ಪ್ರಪಂಚದ 10 ಎತ್ತರದ ಪರ್ವತಗಳು - 26ಪ್ರಪಂಚದಲ್ಲಿ ಹಲವಾರು ಪರ್ವತಗಳನ್ನ ನೋಡ್ಬೋದು. ಅದು ಆಯಾ ದೇಶದ ಕಳಶ ಅಂತಾನೇ ಹೇಳ್ಬೋದು, ಅತೀ ಹೆಚ್ಚು ಏಷ್ಯಾ ಖಂಡದಲ್ಲಿ ಕಂಡು ಬರುವ ಪರ್ವತಗಳು ಒಂದಕ್ಕಿಂದ ಮತ್ತೊಂದು ವಿಭಿನ್ನವಾಗಿವೆ. ಇಂತಹ 10 ಪರ್ವತಗಳನ್ನ ನಾವ್ ಇವತ್ತು ನಿಮಗೆ ತೋರಿಸ್ತಾ ಇದಿವಿ.

10. ಅನ್ನಪೂರ್ಣ ಪರ್ವತ 

ಹಿಮಾಲಯದ ಮಧ್ಯ ಭಾಗದಲ್ಲಿರುವ ಅನ್ನಪೂರ್ಣ ಪರ್ವತ ನೇಪಾಳದಲ್ಲಿದೆ. ಹಿಮಾಲಯದ ಎತ್ತರದ ಶ್ರೇಣಿಗಳಾದ ಕಾಳಿ. ಗಂಡಕಿ ಮತ್ತು ಮರ್ಯಾಂದಿ ನದಿಕಣಿವೆಗಳ ಮಧ್ಯಭಾಗದಲ್ಲಿದ್ದು ಅನ್ನಪೂರ್ಣವೆಂಬ ಶಿಖರಗಳಿಂದ ನಿರ್ಮಾಣವಾಗಿದೆ. 8.091 ಮೀಟರ್ ಎತ್ತರವಾದ ಆರು ಶೃಂಗಗಳನ್ನು ಹೊಂದಿದೆ ಅನ್ನಪೂರ್ಣ ಪರ್ವತ.
1950 ವರೆಗೆ ಇದರ ಅಸ್ಥಿತ್ವದ ಬಗ್ಗೆ ಯಾರಿಗೂ ತಿಳಿದಿರಲಿಲ್ಲ. ಯುರೋಪಿನ ಪರ್ವತಾರೋಹಿಗಳು ಕಾಳಿ, ಗಂಡಕಿ ನದಿ ಕಣಿವೆಗಳ ವಾಯುವ್ಯ ದಿಕ್ಕಿಗಿರುವ ಧವಳಗಿರಿಯನ್ನು ಏರಲು ಹೊರಟು ದಾರಿ ತಪ್ಪಿ ಅನ್ನಪೂರ್ಣ ಶಿಖರದ ಕಡೆಗೆ ಹೊರಟರು ಆಗ ಅದೇ ಜಗತ್ತಿನ ಅತ್ಯುನ್ನತ ಶಿಖರವೆಂದು ಹೇಳಲಾಯಿತು. ಜಗತ್ತಿನ ಉತ್ತುಂಗ ಶಿಖರಗಳಲ್ಲಿ ಹತ್ತನೆಯದೆಂದು  ಪರಿಗಣಿಸಲಾಗಿದೆ.

