ಪ್ರಪಂಚದ ಬಲಿಷ್ಟ ಹತ್ತು ಭೂ ಸೇನೆ - 18

    ಒಂದು ದೇಶವನ್ನ ರಕ್ಷಣೆ ಮಾಡಿಕೊಳ್ಳದಕ್ಕೆ ಸೇನೆ ತುಂಬಾನೆ ಮುಖ್ಯ ಆಗುತ್ತೆ. ಅದರಲ್ಲಿ ಭೂ ಸೇನೆಯ ಪಾಲು ಹೆಚ್ಚಾಗಿಯೇ ಇರುತ್ತೆ. ಪ್ರಪಂಚದ ಬಲಿಷ್ಟ ಭೂ ಸೇನೆಯನ್ನ ನಾವು ಇವತ್ತು ತೋರಿಸ್ತಾ ಇದಿವಿ. ಯಾವ ದೇಶ ಮೊದಲ ಸ್ಥಾನದಲ್ಲಿ ಇದೆ. ಯಾವ ದೇಶ ಕೊನೆ ಸ್ಥಾನದಲ್ಲಿ ಇದೆ. ಭಾರತಕ್ಕೆ ಇಲ್ಲಿ ಸ್ಥಾನ ಇದೆಯಾ ಇದೆಲ್ಲರ ಬಗ್ಗೆ ಒಂದು ವರದಿ ಇಲ್ಲಿದೆ.

10. ಫ್ರೆಂಚ್ ಸೈನ್ಯ   
ಫ್ರೆಂಚ್ ಸೈನ್ಯ

ಫ್ರೆಂಚ್ ಸೈನ್ಯ ಪ್ರಪಂಚದ ಬಲಿಷ್ಟ ಭೂ ಸೇನೆಯಲ್ಲಿ ಹತ್ತನೇ ಸ್ಥಾನವನ್ನು ಪಡೆದುಕೊಂಡಿದೆ. ಈ ಸೇನೆಯಲ್ಲಿ 1.21.000 ಸಕ್ರಿಯ ಭೂ ಪಡೆಗಳು. 420 ಯುದ್ಧ ಟ್ಯಾಂಕರ್‍ಗಳು, 6.800 ಯುದ್ದಕ್ಕೆ ಸನ್ನದವಾದ ಶಸ್ತ್ರ ಸಜ್ಜಿತದ ವಾಹನಗಳು. ಸ್ವಯಂ ಚಾಲಿತವಾಗಿ ನಿಭಾಯಿಸಬಲ್ಲ 330 ಬಂದೂಕುಗಳು, 45 ಮಲ್ಟಿಪಲ್ ಲಾಂಚ್ ರಾಕೆಟ್ ಸಿಸ್ಟಮ್, 230  ಎಳೆದ ಪಿರಂಗಿ ಮತ್ತು  330 ಹೆಲಿಕ್ಯಾಪ್ಟರ್ಸ್ ಈ ದೇಶದ ಸೈನ್ಯ ಬಲ.
ಫ್ರಂಚ್ ಸೇನೆಯು ಇತಿಹಾಸಲ್ಲಿ ತನ್ನದೆ ಆದ ಹೆಸರನ್ನು ಮುದ್ರೆ ಹೊತ್ತಿದೆ. ಆರಂಭದ ನೂರು ವರ್ಷಗಳ ಯುದ್ಧದಿಂದ ಹಿಡಿದು ಮಧ್ಯ ಆಫ್ರಿಕಾದ ಗಣರಾಜ್ಯ ಸಂಘರ್ಷದಲ್ಲಿ ಇದರ ಭಾಗವಹಿಸುವಿಕೆ ಇರೋದನ್ನ ಕಾಣ್ಬೋದು. ಪ್ರಪಂಚದ ಎರಡು ಮಹಾ ಯುದ್ದಗಳಲ್ಲಿ ಇದರ ಛಾಯೆ ಕಂಡು ಬರುತ್ತೆ. ಆರಂಭದ ದಿನಗಳನ್ನ ಹೋಲಿಸಕೊಂಡರೆ ಫ್ರೆಂಚ್ ಸೇನೆಯು ಅಗ್ರ ಸ್ಥಾನವನ್ನು ಅಲಕರಿಸಬೇಕಿತ್ತು. ಆಂತರಿಕ ಕಲಹ ಮತ್ತು ಆರ್ಥಿಕ ಸಮಸ್ಯೆಯಿಂದ ಹತ್ತನೆ ಸ್ಥಾನಕ್ಕೆ ಇಳಿದಿದೆ.

