ಪ್ರಪಂಚದ ವೇಗದ ಕಾರುಗಳು – 16

  ಇಂತ ಆಧುನಿಕ ಯುಗದಲ್ಲಿ ಕಾರಿಗೆ ಎಲ್ಲಿಲ್ಲದ ಬೇಡಿಕೆ. ಐಷಾರಾಮಿ ಜೀವನಕ್ಕಂತೂ ಕಾರು ಒಂದು ಲೆವೆಲ್ ಮುಂದು ಎಂದು ತೋರುತ್ತೆ. ಇಂದಿನ ಯುಗದಲ್ಲಿ ಕಾರಿಗೆ ಇರೋ ಬೆಲೆ ಮನುಷ್ಯನಿಗೂ ಇಲ್ಲ ಅಂತ ಹೇಳ್ಬೋದು. ಇಂತಹ ಕಾರುಗಳಲ್ಲಿ ಹಲವಾರು ವಿಧಗಳನ್ನ ಕಾಣ್ಬೋದು ಅದರಲ್ಲಿ ಹೆಚ್ಚು ಬೆಲೆ, ಐಷಾರಾಮಿ ಸೌಲಭ್ಯ, ಅತ್ಯಂತ ನಿಧಾನ ಮತ್ತು ಅತ್ಯಂತ ವೇಗದ ಮತ್ತು ಸುಂದರವಾದ ಕಾರುಗಳಿವೆ. ನಾವು ಅತ್ಯಂತ ವೇಗವಾಗಿ ಚಲಿಸುವಂತ 10 ಕಾರುಗಳನ್ನ ನಿಮಗೆ ತೋರಿಸ್ತಿವಿ. ಹೇಗಿವೆ ಗೊತ್ತಾ ಆ ಕಾರುಗಳು ಇಲ್ಲಿವೆ ನೋಡಿ.

10. ಬುಗಾಟಿ ವೆಯ್ರಾನ್ 

ಕಾರು ಉತ್ಪಾದನೆಯಲ್ಲಿ ಯಶಸ್ವಿ ಸಾದಿಸಿರುವ ದೇಶಗಳಲ್ಲಿ ಒಂದಾಗಿರುವ ಜರ್ಮನಿ, ಈ ಬುಗಾಟಿ ವೆಯ್ರಾನ್ ಕಾರನ್ನು ನಿರ್ಮಾಣ ಮಾಡಿದೆ. ಇದನ್ನು ಜರ್ಮನ್ ಕಾರು ಉತ್ಪಾದಕರಾದ ಗಿoಟಞsತಿಚಿgeಟಿ  ಅಭಿವೃದ್ದಿ ಪಡಿಸಿದ್ದಾರೆ. ಬುಗಾಟಿ ಆಟೋ ಮೊಬೈಲ್ಸ್‍ನ ಪ್ರಧಾನ ಕಚೇರಿಯಾದ ಎಸ್ ಎ ಎಸ್‍ನ ಮೊಲ್‍ಷಿಮಾದಲ್ಲಿ ಇದು ಉತ್ಪದಾನೆಯಾಗುತ್ತೆ. ಇದರ ಕ್ರೆಡಿಟ್ ಎಲ್ಲಾ ಫರ್ಡಿನಂಡ್ ಕಾರ್ಲ್ ಪೀಚ್‍ರವರಿಗೆ ನೀಡಲಾಗಿದೆ. 1939ರಲ್ಲಿ ಬುಗಾಟಿ ಕಂಪನಿಗಾಗಿ ಮಾಡಿದ ರೇಸ್‍ನಲ್ಲಿ 24 ಅವರ್ಸ್ ಆಫ್ ಲೆ ಮೆನ್ಸ್ ಅನ್ನು ಗೆದ್ದ ಫ್ರೆಂಚ್ ರೇಸಿಂಗ್ ಡ್ರೈವರ್ ಪಿಯರ್ ವೇಯ್ರಾನ್‍ರ ನೆನಪಿಗಾಗಿ ಈ ಹೆಸರನ್ನ ಇಡಲಾಗಿದೆ.
2005ರಲ್ಲಿ ಆರಂಭವಾದ ಇದರ ಉತ್ಪಾದನೆ 2008ರ ಅಂತ್ಯಕ್ಕೆ ಸುಮಾರು 200 ವೇಯ್ರಾನ್‍ಗಳನ್ನ ತಯಾರು ಮಾಡಿ ಡೆಲವಿರ್ ಮಾಡಿತ್ತು ಈ ಕಂಪನಿ. 2006ರಲ್ಲಿ ಒಂದು ಖಾಸಗಿ ಟೆಸ್ಟ್ ಟ್ರ್ಯಾಕ್‍ನಲ್ಲಿ ವೇಗದ ಬಗ್ಗೆ ಪರೀಕ್ಷೆಯನ್ನ ನಡೆಸಲಾಯ್ತು. ಕೊನೆಗೆ ಇದರ ವೇಗ ಒಂದು ಗಂಟೆಗೆ 407.9 ಕಿ.ಮೀ ಚಲಿಸುವ ಸಾರ್ಮಥ್ಯ ಹೊಂದಿದೆ ಎಂಬುದನ್ನ ತಿಳಿದುಕೊಳ್ಳಲಾಯ್ತು. ಆಗ ಇದರ ವೇಗ ಎಷ್ಟಿತ್ತು ಎಂದರೆ ಸಮುದ್ರ ಮಟ್ಟದಿಂದ ಬರುವ ದ್ವನಿಯ ವೇಗದ ಸುಮಾರು ಮೂರನೇ ಒಂದು ಭಾಗದಷ್ಟು ಎಂಬುದು ತಿಳಿದು ಬರುತ್ತೆ. 