09. ನಂಗಾ ಪರ್ವತ  

ನಂಗಾ ಪರ್ವತ ವಿಶ್ವದ 9ನೆಯ ಅತೀ ಎತ್ತರದ ಪರ್ವತವಾಗಿದೆ. ಇದನ್ನ ಉರ್ದು ಭಾಷೆಯಲ್ಲಿ ನಗ್ನ ಪರ್ವತ ಎಂದು ಕರೆಯುತ್ತಾರೆ, 8.128 ಮೀ ಎತ್ತರವಿರುವ ನಂಗಾ ಪರ್ವತ ಜಗತ್ತಿನ ಅತ್ಯುನ್ನತ ಶಿಖರಗಳ ಪೈಕಿ ಏರಲು ಅತೀ ಕಠಿಣವಾದ ಪರ್ವತ ಎನಿಸಿಕೊಂಡಿದೆ. ಇದು ಹಿಮಾಲಯ ಪರ್ವತ ಶ್ರೇಣಿಗಳ ಪಶ್ಚಿಮ ಭಾಗದಲ್ಲಿದೆ. 8.000 ಮೀಟರ್ಗಳಿಗಿಂತ ಎತ್ತರವಿರುವ ಶಿಖರಗಳ ಪೈಕಿ ಇದು ಅತ್ಯಂತ ಪಶ್ಚಿಮದಲ್ಲಿದೆ.
ಸಿಂಧೂ ನದಿಯ ದಕ್ಷಿಣ ಮಗ್ಗುಲಲ್ಲಿರುವ ನಂಗಾ ಪರ್ವತ ಕರಾಕೋರಮ್ ಶ್ರೇಣಿಯ ಪಶ್ಚಿಮ ಅಂಚಿನಿಂದ ಕೊಂಚ ದಕ್ಷಿಣದಲ್ಲಿದೆ. ಇಂದು ಇದು ಪಾಕಿಸ್ತಾನ ಆಡಳಿತವಿರುವ ಕಾಶ್ಮೀರದ ಭಾಗದಲ್ಲಿದೆ. ಸ್ಥಳೀಯ ಮಟ್ಟದ ಭೂ ಮೇಲ್ಮೈಯಿಂದ ಒಮ್ಮೆಲೆ ಮೇಲೆದ್ದು ನಿಂತಿರುವಂತೆ ಭಾಸವಾಗುವ ನಂಗಾ ಪರ್ವತ ಅತೀ ಕಡಿದಾದ ಮಗ್ಗುಲನ್ನು ಹೊಂದಿದ್ದು. ಜಗತ್ತಿನಲ್ಲಿಯೇ ಅತೀ ತೀವ್ರ ಕಡಿದಾದ ಪ್ರದೇಶಗಳಲ್ಲಿ ಒಂದಾಗಿದೆ.

08. ಮನಸ್ಲು ಪರ್ವತ   


ನೇಪಾಳದ ಪಶ್ಚಿಮ ಕೇಂದ್ರ ಭಾಗದಲ್ಲಿರುವ ಮನಸ್ಲು ಪರ್ವತ ಜಗತ್ತಿನ ಅತ್ಯಂತ ಎತ್ತರ ಪರ್ವತ ಶ್ರೇಣಿಗಳಲ್ಲಿ ಎಂಟನೆಯ ಸ್ಥಾನವನ್ನ ಪಡೆದುಕೊಂಡಿದೆ. ಇದು ಸಮುದ್ರ ಮಟ್ಟದಿಂದ 8.163 ಮೀಟರ್ ಎತ್ತರದಲ್ಲಿದ್ದು ಇತಿಹಾಸದಲ್ಲಿ ನಡೆದಂತಹ ಅನೇಕ ದಂಡೆಯಾತ್ರೆಗಳಿಗೆ ಸಾಕ್ಷಿಯಾದ ಉದಾಹರಣೆಗಳಿವೆ. ಇದನ್ನು ಜಪಾನಿಯರು ತಮ್ಮ ಪರ್ವತವೆಂದು ಹೇಳುತ್ತಾರೆ.
ಮನಸ್ಲು ಪರ್ವತವು ಗೂರ್ಖಾ ಜಿಲ್ಲೆಯಲ್ಲಿದ್ದು ಅತ್ಯುನ್ನತ ಶಿಖರವಾದ ಅನ್ನ ಪೂರ್ಣ ಶಿಖರದ ಪೂರ್ವದ 64 ಕಿ.ಮೀ ದೂರದಲ್ಲಿದೆ. ಇದು  ಅನೇಕ ಹಿಮ ನದಿಗಳ ಹರಿಯುವಿಕೆಗೂ ಕಾರಣವಾಗಿದೆ. ಚಾರಣಿಗರ, ನೆಚ್ಚಿನ ತಾಣವಾಗಿ ಮಾರ್ಪಟ್ಟು ಇಲ್ಲಿಗೆ ದೂರದ ಪ್ರದೇಶಗಳಿಂದ ಜನರು ಬರುತ್ತಾರೆ. ಅನೇಕ ಅವಘಡಗಳು ಸಂಭವಿಸಿದ್ದು 2008 ಹೊತ್ತಿಗೆ 53  ಬಾರಿ 297 ಮಂದಿ ಸಾವನ್ನಪ್ಪಿದ್ದಾರೆ.

