ಜಗತ್ತಿನ ಸುಂದರ ದ್ವೀಪಗಳು - 13

     ಇಡೀ ಜಗತ್ತಿನಲ್ಲಿ ಸುಂದರವಾದ ಪ್ರದೇಶಗಳು ಇರೋದು ಕೆಲವು ಮಾತ್ರ, ಎಲ್ಲವು ಸುಂದರ ಪ್ರದೇಶಗಳೇ ಆದ್ರೂ ಸುಂದರ ಸ್ಥಳಗಳಿಗೆ ಬೆಲೆನೇ ಇರೊದಿಲ್ಲ. ಹಿಂದೆ ನಾವು ಸುಂದರ ದೇಶಗಳ ಬಗ್ಗೆ ಹೇಳಿದ್ವಿ. ಈಗ ಸುಂದರವಾದ ದ್ವೀಪಗಳ ಸರಣಿಯನ್ನ ನಿಮಗೆ ತೋರಿಸ್ತಾ ಇದಿವಿ ನೋಡಿ 

10. ಲಾಮು ದ್ವೀಪ, ಕೀನ್ಯಾ 

ಕೀನ್ಯಾದ ಸುಂದರ ಪ್ರದೇಶಗಳಲ್ಲಿ ಲಾಮು ದ್ವೀಪ ಕೂಡ ಒಂದು. ಇಲ್ಲಿನ ನೈಸರ್ಗಿಕ ಸಂಪತ್ತು, ನಿಸರ್ಗದ ಸೌದರ್ಯ ಎಂತಹವರನ್ನು ಒಂದು ಕ್ಷಣ ಇತ್ತ ಕಡೆ ಸೆಳೆಯುವಂತೆ ಮಾಡುತ್ತೆ. ಇಲ್ಲಿ ಅನೇಕ ಯುದ್ದಗಳು ನಡೆದಿವೆ. ಹೋರಾಟಗಳು ನಡೆದಿವೆ ಆದರೂ ಲಾಮ ದ್ವೀಪ ಚೂರು ಹಾಳಾಗಿಲ್ಲವೆನು ಎಂಬಂತೆ ಸುಂದರವಾಗಿ ಬೆಳೆದು ನಿಂತಿದೆ. ದಕ್ಷಿಣಕ್ಕೆ ಸುಮಾರು 3.2 ಕಿ.ಮೀ ಬೆಳೆದು ನಿಂತಿರುವ ಈ ಪ್ರದೇಶ ಪ್ರವಾಸಿ ತಾಣವಾಗಿ ನಿರ್ಮಾಣ ಹೊಂದಿದೆ.
ಮುಸ್ಲಿಂ ಸಮುದಾಯದವರು ಇಲ್ಲಿ ಹೆಚ್ಚಾಗಿ ವಾಸ ಮಾಡ್ತಿದರೆ ಇದಕ್ಕೆ ಕಾರಣ 18ನೇ ಶತಮಾನಲ್ಲಿ ಆದಂತಹ ಬದಲಾವಣೆ ಮತ್ತು ಮುಸ್ಲಿಂ ಸಂಸ್ಕøತಿಯ ಪ್ರಭಾವದಿಂದ ಅಲ್ಲಿನ ಆಚಾರ ವಿಚಾರವೆಲ್ಲವೂ ಬದಲಾವಣೆಯಾಗಿವೆ. ಇಲ್ಲಿ ವ್ಯವಸಾಯವನ್ನ ಅವಲಂಬಿಸಿರುವುದರ ಜೊತೆಗೆ ಪ್ರವಾಸೋದ್ಯಮ ಮತ್ತು ಕಡಲ ಕಿನಾರೆಯ ವ್ಯವಹಾರಗಳನ್ನು ಇಲ್ಲಿನ ಜನರು ಅವಲಂಬಿಸಿದ್ದಾರೆ. ಇದು ಒಂದು ಸುಂದರ ಪ್ರದೇಶವಾಗಿ ರೂಪುಗೊಳ್ಳೊದಕ್ಕೆ ಇದು ಒಂದು ಕಾರಣ ಇರಬಹುದು.