09. ಪೋರ್ಷೆ 9ಎಫ್‍ಎಫ್ ಜಿಟಿ9 ಆರ್ 


9ಎಫ್‍ಎಫ್ ಜಿಟಿ 9 ಕಾರು ಸ್ಪೋಟ್ಸ್ ಕಾರು ಎಂದು ಎಲ್ಲೆಡೆ ಪ್ರಸಿದ್ದಿಯನ್ನ ಪಡೆದುಕೊಂಡಿದೆ. ಜರ್ಮನ್‍ನ ಕಾರ್ಯ ನಿರ್ವಹಣಾ ಸಂಸ್ಥೆ ಪೋರ್ಷೆ 911 ಇದನ್ನ ನಿರ್ಮಾಣ ಮಾಡಿದೆ. ಪೋರ್ಷೆ 9ಎಫ್ ಜಿಟಿ9 ಆರ್ ಬುಗಾಟಿ ವೆಯ್ರಾನ್ ಕಾರಿಗಿಂತ ಒಂದು ಹೆಜ್ಜೆ ಮುಂದೆ ಇದೆ. ಯಾಕೆಂದರೆ ಪ್ರತಿ ಗಂಟೆಗೆ 409 ಕಿ.ಮೀ ವೇಗದಲ್ಲಿ ಚಲಿಸುವಂತಹ ಕಾರಿನ ಹೆಗ್ಗಳಿಕೆ ಇದಕ್ಕೆ ಸಲ್ಲುತ್ತೆ.
186.3 ಇಂಚು ಉದ್ದ, 73.2 ಇಂಚು ಅಗಲ, 46.5 ಇಂಚು ಎತ್ತರವನ್ನ ಹೊದಿರುವ ಈ ಕಾರು 1326 ಕೆ.ಜಿ ತೂಕವನ್ನ ಹೊಂದಿದೆ. ಹಲವು ಬಣ್ಣಗಳಲ್ಲಿ ಈ ಕಾರು ಲಭ್ಯವಿದೆ. ಇದು ಕೆಲವೇ ಕೆಲವನ್ನು ಮಾತ್ರ ಉತ್ಪಾದನೆ ಮಾಡಿದ್ದು ದಾಖಲೆಯಲ್ಲಿ ಮಾರಟವಾಗಿದ್ದನ್ನ ಕಾಣ್ಬೋದು. 150000 ದಿಂದ 540000 ಪೌಂಡ್ ಇದರ ಒಂದು ಕಾರಿನ ಬೆಲೆಯಾಗಿದ್ದು. ಈಗಾಗಲೇ ಮಾರಟವಾಗಿವೆ.

