ಕನ್ನಡದ 10 ಹಾರರ್ ಚಿತ್ರಗಳು - 20

   ಚಿತ್ರಗಳಲ್ಲಿ ಹಲವಾರು ವಿಧಗಳಿವೆ ಲವ್, ಸೆಂಟಿಮೆಂಟ್, ಆಕ್ಷನ್, ಥ್ರಿಲ್ಲರ್, ಹಾರರ್ ಮೂವಿಗಳನ್ನ ಕಾಣ್ಬೊದು. ಇದರಲ್ಲಿ ಹಾರರ್ ಮೂವಿಗಳಿಗೆ ಅದರದೇ ಆದ ಸ್ಥಾನ ಇದೆ. ಕನ್ನಡ ಚಿತ್ರಗಳಲ್ಲೂ ಹಲವು ಹಾರರ್ ಚಿತ್ರಗಳು ಬಂದಿವೆ. ಭಯ ಹುಟ್ಟಿಸುವಂತಹ 10 ಸಿನಿಮಾಗಳನ್ನ ನಿಮಗೆ ತೋರಿಸ್ತಾ ಇದಿವಿ ನೋಡಿ.
10. 12 ಎ ಎಂ ಮಧ್ಯರಾತ್ರಿ 

ಭಯ ಹುಟ್ಟಿಸುವಂತಹ ಹಾರರ್ ಸಿನಿಮಾಗಳ ಸಾಲಿನಲ್ಲಿ 10ನೇ ಸ್ಥಾನದಲ್ಲಿ ಇರೋದು 12 ಎ ಎಂ ಮಧ್ಯರಾತ್ರಿ. ಕಾರ್ತಿಕ್ ನಿರ್ದೇಶನದಲ್ಲಿ ಮೂಡಿಬಂದ ಚಿತ್ರ 2012ರಲ್ಲಿ ತೆರೆಕಂಡು ಉತ್ತಮ ಪ್ರದರ್ಶನವನ್ನ ಕಂಡಿತ್ತು. ಅಲೋಕ್ ಕಾಶಿನಾಥ್, ದಿವ್ಯ ಶ್ರೀಧರ್, ಕಾಶಿನಾಥ್ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಈ ಚಿತ್ರಕ್ಕೆ ವಿ. ಮನೋಹರ್ ಸಂಗೀತ ಮತ್ತು ಪ್ರತಿಮ ವಿಜಯ ಕುಮಾರ್ ಬಂಡವಾಳವನ್ನು ಹೂಡಿದ್ದರು.   ಒಂದು ಮನೆಯಲ್ಲಿ ನಡೆಯುವ ರೋಮಾಂಚನಕಾರಿ ಥ್ರಿಲ್ಲರ್ ಕಥೆಯನ್ನು ಇಟ್ಟುಕೊಂಡು ನಿರ್ದೇಶಕ ಕಾರ್ತಿಕ್ ಅದ್ಬುತವಾದ ಚಿತ್ರವನ್ನು ಮಾಡಿದ್ದಾರೆ. ಈ ಚಿತ್ರದಲ್ಲಿ ಲವ್ ಇದೆ, ಸೆಂಟಿಮೆಂಟ್ ಇದೆ ಜೊತೆಗೆ ಎಲ್ಲಕ್ಕಿಂತ ಹೆಚ್ಚಾಗಿ ಭಯವನ್ನು ಹುಟ್ಟಿಸುವಂತಹ ಸನ್ನಿವೇಶಗಳು ಚಿತ್ರದಲ್ಲಿವೆ. ಕಾಶಿನಾಥ್ ಮತ್ತು ಅವರ ಮಗ ಅಲೋಕ್ ಕಾಶಿನಾಥ್ ಅದ್ಬುತ ಅಭಿನಯವನ್ನು ಮಾಡಿದ್ದಾರೆ.
09. ಯಾರದು..? 