09. ಮ್ಯಾಗ್ಡಲೀನ್ ದ್ವೀಪ, ಕ್ಯೂಬಾ  


2011ರ ಜನಗಣತಿಯ ಪ್ರಕಾರ 12.291 ಜನಸಂಖ್ಯೆಯನ್ನ ಹೊಂದಿರುವಂತಹ ದ್ವೀಪ ಮ್ಯಾಗ್ಡಲೀನ್. ಭೂ ಪ್ರದೇಶದಲ್ಲಿ 79.36 ಚದುರ ಮೈಲಿ ವೀಸ್ತೀರ್ಣವನ್ನು ಹೊಂದಿರುವ ಈ ದ್ವೀಪ, ಜಗತ್ತಿನ ಸುಂದರ ದ್ವೀಪಗಳ ಸಾಲಿನಲ್ಲಿ ಒಂಬತ್ತನೇ ಸ್ಥಾನದಲ್ಲಿ ನಿಲ್ಲುತ್ತದೆ. 1534ರಲ್ಲಿ ಇಲ್ಲಿಗೆ ಅನೇಕ ಜನರು ವಲಸೆ ಬಂದು ವಾಸ ಮಾಡಿದ್ದರ ಪುರಾವೆಗಳು ಅನೇಕ ಉತ್ಖನನದಿಂದ ಬೆಳಕಿಗೆ ಬಂದಿರೋದನ್ನ ಕಾಣ್ಬೋದು.
ಸುಂದರವಾದ ಕಡಲ ಕಿನಾರೆ, ಪ್ರವಾಸಿಗರಿಗೆ ಬೋಟ್‍ನ ವ್ಯವಸ್ಥೆ, ವಿವಿಧ ರೀತಿಯ ಖಾದ್ಯಗಳು ಇಲ್ಲಿ ಪ್ರಮುಖವಾಗಿ ಆಕರ್ಷಿಸುತ್ತವೆ. ಮೋಜು ಮಸ್ತಿಗೆ ಆಕರ್ಷಕವಾದ ಸ್ಥಳ ಎನಿಸಿಕೊಂಡಿದೆ ಮ್ಯಾಗ್ಡಲೀನ್ ದ್ವೀಪ. ಇಲ್ಲಿಗೆ ಬರುವ ಪ್ರವಾಸಿಗರಿಗೇನು ಕಡಿಮೆ ಇಲ್ಲ. ಇತ್ತೀಚೆಗೆ ಇಲ್ಲಿಗೆ ಬರುವ ಪ್ರವಾಸಿಗರು ಹೆಚ್ಚಾಗಿದ್ದಾರೆ. ಕ್ಯೂಬಾಗೆ ಇದೊಂದು ಕಳಶ ಅಂತಾನೇ ಹೇಳ್ಬೋದು.

