ಪ್ರಪಂಚದ ಉದ್ದವಾದ ನದಿಗಳು - 15
ನದಿಗಳು ಹಲವಾರು ಜನ ಸಮುದಾಯದ ಜೀವನಾಡಿ, ಒಂದೊಂದು ಪ್ರದೇಶದಲ್ಲೂ ಅದರದೇ ಆದಂತಹ ಆಚಾರ ವಿಚಾರಗಳಿಂದ ಪೂಜಿಸಲ್ಪಡುತ್ತದೆ. ಒಂದು ಕಡೆ ಜನರಿಗೆ ಉಪಕಾರಿಯಾಗಿ ಅಮೃತ ಧಾರೆಯಂತೆ ಹರಿದರೆ ಮತ್ತೆ ಕೆಲವು ಕಡೆ ರೌದ್ರ ನರ್ತನದಿಂದ ಕಣ್ಣೀರನ್ನು ಸುರಿಸುತ್ತೆ. ಯಾವುದೋ ಒಂದು ಪ್ರದೇಶದಲ್ಲಿ ಹುಟ್ಟಿ ಕೊನೆಗೆ ಸಮುದ್ರವನ್ನು ಸೇರುತ್ತೆ. ಆ ಸಮುದ್ರವನ್ನು ಸೇರುವ ನಡುವಿನ ಅಂತರ ಒಂದು ನದಿಗಿಂತ ಮತ್ತೊಂದು ನದಿಯ ವಿಸ್ತೀರ್ಣ ವಿಭಿನ್ನವಾಗಿರುತ್ವೆ. ಪ್ರಪಂಚದ ಅತೀ ಉದ್ದ ವಾದ ನದಿಗಳನ್ನ ಇಂದಿನ ಅದ್ಬುತ ಪ್ರಪಂಚದದಲ್ಲಿ ನಾವ್ ತೋರಿಸ್ತಾ ಇದಿವಿ ನೋಡಿ.
![]() |
ಅಮುರ್ ನದಿ |
ಚೀನಾ ಮತ್ತು ರಷ್ಯಾ ನಡುವೆ ತನ್ನ ಭಾಗಗಳನ್ನು ಹಂಚಿ ಕೊಂಡಿದೆ ಅಮುರ್ ನದಿ. ಈ ನದಿಯಲ್ಲಿ ರಷ್ಯಾದ ಫಾರ್ ಈಸ್ಟ್ ಮತ್ತು ಈ ಶಾನ್ಯ ಚೀನಾ ಭಾಗಗಳಲ್ಲಿ ಮೀನುಗಾರಿಕೆಯು ಹೆಚ್ಚು ಇದ್ದು. ಇದು ಒಂದು ಆರ್ಥಿಕ ಬೇಸಾಯವಾಗಿ ಬೆಳೆದು ನಿಂತಿದೆ. ಅಮುರ್ ನದಿಗೆ ಶಿಲ್ಕ, ಝಿಯಾ, ಬ್ರುಯೆ, ಟೋಂಜಿಯಾಂಗ್, ಖಬರೋವ್ಕ್ ಸೇರಿದಂತೆ ಹಲವಾರು ನದಿಗಳು ಇದನ್ನು ಸೇರಿ ಉಪ ನದಿಗಳಾಗಿ ಹೋಗಿವೆ.
2824 ಕಿಮೀ ದೂರ ಹರಿಯುವ ಅಮುರ್ ನದಿ ಹೈಹೆ, ಟೋಂಜಿಯಾಂಗ್, ಅಮುರಸ್ಕ್, ಆನ್ ಅಮುರ್ ಮೊದಲಾದ ನಗರಗಳನ್ನು ತಾಕಿಕೊಂಡು ಸಾಗುತ್ತದೆ. ಮಂಗೋಲಿಯಾದ ಜನರು ಈ ನದಿಯ ಪಕ್ಕದಲ್ಲಿ ನೆಲೆಸಿದ್ದರ ಬಗ್ಗೆ ಮತ್ತು ಅವರ ಆಳ್ವಿಕೆಗೆ ಈ ನದಿ ಒಳಗೊಂಡಿದ್ದನ್ನು ಕಾಣಬಹುದು. ಇದರಿಂದಾಗಿ ಕೊರಿಯನ್ ಭಾಷೆಯ ಮುಲ್, ಮಂಗೋಲಿಯಾದ ಮರೀನ್ ಮತ್ತು ಜಪಾನಿನ ಮಿಜು ಎಂಬ ಪದಗಳಿಂದ ಅಮುರ್ ಎಂಬ ಪದ ಉತ್ಪತ್ತಿಯಾಗಿರ ಬಹುದೆಂದು ಹೇಳಲಾಗುತ್ತೆ. ಅಮುರ್ ನದಿ ಎರಡು ದೇಶಗಳಲ್ಲಿ ಪ್ರಮುಖ ಪಾತ್ರವಹಿಸುತ್ತೆ.
