ಅತ್ಯಂತ ಅಪಾಯಕಾರಿ ನಾಯಿಗಳು - 03

                

10. ಅಮೇರಿಕನ್ ಬುಲ್ ಡಾಗ್ 

ಹೇಸರೇ ಹೇಳುವಂತೆ ಅಮೇರಿಕನ್ ಬುಲ್ ಡಾಗ್ ಮೂಲತಃ ಅಮೇರಿಕ ಸಂಯುಕ್ತ ಸಂಸ್ಥಾನಕ್ಕೆ ಸೇರಿದ್ದು. ಇದರ ಮೂಲ ಅಮೇರಿಕಾವೇ. ಇಲ್ಲಿದ ಆರಂಭವಾದ ಇದರ ಕಾಯಕದ ವೃತ್ತಿ ಸ್ಪೇನ್, ಇಂಗ್ಲೆಂಡ್, ಇಂಡಿಯಾ ಸೇರಿದಂತೆ ಹಲವಾರು ದೇಶಗಳಲ್ಲಿ ನಡೆಯುತ್ತೆ. ಹಲವು ದೇಶಗಳಲ್ಲಿ ಇದರ ಹೆಜ್ಜೆ ಇರುವುನ್ನು ಕಾಣ್ಬೋದು. 
ಇದರ ಇತಿಹಾಸಕ್ಕೆ ಸಂಭಂದಪಟ್ಟಂತೆ ಯುದ್ದಗಳಲ್ಲಿ ಇವುಗಳನ್ನು ಬಳಸಲಾಗುತ್ತಿತ್ತು, ಅರಮನೆಗಳಲ್ಲಿ ಮತ್ತು ಬೇಟೆಯಾಡುವ ಸಂದರ್ಭಗಳಲ್ಲಿ ಇವುಗಳು ಜೊತೆಯಲ್ಲಿ ಇರ್ಬೇಕಿತ್ತಂತೆ. ಜೊತೆಗೆ ಇವುಗಳಿಗೆ ಅನೇಕ ಸ್ಪರ್ದೆಗಳನ್ನ ಮಾಡಿಸಿ ಅವುಗಳ ಶಕ್ತಿ ಮತ್ತು ಸಾಮಥ್ರ್ಯದ ಅಳತೆಯನ್ನ ಮಾಡಲಾಗುತ್ತಿತ್ತು. ಅತೀ ಬಲಿಷ್ಟ ಮತ್ತು ಶಕ್ತಿ ಶಾಲಿ ನಾಯಿಗಳ ಜಾತಿಗೆ ಸೇರಿದೆ ಅಮೇರಿಕನ್ ಬುಲ್ ಡಾಗ್.
ಇದರ ತೂಕ 32ರಿಂದ 54 ಕೆಜಿ ಮತ್ತು ಎತ್ತರ 50ರಿಂದ65 ಸೆಂಟಿ ಮೀಟರ್ ಹೊಂದಿರುವ ಈ ನಾಯಿ ವಯಸ್ಸಿನಲ್ಲಿ 10ರಿಂದ 15 ವರ್ಷ ಬದುಕುತ್ತವೆ. ಅಗಲವಾದ ಬಾಯನ್ನು ಹೊಂದಿದ್ದು ಬಿಳಿ, ಕಪ್ಪು ಮಿಶ್ರಿತ ಬಿಳಿ, ಕಂದು ಕಂದು ಮಿಶ್ರಿತ ಬಿಳಿ ಬಣ್ಣದ ನಾಯಿಗಳು ಈ ತಳಿಯಲ್ಲಿವೆ. ಮನೆಯ ಯಜಮಾನನ ಜೊತೆ ಸುಲಭವಾಗಿ ಹೊಂದಿಕೊಳ್ಳುವ ಈ ಪ್ರಾಣಿ ಅಷ್ಟೇ ವೇಗವಾಗಿ ಅಪರಿಚಿತರ ಮೇಲೆ ಆಕ್ರಮಣವನ್ನ ಮಾಡುತ್ತೆ. ಆದ್ದರಿಂದಲೇ ಇದಕ್ಕೆ ಅತ್ಯಂತ ಅಪಾಯಕಾರಿ ಶ್ವಾನಗಳಲ್ಲಿ 10 ಸ್ಥಾನ ನೀಡಲಾಗಿದೆ.