08. ಮ್ಯಾಕಿನಾಕ್ ದ್ವೀಪ, ಮಿಚಿಗನ್  


17ನೇ ಶತಮಾನದಲ್ಲಿ ಯೂರೋಪಿನ ವಸಹಾತು ಪ್ರದೇಶವಾಗಿದ್ದ ಈ ದ್ವೀಪ ಪ್ರಮುಖ ವ್ಯಾಪಾರ ಕೇಂದ್ರಗಳಲ್ಲಿ ಒಂದು ಎನಿಸಿತ್ತು. 1812ರ ಅಮೇರಿಕನ್ ಕ್ರಾಂತಿಕಾರಿ ಯುದ್ದಗಳು ನಡೆದುದರ ಇತಿಹಾಸ ಇದರ ಹಿಂದೆ ಇದೆ. 19ನೇ ಶತಮಾನದಲ್ಲಿ ಪ್ರವಾಸಿಗರಿಗೆ ತೆರೆದುಕೊಂಡ ಈ ಪ್ರದೇಶ ಪ್ರಮುಖ ಜನಾಕರ್ಷನೆಯ ಕೇಂದ್ರವಾಗಿ ಮಾರ್ಪಟ್ಟಿತು. ಹಲವಾರು ಸಾಂಸ್ಕøತಿಕ ಕಾರ್ಯಕ್ರಮಗಳಿಗೆ, ಶಿಲ್ಪ ಕಲೆಗಳಿಗೆ ಹೆಸರು ವಾಸಿಯಾಗಿದೆ ಮ್ಯಾಕಿನಾಕ್ ದ್ವೀಪ.
ಮ್ಯಾಕಿನಾಕ್ ದ್ವೀಪ ಸಾಮಾನ್ಯ ದ್ವೀಪಗಳಂತೆ ಬೆಳೆದಿಲ್ಲ ಇದು ನೈಸರ್ಗಿಕ ಸಂಪತ್ತಿನ ಜೊತಗೆ ಆಧುನಿಕ ಸ್ಪರ್ಷವನ್ನು ಪಡೆದುಕೊಂಡಿದೆ. ಉತ್ತಮ ಗುಣಮಟ್ಟದ ರಸ್ತೆಗಳು ಬಸ್ ಸೌಲಭ್ಯ, ವಿಮಾನ ಸೌಲಭ್ಯಗಳು ಇಲ್ಲಿರುವುದನ್ನು ಕಾಣ್ಬೋದು. ಸುಂದರವಾದ ಕಡಲ ಕಿನಾರೆಯ ಜೊತೆಗೆ ಪ್ರವಾಸಿಗರಿಗೆಂದೆ ಐಶಾರಾಮಿ ಹೋಟೆಲ್‍ಗಳು ವಿಶೇಷವಾದ ಬೋಜನದ ವ್ಯವಸ್ಥೆ ಇಲ್ಲಿರೋದನ್ನ ನೋಡ್ಬೋದು. 

07. ಮಲೋಕೈ, ಹವಾಯಿ  


ಯುನೈಟೆಡ್ ಸ್ಟೇಟ್ಸ್‍ನ ಆಡಳಿತಕ್ಕೆ ಒಳಪಟ್ಟಿರುವ ಮಲೋಕೈ ಪ್ರದೇಶವು 28 ಚದುರ ಮೈಲಿ ಪ್ರದೇಶ ಮತ್ತು 7.345 ಜನಸಂಖ್ಯೆಯನ್ನು ಹೊಂದಿರುವಂತಹ ಹವಾಯ್ ದ್ವೀಪಗಳ 5ನೇ ದೊಡ್ಡ ಪ್ರದೇಶ. ಇದನ್ನ ಸೌಹಾರ್ದ ದ್ವೀಪ ಎಂಬ ಹೆಸರಿನಿಂದ ಕೂಡ ಕರೆಯುತ್ತಾರೆ. ಈ ದ್ವೀಪವು ಬಹುತೇಕ ಅನಾನಸ್ ಉತ್ಪಾದನೆ, ಜಾನುವಾರು ಸಾಕಾಣಿಕೆ ಮತ್ತು ಪ್ರವಾಸೋದ್ಯಮಕ್ಕೆ ಮಹತ್ವವನ್ನು ಕೊಟ್ಟಿದೆ. ಬೆಳವಣಿಗೆಯನ್ನಾ ಸಾಧಿಸುತ್ತಾ ಇದೆ.
ಪ್ರವಾಸಿಗರಿಗೆ ವಿಶೇಷವಾದ ಆತಿತ್ಯ ಇಲ್ಲಿ ಸಿಗುತ್ತೆ, ಪ್ರವಾಸಿಗರಿಗೆಂದೆ ಟ್ಯಾಕ್ಸಿಗಳ ವ್ಯವಸ್ಥೆ, ಹೋಟೆಲ್‍ನ ಭವ್ಯ ಸ್ವಾಗತವನ್ನ ಎಂದೂ ಮರೆಯೋದಕ್ಕೆ ಸಾದ್ಯವಾಗೋದಿಲ್ಲ. ಇಲ್ಲಿಗೆ ಬರುವ ಜನರು ಬರೀ ಈ ದ್ವೀಪವನ್ನ ಮಾತ್ರ ನೋಡೋದಕ್ಕೆ ಬರೋದಿಲ್ಲ ಇಲ್ಲಿರುವಂತಹ ನಿಸರ್ಗದ ಸೌಂದರ್ಯವನ್ನ ಸವೆಯೋದಕ್ಕೆ ಬರ್ತಾರೆ. ಕಡಲ ಕಿನಾರೆಯಲ್ಲಿ ನಿಂತು ತಂಗಾಳಿಯನ್ನ ಆಸ್ವಾದಿಸುತ್ತಾರೆ. ಮುಳುಗುವ ಸೂರ್ಯನನ್ನ ನೋಡಿ ಖುಷಿಪಡ್ತಾರೆ. ಇದು ಮಲೋಕೈ ದ್ವೀಪದ ಸ್ಪೆಷಾಲಿಟಿ.

