ಭಾರತದ ಸುಪ್ರಸಿದ್ಧ ಹತ್ತು ಅರಮನೆಗಳು - 29


ನಿಮ್ಮ ಅನಿಸಿಕೆ ಮತ್ತು ಅಭಿಪ್ರಾಯಗಳನ್ನು ಕಾಮೆಂಟ್ ಮಾಡಿ ಮಾಹಿತಿ ಇಷ್ಟ ಆದ್ರೆ ಶೇರ್ ಮಾಡಿ.  ಜೊತೆಗೆ ಟಾಪ್ 10 ಮಾಹಿತಿಯನ್ನು ಮೊದಲು ಓದಲು ಸಬ್ ಸ್ರ್ಕೈಬ್ ಆಗಿ.

ಇತಿಹಾಸದ ಪುಟಗಳನ್ನು ತೆಗೆದು ನೋಡಿದಾಗ ಅನೇಕ ರಾಜ ಮನೆತನಗಳು ಅಖಂಡ ಭಾರತವನ್ನು ಆಳಿ ಅಳಿದು ಹೋಗಿದ್ದು ಗೊತ್ತಾಗುತ್ತೆ. ಇಂತಹ ರಾಜರು ವಾಸಮಾಡುತ್ತಿದ್ದಂತಹ ಅರಮನೆಗಳು, ಭವ್ಯ ಮಹಲುಗಳು, ಸುಂದರ ಕಟ್ಟಡಗಳು, ರಮಣೀಯವಾಗಿ ಇರುವುದನ್ನ ಕಾಣ್ಬೋದು.  ರಾಜರು ನಿರ್ಮಾಣ ಮಾಡಿದ ಹತ್ತು ಅರಮನೆಗಳ ಬಗ್ಗೆ ವರದಿ ಇಲ್ಲಿದೆ ನೋಡಿ.

10. ಸಿಟಿ ಪ್ಯಾಲೆಸ್, ಜೈಪುರ 

ಮೊಘಲ್ ಮತ್ತು ಯುರೋಪಿಯನ್ ಶೈಲಿಯ ವಾಸ್ತುಶಿಲ್ಪದ ಜೊತೆಗೆ ಭಾರತೀಯ ವಾಸ್ತು ಶೈಲಿಯನ್ನು ಹೊಂದಿರುವಂತಹ ಅರಮನೆ ಸಿಟಿ ಪ್ಯಾಲೆಸ್. ಇದು ರಾಜಸ್ಥಾನದ ರಾಜಧಾನಿ ಜೈಪುರದಲ್ಲಿದೆ. ಅರಮನೆಯನ್ನು ರಜಪೂತರ ಆಳ್ವಿಕೆಯಲ್ಲಿ ಅಂದರೆ ಕ್ರಿ. . 1729ರಲ್ಲಿ ಪ್ರಾರಂಭವಾಗಿ 1732ರಲ್ಲಿ ಪೂರ್ಣ ಮಾಡಲಾಗಿದೆ. ಕೆಂಪು ಮತ್ತು ಗುಲಾಬಿ ಮರಳು ಕಲ್ಲುಗಳನ್ನು ಅರಮನೆಯ ನಿರ್ಮಾಣಕ್ಕೆ ಬಳಸಿಕೊಳ್ಳಲಾಗಿದೆ. ಭವ್ಯವಾದ ಅರಮನೆಗೆ ವಿದ್ಯಾಧರ ಭಟ್ಟಾಚಾರ್ಯ ಮತ್ತು ಸರ್ ಸ್ಯಾಮ್ಯುಯೆಲ್ ಸ್ವಿಂಟನ್ ಜಾಕೋಬ್ ವಾಸ್ತು ಶಿಲ್ಪಿಗಳಾಗಿದ್ದಾರೆ. ಸಿಟಿ ಪ್ಯಾಲೆಸ್ ಚಂದ್ರ ಮಹಲ್ ಮತ್ತು ಮುಬಾರಕ್ ಎಂಬ ಎರಡು ಕಟ್ಟಡಗಳನ್ನು ಹೊಂದಿದೆ. ಚಂದ್ರಮಹಲ್ ವಸ್ತುಸಂಗ್ರಹಾಲಯವಾಗಿದ್ದು ಪ್ರತಿ ನಿತ್ಯ ಸಾವಿರಾರು ಜನರು ಇಲ್ಲಿಗೆ ಬೇಟಿ ನೀಡುತ್ತಾರೆ. ಸುಂದರವಾದ ಅರಮನೆಗಳಲ್ಲಿ ಇದು ಕೂಡ ಒಂದಾಗಿದೆ.

