ಪ್ರಪಂಚದ ಸುಂದರ ದೇಶಗಳು - 07


ಪ್ರತಿಯೊಂದು ದೇಶವು ತನ್ನದೇ ಆದಂತ ವಿಶೇಷವಾದ ಬೌಗೋಳಿಕ ಪ್ರದೇಶವನ್ನು ಹೊಂದಿ ಪ್ರವಾಸಿಗರನ್ನ ಕೈ ಬೀಸಿ ಕರೆಯುವಂತೆ ಮಾಡಿವೆ. ಇಲ್ಲಿನ ನಗರ ಪ್ರದೇಶಗಳು, ಪ್ರಾಕೃತಿಕ ಸೌಂದರ್ಯ ಒಟ್ಟಾರೆಯಾಗಿ ಎಲ್ಲವನ್ನು ಆ ದೇಶದಲ್ಲಿನ ಸಿರಿ ಸಂಪತ್ತು ಎನ್ನಬಹುದು. ಹೀಗೆ ಸುಂದರ ಸೌಂದರ್ಯವನ್ನ ಹೊಂದಿರೊ ದೇಶಗಳನ್ನ ನಾವ್ ಇವತ್ತು ನಿಮಗೆ ತೋರಿಸ್ತಿದಿವಿ. 

10. ಜರ್ಮನಿ

82 ಮಿಲಿಯನ್ ಜನವಸತಿ ಪ್ರದೇಶಗಳನ್ನು ಹೊಂದಿರೊ ಜರ್ಮನಿ ಯೂರೋಪಿನ ಅತೀ ಹೆಚ್ಚು ಜನರು ವಾಸಿಸುವ ರಾಷ್ಟ್ರಗಳಲ್ಲಿ ಒಂದು ಎನಿಸಿದೆ. ಜನರು ವಲಸೆ ಬರುವ ಪ್ರದೇಶಗಳಲ್ಲಿ ಪ್ರಪಂಚದ ಎರಡನೇ ರಾಷ್ಟ್ರವಾಗಿದೆ ಜರ್ಮನಿ. ಇದರ ದೊಡ್ಡ ನಗರ ಬರ್ಲಿನ್ ಪ್ರಮುಖ ನಗರ ಕೇಂದ್ರ ಮತ್ತು ಸುಂದರ ಪ್ರದೇಶಗಳಲ್ಲಿ ಒಂದು. ಹೆಚ್ಚು ಪ್ರವಾಸಿಗರು ಬೇಟಿ ನೀಡುವ ಪ್ರದೇಶಗಳಲ್ಲಿ ಒಂದು ಎನಿಸಿದೆ.
ಬರ್ಲಿನ್ ಅಲ್ಲದೆ ಹ್ಯಾಂಬರ್ಗ್, ಮ್ಯೂನಿಚ್, ಕಲೋನ್, ಫ್ರಾಂಕ್ಫರ್ಟ್ ಮೊದಲಾದವು ಯೂರೋಪಿನ ಪ್ರಮುಖ ನಗರಗಳು ಎನಿಸಿಕೊಂಡಿವೆ. ಅಲ್ಲದೆ ವಿಶ್ವದ ಅಗ್ರ ಔದ್ಯೂಗಿಕ ದೇಶಗಳಲ್ಲಿ ಒಂದು ಎನಿಸಿಕೊಂಡಿದೆ. 357.050 ಚದುರ ಕಿ.ಮೀ ವಿಸ್ತೀರ್ಣವನ್ನ ಹೊಂದಿದೆ ಜರ್ಮನಿ.
ಇತಿಹಾಸವನ್ನ ಸಾರಿ ಹೇಳುವ, ಅರಮನೆಗಳು, ಕೋಟೆ ಕೊತ್ತಲಗಳನ್ನ ಇಲ್ಲಿ ಕಾಣ್ಬೋದು. ನದಿ ಸರೋವರದ ಜೊತೆಗೆ ಸುಂದರ ಪ್ರದೇಶಗಳು ಇಲ್ಲಿವೆ. ಮಹಾಯುದ್ಧಗಳಲ್ಲಿ ನಲುಗಿ ಹೋಗಿದ್ದ ಜರ್ಮನಿ ಇಂದು ಸುಂದರವಾದ ನಗರಗಳನ್ನು ಹುಟ್ಟುಹಾಕಿದೆ. ಹತ್ತು ಸುಂದರ ದೇಶಗಳಲ್ಲಿ ತನ್ನ ಹೆಸರು ಇರುವಂತೆ ನೋಡಿಕೊಂಡಿದೆ.