06. ಪಕರಾವಾ ದ್ವೀಪ, ಫ್ರೆಂಚ್ ಪಾಲಿನೇಷ್ಯಾ  


ಸುಮಾರು 60 ಕಿಮೀ ಉದ್ದ ಮತ್ತು 21 ಕಿಮೀ ಅಗಲದ ಭೂ ಪ್ರದೇಶವನ್ನು ಹೊಂದಿದೆ ಪಕರಾವಾ ದ್ವೀಪ. ಕೇವಲ 806 ಜನಸಂಖ್ಯೆಯನ್ನು ಹೊಂದಿರುವ ಈ ಪ್ರದೇಶ ವಿಶೇಷ ಮತ್ತು ವಿಭಿನ್ನವಾದ ಸಸ್ಯ ಸಂಪತ್ತು ಮತ್ತು ಪ್ರಾಣಿ ಸಂಪತ್ತನ್ನು ಹೊಂದಿದೆ. ಪ್ರಾನ್ಸ್ ದೇಶದ ಆಡಳಿತಾತ್ಮಕ ಪ್ರದೇಶಕ್ಕೆ ಒಳಪಡುವ ಈ ಭೂ ಪ್ರದೇಶವು ತನ್ನ ಅಭಿವೃದ್ದಿಗೆ ಈ ದೇಶವನ್ನು ಅವಲಂಭಿಸಿಕೊಂಡಿದೆ.
ಎರಡನೆಯ ಪೊಮರೆಯ ರಾಜವಂಶದ ಅವಧಿಯಲ್ಲಿ ಈ ದ್ವೀಪವನ್ನು ಕಂಡುಹಿಡಿಯಲಾಯಿತು ಎಂಬ ಉಲ್ಲಖವಿದೆ. ರಜೆಯ ಮಜೆಯನ್ನು ಕಳೆಯುವುದಕ್ಕೆ ಉತ್ತಮ ಜಾಗ ಇದು. ಇಲ್ಲಿನ ಬೀಚ್‍ಗಳು ಬೇರೆ ಪ್ರದೇಶದ ಬೀಚ್‍ಗಿಂತ ಉತ್ತಮ ಮತ್ತು ಉಲ್ಲಾಸದಾಯಕವಾಗಿ ಇರುತ್ವೆ. ಪ್ರವಾಸಿಗರು ಇಲ್ಲಿಗೆ ಬರುವುದಕ್ಕೂ ಉತ್ತಮ ಸಾರಿಗೆ ವ್ಯವಸ್ಥೆ ಇಲ್ಲಿರುವುದನ್ನ ಕಾಣ್ಬೋದು.