ಪಾಕಿಸ್ತಾನಿ ಸೈನ್ಯ  09. ಪಾಕಿಸ್ತಾನಿ ಸೈನ್ಯ  

ಭಯೋತ್ಪಾದಕರನ್ನು ಬೆಳೆಸುತ್ತಿರುವ ರಾಷ್ಟ್ರ ಎಂಬ ಹಣೆ ಪಟ್ಟಿಯನ್ನು ಕಟ್ಟಿಕೊಂಡು ಪ್ರಪಂಚದ ಕೆಂಗಣ್ಣಿಗೆ ಗುರಿಯಾಗಿರುವ ದೇಶ ಪಾಕಿಸ್ತಾನ 1947ರಲ್ಲಿ ಭಾರತದಿಂದ ವಿಭಜನೆಗೊಂಡು ಅಂದಿನಿಂದ ಇಂದಿನವರೆಗೂ ಅದರೊಟ್ಟಿಗೆ ಕದನವಾಡುತ್ತಾ ಬಂದಿದೆ. ಇಂಡೋ ಪಾಕ್ ಸಮರದಿಂದ ಆರಂಭವಾದ ಇದರ ದೇಶ ರಕ್ಷಣಾ ಹೊಣೆ ಕೊನೆಯ ಬಲೂಚಿಸ್ಥಾನ ಸಂಘರ್ಷದವರೆಗೂ ಮುಂದುವರೆದುಕೊಂಡು ಬಂದಿದೆ. ಪ್ರಪಂಚದ ಬಲಿಷ್ಟ ಭೂ ಸೇನೆಯನ್ನು ಹೊಂದಿರುವ 9 ನೇ ರಾಷ್ಟ್ರವಾಗಿ ಪಾಕಿಸ್ತಾನ ಹೊರಹೊಮ್ಮಿದೆ.
ಪಾಕಿಸ್ಥಾನದ ಸೈನ್ಯದಲ್ಲಿ 5.40.000 ಸಕ್ರಿಯ ಭೂ ಪಡೆಗಳು, 2.930 ಟ್ಯಾಂಕರ್‍ಗಳು, 2.830 ಶಸ್ತ್ರ ಸಜ್ಜಿತವಾದ ಹೋರಾಟಕ್ಕೆ ನಿಂತರುವ ವಾಹನಗಳಿವೆ. 460 ಸ್ವಯಂ ಚಾಲಿತ ಬಂದೂಕುಗಳು ಈ ರಾಷ್ಟ್ರದ ಸೈನ್ಯದಲ್ಲಿವೆ. 134 ಮಲ್ಟಿಪಲ್ ಲಾಂಚ್ ರಾಕೆಟ್ ಸಿಸ್ಟಮ್ ಹೊಂದಿದೆ ಪಾಕಿಸ್ತಾನ. 3300 ಎಳೆದ ಪಿರಂಗಿಗಳಿವೆ ಮತ್ತು ಸೈನ್ಯಕ್ಕೆ ಬಳಸುವಂತಹ 230 ಹೆಲಿಕಾಪ್ಟರ್‍ಗಳು ಈ ದೇಶದ ಪ್ರಭಲ ಸೈನ್ಯ ಶಕ್ತಿಯಾಗಿವೆ.

