ ಗಳಿಗಿಂತ ಹೀರೋ ಗ್ಲಾಮರ್  ಹೊಸತೆರನಾಗಿದೆ ಎಂದರೆ ತಪ್ಪಿಲ್ಲ. ಬೈಕ್ ನಲ್ಲಿನ ವಿವಿಧ ರೀತಿಯ ಹೊಸ ವಿನ್ಯಾಸಗಳು ಎಮತಹವರನ್ನು ಒಮ್ಮೆ ನೋಡುವಂತೆ ಮಾಡುತ್ತೆ.

06. ಹೋಂಡಾ ಶೈನ್ 


ಬೈಕ್ ಪ್ರಿಯರನ್ನು ಸೆಳೆಯಲು ಶಕ್ತವಾಗಿರುವ ಹೋಂಡಾ ಸಂಸ್ಥೆಯು ತನ್ನ ಸಿಬಿ ಶೈನ್ ಬೈಕ್ ಆವೃತ್ತಿ ಮಾರಾಟದಲ್ಲಿ ಹೊಸ ದಾಖಲೆ ನಿರ್ಮಿಸಿದ್ದು, 2016-17ರ ಆರ್ಥಿಕ ಅವಧಿಯಲ್ಲಿ 7,49,026 ಯುನಿಟ್‌ಗಳನ್ನು ಮಾರಾಟ ಮಾಡಿದೆ. ಆರಂಭದ ದಿನಗಳಿಂದ ತನ್ನ ಹೆಸರು ಮಾರುಕಟ್ಟೆಯಲ್ಲಿ ಮಿಂಚುವಂತೆ ಮಾಡಿಕೊಂಡಿದೆ. ಗುಣಮಟ್ಟದ ವಿಚಾರದಲ್ಲಿ ರಾಜಿ ಇಲ್ಲದಂತೆ ಮುಂದೆ ನಡೆಯುತ್ತಿದೆ.
ಪ್ರತಿ ಲೀಟರ್ ಗೆ 65 ಕಿ.ಮೀ ದೂರವನ್ನು ಕ್ರಮಿಸಬಲ್ಲ ಸಾಮರ್ಥ್ಯವನ್ನು ಹೊಂದಿದೆ. ವಿವಿಧ ಬಣ್ಣಗಳ ಬೈಕ್ ಗಳನ್ನು ಹೊಂದಿದೆ. ಇದರ ಬೆಲೆ ಮದ್ಯಮ ವರ್ಗದ ಕೈಗೆಟಕುವಂತೆ ಇರುವುದರಿಂದ ಸಾಮಾನ್ಯ ಜನರು ಇದನ್ನು ಇಷ್ಟ ಪಟ್ಟು ಖರೀದಿ ಮಾಡುತ್ತಾರೆ. ಸಿಟಿ ಮಾತ್ರವಲ್ಲದೆ ಹಳ್ಳಿಗಳಲ್ಲೂ ಇದರ ಹವಾ ಹೆಚ್ಚಾಗರೋದನ್ನ ಕಾಣ್ಬೋದು.