09. ಚೆಂಬೇಶಿ ನದಿ
![]() |
ಚೆಂಬೇಶಿ ನದಿ |
ಆಫ್ರಿಕಾ ದೇಶದ ಜಾಂಬಿಯಾ ಪ್ರದೇಶದಲ್ಲಿ ಕಂಡುಬರುವಂತಹ ನದಿ ಚೆಂಬೇಶಿ ನದಿ. ಜಾಂಬಿಯಾದ ಪರ್ವತ ಪ್ರದೇಶಗಳಲ್ಲಿ ಹೊಳೆಯ ರೀತಿಯಲ್ಲಿ ಹರಿಯುತ್ತದೆ. ಈ ನದಿ ಸಮುದ್ರ ಮಟ್ಟದಿಂದ 1760 ಮೀಟರ್ ಎತ್ತರದಲ್ಲಿದೆ. ಆಫ್ರಿಕಾದ ಜೌಗು ಪ್ರದೇಶದಲ್ಲಿ ಹರಿದು ಪಲವತ್ತಾದ ಭೂಮಿಯನ್ನು ನಿರ್ಮಾಣ ಮಾಡುತ್ತದೆ. ಬೇಸಿಗೆಯಲ್ಲಿ ನೀರಿನ ಮಟ್ಟ ಕಡಿಮೆಯಗಿ ಮಳೆಗಾಲದಲ್ಲಿ ತುಂಬಿ ಹರಿಯುತ್ತದೆ.
ಚೆಂಬೇಶಿ ನದಿಯು ಪೂರ್ವಭಿಮುಖವಾಗಿ ಸರಿ ಸುಮಾರು 100 ಕಿ.ಮೀ ಸುದೀರ್ಘವಾಗಿ ಹರಿಯುತ್ತದೆ. 2 ಕಿಮೀ ವಿಶಾಲವಾದ ಈ ನದಿಯು ಕೆಲವು ಸಾರಿ ಉಕ್ಕಿ ಹರಿದು ಪ್ರವಾಹವನ್ನು ತಂದೊಡ್ಡುತ್ತೆ. ಅನೇಕ ಜನರ ಪ್ರಾಣಾಪಾಯಕ್ಕೆ ಒಳಗಾಗುವಂತಹ ಸನ್ನಿವೇಶಗಳನ್ನು ನಿರ್ಮಾಣ ಮಾಡುತ್ತೆ. ಉಳಿದಂತೆ ಮೀನುಗಾರಿಗೆ ಮತ್ತು ವ್ಯಾಪಾರೋದ್ಯಮದ ಭಾಗವಾಗಿ ಜನರು ಈ ನದಿಯನ್ನು ಬಳಸುತ್ತಾರೆ.
![]() |
ಪರಾನ ನದಿ |
08. ಪರಾನ ನದಿ
ಮೆಸಪಟೋನಿಯಾ ಪ್ರದೇಶದಲ್ಲಿ ಹಾದುಹೋಗುವ ಪ್ರಮುಖ ನದಿಗಳಲ್ಲಿ ಒಂದು ಪರಾನ ನದಿ. ಈ ನದಿಯು ಅರ್ಜೆಂಟೀನಾ, ಬ್ರೆಜಿಲ್ ಮತ್ತು ಪೆರುಗ್ವೆ ದೇಶಗಳಲ್ಲಿ ಹರಿಯುತ್ತದೆ. 665 ಮೈಲಿ ಉದ್ದದಲ್ಲಿ ಈ ನದಿ ಹರಿಯುತ್ತಿದ್ದು. ದಕ್ಷಿಣ ಅಮೇರಿಕ ನದಿಗಳ ಪೈಕಿ ಅತ್ಯಂತ ಉದ್ದವಾಗಿ ಹರಿಯುವ ನದಿಯಲ್ಲಿ ಇದು ಒಂದಾಗಿದೆ. ಪೆರುಗ್ವೆ, ಉರುಗ್ವೆ, ರಯೋ ಡೆ ಲಾ ಪ್ಲಾಟ ಉಪ ನದಿಗಳು ಇದನ್ನು ಸೇರಿ ಅಟ್ಲಾಂಟಿಕ್ ಸಮುದ್ರವನ್ನ ಸೇರುತ್ತವೆ.