09. ಬಾನ್ಡಾಗ್ 

1576ರಲ್ಲಿ ಹುಲ್ಲುಗಾವಲುಗಳ ರಕ್ಷಣೆ, ಗೋಮಾಳ ಪ್ರದೇಶಗಳ ರಕ್ಷಣೆ ಮತ್ತು ಕಾಡು ಪ್ರಾಣಿಗಳಿಂದ ರಕ್ಷಣೆ ಪಡೆಯುವುದಕ್ಕೆ ಈ ಪ್ರಾಣಿಯನ್ನ ಬಳಕೆ ಮಾಡಿಕೊಳ್ಳಲಾಗುತ್ತಿತ್ತು. ಮೂಲತಃ ಈ ತಳಿ ಇಂಗ್ಲೆಂಡ್ ದೇಶಕ್ಕೆ ಸೇರಿದ್ದು. ಪ್ರಪಂಚದ ಅನೇಕ ರಾಷ್ಟ್ರಗಳಲ್ಲಿ ತನ್ನ ನೆಲೆಯನ್ನು ಕಂಡುಕೊಂಡು ಸಂತತಿಗಳನ್ನ ಹೆಚ್ಚಿಸಿಕೊಂಡಿದೆ.
ಗಟ್ಟಿಮುಟ್ಟಾದ ಮೈಕಟ್ಟು ಬಲವಾದ ಹಿಡಿತದಿಂದ ಯಾವುದೇ ವಸ್ತುವನ್ನು ಬಿಗಿಯಾಗಿ ಹಿಡಿಯುವ ಸಾಮಾಥ್ರ್ಯವನ್ನು ಹೊಂದಿರುವಂತ ಪ್ರಾಣಿ ಇದು. ಅತೀ ಅಪಾಯಕಾರಿ ಕೂಡ. ಇದನ್ನ ತರಬೇತಿ ಮಾಡುವವರು ಕೂಡ ಅತ್ಯಂತ ಜಾಗರೂಕರಾಗಿ ಇರಬೇಕು ಇಲ್ಲದಿದ್ರೆ ಇದರ ಬಾಯಿ ಸಿಕ್ಕಿರಂತು ಕಥೆ ಮುಗಿದ ಗಾಗೆ ಅಷ್ಟು ಗಟ್ಟಿಯಾಗಿ ಬೇಟೆಯನ್ನ ಹಿಡಿದುಕೊಳ್ಳುತ್ತೆ.
ಬಾನ್ಡಾಗ್ ಹೆಚ್ಚಾಗಿ ಕಾವಲು ಕಾಯಲು, ಆಸ್ತಿಯನ್ನ ರಕ್ಷಣೆ ಮಾಡಲು, ಬೇಟೆಯಾಡುವುದು ಮತ್ತು ಪ್ರಾಣಿಗಳರಕ್ಷಣೆಗೆ ಈ ಶ್ವಾನ ತಳಿಯನ್ನ ಸಾಕುತ್ತಿದ್ದರು. ಅಷ್ಟೇ ಕಟ್ಟು ನಿಟ್ಟಾಗಿ ಯಜಮಾನನು ಹೇಳಿಕೊಟ್ಟ ಪಾಠವನ್ನ ಕೇಳಿ ಕಾವಲು ಕಾಯುತ್ವೆ. ಒರಟು ಕೂದಲು ಮತ್ತು ದೈತ್ಯ ದೇಹವನ್ನು ಹೊಂದಿರುವ ಈ ಪ್ರಾಣಿ ಹೆಚ್ಚು ಅಪಾಯಕಾರಿ.