05.ಹೀರೊ ಫ್ಯಾಶನ್ 

ದ್ಪಿಚಕ್ರ ವಾಹನಗಳ ಮಾರಾಟದಲ್ಲಿ ಹೊಸ ದಾಖಲೆ ನಿರ್ಮಿಸಿರುವ ಹೀರೊ ಫ್ಯಾಶನ್ ಬೈಕ್ ಆವೃತ್ತಿಯು, 2016-17ರ ಆರ್ಥಿಕ ಅವಧಿಯಲ್ಲಿ 8,70,382 ಯುನಿಟ್‌ಗಳನ್ನು ಮಾರಾಟ ಮಾಡುವುದರ ಮೂಲಕ ಭಾರತದಲ್ಲಿ ಹೆಚ್ಚು ಮಾರಾಟವಾದ ಬೈಕ್ ಗಳ ಸಾಲಿನಲ್ಲಿ 5ನೇ ಸ್ಥಾನವನ್ನು ಉಳಿಸಿಕೊಂಡಿದೆ. ಇದರಿಂದಲೇ ಗೊತ್ತಾಗುತ್ತೆ ಜನರು ವಿಶ್ವಾಸಕ್ಕೆ ಪಾತ್ರವಾಗಿದೆ ಹೀರೋ ಫ್ಯಾಷನ್
ಬ್ಲೂ, ಬ್ಯಾಕ್, ರೆಡ್ ಸೇರಿದಂತೆ ಹಲವು ಬಣ್ಣಗಳಲ್ಲಿ ಲಭ್ಯವಿರುವ ಹೀರೋ ಫ್ಯಾಷನ್ ಭಾರತೀಯರ ನೆಚ್ಚಿನ ಬೈಕ್ ಗಳಲ್ಲಿ ಒಂದು ಎನಿಸಿಕೊಂಡಿದೆ. ಇತ್ತೀಚಿನ ದಿನಗಳಲ್ಲಿ ಅದನ್ನು ಕೊಳ್ಳುವವರ ಸಂಖ್ಯೆಯು ಹೆಚ್ಚಾಗಿದೆ. ಮೈಲೇಜ್, ಬೈಕ್ ರೋಡ್ ಗ್ರೀಪ್, ವೆಹಿಕಲ್ ಸ್ಟ್ರಂತ್ , ಇವೆಲ್ಲವುಗಳಿಂದ ಪ್ರಶಂಸೆಗೆ ಒಳಗಾಗಿದೆ. ಉಳಿದಂತೆ ಬೈಕ್ ಆರಾಮದಾಯಕ ರೈಡ್ ಕೂಡ ಮಾಡಬಹುದು. ಉತ್ತಮ ಬೈಕ್ ಗಳಲ್ಲಿ ಒಂದು ಎನಿಸಿದೆ ಹೀರೊ ಫ್ಯಾಷನ್

04. ಟಿವಿಎಸ್ ಎಕ್ಸ್‌ಎಲ್ ಸೂಪರ್ 


ದೇಶದ 2ನೇ ಅತಿದೊಡ್ಡ ವಾಹನ ತಯಾರಿಕಾ ಸಂಸ್ಥೆ ಟಿವಿಎಸ್ ತನ್ನ ಜನಪ್ರಿಯ ಎಕ್ಸ್‌ಎಲ್ ಸೂಪರ್ ಬೈಕ್ ಮಾರಾಟದಲ್ಲಿ ಹೊಸ ದಾಖಲೆ ನಿರ್ಮಿಸಿದ್ದು, ಪ್ರಮುಖ ಬೈಕ್ ಮಾದರಿಗಳನ್ನು ಹಿಂದಿಕ್ಕಿ 8,90,367 ಬೈಕ್‌ಗಳನ್ನು ಮಾರಾಟ ಮಾಡಿದೆ. ಭಾರತದಂತಹ ದೇಶಕ್ಕೆ ಎಂತಹ ಬೈಕ್ ಗಳ ಅವಶ್ಯಕತೆ ಇದೆ ಎಂಬುದನ್ನು ಮನಗಂಡ ಈ ಸಂಸ್ಥೆ ಈ ಬೈಕ್ ಗಳನ್ನು ನೀಡಿ ದೊಡ್ಡ ಮಾರುಕಟ್ಟೆ ನಿರ್ಮಿಸಿದೆ.
ಹೆಚ್ಚಾಗೆ  ಈ ಬೈಕ್ ಬಳಕ್ಕೆ ಮಾಡುವುದು ರೈತರು, ವ್ಯಾಪಾರಿಗಳು, ಕಿರು ಸರಕು ಸಮಾನುಗಳನ್ನು ಸಾಗಿಸುವ ವ್ಯವಹಾರಸ್ಥರು. ಇವರಿಗೆ ಹೇಳಿ ಮಾಡಿಸಿದಂತಹ ಬೈಕ್ ಇದಾಗಿದೆ. ಇದರಲ್ಲಿ ಎರಡು ಸೀಟ್ ಇದ್ದು ಹಿಂಬದಿಯ ಸೀಟನ್ನು ಸುಲಭವಾಗಿ ತೆಗೆದು ಅದರಲ್ಲಿ ವಸ್ತುಗಳನ್ನ ಸಾಗಿಸಬಹುದು. ಇದರಿಂದಾಗಿಯೇ ಇದು ಹೆಚ್ಚು ಮನ್ನಣೆಗಳಿಸಲು ಸಾದ್ಯವಾಗಿದೆ ಎನ್ನಬಹುದು. ಜೊತೆಗೆ ಮೈಲೇಜ್ ಕೂಡ ಉತ್ತಮವಾಗಿದೆ.