2009ರಲ್ಲಿ ತೆರೆಕಂಡ ಯಾರದು ಚಿತ್ರ ಕನ್ನಡದ ಹಿರಿಯ ನಟಿ ಲೀಲಾವತಿ ಮತ್ತು ವಿನೋದ್ ರಾಜ್ ಸ್ಯಾಂಡಲ್‍ವ್ಯಡ್‍ಗೆ ಮತ್ತೆ ರಿ ಎಂಟ್ರಿ ಮಾಡಿದಂತಹ ಚಿತ್ರ. ಕಂಪ್ಲೀಟ್ ಹಾರರ್ ಮತ್ತು ಥ್ರಿಲ್ಲರ್ ಕಥೆಯನ್ನು ಒಳಗೊಂಡಿರೋ ಈ ಚಿತ್ರ ಸ್ಯಾಂಡಲ್‍ವುಡ್ ಹಾರರ್ ಚಿತ್ರಗಳ ಪಾಲಿಗೆ 9ನೇ ಸ್ಥಾನದಲ್ಲಿ ನಿಲ್ಲುತ್ತೆ. ಹೆಚ್ಚು ಮನರಮಜನೆಯನ್ನು ಕೊಟ್ಟಂತಹ ಚಿತ್ರ ಇದು.  ಶ್ರೀನಿವಾಸ್ ಕೌಶಿಕ್ ನಿರ್ದೇಶನದಲ್ಲಿ ಮೂಡಿಬಂದಂತಹ ಈ ಚಿತ್ರ ಸ್ಯಾಂಡಲ್ ಮಟ್ಟಿಗೆ ದೊಡ್ಡ ಯಶಸ್ಸನ್ನ ಕಾಣದಿದ್ದರು. ಸಿನಿಪ್ರೇಮಿಗಳಿಗೆ ಇಷ್ಟವಾಗಿದ್ದಂತೂ ನಿಜ. ಲೀಡ್ ರೋಲ್‍ನಲ್ಲಿ ಕಾಣಿಸಿಕೊಂಡಿರುವ ವಿನೋದ್ ರಾಜ್ ಸಮಸ್ಯೆಯ ಸುಳಿಯಲ್ಲಿರುವ ಒಂದು ಕುಟುಂಬ ಮತ್ತು ಅಲ್ಲಿನ ಸನ್ನಿವೇಶಗಳನ್ನ ಹೇಗೆ ನಿಭಾಯಿಸುತ್ತಾನೆ ಅನ್ನೋದು ಚಿತ್ರ ಕಥೆ ಹಾರರ್ ಮತ್ತು ಥ್ರಿಲ್ಲರ್ ಕಥೆಗಳ ಚಿತ್ರಣ ಈ ಸಿನಿಮಾದಲ್ಲಿದೆ.
08. ಚಾರುಲತಾ 

ಪ್ರಿಯಾಮಣಿ ಲೀಡ್ ರೋಲ್‍ನಲ್ಲಿ ಕಾಣಿಸಿಕೊಂಡಿರುವ ಚಾರುಲತಾ 2012ರಲ್ಲಿ ಕನ್ನಡ ಮತ್ತು ತಮಿಳಿನಲ್ಲಿ ಏಕಕಾಲದಲ್ಲಿ ತೆರೆಕಂಡಿತ್ತು. ಒಬ್ಬಳು ಮೃದು ಸ್ವಭಾವದ ಹುಡುಗಿ ಮತ್ತೊಬ್ಬಳು ಕಠಿಣ ಹೃದಯದ ಹುಡುಗಿ ಜೀವ ಬೇರೆ ಬೇರೆಯಾದರು ದೇಹ ಒಂದೇ. ಇಂತಹ ಅಕ್ಕ ತಂಗಿಯರ ಕಥೆ ಚಾರುಲತಾ. ದ್ವಿಪಾತ್ರದಲ್ಲಿ ಕಾಣಿಸಿಕೊಂಡಿರುವ ಪ್ರಿಯಾಮಣಿ ಅದ್ಬುತವಾಗಿ ಅಭಿನಯಿಸಿದ್ದಾರೆ.   ಚಿತ್ರಕ್ಕೆ ಪೋನ್ ಕುಮಾರ್ ನಿರ್ದೇಶನ ಮಾಡಿದ್ರೆ ದ್ವಾರಕೀಶ್ ಮತ್ತು ರಮೇಶ್ ಕೃಷ್ಣ ಮೂರ್ತಿ ಬಂಡವಾಳವನ್ನು ಹೂಡಿದ್ದರು. ತಾರಾಗಣದಲ್ಲಿ  ಸಕಾನಂದ್ ಅಶೋಕ್, ಸೀತಾ ಕಾಣಿಸಿಕೊಂಡಿದ್ದಾರೆ. ಹಾರರ್ ಮತ್ತು ಥ್ರಿಲ್ಲರ್ ಸಿನಿಮಾಗಳ ಸಾಲಿನಲ್ಲಿ 8ನೇ ಸ್ಥಾನದಲ್ಲಿರುವ ಚಾರುಲತ ಕಾದಂಬರಿ ಆಧಾರಿತ ಚಿತ್ರವಾಗಿದೆ.
07. ಶ್ 