07. ಧವಳಗಿರಿ ಪರ್ವತ  

ಹಿಮಾಲಯ ಪರ್ವತ ಶ್ರೇಣಿಯ ಉಪ ಸರಣಿಯಾದ ಧವಳಗಿರಿ ಹಿಮಾಲಯದ ಪೂರ್ವದಂಚಿನ ನೇಪಾಳದ ಉತ್ತರ ಮಧ್ಯಭಾಗದಲ್ಲಿ ಇದೆ.  ಕಾಳಿ. ಗಂಡಕಿಯ ಆಳವಾದ ಕೊಳ್ಳದ ಪಕ್ಕದಲ್ಲಿರುವ ಅನ್ನಪೂರ್ಣ ಪರ್ವತಕ್ಕೆ ಹೊಂದಿಕೊಂಡಂತೆ ಧವಳಗಿರಿಯು ನಿಂತಿದೆ. 8167 ಮೀಟರ್ ಎತ್ತರವಿರುವ ಎರಡು ಪರ್ವತಗಳು ಒಂದಕ್ಕೊಂದು ಅಂಟಿಕೊಂಡಂತೆ ಕಾಣುವ ನೋಟ ಅದ್ವೀತಿಯ  ಮತ್ತು ಅದ್ಭುತ.
ಧವಳಗಿರಿ ಎಂದು ಕರೆಯುವ ಪರ್ವತವನ್ನ ಶ್ವೇತ ಪರ್ವತ ಎಂದೂ ಕೂಡ ಕರೆಯುತ್ತಾರೆ. 1808ರಲ್ಲಿ ಕಂಡುಹಿಡಿದ ಪರ್ವತವನ್ನು ಬಹುಕಾಲದವರೆಗೆ ಜಗತ್ತಿನ ಅತೀ ಎತ್ತರದ ಶಿಖರವೆಂದು ನಂಬಲಾಗಿತ್ತು. ಧವಳಗಿರಿ ಪರ್ವತವು ಕಡಿದಾಗಿದ್ದು. ಹಲವು ಕಡೆ ತೀವ್ರ ಇಳಿಜಾರು ಹೊಂದಿದೆ. 1960ರಲ್ಲಿ ಸ್ವೀಸ್-ಆಸ್ಟ್ರೀಯಾ ಪರ್ವತಾರೋಹಿ ತಂಡ ಮೊಟ್ಟ ಮೊದಲ ಭಾರಿಗೆ ಇದನ್ನ ತಲುವುವುದರಲ್ಲಿ ಯಶಸ್ವಿಯಾಯಿತು.