03. ಹೀರೊ ಹೆಚ್‌ಎಫ್ ಡಿಲಕ್ಸ್ 

ದ್ವಿಚಕ್ರ ವಾಹನ ಮಾರಾಟದಲ್ಲಿ ಈ ವರ್ಷ ಅತ್ಯತ್ತಮ ದಾಖಲೆ ನಿರ್ಮಿಸಿರುವ ಹಿರೋ ಸಂಸ್ಥೆಯು, 2016-17ರ ಆರ್ಥಿಕ ಅವಧಿಯಲ್ಲಿ 14,08,356 ಹೆಚ್‌ಎಫ್ ಡಿಲಕ್ಸ್ ಬೈಕ್ ಆವೃತ್ತಿಗಳನ್ನು ಮಾರಾಟ ಮಾಡಿ 3ನೇ ಸ್ಥಾನಕ್ಕೆ ಏರಿದೆ. ಇತ್ತೀಚಿನ ದಿನಗಳಲ್ಲಿ  ಹೀರೋ ದೊಡ್ಡ ಮಾರುಕಟ್ಟೆ ನಿರ್ಮಾಣ ಮಾಡಿ ತನ್ನ ಗ್ರಾಹಕರನ್ನು ಹೆಚ್ಚಿಸಿಕೊಳ್ಳುತ್ತಿರುವುದು ಸುಳ್ಳಲ್ಲ. ಉತ್ತಮ ಗುಣಮಟ್ಟದ ಜೊತೆಗೆ ಉತ್ತಮ ಸರ್ವೀಸ್ ಕೂಡ ಹೊಂದಿದೆ.
39000 ದಿಂದ ಈ ಬೈಕ್ ನ ಬೆಲೆ ಆರಂಭವಾಗುತ್ತೆ, ಲೀಟರ್ ಗೆ ಸುಮಾರು 85 ಕಿ.ಮೀ ದೂರವನ್ನು ಕ್ರಮಿಸಬಲ್ಲ ಸಾಮರ್ಥ್ಯವನ್ನು ಹೊಂದಿದ್ದು. Candy Blazing Red, Black with Purple, Boon Silver Metallic, Classy Maroon Metallic, Black with Red ಬಣ್ಣಗಳ ಬೈಕ್ ಗಳಿದ್ದು ಗ್ರಾಹಕರ ಮನಸ್ಸಿಚ್ಚೆಯಂತೆ ಕೊಳ್ಳಬಹುದಾಗಿದೆ.

02. ಹೀರೊ ಸ್ಲ್ಪೆಂಡರ್ 

ದ್ವಿಚಕ್ರ ವಾಹನಗಳ ಮಾರಾಟದಲ್ಲಿ ಹೊಸ ತಂತ್ರ ರೂಪಿಸಿರುವ ಹೀರೋ ಮೋಟಾರ್ ಕಾರ್ಪ್ ಸಂಸ್ಥೆಯು, 2016-17ರ ಆರ್ಥಿಕ ಅವಧಿಯಲ್ಲಿ 25,50,830 ಸ್ಲ್ಪೆಂಡರ್ ಯುನಿಟ್‌ಗಳನ್ನು ಮಾರಾಟ ಮಾಡಿ 2ನೇ ಸ್ಥಾನ ಪಡೆದುಕೊಂಡಿದೆ. ಹೊಸ ಮಾದರಿಯಲ್ಲಿ ಮಾರುಕಟ್ಟೆಗೆ ಪರಿಚಯವಾಗಿ ಇಡೀ ಬೈಕ್ ಮಾರುಕಟ್ಟೆಯನ್ನು ಅಲುಗಾಡಿಸಿದ್ದ ಹೀರೊ ಸ್ಲ್ಪೆಂಡರ್ ಮಾರುಕಟ್ಟೆಯ ಎರಡನೆ ರಾಜನಾಗಿ ಮೆರೆದಿದ್ದಾನೆ.
ಗ್ರಾಮೀಣ ಪ್ರದೇಶದಲ್ಲಿ ಹೆಚ್ಚಾಗಿ ಬಳಕೆಯಲ್ಲಿ ಇರುವಂತಹ ಬೈಕ್ ಇದಾಗಿದೆ. 47 ಸಾವಿರದಿಂದ ಇದರ ಬೆಲೆ ಆರಂಬವಾಗುತ್ತದೆ. ಈ ಬೈಕ್ ಲೀಟರ್ ಗೆ ಸುಮಾರು 87 ಕಿಮೀ ಕ್ರಮಿಸಬಲ್ಲ ಸಮಾರ್ಥ್ಯವನ್ನು ಹೊಂದಿದೆ. ಗ್ರಾಹಕರ ಅನುಕೂಲಕ್ಕೆ ತಕ್ಕಂತೆ Candy Red, Cloud Silver, Palace Maroon, Black with Silver, Black with Purple Silver, Black with Purple, Black with Purple Red, Excellent Blue, High Granite Blue ಸೇರಿದಂತೆ ಹಲವಾರು ಬಣ್ಣಗಳಲ್ಲಿ ಲಭ್ಯವಿದೆ. ಗ್ರಾಹಕರ ಮೆಚ್ಚುಗೆಗೆ ಪಾತ್ರವಾಗಿದೆ ಹೀರೋ ಸ್ಲ್ಪೆಂಡರ್ ಬೈಕ್.