08. ಕೋನಿಗ್ಸೆ ಅಗೇರಾ 


ಸ್ವೀಟನ್ನಿನ ಸ್ಪೋಟ್ಸ್ ಕಾರ್ ಎಂಜಿನ್ ಉತ್ಪಾದಕರಿಂತ ನಿರ್ಮಾಣ ಮಾಡಿರುವಂತಹ ಕಾರು ಇದು. ಈ ಕಾರಿನ ಹೆಸರನ್ನು ಸ್ವೀಡಿಷ್  ಭಾಷೆಯ ಅಜೆರಾ ಎಂಬ ಕ್ರಿಯಾ ಪದದಿಂದ ಆಯ್ಕೆ ಮಾಡಿಕೊಳ್ಳಲಾಗಿದೆ. ಇದರ ಆರಂಭಿಕ ಬೆಳವಣಿಗೆಯಲ್ಲಿ ವಿ8 ಇಂಜಿನ್ ಅಳವಡಿಸಲಾಗಿತ್ತು. ಇದರ ಮೂಲಕ 4.7 ಲೀಟರ್ ಆಯಿಲ್ ಹಾಕುವಂತಹ ಸಾರ್ಮಥ್ಯವನ್ನ ಹೊಂದಿತ್ತು. ನಂತರದ ದಿನಗಳಲ್ಲಿ ಇದನ್ನು ಬದಲಾವಣೆ ಮಾಡಲಾಗಿ ವಿ8 ಇಂಜಿನ್‍ಗೆ ಎರಡು ಟಬ್ರೋಗಳನ್ನ ಅಳವಡಿಸಿ 5.0 ಲೀಟರ್ ಆಯಿಲ್ ಸಾರ್ಮಥ್ಯವನ್ನ ಹೊಂದುವಂತೆ ಮಾಡಿದೆ. ಇದರಿಂದ ವೇಗದ ಚಾಲನೆಗೆ ಉತ್ತಮ ಪವರ್ ಸಿಕ್ಕಿದೆ.
ಕೋನಿಗ್ಸೆ ಅಗೇರಾ ಗಂಟೆಗೆ ಸರಿಸುಮಾರು 260 ಮೈಲಿ ಚಲಿಸುವಂತಹ ಸಾಮಥ್ರ್ಯವನ್ನ ಹೊಂದಿದೆ. ಇದು ಉಳಿದ ಎರಡು ಕಾರುಗಳಿಗಿಂತ ಹೆಚ್ಚು ಬಲಿಷ್ಟ ಮತ್ತು  ವೇಗವಾಗಿ ಚಲಿಸುವಂತಹ ಕಾರುಗಳ ಸಾಲಿನಲ್ಲಿ 8ನೇ ಸ್ಥಾನವನ್ನ ಹೊಂದಿದೆ. ಇದರ ಮೂಲಕ ಪ್ರಪಂಚದ ಕಾರು ಮಾರುಕಟ್ಟೆಯಲ್ಲಿ ಕೋನಿಗ್ಸ್ ಕಂಪನಿಯಿಂದ ತಯಾರಾಗುವ ಈ ಕಾರು ಹೆಚ್ಚು ಹೆಸರನ್ನ ಗಳಿಸಿಕೊಂಡಿದೆ. ಕಾರುಗಳ ಲೋಕದಲ್ಲಿ ಇದರದ್ದು ವಿಶಿಷ್ಟವಾದ ಸ್ಥಾನ ಅಂತಾನೆ ಹೇಳ್ಬೋದು.

