ಪ್ರಪಂಚದ ಹೆಚ್ಚು ಮೌಲ್ಯವುಳ್ಳ 10 ದೇಶದ ಹಣಗಳು - 28ಪ್ರಪಂಚದಲ್ಲಿನ ನಾನಾ ದೇಶಗಳು ಅವುಗಳದ್ದೇ ಆದಂತಹ ಹಣವನ್ನ ಹೊಂದಿವೆ. ದೇಶಗಳ ವ್ಯವಹಾರಗಳು ನಡೆಯುವುದು ಕೂಡ ಇದರ ಮೂಲಕವೇ. ಡಾಲರ್, ಪ್ರಾಂಕ್, ಪೌಂಡ್, ಯೂರೋ ಸೇರಿದಂತೆ ಭಾರತದಲ್ಲಿ ರೂಪಾಯಿ ಎಂದು ಕರೆಸಿಕೊಳ್ಳುವ ದುಡ್ಡು. ಒಂದು ದೇಶಕ್ಕಿಂತ ಮತ್ತೊಂದು ದೇಶಗಳ ನಡುವೆ ಇದರ ಮೌಲ್ಯ ಹೆಚ್ಚಾಗಿ ಇರುತ್ತದೆ ಅಂತಹ ಹಣ ಯಾವವು..? ಇದಕ್ಕೆ ಕಾರಣ ಏನು ಅನ್ನೋದಕ್ಕೆಲ್ಲಾ ಉತ್ತರ ಇಲ್ಲಿದೆ.

10. ಬ್ರೂನಿ ಡಾಲರ್ 


1967ರಿಂದ ಜಾರಿಯಲ್ಲಿರುವ ಬ್ರೂನಿ ಡಾಲರ್ ಬ್ರೂನಿ ದೇಶದ ಅಧಿಕೃತ ಚಲಾವಣೆಯ ಹಣ. ಇದನ್ನು ಸಿಂಗಾಪುರ್ ಸೇರಿದಂತೆ ಹಲವು ದೇಶಗಳಲ್ಲಿ ಬಳಸುತ್ತಾರೆ. ತನ್ನ ವ್ಯಾಪಾರ ವಹಿವಾಟುಗಳಿಂದ ಹೆಸರನ್ನು ಪಡೆದಿರುವ ಬ್ರೂನಿಯು ಪ್ರಪಂಚದ ಮೌಲ್ಯಯುತವಾದ ಹಣದ ಸಾಲಿನಲ್ಲಿ ಹತ್ತನೆಯ ಸ್ಥಾನವನ್ನ ತನ್ನದಾಗಿಸಿಕೊಂಡಿದೆ. ಆಯಿಲ್ ಮತ್ತು ನೈಸರ್ಗಿಕ ಅನಿಲದ ವ್ಯಾಪಾರೋದ್ಯಮವು ಇಲ್ಲಿನ ಪ್ರಮುಖ ಆರ್ಥಿಕ ಕೇಂದ್ರವಾಗಿ ತಲಾದಾಯವನ್ನು ಹೆಚ್ಚಿಸಿದೆ.  ಆರಂಭದ ದಿನಗಳಲ್ಲಿ ಬ್ರೂನಿಯ 28ನೇ ಆಡಳಿತಗಾರ ಸುಲ್ತಾನ್ 3ನೇ ಒಮರ್ ಅಲಿ ಸೈಫುದ್ದೀನ್ ಭಾವಚಿತ್ರವಿರುವ ಹಣವನ್ನು ಮುದ್ರಿಸಲಾಯಿತು. ನೀಲಿ, ಹಸಿರು, ಕೆಂಪು, ಕಂದು ಹಾಗೂ ನೇರಳೆ ಬಣ್ಣದ ನೋಟುಗಳನ್ನ ಚಲಾವಣೆಗೆ ತರಲಾಯಿತು. ನಂತರದ ದಿನಗಳಲ್ಲಿ ಇದು ಬದಲಾಗುತ್ತಾ ಹೋಯಿತು.