ಹಾರರ್ ಚಿತ್ರಗಳ ದಿಕ್ಕನ್ನೇ ಬದಲಿಸಿದ ಚಿತ್ರ ಶ್, ಉಪೇಂದ್ರ ನಿರ್ದೇಶನದಲ್ಲಿ 1993ರಲ್ಲಿ ತೆರೆಕಂಡ ಚಿತ್ರ ಇದು. ಕೇವಲ ಒಂದು ಬೊಂಬೆಯನ್ನು ಇಟ್ಟುಕೊಂಡು ಭಯವನ್ನು ಹುಟ್ಟಿಸುವಂತಹ ಹಾರರ್ ಚಿತ್ರವನ್ನು ಮಾಡಿದ ಕೀರ್ತಿ ಉಪೇಂದ್ರ ಅವರಿಗೆ ಸಲ್ಲುತ್ತೆ. ಪ್ರೀತಿ ಇದೆ, ಸೆಂಟಿಮೆಂಟ್ ಇದೆ ಜೊತೆಗೆ ಭಯ ಹುಟ್ಟಿಸುವಂತಹ ಸನ್ನಿವೇಶಗಳು ಹೆಚ್ಚಾಗಿಯೇ ಇವೆ ಈ ಚಿತ್ರದಲ್ಲಿ. ಕುಮಾರ್ ಗೋವಿಂದ್ ನಾಯಕ ನಟನಾಗಿ ಅಭಿನಯಿಸುವುದರ ಜೊತೆಗೆ ಚಿತ್ರಕ್ಕೆ ಬಂಡವಾಳವನ್ನು ಇನ್ನೂ ಕಾಶಿನಾಥ್, ಬ್ಯಾಂಕ್ ಜನಾರ್ಧನ್, ಬಿರಾದರ್ ಪ್ರಮುಖ ತಾರಗನದಲ್ಲಿದ್ದಾರೆ. ಇನ್ನೂ ಸಾದುಕೋಕಿಲ ಇಂಪಾದ ಸಂಗೀತವಿದೆ. ಕನ್ನಡ ಚಿತ್ರರಂಗದಲ್ಲೇ ವಿಭಿನ್ನ ಪ್ರಯೋಗ ಅಂತಾನೇ ಹೇಳ್ಬೋದು. ವಿಭಿನ್ನ ನಿರ್ದೇಶಕ ಅಂತ ಉಪೇಂದ್ರ ಫ್ರೂ ಮಾಡಿದ್ದಾರೆ. 1993-94ರಲ್ಲಿ ಕರ್ನಾಟಕ ರಾಜ್ಯ ಚಲನಚಿತ್ರ ಪ್ರಶಸ್ತಿಯನ್ನು ಪಡೆದಿತ್ತು.
06. ಶಿವಲಿಂಗ 