08. ನಿಯೋಪಾಲಿಟಿನ್ ಮ್ಯಾಸ್ಟಿಫ್ 

ನಿಯೋಪಾಲಿಟಿನ್ ಮ್ಯಾಸ್ಟಿಫ್ ಅತ್ಯಂತ ಪ್ರಾಚೀನ ಶ್ವಾನತಳಿ ಅಂತಾನೇ ಹೇಳ್ಬೋದು. ಮೂಲತಃ ಇಟಲಿಯಾದ್ರೂ ಯೂರೋಪಿನಾದ್ಯಂತ ಹೆಚ್ಚು ಹೆಸರನ್ನಗಳಿಸಿದ್ದ ಶ್ವಾನ. ಎರಡನೇ ಮಹಾಯುದ್ದದ ನಂತರ ಈ ಶ್ವಾನತಳಿ ಕಾಣೆಯಾಗಿತ್ತು. ನಂತರದ ದಿನಗಳಲ್ಲಿ ಇದನ್ನು ಪತ್ತೆ ಹಚ್ಚಿ ನಿಯೋಪಾಲಿಟಿನ್ ಮ್ಯಾಸ್ಟಿಫ್ ಹೆಸರಿನಿಂದ ಕರೆಯಲಾಗುತ್ತಿದೆ.
ಮನೆಯನ್ನು ನುಗ್ಗುವ ಅಪರಿಚಿತರನ್ನು ಅತೀ ಸೂಕ್ಷ್ಮವಾಗಿ ಗಮನಿಸಿ ಅವರ ಮೇಲೆ ದಾಳಿ ಮಾಡುವ ಮತ್ತು ಮನೆಯನ್ನು ಕಾಯುವ ನಿಯತ್ತಿನ ಬಹಳ ಗಟ್ಟಿ ಮುಟ್ಟಾದ ಪ್ರಾಣಿ ನಿಯೋಪಾಲಿಟಿನ್ ಮ್ಯಾಸ್ಟಿಫ್. ಇದಕ್ಕೆ ಅತೀ ಪ್ರಾಚೀನ ಇತಿಹಾಸವಿದ್ದರು, ಪ್ರಸ್ಥುತ ದಿನಗಳಲ್ಲಿ ಹೆಚ್ಚು ಮನ್ನಣೆಯನ್ನ ಗಳಿಸುತ್ತಾ ಎಲ್ಲರ ಪ್ರೀತಿಗೆ ಪಾತ್ರವಗಿದೆ ಆದ್ರೆ ಅದರ ಡೇಂಜರಸ್ ಗುಣವನ್ನ ಇನ್ನೂ ಬಿಟ್ಟಿಲ್ಲಾ.
ಈ ನಾಯಿಗಳು ಅಪರಿಚಿತರನ್ನು ಮತ್ತು ಅಪರಿಚತ ಪ್ರಾಣಿಗಳನ್ನು ಹತ್ತಿರ ಬಿಟ್ಟುಕೊಳ್ಳದೆ ಆಕ್ರಮಣಕಾರಿ ನೀತಿಯನ್ನ ಅನುಸರಿಸುತ್ತೆ. ಕುಟುಂಬದಲ್ಲಿ ಒಬ್ಬನಾಗಿ ಮನೆಯನ್ನ ಶತ್ರುಗಳಿಂದ ರಕ್ಷಿಸುತ್ವೆ. ಆದರೆ ಮಕ್ಕಳು ಇದರ ಜೊತೆ ಕಾಲಕಳೆಯುವುದು ಕಷ್ಟ, ಯಾಕೆಂದ್ರೆ ಇದರ ವರ್ತನೆ ಯಾವ ಸಮಯದಲ್ಲಿ ಬೇಕಾದರು ಬದಲಾಗಬಹುದು.

07. ವುಲ್ಫ್ ಡಾಗ್ 

ವುಲ್ಫ್ ಡಾಗ್ ಇದನ್ನ ತೋಳ ನಾಯಿಯ ಹೈಬ್ರಿಡ್ ತಳಿ ಎಂದು ಕರೆಯಲಾಗುತ್ತೆ. ಉದ್ದವಾದ ಕೂದಲುಗಳು, ನರಿಯಬಾಲ, ತೋಳದ ಮುಖ ಇವೆಲ್ಲವನ್ನು ಮಿಶ್ರಿತಗೊಂಡ ತಳಿ ಇದು. ಬೂದು ಬಣ್ಣದ ತೋಳಗಳ ವರ್ಗಗಳಿಗೆ ಸೇರುತ್ತವೆ ಈ ಶ್ವಾನ. ಕಾಡಿನಲ್ಲಿ ಹೆಚ್ಚಾಗಿ ಕಂಡು ಬರುತ್ತಿದ್ದ ಇವು. ಮಾನವನ ಪ್ರವೇಶದಿಂದ ಸಂತತಿ ಕ್ಷೀಣಿಸುತ್ತ ಬಂದಿತು. ಇತ್ತೀಚಿನ ದಿನಗಳಲ್ಲಿ ಯೂರೋಪ್ ಮತ್ತು ಉತ್ತರ ಅಮೇರಿಕದಾದ್ಯಂತ ಇವುಗಳ ಸಂತತಿಗಳನ್ನ ಕಾಣ್ಬೋದು. 
ತೋಳಗಳ ಹೋಲಿಕೆಯಿದ್ದರು ಕೂಡ ಆ ನಡವಳಿಕೆಗಳು ಹೆಚ್ಚು ಇರುವುದಿಲ್ಲ. ಸೂಕ್ಷ್ಮವಾಗಿ ಗಮನಿಸಿ ದಾಳಿ ಮಾಡುವ ವರ್ತನೆಯನ್ನ ಇದು ಹೊಂದಿದೆ. ವುಲ್ಪ್ ಡಾಗ್ ಹೆಚ್ಚು ಮಾನವರ ಜೊತೆ ಬೆರೆತುಕೊಳ್ಳುವ ಮತ್ತು ಹೊಂದಿಕೊಳ್ಳುವ ಸ್ವಾಭಾವವನ್ನು ಹೊಂದಿದೆ.
ವುಲ್ಪ್ ಡಾಗ್ ಹೆಚ್ಚಾಗಿ ಚಳಿ ಪ್ರದೇಶದಲ್ಲಿ ಹೊಂದಿಕೊಂಡು ಬದುಕುತ್ತವೆ. ತೋಳಗಳ ಹೋಲಿಕೆಯಿದ್ದರು ನಾಯಿಯ ಸ್ವಾಭವನ್ನು ಬಿಟ್ಟಿಲ್ಲ. ಓಡುವ ವೇಗ ಮತ್ತು ಅದರ ಭೀಕರವಾದ ಹಿಡಿತಕ್ಕೆ ಎಂತ ವಸ್ತುವಾದರು ತುಂಡಾಗಲೇ ಬೇಕು ಅತ್ಯಂತ ಅಪಾಯಕಾರಿ ಶ್ವಾನಗಳ ಸಂತತಿಯಲ್ಲಿ ಈ ಪ್ರಾಣಿ 07ನೇ ಸ್ಥಾನವನ್ನ ಪಡೆದುಕೊಂಡಿದೆ. 

