ಪ್ರಪಂಚದ ಚಿಕ್ಕ ರಾಷ್ಟ್ರಗಳು - 17

       
ಪ್ರಪಂಚದಲ್ಲಿ ನೂರಾರು ದೇಶಗಳಿವೆ, ಅತ್ಯಂತ ಚಿಕ್ಕ ದೇಶಗಳಿವೆ, ಅತ್ಯಂತ ದೊಡ್ಡ ದೇಶಗಳು ಕೂಡ ಇವೆ. ಮುಂದುವರೆದ ರಾಷ್ಟ್ರಗಳಿವೆ, ಮುಂದುವರೆಯುತ್ತಿರುವ ರಾಷ್ಷ್ರಗಳಿವೆ, ಹಿಂದುಳಿದ ರಾಷ್ಟ್ರಗಳು ಕೂಡ ಇವೆ. ನಾವ್ ಇವತ್ತು ನಿಮಗೆ ತೋರಿಸ್ತಾ ಇರೋದು ಪ್ರಂಚದ ಹತ್ತು ಚಿಕ್ಕ ರಾಷ್ಟ್ರಗಳು. ಆ ರಾಷ್ಷ್ರಗಳ ಮೇಲೆ ಬೆಳಕು ಚೆಲ್ಲುವಂತಹ ವರದಿ ಇಲ್ಲಿದೆ ನೋಡಿ.
10. ಮಾಲ್ಡೀವ್ಸ್
ಹಿಂದೂ ಮಹಾಸಾಗರದಲ್ಲಿರುವ ದ್ವೀಪಗಳ ದೇಶಗಳಲ್ಲಿ ಮಾಲ್ಡೀವ್ಸ್ ದೇಶವೂ ಕೂಡ ಒಂದು. ಭಾರತದ ಲಕ್ಷ ದ್ವೀಪದ ಎರಡು ಭಾಗದಲ್ಲಿ ದಕ್ಷಿಣೋತ್ತರವಾಗಿ ಇರುವ ಮಿನಿಕೋಯ್ ದ್ವೀಪ ಮತ್ತು ಚಾಗೋಸ್ ಆರ್ಚಿಪೆಲಾಗೋಗಳ ಮಧ್ಯೆ ಇಪ್ಪತ್ತಾರು ಹವಳ ದ್ವೀಪಗಳು ದ್ವಿಮುಖ ಸರಪಳಿಯ ರೂಪದಲ್ಲಿ ಹರಡಿಕೊಂಡಿವೆ. ಈ ಪ್ರದೇಶವು ಶ್ರೀಲಂಕಾದ ನೈರುತ್ಯ ಭಾಗದಲ್ಲಿ ಸುಮಾರು ಏಳು ನೂರು ಕಿ.ಮೀ ದೂರದಲ್ಲಿದೆ.
ಪ್ರಪಂಚದ ಚಿಕ್ಕರಾಷ್ಟ್ರಗಳಲ್ಲಿ ಹತ್ತನೆಯ ಸ್ಥಾನದಲ್ಲಿರುವ ಮಾಲ್ಡೀವ್ಸ್‍ನಲ್ಲಿ ಡಿವೇಹಿ ಭಾಷೆಯನ್ನು ಅಧಿಕೃತವಾಗಿ ಮಾತನಾಡುತ್ತಾರೆ. ಇದರ ರಾಜಧಾನಿ ಮಾಲೆಯಾಗಿದ್ದು ರಾಷ್ಷ್ರದ ದೊಡ್ಡ ನಗರವಾಗಿದೆ. ಅದ್ಯಕ್ಷೀಯ ಗಣತಂತ್ರ ವ್ಯವಸ್ಥೆ ಇಲ್ಲಿ ಜಾರಿಯಲ್ಲಿದೆ. 1965ರಲ್ಲಿ ಸ್ವಾತಂತ್ರ್ಯ ಪಡೆದ ಈ ದೇಶವು 298 ಚದುರ ಮೈಲಿ ವಿಸ್ತೀರ್ಣ ಮತ್ತು 2006ರ ಜನಗಣತಿಯ ಪ್ರಕಾರ 298842 ಜನಸಂಖ್ಯೆ ಇದೆ.
09. ಸೇಂಟ್ ಕಿಟ್ಸ್ ಮತ್ತು ನೆವಿಸ್ 