07. ಬುಗಾಟಿ ವೆಯ್ರಾನ್ ಸೂಪರ್ ಸ್ಪೋಟ್ರ್ಸ್ 


ಕಲಾವಿದರ ಕುಟುಂಬದಿಂದ ಬಂದ ಪ್ರತಿಭಾವಂತ ಕಾರ್ ಡಿಸೈನರ್ ಎಟ್ಟೋರ್ ಬುಗಾಟ್ಟಿ ತನ್ನ ಮಾರ್ಗದರ್ಶಿ ತತ್ವದಿಂದ ಕಾರಿನ ತಂತ್ರಜ್ಞಾನ ಬಾಹ್ಯ ಮತ್ತು ಆಂತರಿಕ ವಿನ್ಯಾಸವನ್ನು ಅದ್ಬುತವಾಗಿ ನಿರ್ಮಾಣ ಮಾಡಿದ್ದಾರೆ. ಇವರು ನಿರ್ಮಾಣ ಮಾಡಿದ ವೇಯ್ರಾನ್ 16.4 ಸೂಪರ್ ಸ್ಪೋಟ್ಸ್ ಕಾರು ಒಂದು ವಿಭಿನ್ನ ಮತ್ತು ವಿಶೇಷ. ಬಾನೆಟ್ ಸ್ಕೂಪ್ಸ್ ಬದಲಿಗೆ 16-ಸಿಲಿಂಡರ್ ಎಂಜಿನ್ ಛಾವಣಿಯ ಮೇಲೆ ಎರಡು ಎನ್‍ಎಸಿಎಯಿಂದ ಗಾಳಿ ಹೊರರುತ್ತದೆ.
ಕಾರ್ ಲೋಕದಲ್ಲಿ ಅತ್ಯತ್ಬುತ ಎಂದೇ ಬಿಂಬಿತವಾಗಿರುವ ಈ ಕಾರು 2010ರಲ್ಲಿ ಲಾಂಚ್ ಆಯಿತು. ಇದರ ಮೂಲಕ ಕಾರ್‍ಗಳಲ್ಲಿ ನಾನು ವಿಭಿನ್ನ ಎಂದು ತೋರಿಸಿಕೊಟ್ಟಿದೆ. ಇದರ ಫರ್‍ಫಾರ್‍ಮೆನ್ಸ್  ಅಮೇಸಿಂಗ್ ಆಗಿದೆ. ಇದು ಪ್ರತಿ ಗಂಟೆಗೆ 415 ಕಿಮೀ ಕ್ರಮಿಸಬಲ್ಲ ಅತ್ಯಾದುನಿಕ ಸಾಮಥ್ರ್ಯವನ್ನ ಇದು ಹೊಂದಿದೆ. ಅತ್ಯಂತ ವೇಗದ ಕಾರುಗಳ ಸಾಲಿನಲ್ಲಿ ವಲ್ಡ್ ರೆರ್ಕಾಡ್‍ನಲ್ಲಿ ಕಾಣಿಸಿಕೊಂಡಿದ್ದು ಇದೆ. 

06. ಹೆನ್ನೆಸಿ ವೆನಮ್ ಜಿಟಿ 


ಟೆಕ್ಸಾಸ್ ಮೂಲದ ಕಂಪನಿ ತಯಾರಿಸದ ಹೆನ್ನೆಸಿ ವೆನಮ್ ಜಿಟಿ ಒಂದು ಸ್ಪೋಟ್ಸ್ ಕಾರು. 2011ರಿಂದ ಇತ್ತೀಚಿನ ದಿನಗಳ ವರೆವಿಗೂ ಮಾರುಕಟ್ಟೆಯಲ್ಲಿರುವ ಕಾರು. ಇದು ಎಷ್ಟು ವೇಗವಾಗಿ ಚಲಿಸುತ್ತೆ ಎನ್ನುವುದಕ್ಕೆ ಒಂದು ಉದಾಹರಣೆ ಅಂದ್ರೆ ಜನವರಿ 21 2013ರಲ್ಲಿ ಅತ್ಯಂತ ವೇಗದ ಪ್ರೊಡಕ್ಷನ್ ಕಾರು ಎನಿಸಿಕೊಂಡು ಗಿನ್ನಿಸ್ ವಲ್ಡ್ ರೆಕಾರ್ಡ್ ಸಾಧನೆಯನ್ನ ಮಾಡಿತ್ತು. ಇದು ಪ್ರತಿ ಗಂಟೆಗೆ 265.7 ಮೈಲಿ  ಚಲಿಸುವಂತಹ ಸಾಮಥ್ರ್ಯ ಇದಕ್ಕಿದೆ.
ಹೆನ್ನೆಸಿ ವೆನಮ್ ಜಿಟಿ ಮೊದಲು 1.25 ದಶಲಕ್ಷ ಡಾಲರ್ ಬೆಲೆಗೆ ಮಾರಟಕ್ಕೆ ಇಡಲಾಯಿತು. ನಂತರದ ದಿನಗಳಲ್ಲಿ ಮೂರು ತಯಾರಿಕ ಘಟಕಗಳನ್ನ ಮಾಡಿ ಗ್ರಾಹಕರಿಗೆ ಮಾರಾಟ ಮಾಡುವಂತಹ ಸೌಲಭ್ಯವನ್ನ ಮಾಡಿಕೊಡಲಾಯಿತು. 4655 ಮಿಮೀ ಉದ್ದ, 1960 ಮಿಮೀ ಅಗಲ ಮತ್ತು 1135 ಮಿಮೀ ಎತ್ತರವನ್ನು ಇದು ಹೊಂದುವುದರ ಜೊತೆಗೆ 2743 ಪೌಂಡ್ ತೂಕವನ್ನ ಇದು ಹೊಂದಿದೆ. ಆಧುನಿಕ ತಂತ್ರಜ್ಞಾನವನ್ನು ಹೊಂದಿ ಅದ್ಬುತವಾಗಿ ನಿರ್ಮಾಣ ಮಾಡಲಾಗಿದೆ.