09. ದಕ್ಷಿಣ ಆಫ್ರಿಕ

ಪ್ರಪಂಚದ ದೊಡ್ಡಖಂಡಗಳಲ್ಲಿ ಒಂದಾಗಿರುವ ತನ್ನ ಪ್ರಾಕೃತಿಕ ಸಂಪತ್ತಿನಿಂದ ಸುಂದರವಾದ ದೇಶಗಳಲ್ಲಿ ತನ್ನ ಸ್ಥಾನವನ್ನು ಭದ್ರಪಡಿಸಿಕೊಂಡಿದೆ. ಕೇಪ್ ಟೌನ್ ಇಲ್ಲಿನ ಮೋಸ್ಟ್ ಬ್ಯೂಟಿಫುಲ್ ಸಿಟಿ ಎಂದು ಕರೆÀಸಿಕೊಂಡಿದೆ. ಪ್ರವಾಸಿಗರನ್ನು ತನ್ನತ್ತ ಬರುವಂತೆ ನೋಡಿಕೊಳ್ಳುತ್ತಿ. ಪ್ರವಾಸಕ್ಕೆ ಹೇಳಿಮಾಡಿಸಿದ ಜಾಗದಂತಿದೆ ಕೇಪ್ ಟೌನ್.
ಗ್ರೇಕೊ ನ್ಯಾಷನಲ್ ಪಾರ್ಕ್ ಪ್ರವಾಸಿಗರು ಹೆಚ್ಚು ಸೇರುವ ಪ್ರದೇಶ. ವಿಭಿನ್ನವಾದ ಭೂ ಪ್ರದೇಶವನ್ನು ಹೊಂದಿರುವ ದಕ್ಷಿಣ ಆಫ್ರಿಕಾ, ದ್ವೀಪಗಳನ್ನು ಹೊಂದಿದೆ. ಇಲ್ಲಿನ ಜನರ ಆಚರಣೆ, ಬೆಳವಣಿಗೆ ಮತ್ತು ಜನರ ನಡವಳಿಕೆಯು ಸುಂದರ ದೇಶಗಳ ಸಾಲಿನಲ್ಲಿ ನಿಲ್ಲುವಂತೆ ಮಾಡಿದೆ ಎಂದರೆ ತಪ್ಪಲ್ಲ.
2798 ಕಿಮೀ ವಿಸ್ತೀರ್ಣವನ್ನ ಹೊಂದಿರೊ ಇದು ಹೆಚ್ಚು ಕರಾವಳಿ ಪ್ರದೇಶಗಳನ್ನು ಒಳಗೊಡಿದೆ. ಪುರಾತತ್ವಕ್ಕೆ ಸಂಬಂದಿಸಿದಂತೆ ಅನೇಕ ಪಳೆಯುಳಿವಿಕೆಯ ಅಸ್ಥಿತ್ವವನ್ನ ಹೊಂದಿದೆ. ದಕ್ಷಿಣ ಆಫ್ರಿಕಾ ಪ್ರಾಚೀನ ಇತಿಹಾಸದ ಜೊತೆಗೆ ತನ್ನ ತನವನ್ನು ಉಳಿಸಿಕೊಂಡು ಬಂದಿದೆ. 