ದಕ್ಷಿಣ ಅಮೇರಿಕಾದ ಬಹುಪಾಲು ಪ್ರದೇಶದಲ್ಲಿ ಇದು ಹರಿಯುವುದರಿಂದ ಕಾಲುವೆಗಳನ್ನ ಮಾಡಿ, ಅಣೆಕಟ್ಟಗಳನ್ನ ಕಟ್ಟಿ ನೀರನ್ನು ಸಂಗ್ರಹ ಮಾಡಿ ಕೃಷಿ ಮತ್ತಿತರ ಕಾರ್ಯಗಳಿಗೆ ಈ ನದಿಯ ನೀರನ್ನು ಬಳಸಿಕೊಳ್ಳಲಾಗುತ್ತಿದೆ. ಪರಾನ ನದಿಯ ಮೂಲಕ ಅರ್ಜೆಂಟೈನಾ ಮತ್ತು ಪೆರುಗ್ವೆ ನಗರಗಳಿಗೆ ಸಂಪರ್ಕವನ್ನ ಕಲ್ಪಿಸುತ್ತೆ. ಈ ನದಿಯ ಮೂಲಕ ಜಲ ವಿದ್ಯುತ್ ತಯಾರು ಮಾಡಿ ರಫ್ತು ಮಾಡುವುದು ದೊಡ್ಡ ಉದ್ಯಮವಾಗಿದೆ. ಮೀನುಗಾರಿಕೆ ಇದರ ಒಂದು ಭಾಗವಾಗಿದೆ.
07. ಇರ್ತಿಶ್ ನದಿ
![]() |
ಇರ್ತಿಶ್ ನದಿ |
ಅಲ್ಪೇ ಪರ್ವತಗಳಲ್ಲಿ ಹುಟ್ಟಿ ಸರಿ ಸುಮಾರು 4284 ಕಿಮೀ ಸುದೀರ್ಘವಾಗಿ ಹರಿಯುವ ನದಿ ಇರ್ತಿಶ್ ನದಿ ಇದು ಮಂಗೋಲಿಯಾ, ಚೀನಾ, ಕಝಾಕಿಸ್ತಾನ್ ಮತ್ತು ರಷ್ಯಾ ದೇಶಗಳಲ್ಲಿ ಹರಿದು ಅಲ್ಲಿನ ಜನರಿಗೆ ನೀರನ್ನು ಪೂರೈಕೆ ಮಾಡುತ್ತೆ. ಏಷ್ಯಾದ ಅತ್ಯಂತ ವಿಶಾಲವಾದ ನದಿ ಎನಿಸಿಕೊಂಡಿದೆ. ಇದರ ಮೂಲಕವಾಗಿ ಕಝಾಕಿಸ್ತಾನ ಮತ್ತು ರಷ್ಯಾದಲ್ಲಿ ಟ್ಯಾಂಕರ್ ಪ್ಯಾಸೆಂಜರ್ ಮತ್ತು ಸರಕು ತುಂಬಿದ ದೋಣಿಗಳು ಪ್ರಯಾಣ ಮಾಡುತ್ವೆ.
ಈ ನದಿಯ ಮೂಲಕವಾಗಿ ಸಾಗರದ ವ್ಯಾಪಾರೋದ್ಯಮ ನಡೆಯುತ್ತೆ. ಜಲವಿದ್ಯತ್ ಉತ್ಪಾದನೆ ಮತ್ತು ಮನರಂಜನ ಆಟಗಳು ಇಲ್ಲಿ ನಡೆಯುತ್ವೆ. ಮತ್ತು ಅಣೆಕಟ್ಟೆಯನ್ನು ನಿರ್ಮಾಣ ಮಾಡಿ ನೀರನ್ನ ಬಳಕೆ ಮಾಡಿಕೊಳ್ಳಲಾಗುತ್ತೆ. ಸುಮಾರು ಏಳು ಸೇತುವೆಗಳನ್ನ ಈ ನದಿಯ ಅಡ್ಡಲಾಗಿ ನಿರ್ಮಾಣ ಮಾಡಲಾಗಿದೆ. ಈ ನದಿಯು ಅನೇಕ ರಾಜ ಮನೆತನದ ಆಳ್ವಿಕೆಗೆ ಒಳ ಪಟ್ಟಿರೋದನ್ನ ಇಲ್ಲಿ ಕಾಣ್ಬೋದು.
