ಪ್ರಪಂಚದ ಅತಿ ದೊಡ್ಡ 10 ಸಾಮ್ರಾಜ್ಯಗಳು - 21



ಪ್ರಪಂಚದ ಬಹುತೇಕ ರಾಷ್ಟ್ರಗಳಲ್ಲಿ ತಮ್ಮ ನೆಲೆಯನ್ನು ಕಂಡುಕೊಂಡು, ಸಾರ್ವಭೌಮತ್ವವನ್ನು ಸಾಧಿಸಿದ ಹತ್ತು ರಾಷ್ಟ್ರಗಳನ್ನ ಬಗ್ಗೆ ನಾವು ಇವತ್ತು ಹೇಳ್ತಾ ಇದಿವಿ. ಸಾಮ್ರಾಜ್ಯಗಳು ವಿಶ್ವದಲ್ಲಿ ತಮ್ಮ ಸ್ಥಾನವನ್ನ ವಿಶೇಷವಾಗಿ ಗುರ್ತಿಸಿಕೊಂಡಿವೆ. ವಿಶಾಲವಾದ ಪ್ರದೇಶದಲ್ಲಿ ತಮ್ಮ ಆಡಳಿತದ ಭದ್ರ ಕೋಟೆಯನ್ನು ನಿರ್ಮಾಣ ಮಾಡಿಕೊಂಡಿವೆ.

10. ಪೋರ್ಚುಗೀಸ್ ಸಾಮ್ರಾಜ್ಯ     

ಪ್ರಪಂಚದ ಇತಿಹಾಸದಲ್ಲಿ ಅತೀ ದೊಡ್ಡ ಪುನರುಜ್ಜೀವನದ ಮೊದಲ ವಸಹಾತು ಸಾಮ್ರಾಜ್ಯ ಎಂದರೆ ಅದು ಪೋರ್ಚುಗೀಸ್ ಸಾಮ್ರಾಜ್ಯ. 1415 ರಲ್ಲಿ ಸಿಯುಟಾ ಪ್ರದೇಶವನ್ನು ವಶಪಡಿಸಿಕೊಳ್ಳುವುದರೊಂದಿಗೆ ಆರಂಭವಾದ ಇವರ ನಡಿಗೆ 2002 ರಲ್ಲಿ ಈಸ್ಟ್ ಟಿಮೋರ್ಗೆ ಪ್ರದೇಶದಲ್ಲಿ ಸಾರ್ವಭೌಮತ್ವವನ್ನು ಕೊನೆಗಾಣಿಸುವುದರ ಮೂಲಕ ಶತಮಾನಗಳ ಅಸ್ಥಿತ್ವವನ್ನ ಕೊನೆಗಾಣಿಸಿತು.
ಪೋರ್ಚುಗೀಸ್ ನಾವಿಕರು ಆಫ್ರಿಕಾದ ಕರಾವಳಿಯನ್ನು ಮತ್ತು ಅಟ್ಲಾಂಟಿಕ್ ದ್ವೀಪ ಸಮೂಹವನ್ನು 1418-19 ರಲ್ಲಿ ಅನ್ವೇಷಣೆ ಮಾಡಲು ಪ್ರಾರಂಭಿಸಿದರು. ನಂತರ ಕಡಲ ತಂತ್ರಜ್ಞಾನವನ್ನು ಬಳಸಿಕೊಂಡು ಲಾಭದಾಯಕವಾದ ಮಸಾಲೆ ವ್ಯಾಪಾರದ ಮೂಲದ ಮಾರ್ಗವನ್ನು ಕಂಡುಕೊಂಡರು. 1498 ರಲ್ಲಿ ವಾಸ್ಕೋ ಡಾ ಗಾಮ ಭಾರತವನ್ನು ತಲುಪಿದನು. 1500ರಲ್ಲಿ ಪೆಡ್ರೊ ಅಲ್ವಾರೆಸ್ ಕ್ಯಾಬ್ರಲ್ ಬ್ರೆಜಿಲನ್ನು ಮತ್ತು ದಕ್ಷಿಣ ಅಮೇರಿಕಾದ ಕರಾವಳಿಯನ್ನು ಕಂಡುಹಿಡಿದನು. ಮುಂದೆ ಇವರ ಸಾಮ್ರಾಜ್ಯ ಬೆಳೆಯುತ್ತಾ ಹೋಯಿತು.