05. ಯಕುಶಿಮಾ, ಜಪಾನ್  


ಹಸಿರು ಕಾನನದ ನಡುವೆ ಜುಳುಜುಳು ಎಂದು ಹರಿಯುವ ನದಿ, ಬೆಟ್ಟ ಗುಡ್ಡಗಳನ್ನ ನುಸಿಳಿಕೊಂಡು ಬೆಳೆದು ನಿಂತಿರೊ ಮರಗಳು ಅಲ್ಲಲ್ಲಿ ಕಂಡು ಬರೋ ವನ್ಯ ಜೀವಿಗಳು ಇದು ಯಕುಶಿಮಾ ದ್ವೀಪದ ಚಿತ್ರಣ. ಇತಿಹಾಸವನ್ನು ಹೊಂದಿರುವಂತಹ ಯಕುಶಿಮಾ ದ್ವೀಪ. ಅತ್ಯದ್ಬುತ ಅಂಶಗಳನ್ನ ಹೊರಹಾಕುತ್ತಾ, ಪ್ರಪಂಚಕ್ಕೆ ತೋರಿಸಿಕೊಡುತ್ತಾ ಬೆಳೆಯುತ್ತಿದೆ.
67.6 ಚದುರ ಮೈಲಿ ವಿಸ್ತೀಣವನ್ನ ಹೊಂದಿದೆ ಯಕುಶಿಮಾ ಪ್ರದೇಶ, ಇಲ್ಲಿ ವಾಸ ಮಾಡುವಂತಹ ಜನಸಂಖ್ಯೆ 13.178 ಇಲ್ಲಿನ ವ್ಯವಸ್ಥೆ ಮಾತ್ರ ಅದ್ಬುತವಾಗಿದೆ. ಈ ಪ್ರದೇಶವನ್ನ ಅನೇಕ ರಾಜ ಮೆತನಗಳು ಆಳ್ವಿಕೆ ಮಾಡಿದಂತಹ ಉದಾಹರಣೆಗಳನ್ನ ನೋಡ್ಬೋದು. ಇದು ಜಪಾನ್ ದೇಶದ ಆಳ್ವಕೆಗೆ ಒಳಪಟ್ಟಿದ್ದು ಪೂರ್ವ ಚೀನಾ ಸಮುದ್ರದ ಪ್ರದೇಶದಲ್ಲಿ ಕಂಡುಬರುತ್ತೆ. ಇಲ್ಲಿಗೆ ಬರುವ ಪ್ರವಾಸಿಗರು ಉತ್ತಮ ಆತಿತ್ಯ ಪಡೆಯೋದನ್ನ ಕಾಣ್ಬೋದು. 

04. ಯಾಪ್, ಮೈಕ್ರೋನೇಷಿಯಾ 


ಯಾಪ್ ಒಂದು ಪ್ರಕೃತಿಯ ದೈವ ಅಂತಾನೆ ಹೇಳ್ಬೋದು. ಯಾಕಂದ್ರೆ ಇಲ್ಲಿ ಒಂದು ವಿದವಾದ ವಿಶೇಷತೆಗಳನ್ನ ನೋಡಲು ಸಾದ್ಯವಿಲ್ಲ ವಿವಿಧ ರೀತಿಯ ಬಗೆ ಬಗೆಯಾದ ಪ್ರದೇಶಗಳಿಂದ ಈ ದ್ವೀಪ ಇದೆ. ಇಲ್ಲಿ ಸಿಕ್ಕಿರುವಂತಹ ಅಂಶಗಳ ಪ್ರಕಾರ ಅನೇಕ ರಾಜ ಮನೆತನದ ಇತಿಹಾಸ ಇದರ ಜೊತೆಗೆ ತಳಕು ಹಾಕಿಕೊಂಡಿರುವುದು ಕಂಡುಬರುತ್ತೆ. ಜೊತೆಗೆ ಇಲ್ಲಿನ ಬುಡಕಟ್ಟು ಜನಾಂಗದವರ ವಿಶೇಷವಾದ ಅಚರಣೆ ಮನರಂಜನಾತ್ಮಕವಾಗಿರುತ್ತೆ.
17ನೇ ಶತಮಾನದಲ್ಲಿ ಯಾಪ್ ಸ್ಪಾನಿಷ್‍ನ ಒಂದು ವಸಹಾತು ಪ್ರದೇಶವಾಗಿತ್ತು ನಂತರ ಒಂದು ದೇಶದಿಂದ ಮತ್ತೊಂದು ದೇಶಕ್ಕೆ ಬದುಲಾಗುತ್ತಾ ಆಳ್ವಿಕೆಗೆ ಒಳಪಡುತ್ತಾ ಬಂದಿತು. ವಿಶ್ವ ಸಮರದಲ್ಲಿ ಈ ದ್ವೀಪವು ಜಪಾನಿನಿಂದ ಅಮೇರಿಕಾದ ಪಾಲಾದರ ಬಗ್ಗೆ ಉಲ್ಲೇಖವನ್ನು ಮಾಡಲಾಗಿದೆ. ಇದೇನೆ ಇತಿಹಾಸ ಇದ್ದರು ಯಾಪ್ ಇಂದು ಸುಂದರ ಪ್ರವಾಸಿ ತಾಣವಾಗಿ ನಿರ್ಮಾನವಾಗಿರೋದಂತೂ ನಿಜ.