08. ಬ್ರೆಜಿಲ್

ಬ್ರೆಜಿಲ್ ಸುಂದರ ದೇಶಗಳ ಸಾಲಿನಲ್ಲಿ 8ನೇ ಸ್ಥಾನವನ್ನ ಪಡೆದುಕೊಂಡಿದೆ. ಇದಕ್ಕೆ ಕಾರಣ ಇಲ್ಲಿ ನಿಸರ್ಗ ಸೃಷ್ಠಿ ಮಾಡಿರುವ ತಾಣಗಳು, ಅಂದ್ರೆ ಬೆಟ್ಟ ಗುಡ್ಡಗಳು, ನದಿ ಸರೋವರಗಳು, ಮತ್ತು ಜಲಪಾತಗಳು ಸುಂದರ ತಾಣಗಳಾಗಿ ಮಾರ್ಪಟ್ಟಿರುವುದು. ಜೊತೆಗೆ ಅಲ್ಲಿನ ನಗರಗಳ ನಿರ್ಮಾಣ ಮತ್ತು ಅದರ ಬೆಳವಣಿಗೆ ಪೂರಕವಾಗಿ ಮಾರ್ಪಟ್ಟಿದೆ. 
ದಕ್ಷಿಣ ಅಮೇರಿಕಾದ ದೊಡ್ಡ ದೇಶ ಬ್ರೆಜಿಲ್ ಇದು ದಕ್ಷಿಣ ಅಮೇರಿಕಾದಿಂದ ಅಟ್ಲಾಂಟಿಂಕ್ ಮಹಾಸಾಗರದವರೆಗೆ ಪೆರು, ಪೆರುಗ್ವೆ, ಕೊಲಂಬಿಯಾ, ಗಯಾನ ಮೊದಲಾದ ದೇಶಗಳ ಗಡಿಯನ್ನು ಹೊಂದಿದೆ. 2005ರ ಜನಗಣತಿಯ ಪ್ರಕಾರ ಇಲ್ಲಿನ ಜನಸಂಖ್ಯೆ 18 ಕೋಟಿ ಇದೆ. ಇದು 85 ಲಕ್ಷ ಚದುರ ಕಿ.ಮೀ ವಿಸ್ತೀರ್ಣವನ್ನ ಹೊಂದಿದೆ.
ಬ್ರೆಜಿಲ್ ಸಾಂಸ್ಕøತಿಕವಾಗಿ, ರಾಜಕೀಯವಾಗಿ ಮತ್ತು ಆರ್ಥಿಕವಾಗಿ ಇಷ್ಟು ಬೆಳೆಯಲು ಕಾರಣ ಇಲ್ಲಿನ ಜನಸಂಖ್ಯೆ ಅದರಲ್ಲೂ ಅಗ್ಗವಾದ ಕಾರ್ಮಿಕರ ಶಕ್ತಿ ಎನ್ನಬಹುದು. ಇಲ್ಲಿನ ಜನರ ಒಗ್ಗಟ್ಟಿನ ಫಲವೇ ದಕ್ಷಿಣ ಅಮೆರಿಕಾದಲ್ಲೇ ಪ್ರಮುಖ ಪ್ರವಾಸಿ ಸುಂದರ ಪ್ರದೇಶಗಳನ್ನ ಒಳಗೊಂಡಿದೆ ಬ್ರೆಜಿಲ್. 