08. ದಕ್ಷಿಣ ಕೊರಿಯಾದ ಸೈನ್ಯ 
ದಕ್ಷಿಣ ಕೊರಿಯಾದ ಸೈನ್ಯ


1948ರಲ್ಲಿ ಉತ್ತರ ಕೊರಿಯಾ ಮತ್ತು ದಕ್ಷಿಣ ಕೊರಿಯಾ ದೇಶವಾಗಿ ವಿಭಜನೆಯಾದ ಈ ಎರಡು ರಾಷ್ಟ್ರಗಳು ಸೈನ್ಯ ಶಕ್ತಿಯಲ್ಲಿ ಒಂದನ್ನೊಂದು ಉಗ್ರವಾಗಿ ದ್ವೇಶಿಸುವಂತೆ ಬೆಳೆದು ನಿಂತಿವೆ. 18 ವಯಸ್ಸಿಗೆ ಕಾಲಿಟ್ಟ ಪ್ರತಿಯೊಬ್ಬ ಪುರುಷನಿಗೂ ಸೇನೆಗೆ ಸೇರುವುದು ಕಡ್ಡಾಯ. ಎಂಬ ನಿಯಮವನ್ನು ಇಲ್ಲಿ ಅನುಸರಿಸಲಾಗುತ್ತೆ. ಪ್ರಪಂಚದ ಶಕ್ತಿ ಶಾಲಿ ರಾಷ್ಟ್ರಗಳ ಸಾಲಿನಲ್ಲಿರುವ ಈ ದೇಶ ಇತ್ತಿಚೆಗೆ ಅಶ್ವಸ್ತ್ರ ಪ್ರಯೋಗ ಮತ್ತು ಶಸ್ತ್ರಾಸ್ತ್ರಗಳ ಸಂಗ್ರಹವನ್ನು ಹೆಚ್ಚಾಗಿ ಮಾಡುತ್ತಿದೆ.
ದಕ್ಷಿಣ ಕೊರಿಯಾ ದೇಶವು 5.20.000 ಸಕ್ರಿಯ ಭೂ ಪಡೆಗಳನ್ನು ಹೊಂದಿದೆ. ಸುಮಾರು 2.400 ಯುದ್ದ ಟ್ಯಾಂಕರ್‍ಗಳು ಇದರ ಬಳಿ ಇವೆ. ಶಸ್ತ್ರ ಸಜ್ಜಿತವಾದ 2.660 ಯುದ್ದ ವಾಹನಗಳು. 220 ಮಲ್ಟಿಪಲ್ ಲಾಂಚ್ ರಾಕೆಟ್ ಸಿಸ್ಟಮ್, ಸ್ವಯಂ ಚಾಲಿತ 1990 ಬಂದೂಕುಗಳು ಮತ್ತು 5.400 ಎಳೆದ ಪಿರಂಗಿಗಳು ಹಾಗೂ 570 ಯುದ್ದ ಹೆಲಿಕಾಪ್ಟರ್‍ಗಳು ಈ ದೇಶದ ಸೈನಿಕ ಶಕ್ತಿಯಲ್ಲಿ ಒಂದಾಗಿದೆ. 