09. ಆಸ್ಟ್ರೇಲಿಯಾದ ಡಾಲರ್ 


ಆಸ್ಟ್ರೇಲಿಯಾ ಒಕ್ಕೂಟದ ಕ್ರಿಸ್ಮಸ್ ದ್ವೀಪ, ಕೊಕೊಸ್ ದ್ವೀಪಗಳು, ನಾರ್ಫೋಕ್ ದ್ವೀಪಗಳು ಮತ್ತು ಕಿರಿಬಾಟಿ, ನೌರು, ತುವಾಲುಗಳ ಫೆಸಿಫಿಕ್ ದ್ವೀಪದ ರಾಜ್ಯಗಳು ಇದರ ವ್ಯಾಪ್ತಿಯಲ್ಲಿ ಸೇರಿವೆ. ಆಸ್ಟ್ರೇಲಿಯಾದ ಕರನ್ಸಿಯನ್ನು ಡಾಲರ್ ಎಂಬ ಹೆಸರಿನಿಂದ ಕರೆಯಲಾಗುತ್ತಿದ್ದು. 2016ರಲ್ಲಿ ಪ್ರಪಂಚದಲ್ಲೇ ಅತ್ಯಂತ ಹೆಚ್ಚು ವ್ಯಾಪಾರದ ಕರೆನ್ಸಿಯಲ್ಲಿ 5ನೇ ಸ್ಥಾನವನ್ನ ಪಡೆದುಕೊಂಡಿದೆ. ಆಸ್ಟ್ರೇಲಿಯಾದ ಆರ್ಥಿಕತೆ ಮತ್ತು ರಾಜಕೀಯ ವ್ಯವಸ್ಥೆಯ ಸಾಮಾನ್ಯ ಸ್ಥಿರತೆಯಿಂದಾಗಿ ಇದರ ಡಾಲರ್ ವೈವಿದ್ಯಮಯವಾದ ಪ್ರಯೋಜನವನ್ನು ಪಡೆದುಕೊಂಡಿದೆ. 1966ರಿಂದ ಹಲವು ಬಗೆಯಲ್ಲಿ ಬದಲಾವಣೆಯನ್ನು ಕಾಣುತ್ತಾ ಆಸ್ಟ್ರೇಲಿಯಾದ ಡಾಲರ್ ಬೆಳೆದು ಬಂದಿದೆ.

08. ಕೆನಡಾದ ಡಾಲರ್ 


ಕೆನಡಿಯನ್ ಸರ್ಕಾರದ ಪ್ರಬಲ ಸಾರ್ವಭೌಮ ಸ್ಥಾನ ಮತ್ತು ದೇಶದ ಕಾನೂನು ಮತ್ತು ರಾಜಕೀಯ ವ್ಯವಸ್ಥೆಗಳ ಸ್ಥಿರತೆಯನ್ನು ಕಾಪಾಡಲು ಕೇಂದ್ರಿಯ ಬ್ಯಾಂಕುಗಳ ವ್ಯವಹಾರೋದ್ಯಮದಲ್ಲಿ ಹೆಚ್ಚು ಪ್ರಸಿದ್ದಿಯನ್ನು ಪಡೆದಿದೆ. ಕೆನಡಾ ಮತ್ತು ಸೇಂಟ್ ಪಿಯರ್, ಮಿಕ್ವೆಲಾನ್ ದೇಶಗಳು ಇದನ್ನು ಬಳಕೆ ಮಾಡುತ್ತವೆ. ಕೆನಡಿಯನ್ ಬ್ಯಾಂಕ್ ನೋಟ್ ಕಂಪನಿ ಇದನ್ನು ಮುದ್ರಣ ಮಾಡುತ್ತದೆ.  ಪ್ರಪಂಚದ ವಿವಿಧ ದೇಶಗಳಲ್ಲಿ ಕೆನಡಿಯನ್ ಡಾಲರ್ ಮೌಲ್ಯ ಹೆಚ್ಚಾಗಿಯೇ ಇದೆ. ಕೃಷಿ, ಪೆಟ್ರೋಲಿಯಂ, ಮೀನುಗಾರಿಕೆ, ಅರಣ್ಯ ಸೇರಿದಂತೆ ಹಲವು ಉದ್ಯಮಗಳಲ್ಲಿ ಆರ್ಥಿಕ ಪ್ರಗತಿಯನ್ನು ಸಾದಿಸಿಕೊಂಡಿದೆ. ಇಂಗ್ಲಿಷ್ ಮತ್ತು ಪ್ರೆಂಚ್ ಭಾಷೆಯಲ್ಲಿ ಮುದ್ರಣವಿದ್ದು. ಆರಂಭದ ದಿನಗಳಿಂದ ಸಾಕಷ್ಟು ಬದಲಾವಣೆಯನ್ನು ಕಾಣುತ್ತಾ ಪ್ರಗತಿಯನ್ನು ಸಾದಿಸಿದೆ.