07. ಯು ಎಸ್ ಎ 

ಗಗನ ಚುಂಬಿ ಕಟ್ಟಡಗಳ ಜೊತೆಗೆ ನದಿ ಸರೋವರ ಮತ್ತು ಪ್ರಕೃತಿಯ ವಿವಿದ ವಿಸ್ಮಯಗಳ ಪ್ರದೇಶಗಳನ್ನು ಹೊಂದಿರೋ ದೇಶ ಅಂದ್ರೆ ಅದು ಯುನೈಟೆಡ್ ಸ್ಟೇಟ್ಸ್ ಆಫ್ ಅಮೇರಿಕಾ. ಪ್ರವಾಸವನ್ನು ಮಾಡುವುವವರ ಜೊತೆಗೆ ಉದ್ಯೂಗವನ್ನು ಹರಸಿಕೊಂಡು ಬರುತ್ತಾರೆ, ವಿದ್ಯಾಬ್ಯಾಸಕ್ಕೆಂದೆ ಇಲ್ಲಿಗೆ ಬರುವವರ ಸಂಖ್ಯೆ ಕೂಡ ಹೆಚ್ಚಾಗಿಯೇ ಇದೆ.
ನೊಪಾಯಿ ಕೋಸ್ಟ್ ಹವಾಯಿ ದ್ವೀಪಗಳು, ಕ್ಯಾಲಿಪೋರ್ನಿಯಾದಲ್ಲಿರು ಅಲಸ್ಕಾವ್ಯಾಲಿ, ಬ್ಯಾರ್ಲಿಯನ್ ನ್ಯಾಷನಲ್ ಪಾರ್ಕ್, ಗ್ಲೇಕೋ ನ್ಯಾಷನಲ್ ಪಾರ್ಕ್ ಜೊತೆಗೆ ಹಲವಾರು ಪ್ರದೇಶಗಳು ಪ್ರವಾಸಿಗರನ್ನು ಕೈ ಬೀಸಿ ಕರೆಯುತ್ತಿದೆ. ಪ್ರಪಂಚದ ಶಕ್ತಿ ಶಾಲಿ ರಾಷ್ಟ್ರಗಳಲ್ಲಿ ಒಂದಾಗಿರುವ ಇದು. ಪ್ರವಾಸೋದ್ಯಮದಲ್ಲಿ ಏನು ಹಿಂದೆ ಬಿದ್ದಿಲ್ಲ. 
ಸರಿ ಸುಮಾರು 50 ರಾಜ್ಯಗಳನ್ನು ಒಳಗೊಂಡಿರುವ ಅಮೇರಿಕಾ ಒಂದೊಂದು ರಾಜ್ಯದಲ್ಲೂ ಹಲವಾರು ವಿಶೇಷತೆಗಳನ್ನ ಹೊಂದಿರುವದನ್ನ ಕಾಣ್ಬೋದು. ಜೊತೆಗೆ ಸಾಕಷ್ಟು ಅಭಿವೃದ್ದಿಕೂಡ ಆಗಿದೆ. 

06. ಪೋರ್ಚುಗಲ್ 

ಸೃಷ್ಟಿಯ ವೈಚಿತ್ರವೇ ಎಂಬಂತೆ ನಿರ್ಮಾಣವಾಗಿರೋದು ಪೂರ್ಚುಗಲ್ ಬೆಟ್ಟ ಗುಡ್ಡಗಳಿಂದ ಕೊರೆದು ನಿರ್ಮಾಣವಾಗಿರೋ ನದಿ ಸರೋವರದ ಕಡಲ ತೀರಗಳು. ಪ್ರಕೃತಿಯ ಮಡಿಲಲ್ಲಿ ನಿರ್ಮಾಣವಾಗಿರೋ ಗ್ರೇಟ್ ನ್ಯಾಷನಲ್ ಪಾರ್ಕ್ ಸುಂದರವಾಗಿದ್ದು ಪ್ರವಾಸಿಗರ ಆಕರ್ಷಣೀಯ ಕೇಂದ್ರದಲ್ಲಿ ಒಂದು ಎನಿಸಿದೆ.
ಕಲರ್‍ಫುಲ್ ಔಟ್‍ಕೋರ್ಟಸ್ ಮತ್ತು ಪ್ರಪಂಚದ ಅತ್ಯಂತ ಉದ್ದವಾದ ಸೇತುವೆಯನ್ನ ಹೊದಿದೆ ಈ ದೇಶ. ಇದು ಕೂಡ ಪ್ರವಾಸಿಗರನ್ನ ಹೆಚ್ಚು ಆಕರ್ಷಿಸುವ ಮತ್ತು ಪ್ರವಾಸಿಗರಿಂದ ಪ್ರಶಂಸೆಗೆ ಒಳಗಾದ ಪ್ರದೇಶ. ಪೋರ್ಚುಗಲ್ ದೇಶದ ಸಮಗ್ರ ವಿವರವನ್ನು ನೀಡೋ ಮ್ಯೂಸಿಯಂ ದೇಶದಲ್ಲಿನ ಪ್ರಮುಖ ಆಕರ್ಷಣೀಯ ಕೇಂದ್ರವಾಗಿ ಬೆಳೆದು ನಿಂತಿದೆ.
ಇಲ್ಲಿನ ಜನರು ವಾಸಮಾಡಲು ನಿರ್ಮಸಿಕೊಂಡಿರುವ ವಿಭಿನ್ನವಾದ ಸಾಂಪ್ರದಾಯಿಕವಾದ ಮನೆಗಳು ಆಕರ್ಷಣೀಯ ಕೇಂದ್ರಗಳಲ್ಲಿ ಒಂದು ಎನಿಸಿಕೊಂಡಿವೆ. ಸಾರಿಗೆ ವ್ಯವಸ್ಥೆಯು ಪರಿಸರ ಸ್ನೇಹಿಯಾಗಿದ್ದು ಸ್ಥಳ ವೀಕ್ಷಣೆಗೆ ಉತ್ತಮವಾಗಿರೋದನ್ನ ಕಾಣ್ಬೋದು.