05. ಎಸ್‍ಎಸ್ಸಿ ಏರೋ  


2013ರಲ್ಲಿ ಉತ್ತರ ಅಮೇರಿಕಾ ದೇಶದಲ್ಲಿ ಉತ್ಪಾದನೆಗೊಂಡ ಸ್ಪೋಟ್ಸ್ ಕಾರು ಎಸ್‍ಎಸ್ಸಿ ಅಲ್ಟಿಮೇಟ್ ಏರೋ. ಇದನ್ನು 2006ಕ್ಕೂ ಹಿಂದೆ ಶೆಲ್ಬಿ ಸೂಪರ್‍ಕಾರು ಎಂದು ಕರೆಯಲಾಗುತ್ತಿತ್ತು. ಗಿನ್ನಿಸ್ ವಲ್ಡ್ ರೆಕಾರ್ಟ್‍ನಲ್ಲಿ ಇದರದು ಒಂದು ದಾಖಲೆ ಇರೋದನ್ನ ಕಾಣ್ಬೋದು. ಇದು ಮಾರುಕಟ್ಟಗೆ ಬಂದ ನಂತರ ಬುಗಾಟ್ಟಿ ವೇಯ್ರಾನ್ ಸೂಪರ್ ಸ್ಪೋಟ್ಸ್ ಕಾರಿನ ಹೆಸರಿನಲ್ಲಿದ್ದ ರೆಕಾರ್ಡ್‍ನ್ನ ಈ ಕಾರು ಸರಿಗಟ್ಟಿತು. ಉಳಿದ ಕಾರುಗಳಿಗಿಂತ ವಿಭಿನ್ನವಾಗಿ ನಿರ್ಮಾಣ ಮಾಡಲಾಗಿದೆ. ಈ ಕಾರಿನ ವಿನ್ಯಾಸ ಎಲ್ಲರನ್ನು ಆಕರ್ಷಿಸುತ್ತೆ.
ಸ್ಪೋಟ್ಸ್ ಕಾರಿನ ಮಾದರಿಯನ್ನ ಹೊಂದಿರುವ ಎಸ್‍ಎಸ್ಸಿ ಏರೋ ಕಾರು  ಸುಮಾರು 412.22 ಕಿ.ಮೀ ಗಂಟೆಗೆ ಚಲಿಸಿ ವೇಗವಾಗಿ ಚಲಿಸುವ ಕಾರುಗಳ ಸಾಲಿನಲ್ಲಿ 5ನೇ ಸ್ಥಾನವನ್ನ ಪಡೆದುಕೊಂಡಿದೆ. ವಿವಿಧ ಬಣ್ಣಗಳನ್ನು ಹೊಂದಿದೆ ಈ ಕಾರು. 1998ರಲ್ಲಿ ಸ್ಥಾಪನೆಯಾದ ಜೋರ್ಡಾ ಶೆಲ್ಬಿ ಕಂಪನಿ ವಿಭಿನ್ನವಾದ ಕಾರುಗಳನ್ನು ನಿಡುತ್ತಾ ಬಂದಿದೆ. ಪ್ರಪಂಚದ ಕಾರು ಪ್ರಿಯರ ಕಣ್ಣಿಗೆ ಹಬ್ಬವನ್ನು ನೀಡುತ್ತೆ ಈ ಕಾರು.