09. ಜೈ ವಿಲಾಸ್ ಮಹಲ್, ಗ್ವಾಲಿಯರ್ 

ಇಟಾಲಿಯನ್, ಕೊರಿಂಥಿಯನ್ ಮತ್ತು ಟಸ್ಕನ್ ವಾಸ್ತುಶಿಲ್ಪ ಶೈಲಿಯಲ್ಲಿ ನಿರ್ಮಾಣವಾಗಿರುವ ಜೈ ವಿಲಾಸ್ ಮಹಲ್ ಗ್ವಾಲಿಯರ್ ನಗರದಲ್ಲಿದೆ. ಇದನ್ನು 19ನೆಯ ಶತಮಾನ ಅಂದರೆ 1874ರಲ್ಲಿ ಗ್ವಾಲಿಯರ್ ಮಹಾರಾಜ ಜಯಜರಾವ್ ಸಿಂಧಿಯಾ ನಿರ್ಮಿಸಿದ್ದಾರೆ. ನಂತರದ ದಿನಗಳಲ್ಲಿ ಮರಾಠ ಸಿಂಧಿಯಾ ರಾಜವಂಶದ ನಿವಾಸವಾಗಿ ಉಳಿದಿತ್ತು. ಜೈ ವಿಲಾಸ್ ಅರಮನೆಯ ಪ್ರದೇಶವು 12,40,771 ಚದುರ ಅಡಿ ವಿಶಾಲವಾಗಿದೆ. ಇದರ ದರ್ಭಾರ್ ಹಾಲ್ ಚಿನ್ನದ ಪಿಟೋಪಕರಣಗಳಿಂದ ಅಲಂಕಾರಗೊಂಡಿದೆ. ಮೊದಲ ಮಹಡಿ ಟುಸ್ಕನ್, ಎರಡನೇಯದು ಇಟಲಿ-ಡೊರಿಕ್ ಮತ್ತು ಮೂರನೆಯದು ಕೊರಿಂಥಿಯನ್ ವಿನ್ಯಾಸವನ್ನು ಹೊಂದಿದೆ. ಶ್ರೀಮಂತ ರಾಜ ಮನೆದಲ್ಲಿ ಇರಬಹುದಾದ ಎಲ್ಲಾ ಸೌಕರ್ಯಗಳು ಇಲ್ಲಿವೆ. ಅದ್ಬುತವಾದ ಅರಮನೆ ಇದು.

08. ರಾಂಬಗ್ ಪ್ಯಾಲೇಸ್ 

ಜೈಪುರದ ರಾಂಬಾಗ್ ಅರಮನೆಯು 1835ರಲ್ಲಿ ರಾಜಕುಮಾರ್ ರಾಮ್ ಸಿಂಗ್ ಮೊದಲು ಕಟ್ಟಡವನ್ನು ನಿರ್ಮಾಣ ಮಾಡಲು ಆರಂಭಿಸಿದನು. 1887ರಲ್ಲಿ ಮಹಾರಾಜ ಸವಾಯಿ  ಮಾಧೋ ಸಿಂಗ್ ಅವರ ಆಳ್ವಿಕೆಯಲ್ಲಿ ಒಂದು ಸಾಧಾರಣ ರಾಯನ್ ಬೇಟಿಯ ಲಾಡ್ಜ್ ಆಗಿ ಇದು ಪರಿವರ್ತನೆಯನ್ನ ಕಾಣ್ತು. 20ನೇ ಶತಮಾನದ ಆರಂಭದಲ್ಲಿ ಸರ್ ಸ್ಯಾಮ್ಯುಯೆಲ್ ಸ್ವಿಂಟನ್ ಜಾಕೋಬ್ ಸಾಕಷ್ಟು ವಿನ್ಯಾಸವನ್ನು ಮಾಡಿದರು. ಮಹಾರಾಜ ಸವಾಯಿ ಮಾನ್ ಸಿಂಗ್ 2 ರಾಂಬಗ್ ನಿವಾಸದಲ್ಲಿ ಕೆಲವು ರಾಯಲ್ ಕೋಣೆಗಳನ್ನು ನಿರ್ಮಾಣ ಮಾಡಿದನು. ಇದು ಈಗ ವಿಲಾಸಿ ಹೋಟೆಲ್ ಆಗಿದ್ದು ಪ್ರವಾಸಿರನ್ನ ಸೆಳೆಯುತ್ತಿದೆ.