07. ಇಸ್ರೆಲ್ ಸೈನ್ಯ 
 ಇಸ್ರೆಲ್ ಸೈನ್ಯ


ಇಸ್ರೆಲ್ ಸೈನ್ಯದಲ್ಲಿ 1.55.000 ಸಕ್ರಿಯ ಪಡೆಗಳು ಕಾರ್ಯನಿರ್ವಹಿಸುತ್ತಿವೆ. 4.210 ಯುದ್ದ ಟ್ಯಾಂಕರ್‍ಗಳು, ಶಸ್ತ್ರ ಸಜ್ಜಿತವಾದ 10.200 ಯುದ್ದ ವಾಹನಗಳು, 660 ಸ್ವಯಂ ಚಾಲಿತ ಬಂದೂಕುಗಳು, 110 ಮಲ್ಟಿಪಲ್ ಲಾಂಚ್ ರಾಕೆಟ್ ಸಿಸ್ಟಮ್, 300 ಎಳೆದ ಪಿರಂಗಿಗಳು, 120 ಯುದ್ಧ ವಿಮಾನಗಳು ಇಸ್ರೇಲ್ ಸೈನ್ಯ ಬಲವನ್ನು ಹೆಚ್ಚಿಸಿವೆ.
ಇಸ್ರೇಲ್ ಏರೋಸ್ಪೇಲ್ ಇಂಡಸ್ಟ್ರೀಸ್, ಇಸ್ರೇಲ್ ಮಿಲಿಟರಿ ಉದ್ಯಮಗಳು, ಇಸ್ರೇಲ್ ವೆಪನ್ ಇಂಡಸ್ಟ್ರೀಸ್ ಸೇರಿದಂತೆ ಮೊದಲಾದ ಕಂಪನಿಗಳ ಮೂಲಕ ಸ್ವದೇಶಿಯವಾಗಿ ಯುದ್ದೋಪಕರಣಗಳ ಉತ್ಪಾದನೆಯನ್ನು ಮಾಡುತ್ತಿದೆ. 1948-1949ರಲ್ಲಿ ನಡೆದ ಸ್ವಾತಂತ್ರ್ಯ ಸಮರದಿಂದ ಆರಂಭವಾದ ಇದರ ಸೈನ್ಯದ ಶಕ್ತಿ 2014ರ ಸುರಕ್ಷಾ ಎಡ್ಜ್‍ವರೆಗೆ ನಡೆದಿದೆ. ಮುಂದುವರೆದ ಮತ್ತು ಮುಂದುವರೆಯುತ್ತಿರುವ ರಾಷ್ಟ್ರಗಳ ಸಾಲಿನಲ್ಲಿ ಇಸ್ರೇಲ್ ತನ್ನ ಸೈನ್ಯ ಶಕ್ತಿಯನ್ನು ತೋರಿಸಿದೆ.

06. ಟರ್ಕಿಶ್ ಭೂ ಸೇನೆ   
ಟರ್ಕಿಶ್ ಭೂ ಸೇನೆ


ಟರ್ಕಿಶ್ ಭೂ ಸೇನೆಯು ಇತಿಹಾಸದ ಪುಟಗಳಲ್ಲಿ ನೆನಪಿನಲ್ಲಿ ಇಟುವಂತಹ ಯುದ್ದಗಲ್ಲಿ ಭಾಗವಹಿಸಿ ತನ್ನ ಶಕ್ತಿ ಸಾಮಥ್ರ್ಯವನ್ನು ಜಗತ್ತಿಗೆ ಸಾರಿದೆ. ಸ್ವಾತಂತ್ರ್ಯ ಸಂಗ್ರಾಮದಿಂದ ಆರಂಭಗೊಂಡು ಆಪರೇಷನ್ ಯೂಫ್ರಟಿಸ್ ಶೀಲ್ಡ್‍ವರಗಿನ ಯುದ್ದಗಳಲ್ಲಿ ಗಮನಾರ್ಹವಾದ ಸಾಧನೆಯನ್ನು ಮಾಡಿದೆ. ಗಡಿ ಭದ್ರತೆ ಮತ್ತು ಆಂತರಿಕ ಶಾಂತಿ ಕಾಪಾಡುವಲ್ಲಿ ಹೆಚ್ಚು ಮನ್ನಣೆ ಪಡೆದಿದೆ.
3.15.000 ಸಕ್ರಿಯ ಭೂ ಪಡೆಗಳು ಟರ್ಕಿಶ್ ಸೇನೆಯಲ್ಲಿವೆ. 3.800 ಸುಸಜ್ಜಿತ ಯುದ್ದ ಟ್ಯಾಂಕರ್‍ಗಳು, ಶಸ್ತ್ರಸಜ್ಜಿತ 7.550 ಯುದ್ದ ವಾಹನಗಳು, 811 ಮಲ್ಟಿಪಲ್ ಲಾಂಚ್ ರಾಕೆಟ್ ಸಿಸ್ಟಮ್‍ಗಳು, 1010 ಸ್ವಯಂ ಚಾಲಿತ ಬಂದೂಕುಗಳು, 700 ಎಳೆದ ಪಿರಂಗಿಗಳು ಮತ್ತು 400 ಸುಸಜ್ಜಿತ ಹೆಲಿಕಾಪ್ಟರ್‍ಗಳು ಟರ್ಕಿಶ್ ಭೂ ಸೇನೆಯಲ್ಲಿವೆ.