ಉತ್ತರ ಅಮೇರಿಕಾ ಖಂಡದ ಅತ್ಯಂತ ಚಿಕ್ಕ ಮತ್ತು ಅತ್ಯಂತ ಕಡಿಮೆ ಜನಸಂಖ್ಯೆಯನ್ನು ಹೊಂದಿರುವ ದೇಶ ಸೇಂಟ್ ಕಿಟ್ಸ್ ಮತ್ತು ನೆವಿಸ್. ಕೆರಿಬ್ಬಿಯನ್ ಪ್ರದೇಶದ ಲೀವರ್ಡ್ ದ್ವೀಪಗಳಲ್ಲಿ ಇರುವ ಎರಡು ದ್ವೀಪಗಳ ದೇಶ. ಪ್ರಪಂಚದ ಅತ್ಯಂತ ಚಿಕ್ಕ ದೇಶಗಳ ಸಾಲಿನಲ್ಲಿ 9ನೇ ಸ್ಥಾನದಲ್ಲಿರುವ ಈ ದೇಶ ಹಲವು ವಿಶೇಷತೆಗಳನ್ನ ಹೊಂದಿದೆ. 
ಇಲ್ಲಿ ಅಧಿಕೃತವಾಗಿ ಇಂಗ್ಲೀಷ್ ಭಾಷೆಯನ್ನ ಮಾತನಾಡುವ ಜನರಿದ್ದಾರೆ. ಸಂಸದೀಯ ಪ್ರಜಾತಂತ್ರ ಆಡಳಿತ ವ್ಯವಸ್ಥೆ ಇದ್ದು. ಇದರ ರಾಜಧಾನಿ ಬಾಸ್ಟೆರ್ ಪ್ರದೇಶದಲ್ಲಿ ನಡೆಯುತ್ತೆ. 1983ರಲ್ಲಿ ಯುನೈಟೆಡ್ ಕಿಂಡ್ಡಮ್‍ನಿಂದ ಸ್ವಾತಂತ್ರ್ಯ ಪಡೆಯಿತು. 2005ರ ಅಂದಾಜು ಜನಸಂಖ್ಯೆ 42696 ಇದೆ. ಇಲ್ಲಿನ ಒಟ್ಟರೆ ಭೂ ಪ್ರದೇಶ 164 ಚದುರ ಕಿ.ಮೀ ಇದೆ. 

08. ಮಾರ್ಷಲ್ ದ್ವೀಪಗಳು   


ಮಾರ್ಶಲ್ ದ್ವೀಪಗಳು ಪಶ್ಚಿಮ ಶಾಂತ ಮಹಾಸಾಗರದಲ್ಲಿನ ಮೈಕ್ರೋನೇಷಿಯಾದ ಒಂದು ದ್ವೀಪರಾಷ್ಟ್ರ ಇದು ನೌರು ಮತ್ತು ಕಿರಿಬಾಟಿಗಳ ಉತ್ತರದಲ್ಲಿ ಮತ್ತು ಮೈಕ್ರೋನೇಷ್ಯಾ ಒಕ್ಕೂಟ ರಾಜ್ಯಗಳ ಪೂರ್ವದಿಕ್ಕಿಗೆ ಇದೆ. ಇಲ್ಲಿನ ಅತ್ಯಂತ ದೊಡ್ಡ ನಗರ ಮತ್ತು ಇದರ ರಾಜದಾನಿ ಮುಜುರೊ. ಇದರ ಮೂಲಕವೇ ಇಲ್ಲಿನ ವ್ಯವಹಾರ ಕ್ರಮಗಳು ನಡೆಯುತ್ವೆ. ಸುಂದರವಾದ ಕಡಲ ಕಿನಾರೆ ಇಲ್ಲಿರುವುದನ್ನ ಕಾಣ್ಬೋದು. 
ಮಾರ್ಶಲ್ ದ್ವೀಪಗಳಲ್ಲಿ ಅಧಿಕೃತವಾಗಿ ಮಾರ್ಷಲೀಸ್ ಮತ್ತು ಇಂಗ್ಲೀಷ್ ಭಾಷೆಯನ್ನ ಬಳಸುತ್ತಾರೆ. ಇದು 1986ರಲ್ಲಿ ಯು.ಎಸ್.ಎ ದಿಂದ ಅಧಿಕೃತವಾಗಿ ಸ್ವಾತಂತ್ರ್ಯವನ್ನು ಪಡೆದುಕೊಂಡಿದೆ. ಇದು ಒಟ್ಟು 181 ಚದುರ ಕಿಮೀ ವಿಸ್ತೀರ್ಣವನ್ನ ಹೊಂದಿದೆ. ಅಲ್ಲದೆ 2005ರ ಜನಗಣತಿಯ ಪ್ರಕಾರ 61.963 ಜನಸಂಖ್ಯೆ ಇದೆ. ಇಲ್ಲಿನ ಜನರು ಯು.ಎಸ್. ಡಾಲರ್ ಬಳಸುತ್ತಾರೆ. ಒಟ್ಟಾರೆ ಮಾರ್ಶಲ್ ದ್ವೀಪಗಳು ಸುಂದರವಾಗಿವೆ ಮತ್ತು ವಿಭಿನ್ನವಾಗಿವೆ.