07. ಉಮೇದ್ ಭವನ್ ಅರಮನೆ, ಜೈಪುರ  

ರಾಜಸ್ಥಾನದಲ್ಲಿನ ಜೋದಪುರದಲ್ಲಿರುವ ಉಮೇದ್ ಭವನ್ ಅರಮನೆ ವಿಶ್ವದ ಅತಿದೊಡ್ಡ ಖಾಸಗಿ ನಿವಾಸಗಳ ಪೈಕಿ ಒಂದಾಗಿದೆ. ಮಹಾರಾಜ ಉಮೇದ್ ಸಿಂಗ್ ಇದರ ಮಾಲೀಕರಾಗಿದ್ದಾರೆ. ಭವ್ಯವಾದ ಅರಮನೆಯು 347 ಕೊಠಡಿಗಳನ್ನು ಹೊಂದಿದ್ದು ಹಿಂದಿನ ಜೋದಪುರ ರಾಜ ಮನೆತನದ ನಿವಾಸವಾಗಿತ್ತು. ಅರಮನೆಯ ಒಂದು ಭಾಗ ವಸ್ತು ಸಂಗ್ರಹಾಲಯವನ್ನು ಹೊಂದಿದೆ. ಇದು ಚಿತ್ತರ್ ಬೆಟ್ಟದಲ್ಲಿ ಇರುವ ಕಾರಣ ಇದನ್ನು ಚಿತ್ತರ್ ಅರಮನೆ ಎಂದೂ ಕೂಡ ಕರೆಯಲಾಗುತ್ತೆ. ಬೆಟ್ಟದ ಕಲ್ಲುಗಳನ್ನ ಅರಮನೆ ನಿರ್ಮಾಣ ಮಾಡಲು ಬಳಸಿಕೊಳ್ಳಲಾಗಿದೆ. ಮಹಾರಾಜ ಉಮೇದ್ ಸಿಂಗ್ 1929ರಲ್ಲಿ ಅರಮನೆ ನಿರ್ಮಾಣಕ್ಕೆ ಅಡಿಗಲ್ಲು ಹಾಕಿದನು. ಕಾರಣ ಆಗಿದ್ದ ಬರಗಾಲಕ್ಕೆ ಜನರಿಗೆ ಉದ್ಯೋಗವನ್ನು ನಿಡುವ ಸಲುವಾಗಿ 1943ರಲ್ಲಿ ನಿರ್ಮಾಣ ಮಾಡಲಾಯಿತು.

06. ಫಲಕ್ನುಮ ಪ್ಯಾಲೆಸ್, ಹೈದ್ರಾಬಾದ್ 


ಚಾರ್ಮಿನಾರ್ನಿಂದ 5 ಕಿ.ಮೀ. ದೂರದಲ್ಲಿರುವ ಫಲಕ್ನುಮ ಹೈದರಾಬಾದ್ ಪ್ರಧಾನಿಯಾಗಿದ್ದ ಆರನೇ ನಿಜಾಮ್ ಮೀರ್ ಮಹಬೂಬ್ ಅಲಿ ಖಾನ್ ನವಾಬ್ ಬಹದ್ದೂರ್ ಅವರ ಚಿಕ್ಕಪ್ಪ ಮತ್ತು ಭಾವ ಎನಿಸಿಕೊಂಡ ನವಾಬ್ ವಿಕರ್ ಉಲ್ ಉಮ್ರಾ ಇದನ್ನ ನಿರ್ಮಾಣವನ್ನ ಮಾಡಿದ್ರು. ಫಾಲಕ್-ನುಮಾ ಇದನ್ನು ಉರ್ದುವಿನಲ್ಲಿ ಆಕಾಶದ ಕನ್ನಡಿ ಅಥವಾ ಆಕಾಶದಂತೆ ಎನ್ನುವ ಅರ್ಥ ನೀಡುತ್ತೆ. 1884ರಲ್ಲಿ ಸರ್ ವಿಕಾರ್ 3 ಅರಮನೆಯ ನಿರ್ಮಾಣಕ್ಕೆ ಅಡಿಪಾಯವನ್ನು ಹಾಕಿದರು. ಅರಮನೆಯ ಒಳಗಿನ ವಿನ್ಯಾಸಗಳನ್ನು ಪೂರ್ಣ ಮಾಡಲಿಕ್ಕೆ ಸುಮಾರು 9 ವರ್ಷಗಳನ್ನು ತೆಗೆದುಕೊಳ್ಳಲಾಗಿತ್ತು. ಅರಮನೆಯು ಚೇಳಿನ ಆಕಾರದಲ್ಲಿ ನಿರ್ಮಿಸಿ ಎರಡು ಕೊಂಡಿಗಳು ಹೋಲುವಂತೆ ಕೊಣೆಗಳನ್ನು ನಿರ್ಮಾಣ ಮಾಡಲಾಗಿದೆ. ವಿಭಿನ್ನ ಮತ್ತು ವಿಶೇಷವಾಗಿದೆ ಅರಮನೆ.