ಕೊರಿಯನ್ ಪೀಪಲ್ಸ್ ಆರ್ಮಿ ಗ್ರೌಂಡ್ ಫೋರ್ಸ್  05. ಕೊರಿಯನ್ ಪೀಪಲ್ಸ್ ಆರ್ಮಿ ಗ್ರೌಂಡ್ ಫೋರ್ಸ್  

ಡೆಮಾಕ್ರಟೆಕ್ ಪೀಪಲ್ಸ್ ರಿಪಬ್ಲಿಕ್ ಆಫ್ ಕೊರಿಯಾ ದೇಶದ ಶಕ್ತಿ ಕೊರಿಯನ್ ಪೀಪಲ್ಸ್ ಆರ್ಮಿ ಗ್ರೌಂಡ್ ಫೋರ್ಸ್ ಇದನ್ನ ಆಗಸ್ಟ್ 20 1947ರಲ್ಲಿ ಸ್ಥಾಪನೆಯನ್ನ ಮಾಡಲಾಗಿದೆ. ಭೂ ಸೇನೆಯ ಮಿಲಿಟರಿ ಆಧಾರಿತ ಕಾರ್ಯಗಳನ್ನ ಇದು ಮಾಡುತ್ತೆ. ದಕ್ಷಿಣ ಕೊರಿಯ ಮತ್ತು ಉತ್ತರ ಕೊರಿಯ ನಡುವಿನ ವೈಮನಸ್ಸು, ಅಣ್ವಸ್ತ್ರ ಮತ್ತು ಹೊಸ ತಂತ್ರ ಜ್ಞಾನದ ಯುದ್ದೋಪಕರಣಗಳನ್ನ ಹೊಂದುವಂತೆ ಮಾಡಿದೆ. ಶಕ್ತಿ ಶಾಲಿ ರಾಷ್ಟ್ರಗಳ ಸಾಲಿನಲ್ಲಿ 5 ನೇ ಸ್ಥಾನವನ್ನು ಪಡೆದುಕೊಂಡಿದೆ.
ಉತ್ತರ ಕೊರಿಯ ಸೈನ್ಯದಲ್ಲಿ ಮಹಿಳಾ ಸೈನಿಕರನ್ನು ಕೂಡ ಕಾಣ್ಬೋದು ಇದರಲ್ಲಿ 9.50.000 ಭೂ ಪಡೆಗಳು. 5.200 ಯುದ್ಧ ಟ್ಯಾಂಕರ್‍ಗಳು, ಶಸ್ತ್ರ ಸಜ್ಜಿತ 4.100 ಯುದ್ದ ವಾಹನಗಳು. 2.400 ಮಲ್ಟಿಪಲ್ ಲಾಂಚ್ ರಾಕೆಟ್ ಸಿಸ್ಟಮ್‍ಗಳು, 2.250 ಸ್ವಯಂ ಚಾಲಿತ ಬಂದೂಕುಗಳು, 4.300 ಎಳೆದ ಪಿರಂಗಿಗಳು ಮತ್ತು 110 ಯುದ್ದ ವಿಮಾನಗಳು, ಕೊರಿಯನ್ ಪೀಪಲ್ಸ್ ಆರ್ಮಿ ಗ್ರೌಂಡ್ ಫೋರ್ಸ್‍ನ ಬತ್ತಳಿಕೆಯಲ್ಲಿವೆ.