06. ಚೋ ಓಯು  

ಸಮುದ್ರ ಮಟ್ಟದಿಂದ ಸುಮಾರು 8188 ಮೀಟರ್ ಎತ್ತರವಿರುವ ಚೋ ಓಯು ಪರ್ವತವು ವಿಶ್ವದ ಆರನೆಯ ಅತೀ ಎತ್ತರದ ಪರ್ವತ. ಮೌಂಟ್ ಎವರೆಸ್ಟ್ ಪಶ್ಚಿಮಕ್ಕೆ 20 ಕಿ.ಮೀ ದೂರದಲ್ಲಿರುವ ಮಹಲಂಗೊರ್ ಚೋ ಓಯು ಹಿಮಾಲಯದ ಪ್ರಮುಖ ಶಿಖರಗಳಲ್ಲಿ ಒಂದಾಗಿದೆ. ಚೀನಾ ಮತ್ತು ನೇಪಾಳ ಗಡಿಯ ನಡುವೆ ತಲೆ ಎತ್ತಿದೆ ಪರ್ವತ.
1952ರಿಂದ ಆರಂಭವಾದ ಇದರ ಮೇಲಿನ ಚಾರಣ 2011 ವರೆಗೆ ನಡೆದಿದೆ. ಅಲ್ಲಿಯವರೆಗೆ ಪರ್ವತಾರೋಹಣ ಮಾಡಿದಂತಹ ಹಲವಾರು ಚಾರಣಿಗರು ಸಾವನಪ್ಪಿದ್ದಾರೆ. ಎಷ್ಟು ಸುಂದರವಾಗದೆಯೋ ಅಷ್ಟೇ ಅಪಾಯಕಾರಿಗಿದೆ ಚೋ ಓಯು ಪರ್ವತ ಶ್ರೇಣಿ. 29 ಕಿಮೀಗಳ ವ್ಯಾಪ್ತಿಯಲ್ಲಿ ಹರಡಿಕೊಂಡಿರುವುದನ್ನ ಇಲ್ಲಿ ಕಾಣ್ಬೋದು.

05. ಮಕಾಲು ಪರ್ವತ  


ನೇಪಾಳದ ಮತ್ತೊಂದು ಪರ್ವತ ಮಕಾಲು ಇದು 8485 ಮೀಟರ್ ಎತ್ತರವಿದ್ದು ವಿಶ್ವದ 5ನೇ ಎತ್ತರದ ಶಿಖರ ಎನ್ನುವ ಖ್ಯಾತಿಗೆ ಒಳಗಾಗಿದೆ. ಇದೂ ಕೂಡ ನೇಪಾಳ ಮತ್ತು ಚೀನಾ ನಡುವಿನ ಗಡಿ ಭಾಗದಲ್ಲಿ ಕಂಡುಬರುವಂತಹ ಸುಂದರ ಮತ್ತು ಎತ್ತರದ ಪರ್ವತ ಶ್ರೇಣಿ. ಇದು ನಾಲ್ಕು ಭಾಗದ ಪಿರಮಿಡ್ ಆಕೃತಿಯಲ್ಲಿದ್ದು. ವಿಶಾಲವಾಗಿ ಹರಡಿಕೊಂಡಿದೆ.
ಪರ್ವತವನ್ನು ಮೊದಲ ಭಾರಿಗೆ 1954ರಲ್ಲಿ ರಿಲೆ ಕೀಗನ್ ನೇತೃತ್ವದ ತಂಡ ಆರೋಹಣ ಯಾತ್ರೆಯನ್ನು ಕೈಗೊಂಡು 7100ಮೀ ಪರ್ವತವನ್ನು ತಲುಪಿ ನಿರಂತರ ಬಿರುಗಾಳಿಯಿಂದಗಿ ವಾಪಸ್ಸು ಬರಲಾಯಿತು. ನಂತರ 1955ರಲ್ಲಿ ಲಿಯೋನೆಲ್ ಟೆರೆ ಮತ್ತು ಜೀನ್ ಕೂಜಿ ಅವರ ತಂಡವು ಯಶಸ್ವಿಯಾಗಿ ಪರ್ವತಾರೋಹಣವನ್ನು ಮಾಡಿತು. ಅನೇಕ ಸಾವು ನೋವುಗಳು ಕಂಡುಬಂದರು ಇದರ ಆಕರ್ಷಣೆ ಕಡಿಮೆಯಾಗಿಲ್ಲ.