![]() |
ಹಳದಿ ನದಿ |
06. ಹಳದಿ ನದಿ
ಏಷ್ಯಾದ ಮೂರನೇ ಅತ್ಯಂತ ದೊಡ್ಡ ನದಿ ಅಂದ್ರೆ ಹಳದಿ ನದಿ. ಇದರ ಹೆಸರೇ ಹೇಳುವಂತೆ ಇದರ ನೀರು ಇರೋದು ಹಳದಿ ಬಣ್ಣದಲ್ಲೇ, ಈ ನದಿ ಹರಿಯುವುದೇ ಹಣದಿ ಬಣ್ಣದಲ್ಲೇ ಆದ್ದರಿಂದಲೇ ಈ ನದಿಗೆ ಹಳದಿ ನದಿ ಎಂದು ಕರಿತಾರೆ. ಇದು ಮೂಲತಹ ಚೀನಾದ ಬಯಾನ್ ಹಾರ್ ಪರ್ವತಗಳಲ್ಲಿ ಹುಟ್ಟಿ ಸಿಚುವಾನ್, ಗಾನ್ಸು, ಇನ್ನರ್ ಮಂಗೋಲಿಯಾ, ಶಾಂಕ್ಸಿ ಮತ್ತು ಹೆನಾನ್ ಸೇರಿದಂತೆ ಹಲವಾರು ಪ್ರದೇಶಗಳಲ್ಲಿ ಹರಿಯುತ್ತದೆ.
ಹಳದಿ ನದಿಯನ್ನ ಫೆನ್, ಟಾವೋ, ವಯಿ ನದಿ ಸೇರಿದಂತೆ ಹಲವಾರು ಸಣ್ಣ ಪುಟ್ಟ ನದಿಗಳು ಸೇರುತ್ತವೆ. 5464 ಕಿಮೀ ಉದ್ದವಾಗಿ ಹರಿಯುವ ಹಳದಿ ನದಿ. ಪ್ರಾಚೀನ ಚೀನಿ ನಾಗರೀಕತೆಯ ಹುಟ್ಟಿನ ಸ್ಥಳವಾಗಿದೆ. ಆರಂಬಿಕ ಹಚಿತಯದಲ್ಲಿ ಇದು ಅತ್ಯಂತ ಶ್ರೀಮಂತ ಪ್ರದೇಶ. ಕೆಲವು ಸಾರಿ ಪ್ರವಾಹವನ್ನು ತಂದೊಡ್ಡುತ್ತೆ. ಹಳದಿ ನದಿಯಿಂದ ಹಲವು ಪ್ರದೇಶದಲ್ಲಿ ಕೃಷಿಯನ್ನ ಮಾಡಲಾಗುತೆ. ಈ ನದಿಯನ್ನ ನೋಡಲು ಸಾವಿರಾರು ಪ್ರವಾಸಿಗಳು ಇಲ್ಲಿಗೆ ಬರ್ತಾರೆ.
05. ಯೆನೈಸಿ ನದಿ
![]() |
ಯೆನೈಸಿ ನದಿ |
ಪ್ರಾಚೀನ ಬುಡಕಟ್ಟಿನ ಅಲೆಮಾರಿ ಜನಾಂಗವು ಇಲ್ಲಿ ವಾಸ ಮಾಡಿದ್ದರ ಪುರಾವೆಗಳು ಇಲ್ಲಿವೆ. ಇಂದಿಗೂ ಅನೇಕ ಜನರಿಗೆ ಅನ್ನ ನೀಡುವ ನದಿಯಾಗಿದೆ ಯೆನೈಸಿ. ಮಂಗೋಲಿಯಾ ಮತ್ತು ರಷ್ಯಾ ದೇಶಗಳ ಗಡಿಯೊಂದಿಗೆ ಹಂಚಿಯೋಗಿರುವ ನದಿ ಇದು. ಇದರ ಮೂಲಕವಾಗಿ ತುವಾ, ಖಾಕಸ್ಯ, ಬುರ್ಯಾಟಿಯಾ ಸೇರಿದಂತೆ ಪ್ರಮುಖ ಪ್ರದೇಶಗಳಲ್ಲಿ ಈ ನದಿ ಹರಿಯುತ್ತೆ. ಮುಗರಾಗಿನ್‍ಗಾಲ್ ಪ್ರರ್ವತ ಪ್ರದೇಶಗಳಲ್ಲಿ ಹುಟ್ಟುವ ಈ ನದಿಯು 465 ಮೈಲಿ ದೂರ ಹರಿಯುತ್ತೆ.