07. ಸ್ವಿಸ್ ಫ್ರಾಂಕ್  


ಸ್ವಿಸ್ ಫ್ರಾಂಕ್ನ್ನ ಸ್ವಿಜಲ್ರ್ಯಾಂಡ್, ಲಿಚ್ಚೆನ್ಸ್ಟಿನ್, ಕ್ಯಾಂಪಿಯ್ ಡಿ ಇಟಲಿಯಾ ಮತ್ತು ಇಟಲಿ ದೇಶಗಳಲ್ಲಿ ಅಧಿಕೃತವಾಗಿ ಹಣವನ್ನು ಬಳಕೆ ಮಾಡ್ತಿದ್ರೆ. ಅನಧಿಕೃತವಾಗಿ ಬಶೀನ್ಜೆನ್ ಆಮ್, ಹೋಕ್ರಹೈನ್ ಮತ್ತು ಜರ್ಮನಿ ದೇಶಗಳು ಬಳಸುತ್ತಿದೆ. ಸ್ವಿಸ್ ನ್ಯಾಷನಲ್ ಬ್ಯಾಂಕ್ ಸೆಂಟ್ರಲ್ ಬ್ಯಾಂಕ್ ಆಗಿದ್ದು ಓರಲ್ ಫುಸ್ಲಿ ಆಟ್ರ್ಸ್ ಗ್ರಾಫಿಕ್ಸ್ ಎಸ್ ಇದನ್ನು ಮುದ್ರಣ ಮಾಡುತ್ತದೆ. 1798ಕ್ಕಿಂತ ಮೊದಲು 860 ವಿವಿಧ ರೀತಿಯ ನಾಣ್ಯಗಳು ಚಲಾವಣೆಯಲ್ಲಿ ಇದ್ದವು. ಚಿನ್ನದ ನಾಣ್ಯಗಳು ಮತ್ತು ಬೆಳ್ಳಿಯ ನಾಣ್ಯಗಳು ಬಳಕೆಯಲ್ಲಿ ಇದ್ದುದರ ಬಗ್ಗೆ ಸಾಕಷ್ಟು ಪುರಾವೆಗಳಿವೆ. ಸ್ವಿಸ್ ಫ್ರಾಂಕ್ ಪ್ರಪಂಚದಾದ್ಯಂತ ಮೀಸಲು ಕರೆಸ್ಸಿಯಾಗಿ ಬಳಸಲಾಗುತ್ತಿದೆ. ಪ್ರಪಂಚದ 7ನೇ ಮೌಲ್ಯಯುತ ಹಣವಾಗಿ ಸ್ವಿಸ್ ಫ್ರಾಂಕ್ ಸ್ಥಾನವನ್ನು ಗಳಿಸಿದೆ.