04. ಕೋನಿಗ್ಸೆಗ್


ಕೋನಿಗ್ಸೆಗ್ ಹೆಚ್ಚು ದುಬಾರಿ ಹೆಚ್ಚ, ವೇಗದ ಸಾಮಥ್ರ್ಯ ಮತ್ತು ಐಷಾರಾಮಿ ಕಾರುಗಳಲ್ಲಿ ಒಂದು. ಇದನ್ನು ಕ್ರಿಶ್ಚಿಯನ್ ವಾನ್ ಕೋನಿಗ್ಸೆಗ್ ಮಾಲಿಕತ್ವದಲ್ಲಿ ತಯಾರು ಮಾಡಲಾಗುತ್ತದೆ. 1994 ವರ್ಷಗಳಿಂದ ಸುದೀರ್ಘವಾಗಿ ನಿರ್ಮಾಣ ಮಾಡಿಕೊಂಡು ಬರುತ್ತಿದ್ದಾರೆ. ಮಾರ್ಚ್ 2009ರಲ್ಲಿ ಕೋನಿಗ್ಸೆಗ್ ಕಾರನ್ನು ಪೋಬ್ರ್ಸ್ ಇತಿಹಾಸದಲ್ಲಿ ಅತ್ಯಂತ ಸುಂದರ ಕಾರುಗಳಲ್ಲಿ ಒಂದಾಗಿ ನಿರ್ಮಾಣ ಮಾಡಲಾಗಿದೆ. ಬಿಬಿಸಿ ಟಾಪ್ ಗೇರ್ ಹೈಪೆರ್‍ಕಾರ್ ಪ್ರಶಸ್ತಿಯು 2010ರಲ್ಲಿ ಕೋನಿಗ್ಸೆಗ್  ಕಾರಿಗೆ ಸಿಕ್ಕಿದೆ.
ಪ್ರತಿ ಗಂಟೆಗೆ 273.4 ಕಿ.ಮೀ ವೇಗವಾಗಿ ಚಲಿಸುವಂತಹ ಸಾಮಥ್ರ್ಯವನ್ನ ಹೊಂದಿದೆ ಈ ಕಾರು. ಅಷ್ಟೇ ಅಲ್ಲದೆ ವಿಶ್ವದ ಅತ್ಯಂತ ವೇಗವಾಗಿ ಚಲಿಸುವಂತಹ ಕಾರುಗಳ ಸಾಲಿನಲ್ಲಿ ಕೋನಿಗ್ಸೆಗ್ 4ರ ಸ್ಥಾನದಲ್ಲಿ ನಿಂತಿದೆ. ಅಷ್ಟರ ಮಟ್ಟಗೆ ಇದು ತನ್ನ ಸಾಮಥ್ರ್ಯವನ್ನು ಎಲ್ಲೆಡೆ ತೋರಿಸುತ್ತಾ ಬಂದಿದೆ. ಪ್ರಪಂಚದಲ್ಲಿ ಇಂತಹ ಕಾರನನ್ನು ಹೊಂದಿದವರು ಬೆರಳೆಣಿಕೆಯಷ್ಟು ಜನ ಮಾತ್ರ. ಇದು ಬಗೆ ಬಗೆಯ ಬಣ್ಣಗಳಲ್ಲಿ ಲಭ್ಯತೆ ಇರೋದನ್ನ ಕಾಣ್ಬೋದು.