07. ಲೀಚ್ಟೆನ್ಟ್ಸೀನ್ 

160 ಕಿಮೀ ವ್ಯಾಪ್ತಿಯಲ್ಲಿ ಹರಡಿಕೊಂಡಿರುವ ಲೀಚ್ಟೆನ್ಟ್ಸೀನ್ ಪ್ರದೇಶವು 2014ರ ಜನಗಣತಿಯ ಪ್ರಕಾರ 37.340 ಜನಸಂಖ್ಯೆ ಇಲ್ಲಿದೆ. ಐಷಾರಾಮಿ ಹೊಟೆಲ್‍ಗಳು, ಜನವಸತಿ ಪ್ರದೇಶಗಳು ಇಲ್ಲಿವೆ. ಅದ್ಬುತವೆನಿಸುವಂತಹ ಸುಂದರ ಪ್ರದೇಶಗಳನ್ನ ಇಲ್ಲಿ ಕಾಣ್ಬೋದು. ಬೆಟ್ಟ ಗುಡ್ಡಗಳ ಸಾಲಿನಲ್ಲಿ ತಲೆ ಎತ್ತಿರುವ ಮನೆಗಳು ಮತ್ತು ಪ್ರಕೃತಿಯ ರಮಣೀಯ ತಾಣಗಳು ಇಲ್ಲಿವೆ.
ಲೀಚ್ಟೆನ್ಟ್ಸೀನ್ ಪಶ್ಚಿಮ ಯುರೋಪ್‍ನಲ್ಲಿರುವ ಪುಟ್ಟ ರಾಷ್ಟ್ರ. ಇದರ ರಾಜಧಾನಿ ಪಾಡೂಟ್ಸ್ ಇದರ ಮೂಲಕ ವ್ಯವಾಪಾರ ವಹಿವಾಟು ನಡೆಯುತ್ತೆ. ಇಲ್ಲಿನ ಜನರಿಗೆ ರಾಜಧಾನಿ ಪ್ರಮುಖ ಕೇಂದ್ರ. ಪ್ರವಾಸಿಗರನ್ನ ಆಕಷೀಸುವ ಕೇಂದ್ರಗಳಲ್ಲಿ ಇದೂ ಕೂಡ ಒಂದು ಎನ್ನಬಹುದು. ಇಲ್ಲಿನ ಆಡಳಿತ ವ್ಯವಸ್ಥೆಯು ಜನರಿಗೆ ಪೂರಕವಾಗಿರೋದ್ರಿಂದ ಪ್ರಶಾಂತ ವಾತಾವರಣವನ್ನು ಇಲ್ಲಿ ಕಾಣ್ಬೋದು. ಅಲ್ಲದೆ 1866ರಲ್ಲಿ ಆಸ್ಟ್ರಿಯಾ ಮತ್ತು ಪ್ರಷ್ಯಾ ನಡುವೆ ನಡೆದ ಯುದ್ದದ ಪ್ರಮುಖ ಕೇಂದ್ರವಾಗಿತ್ತು.

