ಪ್ರಪಂಚದ ಬಲಿಷ್ಟ ಹತ್ತು ಭೂ ಸೇನೆ - 18

ಒಂದು ದೇಶವನ್ನ ರಕ್ಷಣೆ ಮಾಡಿಕೊಳ್ಳದಕ್ಕೆ ಸೇನೆ ತುಂಬಾನೆ ಮುಖ್ಯ ಆಗುತ್ತೆ. ಅದರಲ್ಲಿ ಭೂ ಸೇನೆಯ ಪಾಲು ಹೆಚ್ಚಾಗಿಯೇ ಇರುತ್ತೆ. ಪ್ರಪಂಚದ ಬಲಿಷ್ಟ ಭೂ ಸೇನೆಯನ್ನ ನಾವು ಇವತ್ತು ತೋರಿಸ್ತಾ ಇದಿವಿ. ಯಾವ ದೇಶ ಮೊದಲ ಸ್ಥಾನದಲ್ಲಿ ಇದೆ. ಯಾವ ದೇಶ ಕೊನೆ ಸ್ಥಾನದಲ್ಲಿ ಇದೆ. ಭಾರತಕ್ಕೆ ಇಲ್ಲಿ ಸ್ಥಾನ ಇದೆಯಾ ಇದೆಲ್ಲರ ಬಗ್ಗೆ ಒಂದು ವರದಿ ಇಲ್ಲಿದೆ. 10. ಫ್ರೆಂಚ್ ಸೈನ್ಯ ಫ್ರೆಂಚ್ ಸೈನ್ಯ ಪ್ರಪಂಚದ ಬಲಿಷ್ಟ ಭೂ ಸೇನೆಯಲ್ಲಿ ಹತ್ತನೇ ಸ್ಥಾನವನ್ನು ಪಡೆದುಕೊಂಡಿದೆ. ಈ ಸೇನೆಯಲ್ಲಿ 1.21.000 ಸಕ್ರಿಯ ಭೂ ಪಡೆಗಳು. 420 ಯುದ್ಧ ಟ್ಯಾಂಕರ್‍ಗಳು, 6.800 ಯುದ್ದಕ್ಕೆ ಸನ್ನದವಾದ ಶಸ್ತ್ರ ಸಜ್ಜಿತದ ವಾಹನಗಳು. ಸ್ವಯಂ ಚಾಲಿತವಾಗಿ ನಿಭಾಯಿಸಬಲ್ಲ 330 ಬಂದೂಕುಗಳು, 45 ಮಲ್ಟಿಪಲ್ ಲಾಂಚ್ ರಾಕೆಟ್ ಸಿಸ್ಟಮ್, 230 ಎಳೆದ ಪಿರಂಗಿ ಮತ್ತು 330 ಹೆಲಿಕ್ಯಾಪ್ಟರ್ಸ್ ಈ ದೇಶದ ಸೈನ್ಯ ಬಲ. ಫ್ರಂಚ್ ಸೇನೆಯು ಇತಿಹಾಸಲ್ಲಿ ತನ್ನದೆ ಆದ ಹೆಸರನ್ನು ಮುದ್ರೆ ಹೊತ್ತಿದೆ. ಆರಂಭದ ನೂರು ವರ್ಷಗಳ ಯುದ್ಧದಿಂದ ಹಿಡಿದು ಮಧ್ಯ ಆಫ್ರಿಕಾದ ಗಣರಾಜ್ಯ ಸಂಘರ್ಷದಲ್ಲಿ ಇದರ ಭಾಗವಹಿಸುವಿಕೆ ಇರೋದನ್ನ ಕಾಣ್ಬೋದು. ಪ್ರಪಂಚದ ಎರಡು ಮಹಾ ಯುದ್ದಗಳಲ್ಲಿ ಇದರ ಛಾಯೆ ಕಂಡು ಬರುತ್ತೆ. ಆರಂಭದ ದಿನಗಳನ್ನ ಹೋಲಿಸಕೊಂಡರೆ ಫ್ರೆಂಚ್ ಸೇನೆಯು ಅಗ್ರ ಸ್ಥಾನವನ್ನು ಅಲಕರಿಸಬೇಕಿತ್ತು. ಆಂತರಿಕ ಕಲಹ ಮತ್ತು ಆರ್ಥಿಕ ಸಮಸ್ಯೆಯಿಂದ ಹತ್ತನೆ ಸ್ಥಾನಕ್ಕೆ ಇಳಿದಿದೆ. 09. ಪಾಕ