05. ಲಕ್ಷ್ಮಿ ವಿಲಾಸ್ ಪ್ಯಾಲೆಸ್, ಗುಜರಾತ್ 

1890ರಲ್ಲಿ ನಿರ್ಮಾಣ ಮಾಡಲಾದ ಅರಮನೆ ಲಕ್ಷ್ಮಿ ವಿಲಾಸ್ ಪ್ಯಾಲೆಸ್. ಇದನ್ನು ಇಂಡೋ ಸಾರ್ಸೆನಿಕ್ ರಿವೈವಲ್ ಆರ್ಕಿಟೆಕ್ಚರ್, ಮರಾಠಾದಲ್ಲಿ ನಿರ್ಮಾಣ ಮಾಡಲಾಗಿದೆ. ಮಹಾರಾಜ ಸಯಾಜಿರಾವ್ ಗಾಯಕ್ವಾಡ್ 3 ಇದನ್ನು ನಿರ್ಮಿಸಿದ್ದಾನೆ. ಇದನ್ನ ನಿರ್ಮಾಣ ಮಾಡುವುದಕ್ಕೆ ಸುಮಾರು 1.80.000 ಖರ್ಚು ಮಾಡಲಾಗಿದೆ. ಬಂಕಿಹ್ಯಾಮ್ ಅರಮನೆಯ ಗಾತ್ರಕ್ಕಿಂತ ನಾಲ್ಕು ಪಟ್ಟು ಹೆಚ್ಚಿರುವ ಕಟ್ಟಡವು ಅಲ್ಲಿಯವರೆಗೂ ನಿರ್ಮಿಸಲಾದ ಅತಿದೊಡ್ಡ ಖಾಸಗಿ ಅರಮನೆಯಾಗಿದೆ.  ಇದು ಬರೋಡದಾ ಜನರು ಹೆಚ್ಚಿನ ಗೌರವವನ್ನು ಹೊಂದಿರುವಂತಹ ರಾಜ ನಿವಾಸವಾಗಿದೆ. 500 ಎಕರೆಗಳಿಂತ ಹೆಚ್ಚಿರುವ ಅರಮನೆಯು ಮಹಾರಾಜ ಫತೇಹ್ ಸಿಂಗ್ ಮ್ಯೂಸಿಯಂನ್ನು ಹೊಂದಿದೆ.