06. ಸಾನ್ ಮರಿನೊ  


ಸಾನ್ ಮರಿನೊ ಗಣರಾಜ್ಯವು ವಿಶ್ವದ ಅತೀ ಪುಟ್ಟ ಸ್ವತಂತ್ರ ರಾಷ್ಟ್ರಗಳಲ್ಲಿ ಆರನೇ ಸ್ಥಾನವನ್ನ ಪಡೆದುಕೊಂಡಿದೆ. ಇದು ಸಂಪೂರ್ಣವಾಗಿ ಇಟಲಿಯ ಒಳಗೆ ಹುಡುಗಿಕೊಂಡಿರುವ ದೇಶ. ಇದನ್ನ ವಿಶ್ವದ ಅತ್ಯಂತ ಪುರಾತನ ಗಣರಾಜ್ಯ ಎಂಬ ಹೆಸರು ಕೂಡ ಇದೆ. 61 ಚದುರ ಕಿ.ಮೀ ವಿಸ್ತೀರ್ಣವುಳ್ಳ ಈ ರಾಷ್ಟ್ರದ ಜನಸಂಖ್ಯೆ ಸುಮಾರು 28 ಸಾವಿರ ಇದೆ. ಸಾನ್ ಮರಿನೂ ಇದರ ರಾಜದಾನಿಯಾಗಿದ್ದು ಬೆಳವಣಿಗೆಯನ್ನು ಹೊಂದಿದೆ. 
ಈ ದೇಶವು ಬೆಟ್ಟ ಗುಟ್ಟಗಳ ನಾಡು. ಯಾವುದೇ ನದಿ ಅಥವಾ ಸರಸ್ಸುಗಳು ಇಲ್ಲಿಲ್ಲ. ವರ್ಷದ ಸದಾಕಾಲವೂ ಸಹನೀಯವಾದ  ಮೆಡಿಟರೇನಿಯಂ ಹವಾಮಾನವಿರುತ್ತದೆ. ಸಾನ್ ಮರಿನೊ ಸಂಸದೀಯ ಪ್ರಜಾಸತ್ತತೆಯನ್ನು ಅಳವಡಿಸಿಕೊಂಡಿದೆ. ಇಲ್ಲಿ ಪ್ರಮುಖವಾಗಿ ಇಟಾಲಿಯನ್ ಭಾಷೆಯನ್ನ ಮಾತನಾಡುತ್ತಾರೆ. ಮತ್ತು ಪ್ರವಾಸೋದ್ಯಮ ದೇಶದ ಪ್ರಮುಖ ಆರ್ಥಿಕ ಚಟುವಟಿಕೆಯಾಗಿ ಬಳಕೆ ಮಾಡಲಾಗಿದೆ. 

05. ತುವಾಲು  


ತುವಾಲು ಮೊದಲು ಎಲ್ಲಿಸ್ ದ್ವೀಪಗಳು ಎಂದು ಕರೆಯಲಾಗುತ್ತಿತ್ತು. ಇದು ಶಾಂತ ಮಹಾಸಾಗರದಲ್ಲಿನ ಹವಾಯ್ ಮತ್ತು ಆಸ್ಟ್ರೇಲಿಯಾಗಳ ನಡುವೆ ಇರುವ ಪಾಲಿನೇಷ್ಯಾದ ಒಂದು ದ್ವೀಪರಾಷ್ಟ್ರ. ಕಿರಿಬಾಟಿ, ಫಿಜಿ ಮತ್ತು ಸಮೋವ ರಾಷ್ಟ್ರಗಳು ಇದರ ನೆರೆಯ ರಾಷ್ಟ್ರಗಳಾಗಿವೆ. ಜಗತ್ತಿನ ಅತಿ ಚಿಕ್ಕ ರಾಷ್ಟ್ರಗಳಲ್ಲಿ ತುವಾಲು 5ನೇ  ಸ್ಥಾನದಲ್ಲಿದೆ. 
1978ರಲ್ಲಿ ಯು.ಕೆ ಯಿಂದ ತುವಾಲು ಪ್ರದೇಶವು ಸ್ವಾತಂತ್ರ್ಯವನ್ನು ಪಡೆದುಕೊಂಡಿದೆ. ಫುನಫುಟಿ ಇದರ ರಾಜಧಾನಿಯಾಗಿದ್ದು ಪ್ರಮುಖ ಆರ್ಥಿಕ ಕೇಂದ್ರವಾಗಿದೆ. ಈ ಪ್ರದೇಶದಲ್ಲಿ ತುವಾಲುವನ್ ಭಾಷೆಯ ಜೊತೆಗೆ ಇಂಗ್ಲಿಷ್ ಭಾಷೆಯನ್ನು ಸಹ ಇಲ್ಲಿ ಮಾತನಾಡುತ್ತಾರೆ. ಸುಮಾರು 26 ಚದುರ ಕಿ.ಮೀ ವ್ಯಾಪ್ತಿಯನ್ನು ಹೊಂದಿದೆ ಈ ದೇಶ. 2007ರ ಜನಗಣತಿಯ ಪ್ರಕಾರ ಇಲ್ಲಿ 11992 ಜನರು ಇಲ್ಲಿ ವಾಸ ಮಾಡುತ್ತಿದ್ದಾರೆ.