05. ಗ್ರೀಸ್ 

ಪ್ರಪಂಚದ ಉತ್ತಮ ಕಡಲ ತೀರಗಳು, ಹೋಟೆಲ್‍ಗಳು ಪ್ರವಾಸಕ್ಕೆ ಹೇಳಿ ಮಾಡಿಸಿದಂತೆ ಇವೆ ಅದರಲ್ಲೂ ಬೇಸಿಗೆಯ ಸಮಯದಲ್ಲಿ ಇಲ್ಲಿಗೆ ಬರುವ ಪ್ರವಾಸಿಗರು ಹೆಚ್ಚು ಮತ್ತು ಅವರ ಅಚ್ಚು ಮೆಚ್ಚಿನ ತಾಣವೂ ಕೂಡ ಒಂದು. ಮತ್ತು ಅಲ್ಲಿನ ಮನೆಗಳು ಬಣ್ಣ ಬಣ್ಣಗಳಿಂದ ಕೂಡಿದ್ದು ನಿಜಕ್ಕೂ ಅದ್ಬುತವಾಗಿವೆ.
ಇಲ್ಲಿನ ಕಟ್ಟಡಗಳು, ಬೀಚ್‍ಗಳು ಮತ್ತು ಜನರು ಸಾಂಕೃತಿಕವಾಗಿ ವೈವಿದ್ಯತೆಯಿರುವುದನ್ನ ಕಾಣ್ಬೋದು. ಐತಿಹಾಸಿಕ ಮಹತ್ವವಿರುವ ಪ್ರದೇಶಗಳು ಇಲ್ಲಿವೆ. ಇಲ್ಲಿಗೆ ಬರುವ ಪ್ರಯಾಣಿಕರಿಗೆ ಉತ್ತಮ ರೀತಿಯ ವೆವಸ್ಥೆಯನ್ನ ಮಾಡಿಕೊಡಲಾಗಿದೆ. ಒಟ್ಟಾರೆಯಾಗಿ ಗ್ರೀಸ್ ಪ್ರವಾಸಕ್ಕೆ ಯೋಗ್ಯ ಎಂದು ಅಲ್ಲಿರುವಂತಹ ಸುಂದರ ಪ್ರದೇಶಗಳ್ನನ ನೋಡಿದ್ರೆ ಗೊತ್ತಾಗುತ್ತೆ. 

