ಪ್ರಪಂಚದ ಉದ್ದದ ಸೇತುವೆಗಳು -14

    ಒಂದು ದೇಶದಿಂದ ಮತ್ತೊಂದು ದೇಶಕ್ಕೆ, ಒಂದು ನಗರದಿಂದ ಮತ್ತೊಂದು ನಗರಕ್ಕೆ ಅಷ್ಟೇ ಯಾಕೆ ಒಂದು ಕಡೆಯಿಂದ ಮತ್ತೊಂದು ಕಡೆಗೆ ಸಂಪರ್ಕವನ್ನ ಕಲ್ಪಿಸೋದು ಈ ಸೇತುವೆಗಳು. ಇವು ಒಂದು ಕಡೆ ಉದ್ದವಾಗಿದ್ರೆ ಮತ್ತೊಂದು ಕಡೆ ತುಂಬಾನೇ ಚಿಕ್ಕದಾಗಿ ಇರುತ್ತೆ. ನಾವು ಇವತ್ತು ನಿಮಗೆ ತೋರಿಸ್ತಾ ಇರೋದು ಪ್ರಪಂಚದ ಉದ್ದದ ಸೇತುವೆಗಳನ್ನ.

09.  ಚೆಸಾಪೀಕ್ ಕೊಲ್ಲಿ ಸೇತುವೆ 


6.936 ಮೀಟರ್ ಉದ್ದವನ್ನು ಹೊಂದಿರುವ ಚೆಸಾಪೀಕ್ ಕೊಲ್ಲಿ ಸೇತುವೆ. ಉಕ್ಕು ಮತ್ತು ಕಾಂಕ್ರೀಟ್‍ನಿಂದ ನಿರ್ಮಾಣ ಮಾಡಿರುವ ಬಲಿಷ್ಟವಾದ ಸೇತುವೆ. ಇದು ಪ್ರಮುಖವಾಗಿ ಆಮೇರಿಕಾದ ಮೇರಿಲ್ಯಾಂಡ್ ಪ್ರದೇಶಕ್ಕೆ ಸಂಪರ್ಕವನ್ನ ಕಲ್ಪಿಸುತ್ತದೆ. ಪ್ರತಿನಿತ್ಯ ಇಲ್ಲಿ 61 ಸಾವಿರ ವಾಹನಗಳ ಒಡಾಟ ನಡೆಯುತ್ತದೆ ಎಂಬ ಅಂಕಿ ಅಂಶಗಳಿವೆ.
ಇದು ಪೂರ್ವಾಭಿಮುಖವಾಗಿ ಕಮಾನು ಸೇತುವೆ ಮತ್ತು ಪಶ್ಚಿಮಾಭಿಮುಖವಾಗಿರುವ ತೂಗು ಸೇತುವೆಯನ್ನು ಹೊಂದಿರುವಂತಹ ಕ್ಯಾಂಟಿಲಿವರ್ ಬಿಡ್ಜ್ ಇದಾಗಿದೆ. ಇದನ್ನ ಗವರ್ನರ್ ವಿಲಿಯಂ ಪ್ರೆಸ್ಟನ್ ಲೇನ್, ಜೂ ಸ್ಮಾರಕ  ಸೇತುವೆ ಅಂತ ಅಧಿಕೃತ ಹೆಸರಿದೆ. ಅಲ್ಲದೆ ಬೇ ಬ್ರಿಡ್ಜ್ ಎಂದೂ ಕೂಡ ಇದನ್ನು ಕರೆಯುತ್ತಾರೆ. ಇದರ ಮೂಲಕವಾಗಿ ನೂರಾರು ಕೋಟಿ ವಹಿವಾಟು ಇಲ್ಲಿ ನಡೆಯುತ್ತೆ.