06. ಬೋಯೊರ್ಬೊಯೆಲ್

ದಕ್ಷಿಣ ಆಫ್ರಿಕಾದಲ್ಲಿ ಮ್ಯಾಸ್ಟಿಪ್ ಎಂದು ಕರೆಯೋ ಬೋಯೊರ್ಬೊಯೆಲ್ ಹೆಚ್ಚಿನ ಸಂಖ್ಯೆಯಲ್ಲಿ ಕಂಡುಬರುತ್ತೆ. ಇದರ ಮೂಲ ಕೂಡ ದಕ್ಷಿಣ ಆಫ್ರಿಕಾ. ಮನೆ ಕಾಯಲು ಮತ್ತು ಹೆಚ್ಚಾಗಿ ಕಾವಲು ಕಾಯಲು ಈ ನಾಯಿಗಳನ್ನ ಸಾಕಲಾಗುತ್ತೆ. ಶ್ವಾನ ತಳಿಗಳಲ್ಲೇ ಅತ್ಯಂತ ಶಕ್ತಿ ಶಾಲಿ ಶ್ವಾನ ಎನಿಸಿಕೊಂಡಿದೆ. ಡಚ್, ಫ್ರಂಚ್, ಬ್ರಿಟೀಶ್ ಹೊಸಹಾತುಗಾರರು ಇದನ್ನು ದಕ್ಷಿಣ ಆಫ್ರಿಕಾಗೆ ತಂದಿದ್ದರು ಎಂಬ ಇತಿಹಾಸವಿದೆ.
ಬೋಯೊರ್ಬೊಯೆಲ್ ಪ್ರಪಂಚದ ಮೊದಲ ಶುದ್ಧ ಶ್ವಾನ ತಳಿ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಇದನ್ನು ಡಾಗ್ ವಲ್ರ್ಡ್ ಮ್ಯಾಗಜೀನ್ ಲೇಖನದಲ್ಲಿ ಉಲ್ಲೇವಾಗಿರೋದನ್ನ ಕಾಣ್ಬೋದು. ಈ ತಳಿಯ ಶ್ವಾನಗಳು ಹೆಚ್ಚು ಶಾಂತ, ಸ್ಥಿರ, ವಿಶ್ವಾಸವನ್ನ ಹೊಂದಿವೆ. ಆಜ್ಞಾಧಾರಕ ಹಾಗೂ ಬುದ್ದಿವಂತಿಕೆಯಿಂದ ಹೆಚ್ಚು ಪ್ರಸಿದ್ದಿಯನ್ನ ಪಡೆದುಕೊಂಡಿವೆ.
ಈ ತಳಿಯ ಶ್ವಾನಗಳು 60ರಿಂದ 80 ಕೆ.ಜಿ ತೂಕವಿದ್ದು, 60ರಿಂದ 70 ಸೆಂಟಿ ಮೀಟರ್ ಎತ್ತರವನ್ನ ಇವು ಬೆಳೆಯುತ್ವೆ. ಕಪ್ಪು ಮಿಶ್ರಿತ ಕಂದು ಬಣ್ಣ ಮತ್ತು ಕಪ್ಪು ಬಣ್ಣದ ಶ್ವಾನಗಳು ಇವೆ. 2002ರಲ್ಲಿ ರೂಮೇನಿಯ, 2010ರಲ್ಲಿ ಡೆನ್ಮಾರ್ಕ್, 2011ರಲ್ಲಿ ರಷ್ಯಾ ಮತ್ತು ಉಕ್ರೇನ್ ದೇಶಗಳು ಈ ತಳಿಯ ಶ್ವಾನಗಳನ್ನ ನಿಷೇಧ ಮಾಡಿವೆ. ಹಾಗೂ ಇದನ್ನ ಹೊಂದಬೇಕಾದ್ರೆ ಕಾನೂನಿನ ನಿಯಮಗಳನ್ನ ಪಾಲಿಸ ಬೇಕಾಗುತ್ತೆ. ಇದ್ರಿಂದಲೇ ಗೊತ್ತಾಗುತ್ತೆ ಎಷ್ಟು ಆಪಾಯಕಾರಿ ಪ್ರಾಣಿ ಎಂದು.