03. ಬುಗಾಟಿ ಚಿರೋನ್  


ಪ್ರಾನ್ಸ್‍ನಲ್ಲಿ ತಯಾರಾಗುವ ಕಾರುಗಳಲ್ಲಿ ಇದೂ ಒಂದು. ಬುಗಾಟಿ ಚಿರೋನ್ ಸ್ಪೋಟ್ಸ್ ಮಾದರಿ ಕಾರುಗಳ ಸಾಲಿನಲ್ಲಿ ಸೇರುತ್ತೆ. ಇಬ್ಬರು ಮಾತ್ರ ಕುಳಿತುಕೊಂಡು ಹೋಗಬಹುದಾದ ಸೀಟ್‍ನ್ನು ಇದು ಹೊಂದಿದೆ. ಬುಗಾಟ್ಟಿ ಆಟೋಮೊಬೈಲ್ಸ್ ಎಸ್‍ಎಎಸ್ ಕಂಪನಿಯು ಇದನ್ನು ತಯಾರು ಮಾಡಿದೆ. 2016ರಿಂದ ಪ್ರಸ್ಥುತ ದಿನಗಳವರೆವಿಗೂ ಇದು ಚಾಲ್ತಿಯಲ್ಲಿದೆ ಜೊತಗೆ ಇದರ ನಿರ್ಮಾಣ ಕೇವಲ 500ಕ್ಕೆ ಮಾತ್ರ ಸೀಮಿತ ಗೊಳಿಸಲಾಗಿದೆ.
ಬುಗಾಟಿ ಚಿರೋನ್‍ನ ಮೊದಲ ಬಾರಿ ಕಾರನ್ನು ಚಾಲನೆ ಮಾಡಿದ ಚಾಲಕ ಲೂಯಿಸ್ ಕಿರಾನ್‍ನ ಹೆಸರಿಡಲಾಗಿದೆ. 8.0 ಎಲ್ ಇಂಜಿನ್ ಸಾಮಥ್ರ್ಯ ಹೊಂದಿದೆ. ಇದು ಪ್ರತಿ ಗಂಟೆಗೆ 286 ಮೈಲಿ ಕ್ರಮಿಸಬಲ್ಲ ಹೆಚ್ಚಿನ ಸಾಮಥ್ರ್ಯವನ್ನ ಹೊಂದಿದೆ.  ಇದರ ಉದ್ದ 4.544 ಮಿಮೀ, ಅಗಲ 2.038 ಮಿಮೀ, ಎತ್ತರ 1.212 ಮಿಮೀ ಹೊಂದಿದ್ದು 1996 ಕೆಜಿ ತೂಕವನ್ನು ಈ ಕಾರು ಹೊಂದಿದೆ. ಇದರ ಹಿಂದಿನ ಕಾರುಗಳಿಗಿಂತ ಹೆಚ್ಚು ಭಿನ್ನಾಗಿರೋದನ್ನ ಕಾಣ್ಬೋದು.

02. ಡೆವಿಲ್ ಸಿಕ್ಸ್ಟೀನ್   

ಡೆವಿಲ್ ಸಿಕ್ಸ್ಟೀನ್ ಕಾರ್ ಮಾದರಿಯಲ್ಲೇ ವಿಭಿನ್ನ ಮತ್ತು ವಿಶಿಷ್ಟ ಅಂತಾನೇ ಹೇಳ್ಬೋದು. ಯಾಕಂದ್ರೆ ಕೇವಲ ವಿಡಿಯೋ ಗೇಮ್ ಮಾದರಿಯನ್ನ ಇಟ್ಟು ಕೊಂಡು ಇದನ್ನ ನಿರ್ಮಾಣ ಮಾಡಲಾಗಿದೆ. ಇದು ಗಂಟೆಗೆ 560 ಕಿಮೀ ವೇಗವಾಗಿ ಚಲಿಸಬಲ್ಲ ಸಾಮಥ್ರ್ಯವನ್ನ ಹೊಂದಿದ್ದು ವಿಶ್ವದಲ್ಲೇ ಅತ್ಯಂತ ವೇಗವಾಗಿ ಚಲಿಸಬಲ್ಲ ಎರಡನೇ ಕಾರು ಎಂದು ಹೆಸರನ್ನು ಪಡೆದಿದೆ.
ಡೆವಿಲ್ ಸಿಕ್ಸ್ಟೀನ್ ಕಾರ್ ವಿ 16 ಇಂಜಿನ್ ಹೊಂದಿದ್ದು, 5000 ವೋಟ್ಸ್ ಪವರ್ ಹೊಂದಿದೆ. ಇದು ಮೇಡಿನ್ ದುಬೈ ಕಾರ್. ಆದುನಿಕ ತಂತ್ರಜ್ಞಾನವನ್ನು ಬಳಸಿಕೊಂಡು ಅದ್ಬುತವಾಗಿ ನಿರ್ಮಾಣ ಮಾಡಿದ್ದಾರೆ. ಇದರ ಸಾಮಥ್ರ್ಯ ಉಳಿದ 8 ಕಾರುಗಳಿಗಿಂತ ಹೆಚ್ಚಿನ ಪವರ್ ತಾತ್ರಿಕತೆಯನ್ನ ಇದು ಹೊಂದಿದೆ. ಒಟ್ಟಾರೆಯಾಗಿ ಹೇಳಬೇಕಂದ್ರೆ ಈ ಐಷಾರಾಮಿ ಕಾರು, ಪ್ರಪಂಚದ ಅದ್ಬುತಗಳಲ್ಲಿ ಒಂದು ಎನಿಸಿವೆ.