06. ಯುರೋ 


ಯುರೋಪಿನ ಒಕ್ಕೂಡದ ಆಸ್ಟ್ರೀಯಾ, ಫ್ರಾನ್ಸ್, ಜರ್ಮನಿ, ಇಟಲಿ ಸೇರಿದಂತೆ ಸುಮಾರು 19 ದೇಶಗಳು ಅಧಿಕೃತವಾಗಿ ಬಳಸುವಂತಹ ನಗದು ಯುರೋ. ಇದನ್ನು ಗ್ರೀಕ್ನಲ್ಲಿ ಇವೊರೊ, ಲಿಥುವೇನಿಯಾದಲ್ಲಿ ಯುರಾಸ್, ಮತ್ತು ಮಾಲ್ಟೀಸ್ನಲ್ಲಿ ಎವೊರೊ ಎಂದು ಅಡ್ಡ ಹೆಸರಿನಿಂದ ಕರೆಯಲಾಗುತ್ತೆ. ಯೂರೋಪಿಯನ್ ಸೆಂಟ್ರಲ್ ಬ್ಯಾಂಕ್ ಇದರ ಪ್ರಮುಖ ಬ್ಯಾಂಕ್ ಆಗಿದೆ. 1992ರಿಂದ ಮ್ಯಾಜೆಸ್ಟರ್ ಒಪ್ಪಂದದಂತೆ ಯೂರೋಪಿನ ಹಲವು ರಾಷ್ಟ್ರಗಳು ನಿಬಂದನೆಗಳನ್ನು ರೂಪಿಸಕೊಂಡು ನಡೆಸಿಕೊಂಡು ಹೋಗುವಂತಹ ಮತ್ತು ಹಣಕಾಸಿನ ನೀತಿಗಳನ್ನು ಪಾಲಿಸುತ್ತಾ ಬೆಳೆಸುತ್ತಾ ಬಂದಿವೆ.

05. ಬ್ರಿಟೀಷ್ ಪೌಂಡ್ 


ಬ್ರಿಟೀಷ್ ಪೌಂಡ್ನ್ನು 9 ಬ್ರಿಟೀಷ್ ಪ್ರದೇಶಗಳು ಬಳಕೆಯನ್ನು ಮಾಡುತ್ತಿವೆ. ಪ್ರಪಂಚದ ಅತ್ಯಂತ ಹಳೆಯ ಹಣ ಬಳಕೆಯಲ್ಲಿ ಇದೂ ಒಂದು. ಸೆಂಟ್ರಲ್ ಬ್ಯಾಂಕ್ ಆಫ್ ಇಂಗ್ಲೇಂಡ್ ಇದರ ಜವಾಬ್ದಾರಿಯನ್ನು ವಹಿಸಿಕೊಂಡಿದೆ. ಬ್ಯಾಂಕ್ ಆಫ್ ಇಂಗ್ಲೇಂಡ್, ಬ್ಯಾಂಕ್ ಆಫ್ ಸ್ಕಾಟ್ಲ್ಯಾಂಡ್, ಬ್ಯಾಂಕ್ ಆಫ್ ಐರ್ಲೆಂಡ್ ಸೇರಿದಂತೆ 12ಕ್ಕೂ ಹೆಚ್ಚು ಕಡೆ ಬ್ರಿಟೀಷ್ ಪೌಂಡ್ನ್ನು ಮುದ್ರಣ ಮಾಡಲಾಗುತ್ತದೆ. ಬ್ರಿಟೀಷ್ ಆಡಳಿತದ ಪ್ರಮುಖ ನಗದಾಗಿರುವ ಪೌಂಡ್ ಜಗತ್ತಿನ ಮೌಲ್ಯವಾದ ಹಣದ ಸಾಲಿನಲ್ಲಿ ಐದನೆಯ ಸ್ಥಾನವನ್ನು ಪಡೆದುಕೊಂಡಿದೆ. ಪ್ರಪಂಚದಲ್ಲಿ ಅತ್ಯಂತ ಹೆಚ್ಚು ವಹಿವಾಟಾಗುವ ಹಣದಲ್ಲಿ ಇದಕ್ಕೆ ನಾಲ್ಕನೆಯ ಸ್ಥಾನವನ್ನು ನೀಡಲಾಗಿದೆ. ಪೌಂಡ್ಗೆ ಜಗತ್ತಿನಲ್ಲಿ ಉತ್ತಮವಾದ ಮೌಲ್ಯಯುತ ಸ್ಥಾನವನ್ನು ಕಲ್ಪಿಸಿಕೊಟ್ಟಿದೆ ಬ್ರಿಟಿಷ್ ಪ್ರದೇಶಗಳು.