04. ನೌರು 


ನೌರು ಗಣರಾಜ್ಯವು ದಕ್ಷಿಣ ಶಾಂತ ಸಾಗರದಲ್ಲಿರುವ ಒಂದು ದ್ವೀಪರಾಷ್ಟ್ರ. ಇದು ವಿಶ್ವದ ಪುಟ್ಟ ರಾಷ್ಟ್ರಗಳಲ್ಲಿ ನಾಲ್ಕನೇ ಸ್ಥಾನದಲ್ಲಿ ಇದೆ. ಜೊತೆಗೆ ವಿಶ್ವದ ಪುಟ್ಟ ಸ್ವತಂತ್ರ ಗಣರಾಜ್ಯ. ಇದರ ಮತ್ತೊಂದು ವಿಶೇಷತೆ ಅಂದ್ರೆ ವಿಶ್ವದ ರಾಜಧಾನಿಯೇ ಇಲ್ಲರಿರುವಂತಹ ಏಕೈಕ ರಾಷ್ಟ್ರ. 21 ಚದುರ ಕಿ.ಮೀ ವಿಸ್ತಿರ್ಣವುಳ್ಳ ನೌರುವಿನ ಜನಸಂಖ್ಯೆ ಸುಮಾರು 13500. 19ನೇ ಶತಮಾನದ ಕೊನೆಯಲ್ಲಿ ನೌರು ಜರ್ಮನಿಯ ವಸಹಾತು ಕೇಂದ್ರವಾಗಿತ್ತು.
ವಿಶ್ವಯುದ್ದದ ಸಮಯದಲ್ಲಿ ಜಪಾನ್ ನೌರುವನ್ನು ಆಕ್ರಮಿಸಿತು. ನಂತರ ಜಂಟಿ ಆಡಳಿತಕ್ಕೆ ಒಳಪಟ್ಟಿತ್ತು. 1968ರಲ್ಲಿ ನೌರು ಸಂಪೂರ್ಣ ಸ್ವಾತಂತ್ರವನ್ನು ಪಡೆದುಕೊಂಡಿದ್ದರ ಬಗ್ಗೆ ಉಲ್ಲೇಖವಿದೆ. ಇದೊಂದು  ಫಾಸ್ಪೇಟ್ ಶಿಲೆಯಿರುವಂತಹ  ದ್ವೀಪ. ಆರಂಭದ ದಿನಗಳಲ್ಲಿ ನೌರು ಶ್ರೀಮಂತ ರಾಷ್ಟ್ರವಾಗಿತ್ತು. ಆರ್ಥಿಕ ಮುಗ್ಗಟ್ಟಿನಿಂದ ಈಗ ಬಡರಾಷ್ಟ್ರಗಳ ಸಾಲಿನಲ್ಲಿ ನಿಂತಿದೆ. ಇಂದು ಆಸ್ಟ್ರೇಲಿಯಾದಿಂದ ದೊರೆಯುವ ಸಹಾಯಧನವೇ ನೌರುಗೆ ಮುಖ್ಯ ಆಧಾರ. 