04. ಭಾರತೀಯ ಭೂ ಸೇನೆ  
 ಭಾರತೀಯ ಭೂ ಸೇನೆ


ಏಪ್ರಿಲ್ 1 1895ರಲ್ಲಿ ಸ್ಥಾಪಿತವಾದ ಭೂ ಸೇನೆ ಭಾರತೀಯ ಸಶಸ್ತ್ರ ದಳದ ಅತಿ ದೊಡ್ಡ ವಿಭಾಗ. ಭಾರತೀಯ ಭೂಸೇನೆಯು ನೆಲದ ಮೇಲಿನ ಸೈನಿಕ ಕಾರ್ಯಚರಣೆಗಳನ್ನು ನಿರ್ವಹಿಸುತ್ತೆ. ರಾಷ್ಟ್ರೀಯ ಭದ್ರತೆ, ಬಾಹ್ಯ ಆಕ್ರಮಣ ಹಾಗೂ ಅಪಾಯಗಳಿಂದ ಭಾರತದ ರಕ್ಷಣೆ ಹಾಗೂ ತನ್ನ ಸರಹದ್ದಿನ ಒಳಗೆ ಶಾಂತಿ ಹಾಗೂ ಭದ್ರತೆಯನ್ನು ಕಾಪಾಡುವುದು ಇದರ  ಗುರಿಗಳಲ್ಲಿ ಒಂದಾಗಿದೆ.
ಭಾರತೀಯ ಭೂ ಸೇನೆಯಲ್ಲಿ 12.00.000 ಸೈನಿಕರು, ಸುಮಾರು 6.400 ಯುದ್ದ ಟ್ಯಾಂಕರ್‍ಗಳು ಭಾರತದ ಶಕ್ತಿ ಎನಿಸಿವೆ, 6.700 ಶಸ್ತ್ರ ಸಜ್ಜಿತ ವಾಹನಗಳು, 310 ಮಲ್ಟಿಪಲ್ ಲಾಂಚ್ ರಾಕೆಟ್ ಸಿಸ್ಟಮ್‍ಗಳು ಭಾರತೀಯ ಸೈನ್ಯದ ಭಾಗವಾಗಿವೆ, 7.420 ಎಳೆದ ಪಿರಂಗಿಗಳು. ಮತ್ತು 290 ಸ್ವಯಂ ಚಾಲಿತ ಬಂದೂಕುಗಳು ಹಾಗೂ 470 ಶಸ್ತ್ರ ಸಜ್ಜಿತ ಯುದ್ದ ಹೆಲಿಕಾಪ್ಟರ್‍ಗಳು ಭಾರತೀಯ ಸೈನ್ಯವನ್ನ ಬಲಿಷ್ಠಗೊಳಿಸಿವೆ.

ಚೀನಾದ ಭೂ ಸೇನೆ   03. ಚೀನಾದ ಭೂ ಸೇನೆ   

ಪೀಪಲ್ಸ್ ಲಿಬರೇಶನ್ ಆರ್ಮಿ ಗ್ರೌಂಡ್ ಫೋರ್ಸ್ ಚೀನಾದಲ್ಲಿನ ಸೇನೆಯ ಬಹುದೊಡ್ಡ ಅಸ್ತ್ರ. ಚೀನಿ ಸಶಸ್ತ್ರ ಪಡೆಯ ದೊಡ್ಡ ಶಾಖೆ. ಪ್ರಪಂಚದ ಶಕ್ತಿ ಶಾಲಿ ರಾಷ್ಟ್ರಗಳ ಸಾಲಿನಲ್ಲಿ ನಾಲ್ಕನೇ ಸ್ಥಾನದಲ್ಲಿರುವ ಈ ದೇಶವು. 1937ರಿಂದ 1945ರಲ್ಲಿ ನಡೆದ ವಿಶ್ವದ ಎರಡನೇ ಮಹಾಯುದ್ದದಲ್ಲಿ ಭಾಗವಹಿಸಿದ ಹೆಮ್ಮೆ ಇದಕ್ಕಿದೆ. ಕೊನೆಯದಾಗಿ ದಕ್ಷಿಣ ಸುಡಾನ್ ಅಂತರ್‍ಯುದ್ದದಲ್ಲಿ ಇದರ ಭಾಗವಹಿಸಿದೆ.
16.00.000 ಭೂ ಪಡೆಯನ್ನು ಹೊಂದಿದೆ ಚೀನಾ ಸಾಮ್ರಾಜ್ಯ. 9.100 ಯುದ್ದ ಟ್ಯಾಂಕರ್ ಇದರ ಸೈನ್ಯದಲ್ಲಿದೆ. ಸುಸಜ್ಜಿತ 4.800 ಯುದ್ದ ವಾಹನಗಳು. ಸ್ವಯಂ ಚಾಲಿತವಾಗಿ ನಿರ್ವಹಿಸಬಲ್ಲ 1.710 ಗನ್‍ಗಳು ಇದರಲ್ಲಿವೆ. 6.250 ಎಳೆದ ಪಿರಂಗಿಗಳು, 1770 ಮಲ್ಟಿಪಲ್ ಲಾಂಚ್ ರಾಕೆಟ್ ಸಿಸ್ಟಮ್ ಮತ್ತು 620 ಬಲಿಷ್ಠವಾದ ಯುದ್ದ ಹೆಲಿಕಾಪ್ಟರ್‍ಗಳು ಚೀನಾದ ರಕ್ಷಣೆಗೆ ನಿಂತಿವೆ.