ಯೆನೈಸಿ ನದಿ ಸಸ್ಯ ಸಂಪತ್ತು ಮತ್ತು ಪ್ರಾಣಿ ಸಂಕುಲದ ಆಶ್ರಯ ತಾಣ ಅಂತಾನೇ ಹೇಳ್ಬೋದು ಯಾಕಂದ್ರೆ ಇಲ್ಲಿ ಸುಮಾರು 55 ಮೀನಿನ ತಳಿಯನ್ನ ಕಾಣ್ಬೋದು. ಇದರ ಇತಿಹಾಸದ ಪುಟಗಳನ್ನು ಗಮನಿಸಿದಾಗ ಮಹಾಯುದ್ದದ ಸಮಯದಲ್ಲಿ ನಾಜಿ ಜರ್ಮನಿ ಮತ್ತು ಜಪಾನ್ ಮತ್ತು ಚೀನಾ ಪ್ರದೇಶದ ಏಷ್ಯಾ ಭಾಗಗಳೆಂದು ಗರ್ತಿಸಲಾಗಿತ್ತು. ಇತ್ತೀಚೆಗೆ ಸುತ್ತಮುತ್ತಲಲ್ಲಿ ಕಾರ್ಖಾನೆಗಳ ಹಾವಳಿ ಹೆಚ್ಚಾಗಿರೋದ್ರಿಂದ ಈ ನದಿಯ ನೀರು ವಿಪರೀತವಾಗಿ ಮಲಿನವಾಗುತ್ತಿದೆ.
04. ಮಿಸ್ಸಿಸ್ಸಿಪ್ಪಿ ನದಿ
![]() |
ಮಿಸ್ಸಿಸ್ಸಿಪ್ಪಿ ನದಿ |
ಮಿಸ್ಸಿಸ್ಸಿಪ್ಪಿ ನದಿ ಲೇಕ್ ಕ್ಲಿಯರ್ವಾಟರ್ ಕೌಂಟಿ ಪರ್ವತ ಶ್ರೇಣಿಲ್ಲಿ ಹುಟ್ಟಿ ಸರಿ ಸುಮಾರು 2320 ಕಿಮೀ ದೂರ ಹರಿಯುವ ನದಿ ಇದು. ಯುನೈಟೆಡ್ಸ್ ಸ್ಟೇಟ್ಸ್‍ನಲ್ಲಿ ಕಂಡು ಬರುವ ಮಿಸ್ಸಿಸ್ಸಿಪ್ಪಿ ನದಿ ಮಿನ್ನೇಸೋಟ, ಮಿಸ್ಸೌರಿ, ಕೆಂಟುಕಿ, ಮಿಸ್ಸಿಸ್ಸಿಪ್ಪಿ ಮತ್ತು ಲೂಸಿಯಾನ ರಾಜ್ಯಗಳಲ್ಲಿ ಹರಿಯುತ್ತದೆ. ಈ ನದಿಗೆ ಉಪ ನದಿಯಾಗಿ ಸೇಂಟ್ ಕ್ರಾ ನದಿ, ಸಿನ್, ರಾಕ್, ಡೆಮೋನಿಯನ್, ವೈಟ್ ಮೊದಲಾದ ನದಿಗಳು ಇಲ್ಲಿ ಈ ನದಿಯನ್ನು ಸೇರುತ್ತವೆ.
ಅಪಲಾಚಿಯನ್ ಪ್ರರ್ವತ ಶ್ರೇಣಿಯ ನಾಲ್ಕನೇ ದೊಡ್ಡ ನದಿ ಎಂಬ ಹೆಗ್ಗಳಿಕೆ ಈ ಮಿಸ್ಸಿಸ್ಸಿಪ್ಪಿ ನದಿಯದು. ಈ ನದಿಯ ಹರಿಯುವಿಕೆಯಿಂದ ದಪ್ಪ ಪದರಗಳಾಗಿ ಹೂಳು ತುಂಬಿಕೊಂಡು ಫಲವತ್ತಾದ ಕೃಷಿ ಭೂಮಿಯ ಪ್ರದೇಶವಾಗಿ ಇದರ ಮುಖಜ ಭೂಮಿಯು ರೂಪುಗೊಂಡಿದೆ. 20 ನೇ ಶತಮಾನದ ಮೊದಲ ಭಾಗದಲ್ಲಿ ಎಂಜಿನಿಯರಿಂಗ್ ಕೆಲಸ, ಒಡ್ಡುಗಳ ನಿರ್ಮಣ ಮತ್ತು ಅಣೆಕಟ್ಟುಗಳ ನಿರ್ಮಾಣ ಕಾರ್ಯಗಳು ಪ್ರಾರಂಭವಾದವು. ಜಲ ಮಾಲಿನ್ಯ ಈ ನದಿಯನ್ನು ಬಿಟ್ಟಿಲ್ಲ ಎಂಬುದು ಇದನ್ನ ನೋಡಿದ್ರೆ ಗೊತ್ತಾಗುತ್ತೆ. ಈ ಪ್ರದೇಶದಲ್ಲಿ ಜಲಸಾರಿಗೆ ಹೆಚ್ಚಾಗಿ ಇರೋದನ್ನ ಕಾಣ್ಬೋದು.