03. ಮೊನಾಕೊ 


ಜಗತ್ತಿನ ಅತ್ಯಂತ ಚಿಕ್ಕರಾಷ್ಟ್ರಗಳ ಸಾಲಿನಲ್ಲಿ ಮೊಲಾಕೊದು ಮೂರನೇ ದೊಡ್ಡ ಸ್ಥಾನ. 1.95 ಚದುರ ಕಿ.ಮೀ ಭೂ ಪ್ರದೇಶವನ್ನು ಹೊಂದಿರುವಂತಹ ಈ ದೇಶದಲ್ಲಿ 2007ರ ಜನಗಣತಿಯ ಪ್ರಕಾರ 32671 ಜನರು ಇಲ್ಲಿ ವಾಸ ಮಾಡುತ್ತಿದ್ದಾರೆ. ಈ ರಾಷ್ಟ್ರವು 1997ರಲ್ಲಿ ಸ್ವಾತಂತ್ಯ ಪಡೆದಿದ್ದು ಸಾಂವಿಧಾನಿಕ ಅರಸೊತ್ತಿಗೆ ಆಡಳಿತವನ್ನು ಇದು ಹೊಂದಿದೆ. 
ಮೊನಾಕೊ ಇದರ ರಾಜದಾನಿಯಾಗಿದ್ದು ಪ್ರಮುಖ ಆರ್ಥಿಕ ಚಟುವಟಿಕೆ ಕೇಂದ್ರವಾಗಿದೆ. ಇದರ ಮೂಲಕವಾಗಿಯೇ ವ್ಯಾಪಾರೋದ್ಯಮ ಮತ್ತು ಪ್ರವಾಸೋದ್ಯಮದ ಬೆಳವಣಿಗೆ ಇದಕ್ಕೆ ಪೂರಕವಾಗಿದೆ. ಅತ್ಯಂತ ಕಡಿಮೆ ಜನಸಾಂದ್ರತೆಯುಳ್ಳ ಪ್ರದೇಶಗಳಲ್ಲಿ ಇದು ಕೂಡ ಒಂದಾಗಿದೆ. ಮಾಂಟೆ ಕಾರ್ಲೋ ಇಲ್ಲಿನ ಪ್ರಮುಖ ದೊಡ್ಡ ನಗರವಾಗಿ ಬೆಳೆದಿದೆ ಮತ್ತು ಫ್ರೆಂಚ್ ಭಾಷೆಯನ್ನ ಇಲ್ಲಿನ ಅಧಿಕೃತ ಭಾಷೆಯಾಗಿ ಬಳಸುತ್ತಾರೆ. 

02. ವ್ಯಾಟಿಕನ್ ನಗರ  


ವ್ಯಾಟಿಕನ್ ನಗರ ಕ್ರೈಸ್ತರ ಪ್ರಮುಖ ಧಾರ್ಮಿಕ ಸ್ಥಳಗಳಲ್ಲಿ ಒಂದು. ಕ್ರಿಶ್ಚಿಯನ್ನರ ಧರ್ಮಗುರು ಪೋಪ್ ನೆಲೆಸಿರುವಂತಹ ಸ್ಥಳ. ರೋಮ್ ನಗರದ ಮಧ್ಯಭಾಗದಲ್ಲಿ ಇರುವಂತಹ ವ್ಯಾಟಿಕನ್ ನಗರವು, ಸ್ವತಂತ್ರ ದೇಶವಾಗಿದೆ. ಮತ್ತು ಪ್ರಪಂಚದಲ್ಲಿಯೇ ಅತ್ಯಂತ ಎರಡನೇ ಚಿಕ್ಕ ರಾಷ್ಟ್ರ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಈ ನಗರದ ಅಧಿಕಾರವನ್ನು ಹೋಲಿ ಸೀ ಎಂಬ ರೋಮನ್ ಕ್ಯಾಥೋಲಿಕ್ ಚರ್ಚ್ ಪೀಠವು ನಡೆಸುತ್ತದೆ. ಈ ದೇಶದ ನಾಯಕತ್ವ ಮತ್ತು ಆಡಳಿತವನ್ನು ಮತ್ತು ಪೋಪ್ ಅವರಿಗೆ ನೀಡಲಾಗಿದೆ.
ಈ ನಗರದ ಮಧ್ಯಭಾಗದಲ್ಲಿ ತೆರೆದ ಕ್ರೈಸ್ತ ಧರ್ಮ ಗುರುಗಳು ಇರುವ ದೇವಾಲಯವಿದೆ. ಇದು ಪ್ರಪಂಚಲ್ಲಿಯೇ ಅತಿ ದೊಡ್ಡ ಕ್ರೈಸ್ತ ದೇವಾಲಯ. ಈ ದೇವಾಲಯದ ಧರ್ಮ ಪ್ರವರ್ತಕ ಸಂತ ಪೀಟರ್ ಅವರ ಸಮಾಧಿಯ ಮೇಲೆ ನಿರ್ಮಿಸಲ್ಪಟ್ಟಿದೆ. ಇಷ್ಟೆ ಅಲ್ಲದೆ ವ್ಯಾಟಿಕನ್ ಸಿಟಿಯಲ್ಲಿ ಮೈಕೆಲೆಚಿಜಲೋ ಮತ್ತಿತರರು ರಚಿಸಿದ ಕಲಾಕೃತಿಗಳನ್ನ ಸಂಗ್ರಹ ಹಾಗೂ ವೈವಿದ್ಯ ಶೈಲಿಯ ಕಟ್ಟಡಗಳ ವಿನ್ಯಾಸಗಳನ್ನು ಇಲ್ಲಿ ಕಾಣಬಹುದು. 
01. ಸೀಲ್ಯಾಂಡ್  

