ಕನ್ನಡದ 10 ಹಾರರ್ ಚಿತ್ರಗಳು - 20

ಚಿತ್ರಗಳಲ್ಲಿ ಹಲವಾರು ವಿಧಗಳಿವೆ ಲವ್, ಸೆಂಟಿಮೆಂಟ್, ಆಕ್ಷನ್, ಥ್ರಿಲ್ಲರ್, ಹಾರರ್ ಮೂವಿಗಳನ್ನ ಕಾಣ್ಬೊದು. ಇದರಲ್ಲಿ ಹಾರರ್ ಮೂವಿಗಳಿಗೆ ಅದರದೇ ಆದ ಸ್ಥಾನ ಇದೆ. ಕನ್ನಡ ಚಿತ್ರಗಳಲ್ಲೂ ಹಲವು ಹಾರರ್ ಚಿತ್ರಗಳು ಬಂದಿವೆ. ಭಯ ಹುಟ್ಟಿಸುವಂತಹ 10 ಸಿನಿಮಾಗಳನ್ನ ನಿಮಗೆ ತೋರಿಸ್ತಾ ಇದಿವಿ ನೋಡಿ. 10. 12 ಎ ಎಂ ಮಧ್ಯರಾತ್ರಿ ಭಯ ಹುಟ್ಟಿಸುವಂತಹ ಹಾರರ್ ಸಿನಿಮಾಗಳ ಸಾಲಿನಲ್ಲಿ 10ನೇ ಸ್ಥಾನದಲ್ಲಿ ಇರೋದು 12 ಎ ಎಂ ಮಧ್ಯರಾತ್ರಿ. ಕಾರ್ತಿಕ್ ನಿರ್ದೇಶನದಲ್ಲಿ ಮೂಡಿಬಂದ ಚಿತ್ರ 2012ರಲ್ಲಿ ತೆರೆಕಂಡು ಉತ್ತಮ ಪ್ರದರ್ಶನವನ್ನ ಕಂಡಿತ್ತು. ಅಲೋಕ್ ಕಾಶಿನಾಥ್, ದಿವ್ಯ ಶ್ರೀಧರ್, ಕಾಶಿನಾಥ್ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಈ ಚಿತ್ರಕ್ಕೆ ವಿ. ಮನೋಹರ್ ಸಂಗೀತ ಮತ್ತು ಪ್ರತಿಮ ವಿಜಯ ಕುಮಾರ್ ಬಂಡವಾಳವನ್ನು ಹೂಡಿದ್ದರು. ಒಂದು ಮನೆಯಲ್ಲಿ ನಡೆಯುವ ರೋಮಾಂಚನಕಾರಿ ಥ್ರಿಲ್ಲರ್ ಕಥೆಯನ್ನು ಇಟ್ಟುಕೊಂಡು ನಿರ್ದೇಶಕ ಕಾರ್ತಿಕ್ ಅದ್ಬುತವಾದ ಚಿತ್ರವನ್ನು ಮಾಡಿದ್ದಾರೆ. ಈ ಚಿತ್ರದಲ್ಲಿ ಲವ್ ಇದೆ, ಸೆಂಟಿಮೆಂಟ್ ಇದೆ ಜೊತೆಗೆ ಎಲ್ಲಕ್ಕಿಂತ ಹೆಚ್ಚಾಗಿ ಭಯವನ್ನು ಹುಟ್ಟಿಸುವಂತಹ ಸನ್ನಿವೇಶಗಳು ಚಿತ್ರದಲ್ಲಿವೆ. ಕಾಶಿನಾಥ್ ಮತ್ತು ಅವರ ಮಗ ಅಲೋಕ್ ಕಾಶಿನಾಥ್ ಅದ್ಬುತ ಅಭಿನಯವನ್ನು ಮಾಡಿದ್ದಾರೆ. 09. ಯಾರದು..? 2009ರಲ್ಲಿ ತೆರೆಕಂಡ ಯಾರದು ಚಿತ್ರ ಕನ್ನಡದ ಹಿರಿಯ ನಟಿ ಲೀಲಾವತಿ ಮತ್ತು ವಿನೋದ್ ರಾಜ್ ಸ್ಯಾಂಡಲ್‍ವ್ಯಡ್‍ಗೆ