ಇತ್ತೀಚೆಗೆ ಅಂದರೆ 2016ರಲ್ಲಿ ತೆರೆಕಂಡ ಶಿವಲಿಂಗ ಚಿತ್ರ ಹಾರರ್ ಥ್ರಿಲ್ಲರ್ ಚಿತ್ರಗಳ ಸಾಲಿನಲ್ಲಿ ಆರನೇ ಸ್ಥಾನವನ್ನ ಪಡೆದುಕೊಂಡಿದೆ. ಸುಂದರ ಪ್ರೇಮ ಕಥೆಯ ಜೊತೆಗೆ ಪ್ರತಿ ಕ್ಷಣ ಕ್ಷಣವು ರೋಮಾಂಚನಕಾರಿ ಸನ್ನಿವೇಶವನ್ನೂ ಅನೇಕ ತಿರುವುಗಳನ್ನು ನೀಡುತ್ತಾ ಸಾಗುತ್ತೆ ಚಿತ್ರಕಥೆ. ಪಾರಿವಾಳ, ಬಿರಿಯಾನಿ ಮತ್ತು ಪ್ರೇಮ ಕಥೆಯ ದೃಶ್ಯಗಳು ಚಿತ್ರದಲ್ಲಿ ಪ್ರಮುಖ ಪಾತ್ರ ವಹಿಸುತ್ವೆ.  ಇನ್ನೂ ಈ ಚಿತ್ರಕ್ಕೆ ಆಕ್ಷನ್ ಕಟ್ ಹೇಳಿರೋದು ಪಿ. ವಾಸು ಹಲವು ಯಶಸ್ವಿ ಚಿತ್ರಗಳ ನಿರ್ದೇಶಕರಾಗಿರುವ ಇವರು ಉತ್ತಮ ಚಿತ್ರವನ್ನು ನೀಡಿದ್ದಾರೆ. ಶಿವರಾಜ್ ಕುಮಾರ್, ವೇದಿಕಾ, ಉರ್ವಶಿ ಪ್ರಮುಖವಾಗಿ ತಾರಗಣದಲ್ಲಿದ್ದಾರೆ. ಪಿ.ಕೆ.ಎಚ್ ದಾಸ್ ಛಾಯಗ್ರಹಣ, ವಿ ಹರಿಕೃಷ್ಣ ಸಂಗೀತ ಮತ್ತು ಕೆ ಎ ಸುರೇಶ್ ಚಿತ್ರಕ್ಕೆ ಬಂಡವಾಳವನ್ನು ಹೂಡಿದ್ದಾರೆ. ಕಂಪ್ಲೀಟ್ ಫ್ಯಾಮಿಲಿ ಎಂಟರ್‍ಟೈನ್ಮೆಂಟ್ ಚಿತ್ರವಾದ ಶಿವಲಿಂಗ ತಮಿಳಿನಲ್ಲೂ ರಿಮೇಕ್ ಆಗಿ ಯಶಸ್ವಿ ಪ್ರದರ್ಶನವನ್ನು ಕಂಡಿತ್ತು.
05. ಲಾಸ್ಟ್ ಬಸ್ 

ಕನ್ನಡದ ಮನೋ ವೈಜ್ಞಾನಿಕ ಹಾರರ್ ಚಿತ್ರ ಎಂದು ಖ್ಯಾತವಾಗಿರು ಚಿತ್ರ ಲಾಸ್ಟ್ ಬಸ್. ವಿಭಿನ್ನ ಮತ್ತು ವಿಶೇಷ ಕಥೆಯಾದಾರಿತ ಸಿನಿಮಾ. ಅವಿನಾಶ್ ನರಸಿಂಹರಾಜು, ಮೇಘ ಶ್ರೀ ಭಾಗವತರ್, ಸಮರ್ಥ್ ನರಸಿಂಹರಾಜು, ಪ್ರಕಾಶ್ ಬೆಳವಾಡಿ ಮತ್ತು ಮಾನಸ ಜೋಶಿ ತಾರಾಗಣದಲ್ಲಿದ್ದಾರೆ. ರಾಜ್ಯದ ಹಲವು ಚಿತ್ರ ಮಂದಿರಗಳಲ್ಲಿ ಶತದಿನೋತ್ಸವ ಆಚರಿಸಿಕೊಂಡ ಲಾಸ್ಟ್ ಬಸ್ 2012ರಲ್ಲಿ ತೆರೆಕಂಡಿತ್ತು.  ಎಸ್. ಡಿ ಅರವಿಂದ್ ನಿರ್ದೇಶನದಲ್ಲಿ ಮೂಡಿಬಂದ ಈ ಚಿತ್ರ ಪ್ರೆಂಚ್ ಭಾಷೆಗೆ ಡಬ್ ಆಯಿತು. ಪ್ರೆಂಚ್ ಭಾಷೆಗೆ ಡಬ್ ಆದ ಕನ್ನಡದ ಮೊದಲ ಚಿತ್ರ ಇದು. ಇನ್ನೂ ಮಲೆನಾಡಿನ ಸುಂದರ ತಾಣದಲ್ಲಿ ಹೋಗುವ ಕೊನೆಯ ಬಸ್‍ನ ಪ್ರಯಾಣಿಕರು ಮತ್ತು ಅವರ ಸಮಸ್ಯೆಗಳು ಚಿತ್ರದಲ್ಲಿದೆ. ಕನ್ನಡ ಚಿತ್ರಗಳಲ್ಲಿ ಇದೊಂದು ವಿಭಿನ್ನ ಪ್ರಯೋಗ ಅಂತಾನೇ ಹೇಳ್ಬೋದು.
04. ನಾ ನಿನ್ನ ಬಿಡಲಾರೆ 