03. ಯಾಂಗ್ಟ್ಜ್ ನದಿ
![]() |
ಯಾಂಗ್ಟ್ಜ್ ನದಿ |
ವಿಶ್ವದ ಮೂರನೇ ಅತ್ಯಂದ ದೊಡ್ಡದಾದ ನದಿ, ವಿಶಾಲವಾದ ನದಿ ಮತ್ತು ಉದ್ದವಾದ ನದಿ ಅಂದ್ರೆ ಅದು ಯಾಂಗ್ಟ್ಜ್ ನದಿ. ಚೀನಾ ದೇಶದ ಜೆಲಾಡೆನ್ಡಾಂಗ್ ಪೀಕ್ ಎಂಬ ಪ್ರದೇಶದಲ್ಲಿ ಹುಟ್ಟಿ 6300 ಕಿಮೀ ಹರಿಯುವ ನದಿ ಇದು. ಯಲೋಂಗ್, ಮಿನ್, ಹ್ಯಾನ್ ವು, ಯುವಾನ್ ಮೊದಲಾದ ಉಪನದಿಗಳು ಈ ನದಿಯನ್ನ ಸೇರುತ್ತವೆ. ಜಾಂಗಿಂಗ್, ನಾನ್ಜಿಂಗ್, ಶಾಂಘೈ, ವೂಹಾನ್ ಮೊದಲಾದ ನಗರಗಳಲ್ಲಿ ಈ ನದಿ ಹರಿಯತ್ತದೆ. ಈ ಪ್ರದೇಶದ ಜನರಿಗೆ ಆಸರೆಯಾಗಿದೆ.
ಇತ್ತೀಚಿನ ದಿನಗಳಲ್ಲಿ ಕೈಗಾರಿಕೆಗಳ ಮಾಲಿನ್ಯ ನದಿಯನ್ನ ಸೇರಿ ಇಡೀ ನದಿಯೇ ಮಲಿನವಾಗ್ತಿದೆ. ಹೂಳು ತುಂಬಿಕೊಂಡು ಪ್ರವಾಹದಂತಹ ವಿಕೋಪಗಳು ಸಂಬವಿಸುತ್ತಿದೆ. ಚೀನಿ ಸರ್ಕಾರ ಇದರ ಬಗ್ಗೆ ಗಮನ ಹರಿಸಿ ನದಿಯನ್ನ ಅಭಿವೃದ್ದಿಪಡಿಸುವ ಕಾರ್ಯಕ್ಕೆ ಮುಂದಾಗಿದೆ. 2014ರಲ್ಲಿ ಯುನೆಸ್ಕೋ ವಿಶ್ವ ಪರಂಪರೆಯ ತಾಣ ಎಂದು ಈ ನದಿಯನ್ನ ಗುರುತು ಮಾಡಿದೆ. ಪ್ರಪಂಚದ ಅತ್ಯಂತ ಉದ್ದವಾದ ನದಿಗಳ ಸಾಲಿನಲ್ಲಿ ಯಾಂಗ್ಟ್ಜ್ ನದಿ ಮೂರನೇ ಸ್ಥಾನವನ್ನು ಪಡೆದುಕೊಂಡಿದೆ.