05. ಡಾಗೋ ಅರ್ಜಂಟಿನೋ 

ಅತ್ಯಂತ ಅಪಾಯಕಾರಿ ಡಾಂಗ್ ಎಂದು ಕರೆಸಿಕೊಳ್ಳೊ ಡಾಗೋ ಅರ್ಜಂಟಿನೋ ದೈತ್ಯ ಗಾತ್ರದ ಬಿಳಿಯ ನಾಯಿ. ಬಲಿಷ್ಟವಾದ ದೇಹದ ಮೈಕಟ್ಟನ್ನು ಹೊಂದಿರೋ ಶ್ವಾನ ತಳಿ. ಹೆಚ್ಚು ಧೈರ್ಯವುಳ್ಳ, ಮಾನವನ ಒಡನಾಡಿ ಮತ್ತು ಹೊಂದಾಣಿಕೆಯನ್ನು ಮಾಡಿಕೊಂಡು ಹೋಗುವ ಶ್ವಾನ. ಅರ್ಜಂಟೈನ ಮತ್ತು ಯೂರೋಪ್‍ನ ಪ್ರಮುಖ ದೇಶಗಳಲ್ಲಿ ಇವು ಕಂಡುಬರುತ್ವೆ.
ಡಾಗೋ ಅರ್ಜಂಟಿನೋ ಬೇಟೆಗಾರಿಕೆಗೆ ಹೆಸರುವಾಸಿಯಾದಂತ ಶ್ವಾನ, ವಸ್ತುಗಳನ್ನ ಹುಡುಕುವುದು, ಪೋಲಿಸರಿಗೆ ನೆರವು ನೀಡುವುದು, ಅಂದರ ಮಾರ್ಗದರ್ಶೀಯಾಗಿ, ಝಡ್ ಮತ್ತು ಮಿಲಿಟರಿ ಕೆಲಸಗಳಲ್ಲಿ ಹೆಚ್ಚು ಈ ಶ್ವಾನವನ್ನ ಬಳಸಲಾಗುತ್ತದೆ. 
ಇದರ ಭಯಂಕರ ನಡವಳಿಕೆಗಳಿಂದ ಉಕ್ರೇನ್, ಐಸ್ಯಾಂಡ್, ಆಸ್ಟ್ರೇಲಿಯಾ ಮತ್ತು ಸಿಂಗಾಪುರ್ ದೇಶಗಳು ಸೇರಿದಂತೆ ಅನೇಕ ರಾಷ್ಟ್ರಗಳಲ್ಲಿ ಈ ಶ್ವಾನ ತಳಿಯನ್ನ ನಿಶೇಧಮಾಡಲಾಗಿದೆ. ಇದರಿಂದಾನೆ ಡಾಗೋ ಅರ್ಜಂಟಿನೋ ಶ್ವಾನ ಎಷ್ಟು ಅಪಾಯ ಅಂತ ಗೊತ್ತಾಗುತ್ತೆ. ಇದರಿಂದ ಆದೊಷ್ಟು ದುರಾನೇ ಇರೋದು ಒಳ್ಳೆದು.