04. ಲಾಟ್ಸೆ ಪರ್ವತ  


8516 ಮೀಟರ್ ಎತ್ತರವಿರುವಂತಹ ಲಾಟ್ಸೆ ಪರ್ವತ ಕೂಡ ನೇಪಾಳದಲ್ಲೆ ಕಂಡುಬರುತ್ತೆ. ಎತ್ತರವಾದ ಪರ್ವತಗಳ ಸಾಲಿನಲ್ಲಿ 4 ಸ್ಥಾನದಲ್ಲಿರುವ ಲಾಟ್ಸೆ ದಕ್ಷಿಣ ಕೋಲ್ ಮೂಲಕ ಕೊನೆಯ ತುದಿಯನ್ನು ಸಂಪರ್ಕಿಸುತ್ತೆ. ಲಾಟ್ಸೆ ಎಂದರೆ ಟಿಬೇಟಿಯನ್ ಭಾಷೆಯಲ್ಲಿ ದಕ್ಷಿಣ ಪೀಕ್ ಎಂದು ಅರ್ಥ ಬರುತ್ತೆ. ಲಾಟ್ಸೆ ಪರ್ವತವು ಟಿಬೆಟ್ ಮತ್ತು ನೇಪಾಳದ ಗಡಿಯಲ್ಲಿ ಕಂಡುಬರುತ್ತೆ.
1955 ಇಂಟನ್ರ್ಯಾಷನಲ್ ಹಿಮಾಲಯನ್ ಎಕ್ಸ್ಡಿಷನ್ ಮೂಲಕ ಲಾಹಸ್ಸೆ ಆರಂಭಿಕ ಆರೋಹಣದ ಪ್ರಯತ್ನವಾಗಿತ್ತು. 1956ರಲ್ಲಿ ಫ್ರಿಡ್ಜ್ ಲುಚಿಂಗರ್, ಆಸ್ಸ್ರ್ಟ್ ರೀಸ್ ಮೊದಲ ಬಾರಿಗೆ ಸಂರ್ಪೂವಾಗಿ ಪರ್ವತವನ್ನು ಏರಿದ್ದಾರೆ. 2011 ಮೇ ವರೆಗೂ ನಿರಂತರವಾಗಿ ಭಾರತೀಯರು ಸೇರಿದಂತೆ ಪರ್ವತಾರೋಹಣವನ್ನು ಮಾಡುತ್ತಾ ಬಂದಿದ್ದಾರೆ.

03. ಕಾಂಚನಜುಂಗಾ  


ಪ್ರಪಚಂದ ಮೂರನೇ ಅತ್ಯಂತ ಎತ್ತರವಾದ ಶಿಖರ ಕಾಂಚನಜುಂಗಾ 8.586 ಮೀಟರ್ ಎತ್ತರದಲ್ಲಿದೆ. ಇಳಿಜಾರಾದ ಪರ್ವತ ಸಾಲುಗಳನ್ನು ಇದು ಹೊಂದಿದೆ. ಕಾಂಚನಜುಂಗಾವು 5 ಶಿಖರಗಳನ್ನು ಹೊಂದಿದ್ದು. ಅದರಲ್ಲಿ ನಾಲ್ಕು ಶಿಖರಗಳು 8.450 ಮೀಗಿಂತಲೂ ಎತ್ತರವಾಗಿವೆ. ಇದನ್ನು ಹಿಮದ ಐದು ಖಜಾನೆಗಳು ಎಂದು ಕರೆಯುತ್ತಾರೆ. ಖಜಾನೆಗಳು ಐದು ದೇವತೆಗಳನ್ನು ಹೊಂದಿದ್ದು ಅವುಗಳೆಂದರೆ ಚಿನ್ನ ಬೆಳ್ಳಿ ರತ್ನ ಧಾನ್ಯ ಮತ್ತು ಪವಿತ್ರ ಎಂದು ನಂಬಲಾಗಿದೆ.
1955ರಲ್ಲಿ ಜೋ ಬ್ರೌನ್ ಮತ್ತು ಜಾರ್ಜ್ ಬ್ಯಾಂಡ್ ಮೊಟ್ಟ ಮೊದಲ ಭಾರಿಗೆ ಇಲ್ಲಿ ಪರ್ವತಾರೋಹಣವನ್ನು ಮಾಡಿದರು. ನೇಪಾಳ ಸರ್ಕಾರವು ಕಾಂಚನ್ಜುಂಗಾ ರಕ್ಷಣಾ ಪ್ರದೇಶ ಯೋಜನೆಗೆ ತಯಾರಾಗಿದ್ದು. ವಲ್ರ್ಡ್ ವೈಲ್ಡ್ಲೈಫ್ ಫಂಡ್ ಜೊತೆಗೂಡಿ ನಡೆಸಲಾಗುತ್ತಿದೆ. ಹಲವು ವಿಶೇಷತೆಗಳಿಂದ ಕೂಡಿದೆ ಕಾಂಚನಜುಂಗಾ ಪರ್ವತ.