02. ಅಮೇರಿಕಾ ಸಂಯುಕ್ತ ಸಂಸ್ಥಾನದ ಸೈನ್ಯ   
 ಅಮೇರಿಕಾ ಸಂಯುಕ್ತ ಸಂಸ್ಥಾನದ ಸೈನ್ಯ


ಅಮೇರಿಕಾ ಸಂಯುಕ್ತ ಸಂಸ್ಥಾನದ ಸೈನ್ಯವು ಸಂಯುಕ್ತ ಸಂಸ್ಥಾನದ ಸಶಸ್ತ್ರ ಪಡೆಗಳೊಂದು ಶಾಖೆ. ಇದು ಅಮೇರಿಕಾ ಸೈನ್ಯದ ಅತ್ಯಂತ ದೊಡ್ಡ ಮತ್ತು ಹಳೆಯ ಸ್ಥಾಪಿತ ಶಾಖೆಯಾಗಿದೆ. ಅಮೇರಿಕಾ ಸಂಯುಕ್ತ ಸಂಸ್ಥಾನ ಸ್ಥಾಪನೆಯಾಗುವ ಮೊದಲೆ ಅಮೇರಿಕಾ ಕ್ರಾಂತಿಕಾರಕ ಯುದ್ದಗಳ ಬೇಡಿಕೆಗಳನ್ನು ಸರಿಗಟ್ಟಲು ಈ ಸೈನ್ಯವನ್ನು ಸ್ಥಾಪನೆ ಮಾಡಲಾಗಿತ್ತು. ರಾಷ್ಟ್ರೀಯ ಭದ್ರತೆ ಮತ್ತು ರಕ್ಷಣಾ ನೀತಿಗೆ ಬೆಂಬಲವಾಗಿ ಅಗತ್ಯವಿರುವಷ್ಟು ಸೇನಾಬಲವನ್ನು ಒದಗಿಸುತ್ತದೆ.
ಅಮೇರಿಕಾವು 6.20.000 ಭೂ ಸೈನಿಕರು. 9.000 ಯುದ್ದ ಟ್ಯಾಂಕರ್. 41.000 ಶಸ್ತ್ರ ಸಜ್ಜಿತ ವಾಹನಗಳನ್ನು ಹೊಂದಿದೆ. 1.130 ಮಲ್ಟಿಪಲ್ ಲಾಂಚ್ ರಾಕೆಟ್ ಸಿಸ್ಟಮ್‍ಗಳು. 1.940 ಸ್ವಯಂ ಚಾಲಿತ ಗನ್‍ಗಳು ಅಮೇರಿಕಾದ ಶಸ್ತ್ರದ ಭಾಗವಾಗಿದೆ. 1.130 ಎಳೆದ ಪಿರಂಗಿಗಳು ಮತ್ತು 3.350 ಯುದ್ದ ಹೆಲಿಕಾಪ್ಟರ್‍ಗಳು ಅಮೇರಿಕಾದ ರಕ್ಷಣೆಗೆ ಕಾವಲಾಗಿವೆ.