04. ಪೆರೊ ಡಿ ಪ್ರೆಸ್ಸಾ ಕನಾರಿಯೊ 

ಪೆರೊ ಡಿ ಪ್ರೆಸ್ಸಾ ಕನಾರಿಯೊ ಅಲಿಯಾಸ್ ಕ್ಯಾನರಿ ಮ್ಯಾಸ್ಟಿಫ್ ಒಂದು ರೀತಿಯ ಶ್ವಾನ ತಳಿ. ಇದನ್ನ ಅಡ್ಡ ಹೆಸರಾಗಿ ಸ್ಟಾಬೆರಿ ಎಂದು ಕೂಡ ಕರೆಯುತ್ತಾರೆ. 58 ರಿಂದ 60 ಸೆಂಟಿ ಮೀಟರ್ ಎತ್ತರ, 55 ಕೆ. ಜಿಯಷ್ಟು ತೂಕವನ್ನು ಹೊಂದಿದೆ. ಸರಾಸರಿ 8 ರಿಂದ 10 ವರ್ಷಗಳವರೆಗೆ ಬದುಕುತ್ತವೆ. ಬೆಕ್ಕಿನ ತರ ದೃಡಕಾಯವಾದ ದೇಹದ ಆಕಾರವನ್ನು ಹೊಂದಿರುವುದರ ಜೊತೆಗೆ ಹೆಚ್ಚು ಬಲಿಷ್ಟವು ಆಗಿದೆ ಈ ಶ್ವಾನ ತಳಿ.
2001 ಕ್ಯಾಲಿಪೋರ್ನಿಯಾದಲ್ಲಿ 33 ವರ್ಷದ ಮಹಿಳೆಯ ಮೇಲೆ ಎರಡು ಶ್ವಾನಗಳು ದಾಳಿ ಮಾಡಿ ಆಕೆಯನ್ನು ಕೊಂದಿವೆ. 2006ರಲ್ಲಿ ಫ್ಲೋರಿಡಾ ಪ್ರದೇಶದಲ್ಲಿ 30 ವರ್ಷದ ಮಹಿಳೆಯನ್ನು ಕೊಂದಿದೆ. 2012ರಲ್ಲಿ ಕ್ಯಾಲಿಪೋರ್ನಿಯಾದಲ್ಲಿ 21 ವರ್ಷದ ವ್ಯಕಿಯ ಮೇಲೆ ದಾಳಿ ಮಾಡಿ ಕೊಂದಿವೆ, ಅದೇ ವರ್ಷ ಜಾರ್ಜಿಯ ಪ್ರದೇಶದಲ್ಲಿ ಮಹಿಳೆಯ ಮೇಲೆ ದಾಳಿ ಮಾಡಿವೆ. ಹೇಳುತ್ತಾ ಹೋದರೆ ಇದರ ಪಟ್ಟಿ ಬೆಳೆಯುತ್ತಾ ಹೋಗುತ್ತದೆ.
ಈ ಪ್ರಾಣಿಯ ನಡವಳಿಕೆಯಿಂದ ಬೇಸತ್ತ ದೇಶಗಳು ತಮ್ಮ ದೇಶದಾದ್ಯಂತ ಈ ಪ್ರಾಣಿಗಳನ್ನ ನಿಷೇಧ ಮಾಡಿವೆ. ಅದರಲ್ಲಿ ಆಸ್ಟ್ರೇಲಿಯಾ ಮತ್ತು ನ್ಯೂಜಿಲ್ಯಾಂಡ್ ದೇಶಗಳು ಇವೆ. ಈ ದೇಶಗಳು ಶ್ವಾನಗಳನ್ನ ಆಮದು ಮಾಡಿಕೊಳ್ಳುವುದನ್ನ ಕೂಡ ನಿಷೇಧ ಮಾಡಿವೆ. ಅಪಾಯಕಾರಿ ಶ್ವಾನಗಳ ಪಟ್ಟಿಯಲ್ಲಿ 4ನೇ ಸ್ಥಾನವನ್ನ ಪಡೆದುಕೊಂಡಿದೆ.