04. ಲಟ್ವಿಯನ್ ಲ್ಯಾಟ್ಸ್ 


ಲಾಟ್ಸ್ನ್ನು ಮೊದಲು 1922ರಲ್ಲಿ ಪರಿಚಯಿಸಲಾಯಿತು, ಲಟ್ಟಿಯನ್ ರುಬ್ಲಿಸ್ನ್ನು 1 ಲ್ಯಾಟ್ಗಳ ದರದಲ್ಲಿ 50 ಬಿಲಿಯನ್ಗಳಷ್ಟು ಬದಲಾಯಿಸಲಾಯಿತು. 1940ರಲ್ಲಿ ಲಾಟ್ವಿಯಾವನ್ನು ಯು.ಎಸ್.ಎಸ್.ಆರ್ ಆಕ್ರಮಿಸಿತು ಮತ್ತು ಲಾಟ್ಸ್ನ್ನು ಸೋವಿಯತ್ ರೂಬಲ್ ಆಗಿ ಬದಲಾವಣೆಯನ್ನು ಮಾಡಿತು. ಆರಂಭಿಕ ದಿನಗಳಲ್ಲಿ ಕಂಚಿನ ನಾಣ್ಯಗಳು, ನಿಕ್ಕಲ್ ಮತ್ತು ಬೆಳ್ಳಿಯ ನಾಣ್ಯಗಳು ಇಲ್ಲಿ ಬಳಕೆಯಲ್ಲಿ ಇದ್ದವು.  ಕುವೈತ್ ದೈನಾರ್, ಬಹ್ರೇನ್ ದಿನಾರ್, ಒಮಾನಿ ರಿಯಲ್ ನಂತರದ ಸ್ಥಾನದಲ್ಲಿ ಅಂದರೆ ನಾಲ್ಕನೇ ಸ್ಥಾನದಲ್ಲಿ ಲಟ್ವಿಯನ್ ಲ್ಯಾಟ್ಸ್ ನಗದು ಇದೆ. ಇದನ್ನು ಲಾಟ್ವಿಯಾ ಬ್ಯಾಂಕ್ ನಿರ್ವಹಣೆಯನ್ನು ಮಾಡುತ್ತದೆ. ಪ್ರಪಂಚದ ಮೌಲ್ಯಯುತ ಹಣ ಎಂದ ತಕ್ಷಣ ಡಾಲರ್, ಪೌಡ್, ಪ್ರಾಂಕ್ ಎಂದೆಲ್ಲಾ ಬರುತ್ತವೆ ಅವುಳಲ್ಲಿ ಲ್ಯಾಟ್ಸ್ಗೆ ವಿಶೇಷ ಸ್ಥಾನವನ್ನು ನೀಡಿದೆ.