04. ಉಜ್ಜಯಂತ ಅರಮನೆ, ತ್ರಿಪುರ 


ಅರಮನೆಯನ್ನು 1899 ಮತ್ತು 1901 ನಡುವೆ ತ್ರಿಪುರ ಮಹಾರಾಜ  ರಾಧಾ ಕಿಶೋರ್ ಮಾಣಿಕ್ಯ ನಿರ್ಮಿಸಿದನು. ಇದು ಮೊಘಲ್ ತೋಟಗಳಿಂದ ಆವೃತವಾದ ಒಂದು ಸಣ್ಣ ಸರೋವರದ ದಂಡೆಯಲ್ಲಿದೆ. 1949ರಲ್ಲಿ ತ್ರಿಪುರಾವು ಭಾರತಕ್ಕೆ ಸೇರ್ಪಡೆಯಾಗುವ ವರೆವಿಗೂ ಇದರ ಆಡಳಿತ ಮಣಿಕ್ಯ ರಾಜವಂಶದ ನೆಲೆಯಾಗಿತ್ತು. ಉಜ್ಜಯಂತ ಅರಮನೆ ಇದೀಗ ರಾಜ್ಯ ವಸ್ತುಸಂಗ್ರಹಾಲಯವಾಗಿದೆ. ಹಾಗೂ ಈಶಾನ್ಯ ಭಾರತದ ವಾಸಸ್ಥಾನ, ಕಲೆ, ಸಂಸ್ಕøತಿ, ಸಂಪ್ರದಾಯ ಮತ್ತು ಸಮುದಾಯದ ಕೌಶಲ್ಯಗಳ ಬಗ್ಗೆ ತಿಳಿಸುತ್ತೆ. ಅರಮನೆಗೆ ಉಜ್ಜಯಂತ ಅರಮನೆ ಎಂಬ ಹೆಸರನ್ನು ಮೊದಲು ಏಷ್ಯಾದ ನೊಬೆಲ್ ಪ್ರಶಸ್ತಿ ವಿಜೇತ ರವೀಂದ್ರನಾಥ ಟ್ಯಾಗೋರ್ ನೀಡಿದ್ದಾರೆ.

03. ಯುಡಿ ವಿಲಾಸ್ ಪ್ಯಾಲೆಸ್, ಉದಯ್ಪುರ್  


ಪಿಚೋಲಾ ಸರೋವರದ ದಡದ ಮೇಲೆ ನೆಲೆಗೊಂಡಿದೆ, ಇದು ಮೇವಾರದ ಮಹಾರಾಣನ ಕಾಲಾವದಿಯಲ್ಲಿ ನಿರ್ಮಾಣ ಮಾಡಲಾಗಿದೆ. ಇದು ಸುಮಾರು 200 ಎಕರೆ ವಿಶಾಲವಾದ ಪ್ರದೇಶವನ್ನು ಒಳಗೊಂಡಿದ್ದು ಅರಮನೆಯೂ 50 ಎಕರೆಗಳಷ್ಟು ವಿಶಾಲವಾಗಿದೆ. ಜಿಂಕೆ, ಕಾಡುಹಂದಿ ಮೊದಲಾದ ವನ್ಯ ಜೀವಿಗಳ ತಾಣವಾಗಿದೆ. ಬಹುತೇಕ ಅರಮನೆಗಳನ್ನು ಹೊಂದಿರುವಂತಹ ರಾಜಸ್ಥಾನ ವಾಸ್ತು ಶಿಲ್ಪ ಮತ್ತು ವಿಭಿನ್ನ ಶೈಲಿಯ ಮಹಲುಗಳು ಇವುಗಳನ್ನು ಸೆಳೆಯುತ್ತಿವೆ. ಇಂತಹ ಮಹಲುಗಳ ಸಾಲಿನಲ್ಲಿ ಯುಡಿ ವಿಲಾಸ್ ಪ್ಯಾಲೆಸ್ ವಿಶೇಷವಾಗಿ ಕಂಡುಬರುತ್ತದೆ. ಹೋಟೆಲ್ ಉದ್ಯಮಕ್ಕೆ ಒಳಪಟ್ಟಿರುವ ಅರಮನೆ ಭವ್ಯವಾಗಿದೆ.