02. K2  


ಭೂ ಮೇಲಿನ ಎರಡನೇ ಅತ್ಯಂತ ಎತ್ತರದ ಶಿಖರ ಎಂದು ಕರೆಯಲ್ಪಡುವ K2 ಪರ್ವತ ಕಾರಕೊರಂ ಶ್ರೇಣಿಯ ಒಂದು ಭಾಗವಾಗಿದೆ. ಪಾಕ್ ಆಕ್ರಮಿತ ಭಾರತದ ಭೂ ಪ್ರದೇಶದಲ್ಲಿ ಇರುವುದರಿಂದ ಇದನ್ನು ಭಾರತದ ಅತ್ಯಂತ ಎತ್ತರದ ಶಿಖರ ಎನ್ನುವುದರಲ್ಲಿ ಎರಡು ಮಾತಿಲ್ಲ. ಇದನ್ನ ಹತ್ತಲು ಕಷ್ಟದ ಹಾದಿ ಇರುವುದರಿಂದ ಉಗ್ರ ಪರ್ವತವೆಂದು ಕರೆಯುತ್ತಾರೆ. ಇದನ್ನು ಆರೋಹಣ ಮಾಡಲು ಹೋದವರು ಪ್ರತಿ 10 ಜನರಲ್ಲಿ ಒಬ್ಬರು ಪ್ರಾಣ ಕಳೆದುಕೊಳ್ಳುತ್ತಾರೆ.
8611 ಮೀಟರ್ ಎತ್ತರವಿರುವ ಪರ್ವತವನ್ನು ಚಳಿಗಾಲದಲ್ಲಿ ಯಾರು ಹತ್ತುವುದಿಲ್ಲ. 1856ರಲ್ಲಿ ಯೂರೋಪಿನ ತಂಡವೊಂದು ಇದನ್ನು ಗುರುತು ಮಾಡಿತು ಎಂದು ಹೇಳಲಾಗಿದೆ. ಪರ್ವತವನ್ನು ಏರಲು ಹಲವು ದಾರಿಗಳಿವೆ. ಆದರೆ ಅವು ಯಾವವು ಸುಗಮವಾಗಿ ಇಲ್ಲ. ಅತೀ ಹೆಚ್ಚಿನ ಎತ್ತರದ ಕಾರಣ ಆಮ್ಲಜನಕದ ತೀವ್ರ ಕೊರತೆ, ಹಿಮದ ಬಿರುಗಾಳಿ, ಅತೀ ಕಡಿದಾದ ಪರ್ವತ ಇಲ್ಲಿನ ಕಠಿಣವಾದ ಸವಾಲಾಗಿದೆ. 1958ರಲ್ಲಿ ಇಟಲಿಯ  ಪರ್ವತಾರೋಹಿ ತಂಡವೊಂದು ಇದನ್ನು ಹತ್ತಲು ಮೊದಲ ಬಾರಿಗೆ ಯಶಸ್ವಿಯಾಯಿತು.