03. ಒಮಾನಿ ರಿಯಲ್, omani rial  

ಒಮನ್ ದೇಶದ ಅಧಿಕೃತ ನಗದಾಗಿದೆ ಒಮಾನಿ ರಿಯಲ್, ಇದನ್ನು ಸೆಂಟ್ರಲ್ ಬ್ಯಾಂಕ್ ಆಫ್ ಒಮಾನ್ ನಿರ್ವಹಣೆಯನ್ನು ಮಾಡುತ್ತೆ. 1970ರಲ್ಲಿ ಮಸ್ಕಟ್ ಮತ್ತು ಒಮಾನ್ ಸುಲ್ತಾನರು 100 ವರ್ಗದ ಬ್ಯಾಂಕ್ ನೋಟುಗಳನ್ನು ಬಿಡುಗಡೆ ಮಾಡಿದರು. ಇವು ಬಣ್ಣ ಬಣ್ಣಗಳಿಂದ ಕೂಡಿದ್ದು ಮೌಲ್ಯಯುತವಾದ ನೋಟುಗಳಲ್ಲಿ ಒಂದು ಎನಿಸಿಕೊಂಡಿವೆ.  100, 200 ಬೈಸಾ, 1/2, 1, 5, 10, 20, 50 ಮೌಲ್ಯಯುತವಾದ ನೋಟುಗಳು, 5, 10, 25, 50, 100 ಬೈಸಾ ನಾಣ್ಯಗಳನ್ನು ಚಲಾವಣೆಗೆ ತಂದಿದೆ. ಪ್ರಪಂಚದ ಮೌಲ್ಯಯುತ ಹಣದಲ್ಲಿ ಒಮಾನಿನ ರಿಯಲ್ ಮೂರನೇ ಸ್ಥಾನವನ್ನು ಪಡೆದುಕೊಂಡಿದೆ.

02. ಬಹ್ರೆನ್ ದಿನಾರ್  


ಬಹ್ರೇನ್ ದೇಶದಲ್ಲಿ ಮಾತ್ರ ಚಲಾವನೆಯಲ್ಲಿರುವಂತಹ ನಗದು ದಿನಾರ್. ಇದರ ವ್ಯಾಲ್ಯು 2.65 ಅಮೇರಿಕನ್ ಡಾಲರ್ಗೆ 1 ದಿನಾರ್ ಸಮನಾಗಿದೆ. ಆರ್ಥಿಕ ಸೇವೆಗಳು, ಪ್ರವಾಸೋದ್ಯಮ ಇಲ್ಲಿ ಹೆಚ್ಚು ಪ್ರಾಮುಖ್ಯತೆಯನ್ನು ಪಡೆದುಕೊಂಡಿದೆ. ಅರಬ್ ದೇಶಗಳಲ್ಲಿ ಅತ್ಯಂತ ವೇಗವಾಗಿ ಬೆಳೆದು ಪ್ರಗತಿಯನ್ನು ಸಾದಿಸಿದೆ. ವ್ಯಾಲ್ಯು ಮನಿಯಲ್ಲಿ ಎರಡನೇ ಸ್ಥಾನದಲ್ಲಿ ಇದೆ ದಿನಾರ್. ಬಹ್ರೇನ್ ಸೆಂಟ್ರಲ್ ಬ್ಯಾಂಕ್ ಇದರ ನಿರ್ವಹಣೆಯನ್ನು ಮಾಡುತ್ತಿದ್ದೆ. 1965ರಲ್ಲಿ 1, 5, 10, 25, 50 ನಾಣ್ಯಗಳನ್ನು ಮತ್ತು 100 ರೂ ನೋಟುಗಳನ್ನು ಚಲಾವಣೆಗೆ ತಂದಿತು. 2000ದಲ್ಲಿ 500 ರೂ ನೋಟು ಚಲಾವಣೆಗೆ ತಂದು ನಂತರ ಬಹ್ರೇನ್ ಸೆಂಟ್ರಲ್ ಬ್ಯಾಂಕ್ 2011ರಂದು ಬಹ್ರೇನ್ ಕ್ರಾಂತಿಯ ನಂತರ ಬಮೆಟಾಲಿಕ್ ಇದನ್ನು ಸ್ಥಗಿತಗೊಳಿಸಿತು.