02. ಅಮೆಜಾನ್ ನದಿ
![]() |
ಅಮೆಜಾನ್ ನದಿ |
ಅಮೇಜಾನ್ ನದಿ ಪ್ರಪಂಚದ ಉದ್ದವದ ನದಿ, ವಿಶಾಲವಾದ ನದಿ ಮತ್ತು ಸುಮಾರು 6992 ಕಿಮೀ ದೂರ ಸಾಗುವ ನದಿ ಅಮೇಜಾನ್. ಈ ನದಿ ಪ್ರಪಂಚದ ಅದ್ಬುತಗಳಲ್ಲಿ ಒಂದು ಎನ್ನಬಹುದು. ವಿಶಾಲವಾದ ಮೈದಾನದಲ್ಲಿ ರಿಯೋ ನಿಗ್ರೋ, ಮರೋನನ್ ಜಪುರ ಸೇರಿದಂತೆ ಹಲವು ನದಿಗಳನ್ನ ತನ್ನ ಜೊತೆ ಸೇರಿಸಿಕೊಂಡು ಸಾಗುತ್ತದೆ. ಪೆರು, ಕೊಲಂಬಿಯಾ, ಬ್ರೆಜಿಲ್‍ನ ಹತ್ತಕ್ಕೂ ಹೆಚ್ಚು ನಗರಗಳಲ್ಲಿ ಈ ನದಿ ಹಾದು ಹೋಗುತ್ತದೆ. ಈ ನದಿಯ ತೀರದಲ್ಲಿ ಅನೇಕ ಜನಸಮುದಾಯವು ಬೆಳೆದು ಅಳಿದು ಹೋಗಿವೆ. ಅತ್ಯಂತ ಪುರಾತನ ಇತಿಹಾಸದ ನದಿ ಇದಾಗಿದೆ.
18 ಮತ್ತು 19ನೇ ಶತಮಾನದ ಮೊದಲಾರ್ಧದಲ್ಲಿ ಅಮೇಜಾನ್ ನದಿ ಮತ್ತು ಜಲಾನಯನ ಪ್ರದೇಶಗಳಲ್ಲಿ ವೈಜ್ಞಾನಿಕ, ಪ್ರಾಣಿ ಶಾಸ್ತ್ರ ಮತ್ತು ಸಸ್ಯವಿಜ್ಞಾನ ಸಂಶೋದನೆ ನಡೆಯುತ್ತಿತ್ತು. ಅಮೆಜಾನ್ ನದಿಯ ಆಳವನ್ನ ಬಗೆದಷ್ಟು ಅದು ವಿಶಾಲವಾಗುತ್ತಾ ಹೋಗುತ್ತೆ. ಇದರ ಇತಿಹಾಸ, ಮತ್ತು ಇತಿಹಾಸದ ಪುಟದಲ್ಲಿನ ನದಿಯ ಪಾತ್ರ ಮುಖ್ಯವಾಗಿ ಕಂಡುಬರುತ್ತೆ. ಹಡಗುಗಳ ಸಂಚಾರ, ಮೀನುಗಾರಿಕೆ, ಆರ್ಥಿಕ ವ್ಯಾಪಾರ ವಹಿವಾಟಿಗೆ ಸಾರಿಗೆ ವ್ಯವಸ್ಥೆಯಾಗಿ ಬಳಸುತ್ತಾರೆ.
01. ನೈಲ್ ನದಿ
![]() |
ನೈಲ್ ನದಿ |
ನೈಲ್ ನದಿಯು ಆಫ್ರಿಕಾದಲ್ಲಿ ಉತ್ತರಾಭಿಮುಖವಾಗಿ ಹರಿಯುವ ಪ್ರಮುಖ ನದಿಗಳಲ್ಲಿ ಒಂದು. ಇದರ ಉಪನದಿಗಲೆಂದರೆ ಬಿಳಿನೈಲ್, ನೀಲಿನೈಲ್ ಸಂಗಮಗೊಂಡು ನೈಲ್‍ನದಿಯ ಹೆಸರಿನಿಂದ ಉತ್ತರಾಭಿಮುಖವಾಗಿ ಹರಿದು ಮೆಡಿಟರೇನಿಯಂ ಸಮುದ್ರವನ್ನ ಸೇರುತ್ತೆ. ಈ ನದಿಯ ಉತ್ತರದಂಶವು ಹೆಚ್ಚೂ ಕಡಿಮೆ ಸುಡಾನ್ ಮತ್ತು ಈಜಿಪ್ಟ್‍ಗಳ ಮರುಭೂಮಿಯಲ್ಲಿ ಹರಿಯುತ್ತೆ. ಈ ಜಿಪ್ಟ್‍ನಲ್ಲಿ ದೊಡ್ಡ ಮುಖಜ ಭೂಮಿಯನ್ನು ನಿರ್ಮಿಸಿ ನೈಲ್ ನದಿಯು ತನ್ನ ಕೊನೆಯನ್ನು ಸೇರುತ್ತೆ.