02. ಲೇಕ್ ಪ್ಯಾಲೆಸ್, ಉದಯ್ಪುರ್  


ಲೇಕ್ ಅರಮನೆಯು ಭಾರತದ ಉದಯ್ಪುರದ ಲೇಕ್ ಪಿಚೋಲಾದಲ್ಲಿ ಜಗ್ ನಿವಾಸ್ ದ್ವೀಪದಲ್ಲಿ ಇದೆ. ಬೇಸಿಗೆಯ ಅರಮನೆಯಂತೆ ಮಹಾರಾಣ ಜಗತ್ ಸಿಂಗ್ 2 ನಿರ್ದೇಶನದ ಅಡಿಯಲ್ಲಿ 1743 ಮತ್ತು 1746 ನಡುವೆ ಲೇಕ್ ಅರಮನೆಯನ್ನು ನಿರ್ಮಾಣ ಮಾಡಲಾಯಿತು. ಇದನ್ನು ಮೊದಲು ಜಗ್ನಿವಾಸ್ ಅಥವಾ ಜಾನ್ ನಿವಾಸ್ ಎಂದು ಕರೆಯುತ್ತಿದ್ದರು. ಅರಮನೆಯು 83 ಕೊಠಡಿಗಳನ್ನು ಹೊಂದಿದ್ದು ಬಿಳಿ ಅಮೃತಶಿಲೆಯ ಗೋಡೆಗಳನ್ನು ಹೊಂದಿದೆ. ಇದರ ಅಡಿಪಾಯವು 4 ಎಕರೆಯಷ್ಟು ವಿಶಾಲತೆಯನ್ನು ಹೊಂದಿದೆ. ಐತಿಹಾಸಿಕ ಹಿನ್ನಲೆಯನ್ನು ಹೊಂದಿರುವಂತಹ ಅರಮನೆಗೆ ಪ್ರವಾಸಿಗರು ತಂಡೋಪ ತಂಡವಾಗಿ ಬರುತ್ತಾರೆ. ಸಿಟಿ ಅರಮನೆಯ ಜೆಟ್ಟಿಯಿಂದ ಇಲ್ಲಿಗೆ ಬೋಟ್ ವ್ಯವಸ್ಥೆಯನ್ನು ಮಾಡಲಾಗಿದೆ. ಇದೀಗ ಹೋಟೆಲ್ ಆಗಿ ನಿರ್ಮಾಣಗೊಂಡಿದೆ.

01. ಅಂಬಾ ವಿಲಾಸ ಅರಮನೆ, ಮೈಸೂರು  


ಅಂಬಾ ವಿಲಾಸ್ ಅರಮನೆ ಕರ್ನಾಟಕದ ಮೈಸೂರು ನಗರದಲ್ಲಿದೆ. ಇದು ಹಿಂದಿನ ಮೈಸೂರು ಸಂಸ್ಥಾನದ ಒಡೆಯರ್ ವಂಶದ ಅರಸರ ನಿವಾಸ ಹಾಗೂ ದರ್ಬಾರ್ ಶಾಲೆಯಾಗಿತ್ತು. ಇದನ್ನು 1897ರಲ್ಲಿ ನಿರ್ಮಾಣ ಮಾಡಲು ಆರಂಬಿಸಿ 1912ರಲ್ಲಿ ಪೂರ್ಣಗೊಳಿಸಲಾಯಿತು. ಮೈಸೂರಿನ ಪ್ರವಾಸಿ ಸ್ಥಳಗಳಲ್ಲಿ ಮುಖ್ಯವಾದ ಸ್ಥಳ ಮೈಸೂರಿನ ಅರಮನೆ. ಇದನ್ನು ಇಂಡೋ ಸಾರ್ಸೆನಿಕ್ ವಾಸ್ತು ಶೈಲಿಯಲ್ಲಿ ನಿರ್ಮಾಣ ಮಾಡಲಾಗಿದೆ. ಇದರ ವಿನ್ಯಾಸ ಮತ್ತು ನಿರ್ಮಾಣ ಮಾಡಿದವರು ರಾಜಮಾತೆ ಪ್ರಮೋದಾ ದೇವಿ ಒಡೆಯರ್. 1399ರಿಂದ 1947 ವರೆವಿಗೂ ಇದು ಒಡೆಯರ್ ವಂಶದ ಅರಸರಿಂದ ಆಳಲ್ಪಟ್ಟಿತು. ಇಲ್ಲಿ ವಿಜಯದಶಮಿಯಂದು ನಡೆಯುವ ಜಂಬೂ ಸವಾರಿ, ದಸರಾ ಉತ್ಸವ ವಿಶ್ವ ವಿಖ್ಯಾತಿಯನ್ನು ಪಡೆದುಕೊಂಡಿದೆ. ದೇಶ ವಿದೇಶಗಳಿಂದ ಸಾವಿರಾರು ಪ್ರವಾಸಿಗರು ಇಲ್ಲಿಗೆ ಬರುತ್ತಾರೆ.ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಪ್ರಪಂಚದ 10 ಎತ್ತರದ ಪರ್ವತಗಳು - 26

ಭಾರತದ 10 ಪ್ರಸಿದ್ಧ ರಾಜರು - 22

ಕರ್ನಾಟಕದ 10 ಸುಂದರ ಬೆಟ್ಟಗಳು - 25