03. ಫಿಲಾ ಬ್ರಸಿಲೆರೊ

15ನೇ ಶತಮಾನದ ಇತಿಹಾಸವನ್ನು ಹೊಂದಿರುವ ಫಿಲಾ ಬ್ರಸಿಲೆರೊ ಶ್ವಾನತಳಿ, ಒಂದು ಅಪರೂಪದ ಶ್ವಾನ ತಳಿ ಅಂತಾನೆ ಹೇಳ್ಬೋದು. ಇದರ ಮೂಲ ಬ್ರೆಜಿಲ್, 50 ಕೆ.ಜಿ ತೂಕ, 65 ರಿಂದ 75 ಸೆಂಟಿಮೀಟರ್ ಎತ್ತರ ಮತ್ತು 9 ರಿಂದ 11 ವರ್ಷಗಳವರೆಗೆ ಬದುಕಬಲ್ಲ ಸಾಮಥ್ರ್ಯವನ್ನ ಹೊಂದಿರುವ ಪ್ರಾಣಿ ಇದು. ಹೆಚ್ಚು ಬಲಿಷ್ಟವು ಪ್ರಾಮಾಣಿಕವು ಈ ಶ್ವಾನತಳಿಗಿದೆ.
ಶಿಕಾರಿ ಮಾಡುವುದು, ಜಾನುವಾರುಗಳನ್ನು ಕಾಯುವುದು, ಆಕ್ರಮಣ ಮಾಡುವುದು ಸೇರಿದಂತೆ ಮೊದಲಾದ ಸಾಹಸಮಯ ಕೆಲಸಗಳಿಗೆ ತನ್ನ ಹೆಸರನ್ನು ಅಚ್ಚುಹೊತ್ತಿದೆ. ಹೆಚ್ಚು ಹೆಸರುಗಳಿಸಿದಂತೆ ಅಪಾಯಗಳು ಈ ಶ್ವಾನ ತಳಿಯ ಬೆನ್ನ ಹಿಂದೆಯೇ ಇರುವುದನ್ನು ಕಾಣ್ಬೋದು. ಆ ಕಾರಣಕ್ಕೆ ಅಪಾಯಕಾರಿ ಶ್ವಾನದಲ್ಲಿ 3ನೇ ಸ್ಥಾನದಲ್ಲಿದೆ ಫಿಲಾ ಬ್ರಸಿಲೆರೊ.
ಈ ಶ್ವಾನವನ್ನು ಕೂಡ ಅನೇಕ ದೇಶಗಳು ನಿಷೇಧ ಮಾಡಿವೆ. ಜೊತೆಗೆ ಆಮದನ್ನು ನಿರ್ಭಂದಿಸಿವೆ. ಪ್ರಮುಖವಾಗಿ ಯುನೈಟೆಡ್ ಕಿಂಗ್‍ಡಮ್, ಡೆನ್ಮಾರ್ಕ್, ನಾರ್ವೆ, ಮಾಲ್ಟಾ, ಸೈಪ್ರಸ್, ಆಸ್ಟ್ರೇಲಿಯಾ, ನ್ಯೂಜಿಲ್ಯಾಂಡ್, ಟ್ರಿನಿಡಾನ್ ಮತ್ತು ಟೂಬಾಗೊ ದೇಶಗಳನ್ನ ಪಟ್ಟಿ ಮಾಡ್ಬೋದು.

02. ಟೊಸ ಡಾಗ್

ಮೂಲ ತಳಿ ಜಪಾನಿನ ಟೊಸ ಇನು ಅಪರೂಪದ ಶ್ವಾನ ತಳಿ. ಇದರ ಇತಿಹಾಸವನ್ನು ನೋಡಿದರೆ 18ನೇ ಶತಮಾನದಲ್ಲಿ ಬೆಳಕಿಗೆ ಬಂದು ಹೆಚ್ಚು ಪ್ರಚಾರನ್ನ ಗಳಿಸಿಕೊಂಡ ಶ್ವಾನ ಇದು. ಹೆಚ್ಚಿನದಾಗಿ ಮನೆ ಕಾಯಲು, ಎಸ್ಟೇಟ್ ನೋಡಿಕೊಳ್ಳಲು ಈ ತಳಿಯ ಪ್ರಾಣಿಗಳನ್ನ ಬಳಸಿಕೊಳ್ಳಲಾಗುತ್ತಿತ್ತು. ಗಟ್ಟಿ ಮುಟ್ಟಾದ ಸೂಕ್ಷ್ಮ ಸ್ವಾಭಾವದ ಪ್ರಾಣಿ ಇದು.
ಟೊಸ ಇನು ಶ್ವಾನ ತಳಗಳಲ್ಲಿ ಅತ್ಯಂತ ಅಪಾಯಕಾರಿ ಎಂದು ಪರಿಗಣಿಸಲಾಗಿದೆ. ಇದರಿಂದಾನೆ ಆಸ್ಟ್ರೇಲಿಯಾ, ಸೈಪ್ರಸ್, ಡೆನ್ಮಾರ್ಕ್ ಹಾಂಕ್ ಕಾಂಗ್, ಇಸ್ರೆಲ್, ಮಲೇಷ್ಯಾ ಸೇರಿದಂತೆ ಸುಮಾರು ಹತ್ತಕ್ಕಿಂತ ಹೆಚ್ಚು ದೇಶಗಳಲ್ಲಿ ಈ ಶ್ವಾನ ತಳಿಯನ್ನ ನಿಷೇಧ ಮಾಡಲಾಗಿದೆ. ಮಾನವರು ಮತ್ತು ಮಕ್ಕಳ ಮೇಲಿನ ದಾಳಿಯನ್ನು ಪರಿಗಣಿಸಿ ಅಲ್ಲಿ ಕಟ್ಟು ನಿಟ್ಟಿನ ಕಾನೂನುಗಳನ್ನು ಕೂಡ ತರಲಾಗಿದೆ.