08. ಕಿಂಗ್ ಫಾಹ್ದ್ ಕಾಸ್ವೇ ಸೇತುವೆ 


ಕಿಂಗ್ ಫಾಹ್ದ್ ಕಾಸ್ವೇ ಸೇತುವೆ ಸೌದಿ ಅರೇಬಿಯಾ ಮತ್ತು ಬಹ್ರೇನ್ ದೇಶದ ನಡವಿನ ಸ್ನೇಹದ ಕೊಂಡಿಯಾಗಿ ಮತ್ತು ಉತ್ತಮ ಬಾಂದವ್ಯವನ್ನು ಬೆಳೆಸಿದ ಮಾರ್ಗವಾಗಿ ರೂಪುಗೊಂಡಿದೆ. 1968ರಲ್ಲಿ ಈ ಸೇತುವೆಯ ಸರ್ವೆಕಾರ್ಯ ನಡೆದಿದ್ರೆ 1981ರಲ್ಲಿ ಇದರ ನಿರ್ಮಾಣ ಕಾರ್ಯ ಆರಂಭವಾಯಿತು. 1986ರಲ್ಲಿ ಇದನ್ನು ಜನರಿಗೆ ಬಳಸಲು ಅನುವುಮಾಡಿಕೊಡಲಾಯಿತು. ಈ ಸೇತುವೆಯನ್ನ ಬಹ್ರೇನ್ ಸೇತುವೆಯೆಂದ ಮತ್ತೊಂದು ಹೆಸರಿನಿಂದ ಕರೆಯಲಾಗುತ್ತೆ. 
25 ಕಿ.ಮೀ ಉದ್ದ ಮತ್ತು ಮತ್ತು 23 ಮೀಟರ್ ಅಗಲವನ್ನು ಹೊಂದಿರುವಂತಹ ಈ ಸೇತುವೆಗೆ ತಗುಲಿರುವ ವೆಚ್ಚ ಬರೋಬ್ಬರಿ 800 ಮಿಲಿಯನ್. ಒಟ್ಟಾರೆಯಾಗಿ ಪ್ರಪಂಚದ ಅತ್ಯಂತ ಉದ್ದವಾದ ಸೇತುವೆಗಳ ಸಾಲಿನಲ್ಲಿ ಕಿಂಗ್ ಫಾಹ್ದ್ ಕಾಸ್ವೇ ತನ್ನ ಹೆಸರನ್ನು ನೊಂದಾಯಿಸಿಕೊಳ್ಳುವಂತೆ ಮಾಡಿದೆ. ಇದರ ಮೂಲಕ ಸೌದಿ ಅರೇಬಿಯಾ ಮತ್ತು ಬಹ್ರೇನ್ ನಡುವೆ ವ್ಯಾಪಾರ ವಹಿವಾಟು ಉತ್ತಮವಾಗಿ ಬೆಳವಣಿಗೆಯನ್ನು ಹೊಂದಿದೆ. 

07. ಅಟ್ಟಫಾಲಯ ಬೇಸಿನ್ ಸೇತುವೆ 

ಯುನೈಟೆಡ್ ಸ್ಟೇಟ್ಸ್‍ನಲ್ಲಿ ಕಂಡು ಬರುವಂತಹ ಅಟ್ಟಫಾಲಯ ಬೇಸಿನ್ ಸೇತುವೆ ಅಲ್ಲಿನ ಜನರ ಜೀವನಾಡಿಯಾಗಿ ಎಂದು ಹೇಳ್ಬೋದು. ಈ ಸೇತುವೆಯು ಎರಡು ನದಿಗಳು ಸಂದಿಸುವ ಸಂಗಮವಾದ್ದರಿಂದ ಜನ ಸಂಪರ್ಕವು ಸಮರ್ಪಕವಾಗಿ ಇರಲಿಲ್ಲ. ಅನೇಕ ಪ್ರವಾಹಗಳಿಗೆ ಇಲ್ಲಿನ ಜನರು ತುತ್ತಾಗಿದ್ದು ಉಂಟು. ಲೂಸಿಯಾನ ಸರ್ಕಾರವು ಇಲ್ಲಿ ಸೇತುವೆಯನ್ನು ನಿರ್ಮಿಸಿ 1973ರಿಂದ ಜನ ಸಂಚಾರಕ್ಕೆ ಅನುವು ಮಾಡಿಕೊಟ್ಟಿದೆ.
29.209 ಮೀಟರ್ ಉದ್ದವನ್ನು ಹೊಂದಿರುವಂತಹ ಈ ಸೇತುವೆ ಎರಡು ರಸ್ತೆ ಮಾರ್ಗಗಳನ್ನು ಹೊಂದಿದೆ. ಇದರ ಮೂಲಕವಾಗಿ ನಾಲ್ಕು ದಾರಿಗಳು ಇವೆ. ಇಲ್ಲಿ ಒಂದೇ ಬಾರಿಯಾಗಿ ನಾಲ್ಕು ವಾಹನಗಳು ಸಂಚರಿಸಬಹುದಾದಂತಹ ವ್ಯವಸ್ಥೆ ಇದೆ. 2011ರ ಎಣಿಕೆಯಂತೆ 24.540 ವಾಹನಗಳು ಪ್ರತಿನಿತ್ಯ ಇಲ್ಲಿ ಸಂಚರಿಸುತ್ತವೆ. ಇದನ್ನ ಅಮೇರಿಕಾದ ಅತ್ಯಂತ ಉದ್ದದ 3ನೇ ಸೇತುವೆ ಎಂದು ಗುರ್ತಿಸಲಾಗಿದೆ.