01. ಹೋಂಡಾ ಆಕ್ಟಿವಾ 

ಭಾರತೀಯ ಮಾರುಕಟ್ಟೆಯ ಸ್ಕೂಟರ್ ವಿಭಾಗದಲ್ಲಿ ಅತಿ ಹೆಚ್ಚು ಜನಪ್ರಿಯಗೊಂಡಿರುವ ಹೋಂಡಾ ಆಕ್ಟಿವ್ ಮಾದರಿಯು ದ್ವಿಚಕ್ರ ವಾಹನಗಳ ಮಾರಾಟ ವಿಭಾಗದಲ್ಲಿ ಹೊಸ ಮೈಲಿಗಲ್ಲು ಸಾಧಿಸಿದೆ. 2016-17ರ ಆರ್ಥಿಕ ವರ್ಷದಲ್ಲಿ 27,59,853 ಸ್ಕೂಟರ್‌ಗಳು ಮಾರಾಟಗೊಳಿಸಿ ಪ್ರಥಮ ಸ್ಥಾನದಲ್ಲಿದೆ.
ಮಹಿಳೆಯರಿರಲಿ, ಪುರುಷರಿರಲಿ, ಹಿರಿಯರಾದರು ಬಹಳ ಸುಲಭವಾಗಿ ಚಲಾಯಿಸುವಂತಹ  ಬೈಕ್ ಇದಾಗಿದ್ದು ತುಂಬಾ ಸ್ಟೈಲಿಷ್ ಆಗಿ ಕೂಡ ಇದೆ. ಮೈಲೇಜ್, ಕಲರ್, ಬೈಕ್ ಸ್ಟ್ರಂತ್, ಸೇರಿದಂತೆ ಬೈಕ್ ಗುಣಮಟ್ಟದಲ್ಲೂ ಎಲ್ಲರು ಇಷ್ಟಪಡುವಂತೆ ತಯಾರು ಮಾಡಲಾಗಿದೆ. ಮೊದಲ ಸ್ಥಾನದಲ್ಲಿ ಇದ್ದು ಭಾರತದಲ್ಲಿ ಹೊಸ ಮೈಲಿಗಲ್ಲನ್ನು ಸಾಧಿಸಿದೆ. ಇದರೊಂದಿಗೆ ಮಾರಾಟ ವಿಭಾಗದಲ್ಲಿ ಹೀರೊ ಸ್ಲ್ಪೆಂಡರ್ ಮತ್ತು ಹೋಂಡಾ ಆಕ್ಟಿವ್ ಮಾದರಿಗಳ ಮಧ್ಯೆ ತೀವ್ರ ಪೈಪೋಟಿ ಇದ್ದು, ಟಿವಿಎಸ್ ಮತ್ತು ಬಜಾಜ್ ಕೂಡಾ ಅತ್ಯುತ್ತಮ ಸಾಧನೆ ತೊರುತ್ತಿವೆ.
ಮಂಜುನಾಥ್ ಜೈ





ಕಾಮೆಂಟ್‌ಗಳು

ಕಾಮೆಂಟ್‌‌ ಪೋಸ್ಟ್‌ ಮಾಡಿ

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಪ್ರಪಂಚದ 10 ಎತ್ತರದ ಪರ್ವತಗಳು - 26

ಭಾರತದ 10 ಪ್ರಸಿದ್ಧ ರಾಜರು - 22

ಕರ್ನಾಟಕದ 10 ಸುಂದರ ಬೆಟ್ಟಗಳು - 25