04. ಆಸ್ಟ್ರೇಲಿಯಾ 

ಆಸ್ಟ್ರೇಲಿಯಾ ಒಂದು ಸಾಮಾನ್ಯ ದೇಶ ಅಲ್ಲ, ಇದೂಂದು ಸುಂದರ ಪ್ರದೇಶಗಳ ತಾಣ ಅಂತಾನೇ ಹೇಳ್ಬೋದು. ಅರ್ಧ ಮಿಲಿಯನ್ ಜನಸಂಖ್ಯೆ ಇರುವ ಈ ದೇಶವು ಅತ್ಯಂತ ವೇಗವಾಗಿ ಬೆಳೆದ ರಾಷ್ಟ್ರ. ನಿಸರ್ಗದ ಕಾನನದ ನಡುವೆ ಕಾಂಕ್ರೀಟ್ ಕಾಡನ್ನು ಹೊಂದಿದೆ. ಗಗನವನ್ನು ಮುಟ್ಟುವ ಕಟ್ಟಡಗಳ ಜೊತೆಗೆ.
ಪ್ರಕೃತಿಯೇ ನಿರ್ಮಾಣ ಮಾಡಿದೆ ಸುಂದರ ಬೀಚ್‍ಗಳನ್ನ. ಗೋಲ್ಡ್ ಕೋಸ್ಟ್ ಬೀಚ್ ಪ್ರವಾಸಿಗರನ್ನು ಹೆಚ್ಚಾಗಿ ಆಕರ್ಷಿಸುವ ಮತ್ತು ಹೆಚ್ಚು ಜನರು ಬೇಟಿ ನೀಡುವ ಪ್ರದೇಶ. ಇಲ್ಲಿನ ರೈನ್ ಫಾರೆಸ್ಟ್ ಸುಂದರವಾದ ಪ್ರದೇಶ, ಅಚ್ಚ ಹಸಿರಿನಿಂದ ಕಂಗೊಳಿಸುವ ಸಣ್ಣ ನದಿಗಳು ಹರಿಯು ಅದ್ಬುತ ಪ್ರದೇಶ ಇದು.
ಇತಿಹಾಸ ಪ್ರಸಿದ್ದ ಕಟ್ಟಡಗಳು, ಮತ್ತು ಕಲೆ ಮತ್ತು ಸಂಸ್ಕøತಿಯನ್ನ ಎತ್ತಿ ಹಿಡಿಯುವಂತಹ ಶಿಲ್ಪಗಳು ಇಲ್ಲಿವೆ. ಇದಕ್ಕೆ ಇಲ್ಲಿನ ಜನ ಹೆಚ್ಚಿನ ಮಹತ್ವ ಕೊಟ್ಟಿರುವುದನ್ನ ಕಾಣ್ಬೋದು. ಇಲ್ಲಿನ ಸುಂದರ ಪ್ರದೇಶಗಳಿಗೆ ಎಂತವರು ಕೂಡ ಮಾರುಹೋಗಲೇ ಬೇಕು. 