06. ಡೋಂಗೈ ಸೇತುವೆ 


ಡೋಂಗೈ ಸೇತುವೆ ಚೀನಾ ದೇಶದಲ್ಲಿದಲ್ಲಿದೆ. ಇತ್ತೀಚೆಗಷ್ಟೆ ಅಂದರೆ 2005ರಲ್ಲಿ ಇದರ ಕಾಮಗಾರಿ ಪೂರ್ಣಗೊಂಡು ಪ್ರಯಾಣಕ್ಕೆ ಅನುವು ಮಾಡಿಕೊಡಲಾಗಿದೆ. ಇದನ್ನ ಬೀಮ್ ಸೇತುವೆಯ ಜೊತೆ ಸರಪಳಿ ಆಧಾರಿತ ವಿಭಾಗವಾಗಿ ನಿರ್ಮಾಣ ಮಾಡಲಾಗಿದೆ. ಈ ಸೇತುವೆಯನ್ನ ಡೋಂಗೈ ಸೇತುವೆ ಎಂದು ಕರೆಯುವುದರ ಜೊತೆಗೆ ಬಿಗ್ ಈಸ್ಟ್ ಸೀ ಬ್ರಿಡ್ಜ್ ಎಂದೂ ಕೂಡ ಕರೆಯುತ್ತಾರೆ. ಜಗತ್ತಿನ ಉದ್ದವಾದ ಸೇತುವೆಗಳ ಸಾಲಿನಲ್ಲಿ ಇದರದು 7 ನೇ ಸ್ಥಾನ.
ಈ ಸೇತುವೆಯು ಸುಧೀರ್ಘ ಮತ್ತು ಕಿರಿದಾದ ಮಾರ್ಗಗಳನ್ನು ಹೊಂದಿದೆ. ಅತೀ ಭಾರವಾದ ಸರಕು ಸಗಾಣಿಕೆಯನ್ನು ಇಲ್ಲಿ ನಿಷೇಧ ಮಾಡಲಾಗಿದೆ. ಆದರೆ ಲಘು ವಾಹನಗಳಿಗೆ ನಿರ್ಭಂದವನ್ನ ಹೇರಲಾಗಿಲ್ಲ. ವ್ಯಾಪಾರ ವಹಿವಾಟಿಗೆ ಉತ್ತಮ ಸಂಪರ್ಕವನ್ನು ಕಲ್ಪಿಸುವ ರಸ್ತೆ ಇದು.  ಚೀನಾದ ಉದ್ದವಾದ ಸೇತುವೆಗಳ ಸಾಲಿನಲ್ಲಿ ಡೋಂಗೈ ಸೇತುವೆ ಕೂಡ ಒಂದು ಎನಿಸಿದೆ. 