1979 ರಲ್ಲಿ ತೆರೆಕಂಡ ನಾ ನಿನ್ನ ಬಿಡಲಾರೆ ಚಿತ್ರ 70-80ರ ದಶಕದಲ್ಲಿ ಸೂಪರ್ ಹಿಟ್ ಆದಂತಹ ಸಿನಿಮಾ. ಒಂದು ಪ್ರೇಮಕಥೆಯಿಂದ ಆರಂಭವಾಗುವಂತಹ ಚಿತ್ರಕಥೆ ಕ್ಷಣ ಕ್ಷಣಕ್ಕೂ ತಿರಿವುಗಳನ್ನು ಪಡೆದುಕೊಳ್ಳುತ್ತಾ ಸಾಗುತ್ತೆ. ಕಾಮಿನಿ ಎನ್ನುವ ಹುಡುಗಿ ಸತ್ತು ನಂತರ ಪ್ರೇತಾತ್ಮವಾಗಿ ಕಾಡುವ ದೃಶ್ಯಗಲು ಚಿತ್ರದಲ್ಲಿ ಅದ್ಬುತವಾಗಿ ಮೂಡಿಬಂದಿದೆ. ಹೊಸ ಸಂಚಲನವನ್ನು ಮೂಡಿಸಿತ್ತು ಈ ಚಿತ್ರ. ಇನ್ನೂ ವಿಜಯ್ ಈ ಚಿತ್ರವನ್ನು ನಿರ್ದೇಶನ ಮಾಡಿದ್ದರೆ, ಚಿ ಉದಯ ಶಂಕರ್ ಸಂಭಾಷಣೆಯನ್ನು ಬರೆದಿದ್ದರು. ಅನಂತ್‍ನಾಗ್, ಲಕ್ಷ್ಮಿ, ಕೆ ವಿಜಯ್ ಮತ್ತು ಅಶ್ವತ್ ಪ್ರಮುಖ ತಾರಗಣದಲ್ಲಿ ಕಾಣಿಸಿಕೊಂಡಿದ್ದಾರೆ. ರಾಜನ್ ನಾಗೇಂದ್ರ ಸಂಗೀತ ಮತ್ತು ಎಸ್. ವಿ. ಶ್ರಿಕಾಂತ್ ಛಾಯಾಗ್ರಹನ ಚಿತ್ರಕ್ಕಿದೆ. ಹಾರರ್ ಚಿತ್ರಗಳಲ್ಲಿ ಹೊಸ ಹೊಸ ಪ್ರಯೋಗವನ್ನು ಮಾಡಿದ್ದು ಈ ಚಿತ್ರದಲ್ಲಿ ಕಾಣಬಹುದು.
03. ತುಳಸಿದಳ 