ಸೀಲ್ಯಾಂಡ್ ಪ್ರಪಂಚದ ಅತ್ಯಂತ ಚಿಕ್ಕ ರಾಷ್ಟ್ರ. ಇದರ ವಿಸ್ತೀರ್ಣವನ್ನ ಕೇಳಿದ್ರೆ ನಿಮಗೆ ಆಶ್ಚರ್ಯ ಆಗುತ್ತೆ. ಕೇವಲ 0.004 ಕಿಮೀ ಭೂ ಪ್ರದೇಶವನ್ನು ಹೊಂದಿದೆ. ಅಧಿಕೃತವಾಗಿ ಇಂಗ್ಲಿಷ್ ಭಾಷೆಯನ್ನು ಇಲ್ಲಿ ಮಾತನಾಡುತ್ತಿದ್ದು. ಫ್ರಿನ್ಸ್ ಆಡಳಿತ ವ್ಯವಸ್ಥೆ ಜಾರಿಯಲ್ಲಿದೆ. ಮೈಕೆಲ್ ಬೇಟ್ಸ್ ಆಡಳಿತವನ್ನು ಮಾಡುತ್ತಿದ್ದಾರೆ. ಇದಕ್ಕೆ ಪ್ರತ್ಯೇಕ ಡಾಲರ್ ಇದ್ದು ಸೀಲಂಡ್ ಡಾಲರ್ ಎಂದು ಕರೆಯುತ್ತಾರೆ.
ಉತ್ತರ ಸಮುದ್ರದಿಂದ ಕೇಲವ 12 ಕಿ.ಮೀ ದೂರದಲ್ಲಿರುವ ಸೀಲ್ಯಾಂಡ್ ಪ್ರದೇಶವು ಇಂಗ್ಲೆಂಡ್ ಮತ್ತು ಸಫೊಲ್ಕ್ ಒಂದು ಪ್ರಾಂತ್ಯವನ್ನಾಗಿ ಮಾಡಿಕೊಂಡಿತ್ತು. ಯುದ್ದ ವಿಮಾನಗಳ ರಕ್ಷಣೆಗಾಗಿ ಮಹಾಯುದ್ದ ಸಮಯದಲ್ಲಿ ನಿರ್ಮಾಣ ಮಾಡಿಕೊಂಡ ಒಂದು ವೇದಿಕೆ ಈ ಪ್ರದೇಶ. ಇದನ್ನು ಬ್ರಿಟಿಷರು ಹಿಡಿತದಲ್ಲಿ ಇಟ್ಟುಕೊಂಡಿದ್ದರ ಬಗ್ಗೆ ಉಲ್ಲೇಖವಿದೆ ನಂತರದ ದಿನಗಳಲ್ಲಿ ಬದಲಾವಣೆಗಳಾಗಿ. 1967ರಲ್ಲಿ ಸ್ವತಂತ್ರ ದೇಶವಾಗಿ ಘೋಷಣೆಯನ್ನು ಮಾಡಲಾಗಿದೆ.
ಮಂಜುನಾಥ್ ಜೈ
manjunathahr1991@gmail.com


ಕಾಮೆಂಟ್‌ಗಳು

ಕಾಮೆಂಟ್‌‌ ಪೋಸ್ಟ್‌ ಮಾಡಿ

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಪ್ರಪಂಚದ 10 ಎತ್ತರದ ಪರ್ವತಗಳು - 26

ಭಾರತದ 10 ಪ್ರಸಿದ್ಧ ರಾಜರು - 22

ಕರ್ನಾಟಕದ 10 ಸುಂದರ ಬೆಟ್ಟಗಳು - 25