03. ಮೌ ವಹೋ, ನ್ಯೂಜಿಲ್ಯಾಂಡ್  


ನ್ಯೂಜಿಲ್ಯಾಮಡ್ ದೇಶದಲ್ಲಿ ಕಂಡುಬರುವಂತಹ ದ್ವೀಪ ಪ್ರದೇಶ ಮೌ ವಹೋ ಜಗತ್ತಿನ ಸುಂದರ ದ್ವೀಪಗಳ ಸಾಲಿನಲ್ಲಿ ಮೊದಲನೆಯದಾಗಿ ನಿಲ್ಲುತ್ತೆ. ಯಾಕಂದ್ರೆ ಇಲ್ಲಿ ಪ್ರವಾಸಿಗರ ಹೆಚ್ಚಾಗಿ ಬರ್ತಾರೆ. ಚಾರಣ ಮಾಡ್ತಾರೆ ಮೋಜು ಮಸ್ತಿ ಮಾಡ್ತಾರೆ. ಸುಂದರ ಪ್ರದೇಶದ ಪ್ರಾಣಿಗಳ ಫೋಟೋಗಳನ್ನ ಕ್ಲಿಕ್ಕಿಸುತ್ತಾರೆ. ಪ್ರಾಣಿ ಪಕ್ಷಿಗಳನ್ನ ಬೇಟಿ ಮಾಡ್ತಾರೆ. ಮತ್ತೊಂದು ಪ್ರಮುಖ ಅಂಶ ಅಂದ್ರೆ ಈ ಪ್ರದೇಶದಲ್ಲಿ ಜನರು ವಾಸ ಮಾಡದೇ ಇರೋದು.
ಈ ಪ್ರದೇಶದಲ್ಲಿ ವನ್ಯ ಜೀವಿಗಳು ಹೆಚ್ಚಾಗಿ ಕಂಡುಬರುತ್ತವೆ, ಪರ್ವತಗಳು, ಬೆಟ್ಟ ಗುಡ್ಡಗಳು, ಗುಹೆಗಳು ಸೇರಿದಂತೆ ವಿವಿದ ಜಾಗಗಳನ್ನ ಇಲ್ಲಿ ಗುರ್ತಿಸಲಾಗಿದೆ. ಅನೇಕ ಅಪರೂಪದ ಪಕ್ಷಿ ಸಂಕುಲಗಳನ್ನ ಇಲ್ಲಿ ಹೆಸರಿಸಲಾಗಿದೆ. ಇಲ್ಲಿಗೆ ಹೆಚ್ಚಾಗಿ ವಿದ್ಯಾರ್ಥಿಗಳು ಬರುತ್ತಾರೆ. ಈ ಪ್ರದೇಶವು ಸಂಪೂರ್ಣ ನ್ಯೂಜಿಲ್ಯಾಂಡ್ ದೇಶದ ಆಡಳಿತಕ್ಕೆ ಒಳ ಪಟ್ಟಿದೆ. ಸುಂದರ ಪ್ರದಶಗಳನ್ನ ಇಲ್ಲಿ ಕಾಣ್ಬೋದು.