01. ಮೌಂಟ್ ಎವರೆಸ್ಟ್  


ಮೌಂಟ್ ಎವರೆಸ್ಟ್ ಶಿಖರವು 8.848 ಮೀಟರ್ಗಳನ್ನು ಹೊಂದುವ ಮೂಲಕ ಜಗತ್ತಿನ ಮೊದಲ ಎತ್ತರದ ಮೌಂಟೆನ್ ಎಂಬ ಖ್ಯಾತಿಗೆ ಒಳಗಾಗಿದೆ. ಪೂರ್ವ ನೇಪಾಳದ ಹಿಮಾಲಯದ ತಪ್ಪಲಿನಲ್ಲಿ ಕಂಡುಬರುವಂತಹ ಸುಂದರ ಶಿಖರ ಇದು. ಮೊಟ್ಟ ಮೊದಲ ಭಾರಿಗೆ 1856ರಲ್ಲಿ ಭಾರತದ ಜನರಲ್ ಸರ್ವೇಯರಾಗಿ ಸೇವೆ ಸಲ್ಲಿಸಿದ್ದ ಜಾರ್ಜಾ ಎವರೆಸ್ಟ್ ಎಂಬಾತನು ಇದನ್ನು ಕಂಡು ಹಿಡಿದನು ಮತ್ತು ಇವನ ಹೆಸರನ್ನೇ ಪರ್ವತಕ್ಕೆ ಇಡಲಾಗಿದೆ.
ಬ್ರಹ್ಮಪುತ್ರ ನದಿಯು ಹಿಮಾಲಯದ ನೆತ್ತಿಯ ಮೇಲೆ ಹರಡಿಕೊಂಡು ಹರಿಯುವುದಾಗಿ ನಂಬಲಾಗಿದೆ. ಸದಾ ಹಿಮದಿಂದ ತುಂಬಿರುವ ಪರ್ವತದಲ್ಲಿ ಜನಜೀವನ ಬಲು ಕಷ್ಟಕರವಾಗಿದೆ. ಸುಮಾರು 100ಕ್ಕೂ ಹೆಚ್ಚು ವರ್ಷಗಳ ಸತತ ಪ್ರಯತ್ನದಿಂದಾಗಿ ಅನೇಕ ಸಾವು-ನೋವುಗಳನ್ನು ಅನುಭವಿಸಿ ಕಡೆಗೂ ಮಾನವನು ಪಡೆದ ಸಾಧನೆ ಅತ್ಯಂತ ಮಿಗಿಲಾದುದು. ಇದರ ಹಿಂದೆ ದೊಡ್ಡ ಇತಿಹಾಸವೇ ನಡೆದು ಹೋಗಿದೆ. ಒಟ್ಟಾರೆಯಾಗಿ ಪರ್ವತಗಳಲ್ಲಿ ಮೌಂಟ್ ಎವರೆಸ್ಟ್ನದ್ದೇ ವಿಶೇಷವಾದ ಸ್ಥಾನ.

ಮಂಜುನಾಥ್ ಜೈ
manjunathahr1991@gmail.com


ನಿಮ್ಮ ಅನಿಸಿಕೆ ಮತ್ತು ಅಭಿಪ್ರಾಯಗಳನ್ನು ಕಾಮೆಂಟ್ ಮಾಡಿ, ಈ ಮಾಹಿತಿ ಇಷ್ಟ ಆದ್ರೆ ಶೇರ್ ಮಾಡಿ ಜೊತೆಗೆ ಟಾಪ್ 10 ಮಾಹಿತಿಯನ್ನು ಮೊದಲು ಓದಲು ಸಬ್ ಸ್ರ್ಕೈಬ್ ಆಗಿ.


ಕಾಮೆಂಟ್‌ಗಳು

ಕಾಮೆಂಟ್‌‌ ಪೋಸ್ಟ್‌ ಮಾಡಿ

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಭಾರತದ 10 ಪ್ರಸಿದ್ಧ ರಾಜರು - 22

ಕರ್ನಾಟಕದ 10 ಸುಂದರ ಬೆಟ್ಟಗಳು - 25