03. ಫ್ರಾನ್ಸ್

ಪ್ರಪಂಚದ ಗಗನ ಚುಂಬಿ ಟವರ್‍ನ ನಿರ್ಮಾಣ ಮಾಡಿಕೊಂಡು ಪ್ರಪಂಚದ ಎಲ್ಲಾ ಮೂಲೆಯಲ್ಲೂ ಪ್ರವಾಸಿಗರನ್ನ ಕೈ ಬೀಸಿ ಕರೆಯುವ ದೇಶ ಫ್ರಾನ್ಸ್ ಇದರ ಪ್ರಮುಖ ಆಕರ್ಷಣೀಯ ಕೇಂದ್ರ ಈ ಟವರ್ ಅಂದ್ರೆ ತಪ್ಪಾಗೊದಿಲ್ಲ. ಸುಂದರ ಪ್ರಶಾಂತ ನಗರ ಪ್ಯಾರಿಸ್ ಪ್ರವಾದ ಪ್ರಮುಖವಾದ ಆಕರ್ಷಣೀಯ ಕೇಂದ್ರ. 
ಎತ್ತರವಾದ ಕಟ್ಟಡಗಳು ಕಡಲ ಕಿನಾರೆಗಳು, ಶಾಫಿಂಗ್ ಮಾಲ್ ಮತ್ತು ಇಲ್ಲಿ ಅದ್ಬುತವಾದ ಪಾರ್ಕ್‍ಗಳು ಇವುಗಳನ್ನು ಮತ್ತಷ್ಟು ಸುಂದರ ದೇಶವನ್ನಾಗಿಸಿದೆ. ಜಗತ್ತಿನ ಸುಂದರ ದೇಶಗಳ ಸಾಲಿನಲ್ಲಿ ಫ್ರಾನ್ಸ್ ತನ್ನ ಹೆಸರನ್ನು ಅಚ್ಚೊತ್ತುವಂತೆ ಮಾಡಿಕೊಂಡಿದೆ. ಇದಕ್ಕೆ ಕಾರಣಗಳನ್ನು ಬೇರೆ ಎಂದು ಹುಡುಕಲು ಸಾದ್ಯವಿಲ್ಲ. ಇಲ್ಲಿನ ಪ್ರದೇಶಗಳನ್ನ ನೋಡ್ತಿದ್ರೆ ಗೊತ್ತಾಗುತ್ತೆ.
ಜಗತ್ತಿನ ಸುಂದರ ದೇಶಗಳು ಎನಿಸಿಕೊಂಡವು ಪ್ರಮುಖವಾಗಿ ಅಲ್ಲಿ ಕ್ಲೀನ್‍ಗೆ ಹೆಚ್ಚಿನ ಪ್ರಾಮುಖ್ಯತೆ ಕೊಟ್ಟಿರುತ್ವೆ. ಫ್ರಾನ್ಸ್ ಕೂಡ ಇದರಿಂದ ಹೊರತಾಗಿಲ್ಲ. ಸ್ವಚ್ಚತೆಗೆ ಹೆಚ್ಚು ಮಹತ್ವವಿದೆ. ಇಲ್ಲಿನ ಪ್ರದೇಶಗಳು ಒಂದಕ್ಕಿಂತ ಮತ್ತೊಂದು ಸುಂದರವಾಗಿ ಇರೋದನ್ನ ಕಾಣ್ಬೋದು.

02. ಸ್ಪೈನ್

ಸ್ಪೈನ್ ಜಗತ್ತಿನ ಅತ್ಯಂತ ಸುಂದರ ದೇಶಗಳಲ್ಲಿ ಎರಡನೆ ಸ್ಥಾನವನ್ನ ಪಡೆದುಕೊಂಡಿದೆ. ಇದಕ್ಕೆ ಪೂರಕ ಎಂಬಂತೆ ಇಲ್ಲಿನ ಪ್ರದೇಶಗಳು ನಿರ್ಮಾಣಗೊಂಡಿವೆ. ಇಲ್ಲಿನ ಕಡಲ ಕಿನಾರೆ, ಕಟ್ಟಡ,  ಮತ್ತು ಚರ್ಚ್ ಸುಂದರವಾಗಿ ಮೂಡಿಬಂದಿವೆ. 
ಇಲ್ಲಿನ ಜನರ ಜೀವನ ಪದ್ದತಿ ಆಚಾರ ವಿಚಾರಗಳು ವಿಭಿನ್ನ ಮತ್ತು ವಿಶೇಷ, ಇವರ ಆಹಾರ ಪದ್ದತಿಯೂ ವಿಶಿಷ್ಠವಾಗಿ ಕಂಡುಬರುತ್ತೆ. ಹೆಚ್ಚಾಗಿ ಸಮುದ್ರದ ಉತ್ಪನ್ನಗಳನ್ನ ಆಹಾರವಾಗಿ ಬಳಸೋದು ಹೆಚ್ಚು. ಪ್ರಾನ್ಸ್ ಪುಟ್ಬಾಲ್ ಕ್ರೀಡೆಗೆ ಹೆಚ್ಚು ಹೆಸರಾದ ದೇಶ ಆದ್ದರಿಂದಲೇ ಇಲ್ಲಿನ ಕ್ರಿಡಾಂಗಣ ಹೆಚ್ಚು ಪ್ರವಾಸಿಗರನ್ನ ಕರೆಸುತ್ತೆ.
ಒತ್ತು ಒತ್ತಾದ ಬೆಟ್ಟ ಗುಡ್ಡಗಳ ನಡುವೆ ದಟ್ಟವಾದ ಕಾನನವನ್ನು ಇಲ್ಲಿ ಕಾಣಬಹುದು. ಇದು ಪ್ರವಾಸಿಗರ ಒಂದು ಸುಂದರ ತಾಣಗಳಲ್ಲಿ ಒಂದಾಗಿದೆ. 