05. ರನ್ಯಯಾಂಗ್ ಯಾಂಗ್ಟ್ಜೆ ನದಿ ಸೇತುವೆ 

ಜಿಯಾಂಗ್ಸು ಪ್ರಾಂತ್ಯದಲ್ಲಿ ಹರಿಯುವ ಯಾಂಗ್ಟ್ಜೆ ನದಿಗೆ ಅಡ್ಡಲಾಗಿ ಕಟ್ಟಿರುವ ಸೇತುವೆಯೇ ರನ್ಯಯಾಂಗ್ ಯಾಂಗ್ಟ್ಜೆ ಸೇತುವೆ. 35.55 ಕಿಮೀ ಉದ್ದವಾದ ಈ ಸೇತುವೆಯನ್ನ  ನಿರ್ಮಾಣ ಮಾಡೋದಕ್ಕೆ 2000ರಲ್ಲಿ ಅಡಿಗಲ್ಲನ್ನು ಹಾಕಲಾಯಿತು. ಇದು 2005ರಲ್ಲಿ ಜನ ಸಂಪರ್ಕಕ್ಕೆ ಒಳಗಾಗಿದ್ದನ್ನ ಕಾಣ್ಬೋದು. 5.8 ಶತಕೋಟಿಯನ್ನ ಈ ಸೇತುವೆ ಕಟ್ಟೋದಕ್ಕೆ ಖರ್ಚು ಮಾಡಲಾಗಿದೆ.
ಚೀನಾ ದೇಶದ ಉದ್ದವಾದ ಸೇತುವೆಗಳಲ್ಲಿ ಒಂದಾದ ರನ್ಯಯಾಂಗ್ ಸೇತುವೆ ಪ್ರಪಂಚದ ಉದ್ದವಾದ ಸೇತುವೆಗಳಲ್ಲಿ ಒಂದು. ಈ ಸೇತುವೆಯ ನಿರ್ಮಾಣಕ್ಕೂ ಮೊದಲು ಸಂಚಾರಕ್ಕಾಗಿ ದೋಣಿಗಳನ್ನ ಇಲ್ಲಿ ಬಳಸಲಾಗುತ್ತಿತ್ತು. ಈ ಸೇತುವೆಯ ನಿರ್ಮಾಣ ಕಾರ್ಯದಿಂದ ಕೆಲವೇ ನಿಮಿಷಗಳಲ್ಲಿ ಆಚೆಗಿನ ಪ್ರದೇಶವನ್ನು ತಲುಪುವುದರಿಂದ ಸರಕು ಸೇವೆಗಳು ಮತ್ತಷ್ಟು ಹತ್ತಿರವಾಗಿವೆ. ವ್ಯಾಪಾರ ವಹಿವಾಟು ವೇಗವಾಗಿ ನಡೆಯುತ್ತಿದೆ.