02. ಕೋಡಿಯಾಕ್ ದ್ವೀಪ, ಅಲಾಸ್ಕಾ  


ಯುನೈಟೆಡ್ ಸ್ಟೇಟ್ಸ್‍ನ ಎರಡನೇ ಮತ್ತು ವಿಶ್ವದ 80ನೇ ಅತೀ ದೊಡ್ಡ ದ್ವೀಪ ಕೋಡಿಯಾಕ್ ದ್ವೀಪ. ಜನವಸತಿಯ ನಗರವಾಗಿ ಬೃಹದಾಕಾರವಾಗಿ ಬೆಳೆದು ನಿಂತಿದೆ. ಈ ಸುಂದರ ಪ್ರದೇಶ ಸುಂದರ ಪರ್ವತ ಸಾಲುಗಳು ಕಡಿದಾದ ಗಿರಿ ಕಂದರಗಲು ಮತ್ತು ದಟ್ಟವಾದ ಕಾಡನ್ನು ಹೊದಿದೆ ಈ ದ್ವೀಪ. ಹೆಚ್ಚು ಪ್ರಸಿದ್ದವು ಮತ್ತು ರಾಷ್ಷ್ರೀಯ ವನ್ಯ ಜೀವಿ ಪ್ರದೇಶವನ್ನ ಇಲ್ಲಿ ಕಾಣ್ಬೋದು.
ಇತಿಹಾಸದ ಪುಟಗಳನ್ನು ತಿರುವಿ ಹಾಕಿದಾಗ ಇಲ್ಲಿ ಕೂಡ ಅಲಾಸ್ಕದ ಪೂರ್ವಜರು ವಾಸ ಮಾಡ್ತಿದ್ದರು. ಎಂಬ ಅಂಶಗಳು ಬೆಳಕಿಗೆ ಬರುತ್ವೆ. ದ್ವೀಪ ಸಮೂಹವನ್ನು ಸೇರಿದಂತೆ 9.311.24 ಕಿಮೀ ವ್ಯಾಪ್ತಿಯನ್ನ ಹೊಂದಿದೆ ಕೋಡಿಯಾಕ್ ದ್ವೀಪ. ಇಲ್ಲಿಗೆ ಬರುವ ಪ್ರವಾಸಿಗರಿಗೆ ಅದ್ಬುತ ನಿಸರ್ಗದ ಪ್ರದೇಶಗಳ ಪರಿಚಯ ಮತ್ತು ಮನಸ್ಸಿಗೆ ಉಲ್ಲಾಸಮಯವಾದಂತಹ ಅನುಭವವನ್ನ ನೀಡುತ್ತೆ. 