ಆರತಿ ಮತ್ತು ಶರತ್ ಬಾಬು ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿರುವ ಚಿತ್ರ ತುಳಸಿದಳ. 1985ರಲ್ಲಿ ತೆರೆಕಂಡ ಈ ಚಿತ್ರ ಹಾರರ್ ಚಿತ್ರಗಳ ದಿಕ್ಕನ್ನೆ ಬದಲಿಸಿತು. ಒಂದು ಕುಟುಂಬದಲ್ಲಿ ನಡೆಯುವಂತಹ ವಿಚಿತ್ರ ಘಟನೆಗಳು ಬಾನಾಮತಿಗೆ ಸಂಬಂದಿಸಿದವೋ ಅಥವಾ ಅದೊಂದು ವಿಚಿತ್ರ ಘಟನೆಗಳೋ, ಕೇವಲ ಕಲ್ಪನೆಯೋ ಎಂಬುದು ಚಿತ್ರದಲ್ಲಿ ತಿಳಿಯುತ್ತೆ. ತುಲಸಿದಳ ಪ್ರಸಿದ್ದ ಬರಹಗಾರ ಯಂಡಮುರಿ ವಿರೇಂದ್ರನಾಥ್ ಬರೆದಿರುವ ಕಾದಂಬರಿ ಆದಾರಿತ ಚಿತ್ರವಾಗಿದೆ. ಇದರ ಎಳೆಯನ್ನು ಇಟ್ಟುಕೊಂಡು ನಿರ್ದೇಶಕ ವೇಮಗಲ್ ಜಗನ್ನಾಥ್ ರಾವ್ ಚಿತ್ರವನ್ನು ಮಾಡಿದ್ದಾರೆ. ಉಪೇಂದ್ರ ಕುಮಾರ್ ಸಂಗೀತ, ಅಣ್ಣಯ್ಯ, ಮಲ್ಲಿಕ್ ಛಾಯಾಗ್ರಹಣ ಚಿತ್ರಕ್ಕಿದೆ. ತುಳಸಿದಳ ಇತರ ಹಾರರ್ ಚಿತ್ರಗಳಿಗಿಂತ ಭಿನ್ನವಾಗಿದೆ.
02. 6-5=2 

ಕಥೆಯನ್ನ ಸಿನಿಮಾ ಮಾಡೋದು ಕಾಮನ್ ಆದ್ರೆ ಸಿನಿಮಾನೇ ಕಥೆಯಾಗೋದು ತುಂಬಾ ಕಡಿಮೆ. ಅದರಲ್ಲಿ ಇದು ರಿಯಲ್ ಸ್ಟೋರಿ ಅಂತ ಹೇಳಿ ಸಿಕ್ಕಾಪಟ್ಟೆ ಸೌಂಡ್ ಮಾಡಿ. ಬಾಕ್ಸ್ ಆಫಿಸ್‍ನ ಲೂಟಿ ಮಾಡಿದಂತಹ ಚಿತ್ರ 6-5=2. 2013ರಲ್ಲಿ ತೆರೆಕಂಡು ಸಾಕಷ್ಟು ಸುದ್ದಿ ಮಾಡಿತ್ತು. 6 ಜನ ಸ್ನೇಹಿತರು ಟ್ರಕ್ಕಿಂಗ್‍ಗೆಂದು ಕಾಡಿಗೆ ಹೋಗಿ ನಂತರ ಒಬ್ಬರು ಮಾತ್ರ ಹೊರಗೆ ಬರುವ ಹಾರರ್ ಅಂಡ್ ಥ್ರಿಲ್ಲರ್ ಕಥೆ ಈ ಚಿತ್ರದಲ್ಲಿದೆ. ಈ ಚಿತ್ರದ ಪ್ರಮುಖ ಕೆಲಸ ಅಂದ್ರೆ ಅದು ಕ್ಯಾಮರ ವರ್ಕ್ ತುಂಬಾ ನ್ಯಾಚುರಲ್ ಆಗಿ ಮೂಡಿಬಂದಿದೆ ಇದುನ್ನು ಮಾಡಿದವರು ಕೀರ್ತಿ ಬಿ.ಎಲ್, ಶಂಕರ್ ಆರಾಧ್ಯ ಶಂಕರ್. ಕೆ.ಎಸ್ ಅಶೋಕ್ ನಿರ್ದೇಶನವನ್ನು ಮಾಡಿದ್ದರೆ. ಡಿ ಕೃಷ್ಣ ಚೈತನ್ಯ ಬಂಡವಾಳವನ್ನು ಹೂಡಿದ್ದರು. ತಾರಗಣದಲ್ಲಿ ದರ್ಶನ್ ಅಪೂರ್ವ, ಕೃಷ್ಣ ಪ್ರಕಾಶ್, ವಿಜಯ್ ಚೆಂಡೂರ್ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಅಪರೂಪದಲ್ಲಿ ಅಪರೂಪ ಈ ಚಿತ್ರ.
01. ರಂಗಿತರಂಗ 
 