04. ಹಾಂಗ್ ಝೌ ಬೇ ಸೇತುವೆ 


ಚೀನಾ ದೇಶದಲ್ಲಿ ಅನೇಕ ನದಿಗಳು ಹರಿಯುವುದರಿಂದ ಒಂದು ಕಡೆಯಿಂದ ಮತ್ತೊಂದು ಕಡೆಗೆ ಅವುಗಳ ಸಂಪರ್ಕವನ್ನ ಪಡೆದುಕೊಳ್ಳಬೇಕೆಂದರೆ ಸೇತುವೆಗಳ ನಿರ್ಮಾಣ ಅನಿರ್ವಾವಾಗಿರುತ್ತೆ. ಆದ್ದರಿಂದಲೆ ಅತೀ ಹೆಚ್ಚ ಉದ್ದದ ಸೇತುವೆಗಳು ಚೀನಾ ದೇಶದಲ್ಲಿ ಕಂಡುಬರುತ್ವೆ. ಅದರಲ್ಲಿ ಹಾಂಗ್ ಝೌ ಬೇ ಸೇತುವೆ ಕೂಡ ಒಂದು. 22 ಮೈಲಿ ದೂರವಿರುವ ಈ ಸೇತುವೆ ಪೂರ್ವ ಕರಾವಳಿ ಚೀನಾದ ಜಿಕ್ಸಿಂಗ್ ಮತ್ತು ಝಿಯಾಂಗ್ ಪ್ರದೇಶಗಳಿಗೆ ಸಂಪರ್ಕ ಕಲ್ಪಿಸುವ ಕೊಂಡಿಯಾಗಿದೆ.
2008 ಮೇ 1ರಿಂದ ಈ ಸೇತುವೆಯನ್ನು ತೆರೆಯಲಾಯಿತು. ಅಲ್ಲಿಂದ ಇಲ್ಲಿಯ ವರೆವಿಗೂ ಸಂಪರ್ಕ ಸಾಧನವಾಗಿ ಈ ಸೇತುವೆ ಹೆಸರು ವಾಸಿಯಾಗಿದೆ. ಮೊದಲು ಶಾಂಘೈ ತಲುಪಲು 400 ಕಿಮೀ 42 ಘಂಟೆ ಪ್ರಯಾಣದ ಅವಧಿಯನ್ನ ತೆಗೆದುಕೊಳ್ಳ ಬೇಕಿತ್ತು. ಈ ಸೇತುವೆಯ ನಿರ್ಮಾಣದಿಂದ 35.657 ಕಿಮೀ ಕೇವಲ ಒಂದು ಘಂಟೆಯ ಅವಧಿಯ ಪ್ರಯಾಣವನ್ನು ಮಿತಿಗೊಳಿಸಿದೆ. ಇದರಿಂದ ಆರ್ಥಿಕ ಲಾಭವು ಹೆಚ್ಚಾಗಿದೆ.

03. ಮಂಚಕ್ ಸ್ವಾಂಪ್ ಸೇತುವೆ 


ಪ್ರಪಂಚದ ಉದ್ದವಾದ ಸೇತುವೆಗಳಲ್ಲಿ ಮಂಚಕ್ ಸ್ವಾಂಪ್ ಸೇತುವೆ ಕೂಡ ಒಂದು ಇದು ಯುನೈಟೆಡ್ ಸ್ಟೇಟ್‍ನಲ್ಲಿನ ಉದ್ದದ ಸೇತುವೆಗಳಲ್ಲಿ ಒಂದು. ಕಾಂಕ್ರೀಟ್ ಬಳಸಿಕೊಂಡು ನಿರ್ಮಾಣ ಮಾಡಲಾಗಿದೆ ಈ ಸೇತುವೆಯನ್ನ. ಈ ಸೇತುವೆಯು ಲೂಯಿಸಿಯಾನ ಪ್ರದೇಶಕ್ಕೆ ಸಂಪರ್ಕವನ್ನ ಕಲ್ಪಿಸುತ್ತದೆ. ಪ್ರಪಂಚದ ಸುದೀರ್ಘದ ರಸ್ತೆ ಮತ್ತು ಸುಂಕದ ರಸ್ತೆ ಎನಿಸಿಕೊಂಡಿದೆ. ಅಂತರ್ ರಾಜ್ಯ ಸಂಪರ್ಕವನ್ನು ಇದು ಕಲ್ಪಿಸುತ್ತದೆ. 
36.710 ಮೀಟರ್ ಉದ್ದವನ್ನು ಹೊಂದಿರುವಂತಹ ಈ ಸೇತುವೆಯು 95 ಮೀಟರ್ ಅಗಲವನ್ನು ಹೊಂದಿದೆ. ಇನ್ನೂ 1979ರಲ್ಲಿ ನಿರ್ಮಾಣವಾದ ಈ ಸೇತುವೆಗೆ 7 ಮಿಲಿಯನ್ ಖರ್ಚು ಮಾಡಲಾಗಿತ್ತು. ಅಲ್ಲದೆ ಈ ಸೇತುವೆಯನ್ನು ಮಂಚಕ್ ಸ್ವಾಂಪ್ ಕ್ರಾಸಿಂಗ್ ಎಂದೂ ಕೂಡ ಕರೆಯುತ್ತಾರೆ. ಈ ಸೇತುವೆಯ ನಿರ್ಮಾಣದಿಂದ ಹೆಚ್ಚು ಪ್ರಯೋಜನವಾಗ್ತಿದೆ ಯುನೈಟೆಡ್ ಸ್ಟೇಟ್ಸ್‍ಗೆ. 