01. ಉಟೈಲ್, ಹೊಂಡುರಾಸ್ 


ಹೊಂಡುರಾಸ್ ದೇಶದ ಆಳ್ವಿಕೆಗೆ ಒಳಪಡುವ ಉಟೈಲ್ ಪ್ರದೇಶ ಜಗತ್ತಿನ ಸುಂದರ ದ್ವೀಪಗಳ ಸಾಲಿನಲ್ಲಿ ಮೊದಲನೆ ಸ್ಥಾನದಲ್ಲಿ ನಿಲ್ಲುತ್ತೆ. ಇಲ್ಲಿರುವಂತಹ ವ್ಯವಸ್ಥೆಗಳು ಪ್ರವಾಸಿಗರನ್ನು ಹೆಚ್ಚಾಗಿ ಆಕರ್ಷಣೆಗೆ ಒಳಪಡುವಂತೆ ಮಾಡಿವೆ. ನಿಸರ್ಗವೇ ಇಲ್ಲಿ ಮೈದಳೆದಂತೆ ಪ್ರದೇಶಗಳನ್ನ ಸೃಷ್ಠಿ ಮಾಡಿಕೊಟ್ಟಿವೆ. ಐಶಾರಾಮಿ ಹೋಟೆಲ್‍ಗಳು, ಬೀಚ್ ಗಳು, ವಿಶೇಷವಾದ ಉಟದ ವ್ಯವಸ್ಥೆ ಮತ್ತು ಆತಿತ್ಯ ಇಲ್ಲಿ ಭಿನ್ನವಾಗಿದೆ.
ಕೇವಲ 45 ಕಿಮೀ ವ್ಯಾಪ್ತಿಯನ್ನ ಹೊಂದಿರುವಂತಹ ಉಟೈಲ್ ದ್ವೀಪ 4160 ಜನಸಂಖ್ಯೆಯನ್ನ ಹೊಂದಿದೆ. ಅಗ್ನಿ ಪರ್ವತವು ಸ್ಟೋಟಗೊಂಡು ನಿರ್ಗವೇ ಹಲವು ಸುಂದರ ಬೀಜ್‍ಗಳನ್ನ ನಿಮಾಣ ಮಾಡಿದೆ. ಕೊಲಂಬಸ್ಸನ್ನು ಇಲ್ಲಿ ಸಮುದ್ರ ಯಾನ ಮಾಡಿದ್ದರ ಬಗ್ಗೆ ಉಲ್ಲೇಖವನ್ನು ಮಾಡಲಾಗಿದೆ. ಇಲ್ಲಿ ಡೈವಿಂಗ್ ಆಟವು ಪ್ರಮುಖವಾಗಿದ್ದು ವಿಶ್ವದ ಟೈವಿಂಗ್ ಆಟದ ಸ್ಥಳಗಳಲ್ಲಿ ಇದೂ ಕೂಡ ಪ್ರಮುಖ ಎನಿಸಿಕೊಂಡಿದೆ. ಮಾತ್ರವಲ್ಲದೆ ಅನೇಕ ಸಾಂಸ್ಕøತಿಕ ಚಟುವಟಿಕೆಗಳು ಇಲ್ಲಿ ನಡೆಯುತ್ವೆ.
 ಮಂಜುನಾಥ್ ಜೈ
manjunathahr1991@gmail.com


ನಿಮ್ಮ ಅನಿಸಿಕೆ ಮತ್ತು ಅಭಿಪ್ರಾಯಗಳಿಗೆ ಕಾಮೆಂಟ್ ಬಾಕ್ಸ್ ನಲ್ಲಿ ಕಾಮೆಂಟ್ ಮಾಡಿ, ಹಾಗೂ ಸಬ್ ಸ್ಕ್ರೈಬ್ ಮಾಡಿ

ಕಾಮೆಂಟ್‌ಗಳು

  1. ಮಾಹಿತಿ ಅತ್ಯುತ್ತಮವಾಗಿದೆ ಸರ್.. ಮತ್ತು ಜಗತ್ತಿನ ಪ್ರಮುಖ ಕಲ್ಲಿದ್ದಲು ಗಣಿಗಳನ್ನು ಪಟ್ಟಿ ಮಾಡಿ ಹಾಕಿ

    ಪ್ರತ್ಯುತ್ತರಅಳಿಸಿ

ಕಾಮೆಂಟ್‌‌ ಪೋಸ್ಟ್‌ ಮಾಡಿ

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಭಾರತದ 10 ಪ್ರಸಿದ್ಧ ರಾಜರು - 22

ಕರ್ನಾಟಕದ 10 ಸುಂದರ ಬೆಟ್ಟಗಳು - 25

ಪ್ರಪಂಚದ 10 ಎತ್ತರದ ಪರ್ವತಗಳು - 26