01. ಥ್ರಸ್ಟ್ ಎಸ್‍ಎಸ್‍ಸಿ 


ಪ್ರಪಂಚದ ಅತ್ಯಂತ ವೇಗದ ಕಾರು ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ ಥ್ರಸ್ಟ್ ಎಸ್‍ಎಸ್‍ಸಿ ಕಾರು. ವೇಗದಲ್ಲಿ, ಶಕ್ತಿಯಲ್ಲಿ ಮತ್ತು ತನ್ನ ಸಾಮಥ್ರ್ಯದಲ್ಲಿ ಇದನ್ನು ಬೀಟ್ ಮಾಡಲು ಯಾರಿಂದಲೂ ಸಾಧ್ಯವಾಗಿಲ್ಲ. ವೇಗದ ಕಾರುಗಳ ಸಾಲಿನಲ್ಲಿ ಮೊದಲಿಗನಾಗಿ ಮತ್ತು  ಪ್ರಪಂಚದ ವೇಗದ ಕಾರುಗಳ ರಾಜ ಎನಿಸಿಕೊಂಡಿದೆ. ರೋನ್ ಆರೆಸ್, ಗ್ಲಾನೆ ಬೌಶೇರ್, ಮತ್ತು ರಿಚರ್ಡ್ ನೊಬೆಲ್ ಡಿಸೈನ್ ಮಾಡಿರುವ ಈ ಕಾರು ಗಂಟೆಗೆ ಸರಿಸುಮಾರು 1228 ಕಿಮೀ ಚಲಿಸುವಂತಹ ಶಕ್ತಿಯನ್ನ ಹೊಂದಿದೆ.
16.5 ಮೀ ಉದ್ದ, 3.7 ಮೀ ಅಗಲ ಮತ್ತು 10.6 ಟನ್ ತೂಕವಿರುವ ಈ ಕಾರು ಗನ್‍ನಿಂದ ಹೊರಟ ಬುಲೆಟ್‍ಗಿಂತ ವೇಗವಾಗಿ ಚಲಿಸುತ್ತೆ. ಹಲವು ವಿಶೇಷತೆಗಳೊಂದಿಗೆ, ಬಲಿಷ್ಠ, ವಿಶಿಷ್ಠ ತಂತ್ರಜ್ಞಾನದೊಂದಿಗೆ ಬಿಡುಗಡೆಯಾಗಿದೆ. ಒಟ್ಟಾರೆಯಾಗಿ ಥ್ರಸ್ಟ್ ಎಸ್‍ಎಸ್‍ಸಿ ಆಧುನಿಕ ತಂತ್ರಜ್ಞಾನದಿಂದ ವಿಶ್ವದಲ್ಲಿ ನಂಬರ್ 1 ಸ್ಥಾನವನ್ನ ಪಡೆದುಕೊಂಡಿದೆ. ಇವೆಲ್ಲದರ ಕೀರ್ತಿ ತಾಂತ್ರಿಕ ವರ್ಗ ಮತ್ತು ಅದರ ತಂಡಕ್ಕೆ ಸಲ್ಲಬೇಕು.
 ಮಂಜುನಾಥ್ ಜೈ
manjunathahr1991@gmail.com





ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಪ್ರಪಂಚದ 10 ಎತ್ತರದ ಪರ್ವತಗಳು - 26

ಭಾರತದ 10 ಪ್ರಸಿದ್ಧ ರಾಜರು - 22

ಕರ್ನಾಟಕದ 10 ಸುಂದರ ಬೆಟ್ಟಗಳು - 25