02. ಲೇಕ್ ಪಾಂಟ್ಚಾಟ್ರ್ರೈನ್ ಕಾಸ್ವೇ 


ಚೀನಾದ ಝಿಶೋ ಸೇತುವೆಗೆ 2011ರಲ್ಲಿ ನೀರಿನ ಮೇಲೆ ನಿರ್ಮಾಣ ಮಾಡಿದ ಸೇತುವೆ ಎಂಬ ಹೆಗ್ಗಳಿಕೆಯಿಂದ ಗಿನ್ನಿಸ್ ವಲ್ಡ್ ರೆಕಾರ್ಡ್‍ಗೆ ಪಾತ್ರವಾಗಿದೆ. ಆದರೆ ಅದಕ್ಕೂ ಮೊದಲೇ ಅಂದರೆ 1969ರಲ್ಲಿ ಲೇಕ್ ಪಾಂಟ್ಚಾಟ್ರ್ರೈನ್ ಕಾಸ್ವೇ ಸೇತುವೆಗೆ ಗಿನ್ನಿಸ್ ವಲ್ಡ್ ರೆಕಾರ್ಡ್ ಗೌರವ ಸಂದಿತ್ತು. ಅಷ್ಟರ ಮಟ್ಟಿಗೆ ಈ ಸೇತುವೆ ನಿರ್ಮಾಣವಾಗಿದನ್ನ. ಅದರ ಬಳಕೆಯನ್ನ ಮತ್ತು ಅದರ ವಿಸ್ತಾರದ ಬಗ್ಗೆ ತಿಳಿಸುತ್ತೆ.
38.442 ಕಿಮೀ ಸುದೀರ್ಘವಾದ ಉದ್ದವನ್ನು ಹೊಂದಿರುವ ಈ ಸೇತುವೆ ನಿಮಾಣವಾಗಿದ್ದು ಆಗಸ್ಟ್ 30 1956ರಲ್ಲಿ ಈ ಸೇತುವೆಯಿಚಿದಾಗಿ ಪ್ರವಾಸೋದ್ಯಮ ಮತ್ತು ವ್ಯಾಪಾರ ವಹಿವಾಟು ಹೆಚ್ಚಾಗಿದೆ. ಇದರ ಬೆನ್ನಲ್ಲೇ ಗಿನ್ನಿಸ್ ವಲ್ಡ್ ರೆಕಾರ್ಡ್ ಭೂತ ಕೂಡ ಇದರ ಹಿಂದೆ ಸುತ್ತುತ್ತಿದೆ. ಒಟ್ಟಾರೆಯಾಗಿ ಲೇಕ್ ಪಾಂಟ್ಚಾಟ್ರ್ರೈನ್ ಕಾಸ್ವೇ ಸೇತುವೆ ಪ್ರಪಂಚದ ಉದ್ದವಾದವಾದ ಸೇತುವೆಗಳಲ್ಲಿ ಎರಡನೆಯದಾಗಿ ಹಳಿಸುಕೊಂಡಿದೆ.