01. ರಷ್ಯಾದ ಭೂ ಸೇನೆ   
ರಷ್ಯಾದ ಭೂ ಸೇನೆ


ರಷ್ಯಾದ ಭೂ ಸೇನೆ ಪ್ರಪಂಚದ ಹೆಚ್ಚು ಶಸ್ತ್ರಾಸ್ತ್ರಗಳನ್ನು ಹೊಂದಿರುವ ಮತ್ತು ಬಲಿಷ್ಟ ದೇಶಗಳ ಸಾಲಿನಲ್ಲಿ ಮೊದಲನೆಯ ಸಾಲಿನಲ್ಲಿ ನಿಲ್ಲುತ್ತೆ. ಇದು ಬರೀ ರಷ್ಯಾ ಒಕ್ಕೂಟ ರಾಷ್ಟ್ರಗಳಲ್ಲಿ ಮಾತ್ರವಲ್ಲ ತನ್ನ ಸ್ನೇಹ ಸಂಬಂದಿ ರಾಷ್ಟ್ರಗಳಿಗೂ ಸಹಾಯವನ್ನು ನೀಡುತ್ತಾ ಶಾಂತಿ ನೆಲೆಸುವಂತೆ ಮಾಡುತ್ತೆ. ಅನೇಕ ರಾಷ್ಟ್ರಗಳಲ್ಲಿ ಶಾಂತಿ ಕಾಪಾಡಿದ ಹೆಗ್ಗಳಿಕೆ ರಷ್ಯಾ ಭೂ ಸೇನೆಗೆ ಸಲ್ಲುತ್ತೆ. 1992ರಿಂದ ಸಕ್ರಿಯವಾಗಿ ಕಾರ್ಯ ನಿರ್ವಹಿಸುತ್ತಿದೆ.
ರಷ್ಯಾ ದೇಶದ ಸೈನ್ಯದಲ್ಲಿ 5.10.000 ಸಕ್ರಿಯ ಭೂ ಸೇನಾ ಪಡೆಗಳು, 15.400 ಯುದ್ದ ಟ್ಯಾಂಕರ್‍ಗಳು, ಶಸ್ತ್ರಸಜ್ಜಿತ 31.300 ಯುದ್ದ ವಾಹನಗಳು, ಸ್ವಯಂಚಾಲಿತ 5.970 ಬಂದೂಕುಗಳು, 4.630 ಎಳೆದ ಪಿರಂಗಿಗಳು ಮತ್ತು ಸುಮಾರು 700 ಹೆಲಿಕಾಪ್ಟರ್‍ಗಳು ರಷ್ಯಾ ದೇಶದ ಬತ್ತಳಿಕೆಯಲ್ಲಿ ಇವೆ. ಪ್ರಪಂಚದ ದೊಡ್ಡ ರಾಷ್ಟ್ರಗಳಲ್ಲಿ ಒಂದಾಗಿರುವ ರಷ್ಯಾ ತನ್ನ ರಾಷ್ಟ್ರ ರಕ್ಷಣೆಗೆ ಬೇಕಾದ ಅಗತ್ಯ ಸೈನ್ಯ ವ್ಯವಸ್ಥೆಯನ್ನು ಮಾಡಿಕೊಂಡಿದೆ.

ನಿಮ್ಮ ಅನಿಸಿಕೆ, ಅಭಿಪ್ರಾಯಗಳನ್ನು ಕಾಮೆಂಟ್ ಬಾಕ್ಸ್ ನಲ್ಲಿ  ಬರೆಯಿರಿ
ಮಂಜುನಾಥ್ ಜೈ
manjunathahr1991@gmail.com


ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಪ್ರಪಂಚದ 10 ಎತ್ತರದ ಪರ್ವತಗಳು - 26

ಭಾರತದ 10 ಪ್ರಸಿದ್ಧ ರಾಜರು - 22

ಕರ್ನಾಟಕದ 10 ಸುಂದರ ಬೆಟ್ಟಗಳು - 25