2015ರಲ್ಲಿ ತೆರೆಕಂಡ ರಂಗಿತರಂಗ ಸ್ಯಾಂಡಲ್‍ವುಡ್‍ನ ಹಲವು ದಾಖಲೆಗಳನ್ನ ಪುಡಿ ಪುಡಿ ಮಾಡಿತ್ತು. ಸ್ಯಾಂಡಲ್‍ವ್ಯಡ್‍ಗೆ ಹೊಸದಾಗಿ ಪಾದಾರ್ಪಣೆ ಮಾಡಿದ ಭಂಡಾರಿ ಬ್ರದರ್ಸ್ ಹೊಸ ಸಂಚಲನವನ್ನ ಸೃಷ್ಠಿಸಿದ್ದರು. ಸಂಪೂರ್ಣ ಮಲೆನಾಡಿನ ಸುಂದರ ತಾಣಗಳು ಚಿತ್ರದ ತುಂಬೆಲ್ಲ ತುಂಬಿ ಹೋಗಿವೆ. ಉತ್ತಮವಾದ ಕಥೆಯೊಂದಿಗೆ ಕನ್ನಡಿಗರ ಮನಗೆದ್ದಿದೆ ರಂಗಿತರಂಗ.
ಅನೂಪ್ ಭಂಡಾರಿ ನಿರ್ದೇಶನದಲ್ಲಿ ಮೂಡಿಬಂದಿರುವ ರಂಗಿತರಂಗ ಚಿತ್ರ. ಹಲವು ವಿಶೇಷತೆಗಳನ್ನ ಒಳಗೊಂಡಿದೆ. ಒಂದು ಕಥೆ ಹಲವು ಮುಖಗಳನ್ನ ಪರಿಯ ಮಾಡಿಕೊಡುತ್ತೆ. ತಾರಗಣದಲ್ಲಿ ನಿರೂಪ್ ಭಂಡಾರಿ, ರಾಧಿಕಾ ಚೇತನ್, ಆವಚಿತಿಕಾ ಶೆಟ್ಟಿ, ಮತ್ತು ಸಾಯಿಕುಮಾರ್ ಇದ್ದಾರೆ. ಸಾಯಿ ಕುಮಾರ್‍ರವರ ಹೊಸ ಮುಖ ಇದರಲ್ಲಿ ಪರಿಚಯವಾಗಿದೆ. ಹಾರರ್ ಕಮ್ ಥ್ರಿಲ್ಲರ್ ಸಿನಿಮಾಗಳಲ್ಲಿ ಮೊದಲ ಸ್ಥಾನದಲ್ಲಿದೆ ರಂಗಿತರಂಗ.
ಮಂಜುನಾಥ್ ಜೈ
manjunathahr1991@gmail.com


ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ಕಾಮೆಂಟ್ ಬಾಕ್ಸ್ ನಲ್ಲಿ ಬರೆಯಿರಿ..

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಪ್ರಪಂಚದ 10 ಎತ್ತರದ ಪರ್ವತಗಳು - 26

ಭಾರತದ 10 ಪ್ರಸಿದ್ಧ ರಾಜರು - 22

ಕರ್ನಾಟಕದ 10 ಸುಂದರ ಬೆಟ್ಟಗಳು - 25