01. ಇಟಲಿ

ಪ್ರಪಂಚದ ಸುಂದರ ದೇಶಗಳಲ್ಲಿ ಮೊದಲ ಸ್ಥಾನದಲ್ಲಿ ಇರೋದು ಇಟಲಿ, ಹೌದು ಇಟಲಿ ಜಗತ್ತಿನ ಸುಂದರ ದೇಶಗಳಲ್ಲಿ ಮೊದಲ ಸ್ಥಾನವನ್ನ ಪಡೆದುಕೊಂಡಿದೆ. ಎರಡು ಮಹಾಯುದ್ದಗಳಲ್ಲಿ ಭಾಗವಹಿಸಿ ಸಾಕಷ್ಟು ನಷ್ಟಗಳನ್ನು ಅನುಭವಿದ್ದರು ಇಟಲಿ ಹೊಸ ಸಾಮ್ರಾಜ್ಯವಾಗಿ ಪ್ರಕಾಶಿಸುತ್ತಿದೆ. 
ಇಟಲಿಯ ರಾಜಧಾನಿ ರೋಮ್ ಪ್ರವಾಸಿಗರ ಹಾಟ್ ಪ್ಲೇಸ್ ಅಂತಾನೆ ಹೇಳ್ಬೋದು, ಇಲ್ಲಿನ ಒಂದೊಂದು ಪ್ರದೇಶಗಳು ಪ್ರವಾಸಿಗರಿಗೆ ಅಷ್ಟು ಮುದವನ್ನ ನೀಡುತ್ವೆ. ಐತಿಹಾಸಿಕ ಕಟ್ಟಡಗಳು ಅದರ ಅವಶೇಷಗಳು, ಮತ್ತು ಅದನ್ನು ಪಾರ್ಕ್‍ನ್ನಾಗಿ ಮಾಡಿ ಪ್ರವಾಸಕ್ಕೆ ಯೋಗ್ಯವಾಗುವಂತೆ ಮಾಡಲಾಗಿದೆ.
ಇಟಲಿ ದೇಶದಲ್ಲಿ ಹಲವಾರು ಪ್ರವಾಸಿ ತಾಣಗಳಿವೆ, ಅಲ್ಲಿಗೆ ಬೇಟಿ ನೀಡಲು ಪ್ರವಾಸಿಗರಿಗೆ ಟ್ರಾವಲಿಂಗ್ ಆಗಿರಬಹುದು ಅಥವಾ, ಅವರು ಉಳಿದುಕೊಳ್ಳುವ ಹೋಟೆಲ್ ಪ್ರದೇಶವಾಗಿರಬಹುದು ಎಲ್ಲವು ಸೂಪರ್ ಆಗಿದೆ. ಇಂತ ದೇಶಗಳನ್ನ ಸುಂದರ ಪ್ರದೇಶಗಳನ್ನ ನೋಡ್ಬೇಕು ಅನ್ಸುತ್ತೆ.
ಮಂಜುನಾಥ್ ಜೈ
manjunathahr1991@gmail.com

. ನಿಮ್ಮ ಅಭಿಪ್ರಾಯಗಳಿಗೆ ದಯವಿಟ್ಟು ಕಾಮೆಂಟ್ ಬಾಕ್ಸ್ ನಲ್ಲಿ ಕಾಮೆಂಟ್ ಮಾಡಿ.






ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಪ್ರಪಂಚದ 10 ಎತ್ತರದ ಪರ್ವತಗಳು - 26

ಭಾರತದ 10 ಪ್ರಸಿದ್ಧ ರಾಜರು - 22

ಕರ್ನಾಟಕದ 10 ಸುಂದರ ಬೆಟ್ಟಗಳು - 25