ಈ ಜಿಪ್ಟ್ ನಾಗರೀಕತೆ ಸಂಪೂರ್ಣವಾಗಿ ನೈಲ್ ನದಿಯನ್ನ ಅವಲಂಬಿದರೋದನ್ನ ಕಾಣ್ಬೋದು. ಪ್ರಾಚೀನ ಈಜಿಪ್ಟ್‍ನ ಎಲ್ಲಾ ಸಾಂಸ್ಕøತಿಕ ಮತ್ತು ಐತಿಹಾಸಿಕ ತಾಣಗಳ ನೈಲ್ ನದಿಯ ದಡದಲ್ಲಿಯೇ ಇವೆ. ನೈಲ್ ನದಿಯು ಈಜಿಪ್ಟ್‍ನ ಆಡಳಿತಲ್ಲಿ ಇರುವುದರಿಂದ ಉಗಾಂಡ, ಕೀನ್ಯಾ, ಸುಡಾನ್ ಮತ್ತು ಇಥಿಯೋಪಿಯಾ ಸೇರಿದಂತೆ ಹಲವು ರಾಷ್‍ಷ್ಟ್ರಗಳು ಇದನ್ನು ವಿರೋದಿಸಿ ಹೋರಾಡುತ್ತಲೇ ಇವೆ.
ಆಲ್ಬರ್ಟ್ ನೈಲ್‍ನ ಹರಿಯುವಿಕೆಯ ಪ್ರಮಾಣ ವರ್ಷದ ಎಲ್ಲಾ ಕಾಲದಲ್ಲಿಯೂ ಏಕಸ್ವರೂಪವಾಗಿರುತ್ತೆ. ಇದು ಪ್ರತಿ ಸೆಕೆಂಡಿಗೆ ಸರಾಸರಿ 1048 ಘನ ಮೀಟರ್‍ನಷ್ಟಿರುತ್ತೆ. ಇದರ ಜಲಾನಯನ ಪ್ರದೇಶವು ಸಂಕೀರ್ಣವಾಗಿದ್ದು ನದಿಯ ಹರಿವು ಹವಾಮಾನ, ಆವಿಯಾಗುವಿಕೆ, ಸಸ್ಯರಾಶಿ ಹೀರಿಕೊಳ್ಳುವಿಕೆ ಮತ್ತು ಅಚಿತರ್ಜಲ ಪ್ರಮಾಣ ಮುಂತಾದವುಗಳನ್ನು ಅವಲಂಬಿಸಿರುತ್ತೆ.
ಒಟ್ಟಾರೆಯಾಗಿ ನದಿಗಳು ಜನ ಸಮುದಾಯದಲ್ಲಿ ಪ್ರಮುಖ ಪಾತ್ರವನ್ನು ವಹಿಸುತ್ವೆ. ನೂರಾರು ಸಾವಿರಾರು ಕಿ.ಮೀ ಹರಿದು ವ್ಯವಸಾಯ ಮತ್ತು ಆರ್ಥಿಕವಾಗಿ ಬೆಳವಣಿಗೆಯನ್ನು ಸಾದಿಸಲು ಸಹಕಾರಿಯಾಗಿವೆ. ಒಂದೇ ನದಿ ಎರಡು ಮೂರು ದೇಶಗಳ ನಡುವೆ ಹರಿಯುವುದರಿಂದ ದೇಶಗಳ ನಡುವೆ ವೈಮನಸ್ಸು ಸಾಮಾನ್ಯವಾಗಿದೆ. ಅಸಂಖ್ಯೆ ಜೀವರಾಶಿಗೆ ಆಧಾರವಾಗಿವೆ ನದಿಗಳು.
ಮಂಜುನಾಥ್ ಜೈ
manjunathahr1991@gmail.com
ಪ್ರಪಂಚದ ಉದ್ದವಾದ ನದಿ ಯಾವುದು
ಪ್ರತ್ಯುತ್ತರಅಳಿಸಿNyalnadi
ಅಳಿಸಿಪ್ರಪಂಚದ ಉದ್ದವಾದ ನದಿ ಯಾವುದು
ಪ್ರತ್ಯುತ್ತರಅಳಿಸಿನೈಲ್ ನದಿ ಪ್ರಪಂಚದ ಅತ್ಯಂತ ಉದ್ದವಾದ ನದಿ.
ಪ್ರತ್ಯುತ್ತರಅಳಿಸಿಪ್ರಪಂಚದ ಅಗಲವಾದ ನದಿ ಯಾವುದು
ಪ್ರತ್ಯುತ್ತರಅಳಿಸಿ