01. ಅಮೇರಿಕನ್ ಪಿಟ್ ಬುಲ್ ಟೆರಿಯರ್

ಯುನೈಟೆಡ್ ಸ್ಟೇಟ್ಸ್ ಮತ್ತು ಯುನೈಟೆಟ್ ಕಿಂಗ್‍ಡಮ್ ಮೂಲವಾಗಿರುವ ಅಮೇರಿಕನ್ ಪಿಟ್ ಬುಲ್ ಟೆರಿಯರ್ ಅತ್ಯಂತ ಅಪಾಯಕಾರಿ ಶ್ವಾನ ತಳಿಯಲ್ಲಿ ಮೊದಲನೆ ಸ್ಥಾನವನ್ನ ಪಡೆದುಕೊಂಡಿದೆ. ಈ ಶ್ವಾನ ತಳಿಯು ನೋಡುವುದಕ್ಕೆ ಚಿಕ್ಕವಾಗಿದ್ದರು ಆಗಾದವಾದ ಶಕ್ತಿಯನ್ನು ಹೊಂದಿದೆ. ಅತಿ ಬಲಶಾಲಿ ಮತ್ತು ಪ್ರಮಾಣಿಕ ಶ್ವಾನ ಎಂದು ನಂಬಲಾಗಿದೆ.
ಎರಡನೇ ಮಹಾಯುದ್ದದ ಸಮಯದಲ್ಲಿ ಈ ಶ್ವಾನ ತಳಿಗೆ ಅಮೇರಿಕಾದ ಬಾವುಟವಿರುವ ಚಿತ್ರ ಪಟ ಹೆಚ್ಚು ಚರ್ಚೆಗೆ ಅವಕಾಶವನ್ನ ನೀಡಿತ್ತು. ಇದರ್ಥ ಅಮೇರಿಕಾಕ್ಕೆ ಪ್ರಾಧಾನ್ಯತೆ ನೀಡಬೇಕೆಂದು ಆಗಿತ್ತು. ಇದರ ಮೂಲಕವಾಗಿ ಎಷ್ಟೋ ವಿಷಯಗಳು, ಮತ್ತು ಕೆಲಸಗಳಿಗೆ ಈ ಶ್ವಾನ ಲಾಂಚನವಾಗಿದ್ದನ್ನು ಕಾಣಬಹುದು.
ಶ್ವಾನ ತಳಿಗಳಲ್ಲಿ ಅತ್ಯಂತ ಅಪಾಯಕಾರಿ ಪ್ರಾಣಿ ಎನಿಸಿಕೊಂಡಿರೊ ಅಮೇರಿಕನ್ ಪಿಟ್ ಬುಲ್ ಟೆರಿಯರ್ ಈಕ್ವಡಾರ್ಮ ಮಲೇಷ್ಯಾ, ನ್ಯೂಜಿಲ್ಯಾಂಡ್, ಸಿಂಗಪೂರ್, ವೆನಿಜುಲಾ, ಇಸ್ರೆಲ್,  ಫ್ರಾನ್ಸ್, ಜರ್ಮನಿ ಸೇರಿದಂತೆ ಹಲವು ದೇಶಗಳಲ್ಲಿ ಕಾನೂನಾತ್ಮವಾಗಿ ನಿಷೇಧವನ್ನು ಹೇರಲಾಗಿದೆ. ಜೊತೆಗೆ ಇದನ್ನ ಸಾಕುವುದು ಕಾನೂನು ಬಾಹಿರ. ಆ ತಳಿಯನ್ನು ಹೋಲುವ ಶ್ವಾನಗಳನ್ನು ಸಾಕುವುದು ಅಪರಾದವಾಗಿದೆ ಅಷ್ಟರ ಮಟ್ಟಿಗೆ ಶ್ವಾನಗಳು ಭಯನ್ನು ಹುಟ್ಟಿಸಿವೆ, ಹಾನಿಯನ್ನು ಉಂಟುಮಾಡಿವೆ. 

ಮಂಜುನಾಥ್ ಜೈ
manjunathahr1991@gmail.com

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಪ್ರಪಂಚದ 10 ಎತ್ತರದ ಪರ್ವತಗಳು - 26

ಭಾರತದ 10 ಪ್ರಸಿದ್ಧ ರಾಜರು - 22

ಕರ್ನಾಟಕದ 10 ಸುಂದರ ಬೆಟ್ಟಗಳು - 25