01. ಬ್ಯಾಂಗ್ ನಾ ಎಕ್ಸ್ಪ್ರೆಸ್ ವೇ 


ಪ್ರಪಂಚದ ಅತ್ಯಂತ ಉದ್ದವಾದ ಸೇತುವೆಗಳಲ್ಲಿ ಬ್ಯಾಂಗ್ ನಾ ಎಕ್ಸ್ಪ್ರೆಸ್ ವೇ ಮೊದಲನೆಯದಾಗಿ ನಿಲ್ಲುತ್ತೆ. 55 ಕಿಮೀ ಉದ್ದವಾದ ಅಂತರವನ್ನು ಹೊಂದಿರುವಂತಹ ಥೈಲ್ಯಾಂಡಿನ ಸೇತುವೆ ಇದು. ಈ ಸೇತುವೆಯನ್ನ ಜನವರಿ 2000ರಲ್ಲಿ ಅಧಿಕೃತವಾಗಿ ವಾಹನ ಚಾಲನೆಗೆ ಅನುಕೂಲ ಮಾಡಿಕೊಡಲಾಯಿತು. ಬ್ಯಾಂಕ್ ಪೋಕಾಂಗ್ ರಿವರ್ ಗೆ ಅಡ್ಡಲಾಗಿ ಈ ಸೇತುವೆಯನ್ನ ಕಟ್ಟಲಾಗಿದೆ. ಇದು ನದಿ ಮಾತ್ರವಲ್ಲದೆ ನಗರ ಪ್ರದೇಶದಲ್ಲೂ ಹಾದು ಹೋಗಿದ್ದು ಪ್ರಯಾಣಕ್ಕೆ ಯೋಗ್ಯವಾಗಿ ರೂಪುಗೊಂಡಿದೆ.
ಸೇತುವೆಯ ಬಂದೋ ಬಸ್ತಿಗಾಗಿ ಎರಡು ಬಿಡ್ಜ್‍ಗಳ ನಡುವೆ ಪಿಲ್ಲರ್‍ಗಳಿಗೆ ರೋಪ್‍ಗಳನ್ನ ಬಳಸಿ ನಿರ್ಮಾಣ ಮಾಡಲಾಗಿದೆ. ಇದನ್ನು ಜೇನ್ ಎಂ ಮುಲ್ಲರ್ ಸಂಪೂರ್ಣವಾಗಿ ಡಿಸೈನ್ ಮಾಡಿದ್ದಾರೆ. ತುಂಬಾ ಪ್ಲಾನ್ ಮಾಡಿ ಈ ಸೇತುವೆಯನ್ನು ಮಾಡಿದ್ದಾರೆ. ಈ ಪ್ರದೇಶದ ಜನದಟ್ಟಣೆ ಮತ್ತು ವ್ಯಾಪಾರ ವಹಿವಾಟುಗಳಿಗಾಗಿ ಈ ಸೇತುವೆಯ ಅವಶ್ಯಕತೆ ಇಲ್ಲಿ ಕಂಡಿತಾಗಿ ಇತ್ತು ಎಂಬುದನ್ನು ಇದು ತೋರಿಸುತ್ತದೆ.
ಒಟ್ಟಾರೆಯಾಗಿ ಪ್ರಪಂಚದ ಅದ್ಬುತಗಳಲ್ಲಿ ಒಂದಾಗಿವೆ ಈ ಉದ್ದದ ಸೇತುವೆಗಳು. ಇವುಗಳ ನಿರ್ಮಾಣಕ್ಕೆ ಅಗತ್ಯವಾದ ಕಾರಣಗಳು ಕೂಡ ಇದ್ದೇ ಇವೆ. ಇದರಿಂದಾಗಿ ಒಂದು ದೇಶದಿಂದ ಮತ್ತೊಂದು ದೇಶದ ಬಾಂದವ್ಯ ಉತ್ತಮ ಗೊಂಡಿದೆ. ವ್ಯಾಪಾರೋದ್ಯಮ, ಪ್ರವಾಸೋದ್ಯಮ ಕೂಡ ಬೆಳವಣಿಗೆ ಸಾದಿಸಿವೆ.
ಮಂಜುನಾಥ್ ಜೈ
manjunathahr1991@gmail.com


ನಿಮ್ಮ ಅನಿಸಿಕೆ ಅಭಿಪ್ರಾಯಕ್ಕೆ ಕಾಮೆಂಟ್ ಮಾಡಿ
ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಭಾರತದ 10 ಪ್ರಸಿದ್ಧ ರಾಜರು - 22

ಕರ್ನಾಟಕದ 10 ಸುಂದರ ಬೆಟ್ಟಗಳು - 25

ಪ್ರಪಂಚದ 10 ಎತ್ತರದ ಪರ್ವತಗಳು - 26