ಪ್ರಪಂಚದ 10 ಎತ್ತರದ ಪರ್ವತಗಳು - 26

ಪ್ರಪಂಚದಲ್ಲಿ ಹಲವಾರು ಪರ್ವತಗಳನ್ನ ನೋಡ್ಬೋದು . ಅದು ಆಯಾ ದೇಶದ ಕಳಶ ಅಂತಾನೇ ಹೇಳ್ಬೋದು , ಅತೀ ಹೆಚ್ಚು ಏಷ್ಯಾ ಖಂಡದಲ್ಲಿ ಕಂಡು ಬರುವ ಈ ಪರ್ವತಗಳು ಒಂದಕ್ಕಿಂದ ಮತ್ತೊಂದು ವಿಭಿನ್ನವಾಗಿವೆ . ಇಂತಹ 10 ಪರ್ವತಗಳನ್ನ ನಾವ್ ಇವತ್ತು ನಿಮಗೆ ತೋರಿಸ್ತಾ ಇದಿವಿ . 10. ಅನ್ನಪೂರ್ಣ ಪರ್ವತ ಹಿಮಾಲಯದ ಮಧ್ಯ ಭಾಗದಲ್ಲಿರುವ ಅನ್ನಪೂರ್ಣ ಪರ್ವತ ನೇಪಾಳದಲ್ಲಿದೆ . ಹಿಮಾಲಯದ ಎತ್ತರದ ಶ್ರೇಣಿಗಳಾದ ಕಾಳಿ . ಗಂಡಕಿ ಮತ್ತು ಮರ್ಯಾಂದಿ ನದಿಕಣಿವೆಗಳ ಮಧ್ಯಭಾಗದಲ್ಲಿದ್ದು ಅನ್ನಪೂರ್ಣವೆಂಬ ಶಿಖರಗಳಿಂದ ನಿರ್ಮಾಣವಾಗಿದೆ . 8.091 ಮೀಟರ್ ಎತ್ತರವಾದ ಆರು ಶೃಂಗಗಳನ್ನು ಹೊಂದಿದೆ ಅನ್ನಪೂರ್ಣ ಪರ್ವತ . 1950 ರ ವರೆಗೆ ಇದರ ಅಸ್ಥಿತ್ವದ ಬಗ್ಗೆ ಯಾರಿಗೂ ತಿಳಿದಿರಲಿಲ್ಲ . ಯುರೋಪಿನ ಪರ್ವತಾರೋಹಿಗಳು ಕಾಳಿ , ಗಂಡಕಿ ನದಿ ಕಣಿವೆಗಳ ವಾಯುವ್ಯ ದಿಕ್ಕಿಗಿರುವ ಧವಳಗಿರಿಯನ್ನು ಏರಲು ಹೊರಟು ದಾರಿ ತಪ್ಪಿ ಅನ್ನಪೂರ್ಣ ಶಿಖರದ ಕಡೆಗೆ ಹೊರಟರು ಆಗ ಅದೇ ಜಗತ್ತಿನ ಅತ್ಯುನ್ನತ ಶಿಖರವೆಂದು ಹೇಳಲಾಯಿತು . ಜಗತ್ತಿನ ಉತ್ತುಂಗ ಶಿಖರಗಳಲ್ಲಿ ಹತ್ತನೆಯದೆಂದು ಪರಿಗಣಿಸಲಾಗಿದೆ . 09. ನಂಗಾ ಪರ್ವತ ನಂಗಾ ಪರ್ವತ ವಿಶ್ವದ 9 ನೆಯ ಅತೀ ಎತ್ತರದ ಪರ್ವತವಾಗಿದೆ . ಇದನ್ನ ಉರ್ದು ಭಾಷೆಯಲ್ಲಿ ನಗ್ನ ಪರ್ವತ ಎಂದು ಕರೆಯುತ್ತಾರೆ , 8.128