01. ಕುವೈತ್ ದಿನಾರ್  


ಕುವೈತ್ ಜನರು ಮಾತ್ರ ಬಳಸುವಂತಹ ಹಣ ಕುವೈತ್ ದಿನಾರ್. 3.31 ಅಮೇರಿಕನ್ ಡಾಲರ್ ಒಂದು ಕುವೈತ್ ದಿನಾರಿಗೆ ಸಮವಾಗಿದೆ. ಪ್ರಪಂಚದ ಅತೀ ಹೆಚ್ಚು ತಲಾದಾಯವನ್ನು ಹೊಂದಿರುವಂತಹ ನಾಲ್ಕನೇ ರಾಷ್ಟ್ರ ಇದು. ದೇಶದ ಪ್ರಮುಖ ಆರ್ಥಿಕ ಶಕ್ತಿ ಅಂದರೆ ತೈಲ ವ್ಯಾಪಾರೋದ್ಯಮ ಇದರಿಂದಾಗಿಯೇ ಹೆಚ್ಚು ಆದಾಯವನ್ನು ಗಳಿಸಿದ್ದಾರೆ. ಕುವೈತ್ ಬಹುತೇಕ ಜನರು ಪೆಟ್ರೋಲಿಯಂ ಉದ್ಯಮವನ್ನ ಮಾಡುತ್ತಾರೆ. ಪ್ರಪಂಚದ ಶ್ರೀಮಂತ ದೇಶಗಳಲ್ಲಿ ಒಂದಾಗಿರುವ ಕುವೈತ್ ಮೌಲ್ಯಯುತ ಹಣದಲ್ಲಿ ಮೊದಲ ಸ್ಥಾನದಲ್ಲಿ ಇದೆ. ಇದಕ್ಕೆ ಕಾರಣ ಇಲ್ಲಿರುವಂತಹ ನೈಸರ್ಗಿಕ ಸಂಪನ್ಮೂಲ ಹಾಗೂ ಅದರ ಸದ್ಬಳಕೆ ಮಾಡಿಕೊಳ್ಳುತ್ತಿರುವ ಇಲ್ಲಿನ ಜನರು. ಒಂದು ಕುವೈತ್ ದಿನಾರ್ಗೆ 233.179 ರೂಪಾಯಿಗಳು ಸಮವಾಗಿವೆ. ಭಾರತಕ್ಕೆ ಇಷ್ಟು ಅಂತರವಿದ್ದರೆ. ಹಿದುಳಿದ ರಾಷ್ಟ್ರಗಳಲ್ಲಿ ಇನ್ನೇಗೆ ಇರಬಹುದು. ಒಟ್ಟಾರೆಯಾಗಿ ಕುವೈತ್ ದಿನಾರ್ಗೆ ಪ್ರಪಂಚದ ಯಾವುದೆ ಹಣ ಸಮನಾಗಿಲ್ಲ ಅಂತ ಹೇಳಿದ್ರೆ ತಪ್ಪಿಲ್ಲ.

ಇವು ಪ್ರಪಂಚದಲ್ಲಿ ಹೆಚ್ಚು ಮೌಲ್ಯವುಳ್ಳ ಹಣದ ಮಾಹಿತಿ, ಇದು ಒಂದು ದೇಶದಿಂದ ಮತ್ತೊಂದು ದೇಶಕ್ಕೆ ಬದಲಾಗುತ್ತಾ ಹೋಗಬಹುದು ಅಥವಾ ಅದೇ ಸ್ಥಿತಿಯನ್ನು ಕಾಪಾಡಿಕೊಳ್ಳಬಹುದು.

ಮಂಜುನಾಥ್ ಜೈ

manjunathahr1991@gmail.com
ನಿಮ್ಮ ಅನಿಸಿಕೆ ಮತ್ತು ಅಭಿಪ್ರಾಯಗಳನ್ನು ಕಾಮೆಂಟ್ ಮಾಡಿ ಮಾಹಿತಿ ಇಷ್ಟ ಆದ್ರೆ ಶೇರ್ ಮಾಡಿ ಜೊತೆಗೆ ಟಾಪ್ 10 ಮಾಹಿತಿಯನ್ನು ಮೊದಲು ಓದಲು ಸಬ್ ಸ್ರ್ಕೈಬ್ ಆಗಿ.


ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಪ್ರಪಂಚದ 10 ಎತ್ತರದ ಪರ್ವತಗಳು - 26

ಭಾರತದ 10 ಪ್ರಸಿದ್ಧ ರಾಜರು - 22

ಕರ್ನಾಟಕದ 10 ಸುಂದರ ಬೆಟ್ಟಗಳು - 25