09. ಅಬ್ಬಾಸಿಡ್ ಕ್ಯಾಲಿಫೇಟ್     

ಅಬ್ಬಾಸಿಡ್ ಸಾಮ್ರಾಜ್ಯವು ಮಹಮ್ಮದ್ ಅವರ ಚಿಕ್ಕಪ್ಪ ಅಲ್-ಅಬ್ಬಾಸ್ ಇಬ್ನ್ ಅಬ್ದ್ ಅಲ್-ಮುಟಾಲಿಬ್ ವಂಶಸ್ಥರಿಂದ ಬಂದಿದ್ದಾಗಿದೆ. ಇರಾಕ್ ಮತ್ತು ಬಾಗ್ದಾದ್ ಪ್ರದೇಶವನ್ನ ಇವರು ರಾಜಧಾನಿಯನ್ನಾಗಿ ಮಾಡಿಕೊಂಡು ಕ್ಯಾಲಿಫರಾಗಿ ಆಳ್ವಿಕೆ ನಡೆಸಿದರೆಂಬ ಉಲ್ಲೇಖವಿದೆ. ಇವರ ಸಂಪೂರ್ಣ ಆಡಳಿತ ಕೇಂದ್ರವನ್ನಾಗಿ ಕುಫಾ ಪ್ರದೇಶವನ್ನು ಮಾಡಿಕೊಳ್ಳಲಾಗಿತ್ತು.
ಬಲಿಡ್ಸ್ ಮತ್ತು ಸೆಲ್ವುಕ್ ತುರ್ಕಿಯರ ಹೆಚ್ಚಳದಿಂದಾಗಿ ಕ್ಯಾಲಿಫೇಟ್ ರಾಜಕೀಯ ಶಕ್ತಿ ಕೊನೆಗೊಂಡಿತು. ವ್ಯಾಪಕವಾದ ಇಸ್ಲಾಮಿಕ್ ಸಮ್ರಾಜ್ಯದ ಮೇಲೆ ಅಬ್ಬಾಸಿದ್ ನಾಯಕತ್ವವು ಕ್ರಮೇಣ ಧಾರ್ಮಿಕ ಕಾರ್ಯಕ್ಕೆ ಕಡಿಮೆಯಾದರು, ಸಾಮ್ರಾಜ್ಯ ತನ್ನ ಮೆಸಪಟೋಮಿಯ ಪ್ರದೇಶದ ಮೇಲೆ ನಿಯಂತ್ರಣವನ್ನು ಸಾಧಿಸಿಕೊಂಡಿತು. ಇವರ ಬಾಗ್ಧಾದ್ ರಾಜಧಾನಿ ನಗರವು ಇಸ್ಲಾಂನ ಸುವರ್ಣ ಯುಗದಲ್ಲಿ ವಿಜ್ಞಾನ ಸಂಸ್ಕೃತಿ, ತತ್ವಶಾಸ್ತ್ರ ಮತ್ತು ಆವಿಷ್ಕಾರಗಳ ಕೇಂದ್ರವಾಗಿ ಬೆಳವಣಿಗೆಯನ್ನು ಸಾದಿಸಿತ್ತು.

08. ಫ್ರೆಂಚ್ ಸಾಮ್ರಾಜ್ಯ      


ಉತ್ತರ ಅಟ್ಲಾಂಟಿಕ್ ರಾಜ್ಯಗಳು, ಫ್ರಾನ್ಸ್ ಮತ್ತು ಇಂಗ್ಲೆಂಡ್ ಹಾಗೂ ಪೋರ್ಚುಗಲ್ ರಾಷ್ಟ್ರಗಳು ನಡೆಸುತ್ತಿದ್ದ ಸಾಗರೋತ್ತರ ಮಸಾಲೆ ವ್ಯಾಪಾರಗಳು ಪ್ರಾನ್ಸ್ ದೇಶದ ನಿದ್ದೆ ಗೆಡಿಸಿತು. ಇದರಿಂದಾಗಿ ಹುಟ್ಟಿದ್ದೆ ಫ್ರೆಂಚ್ ಸಾಮ್ರಾಜ್ಯ. 1534ರಲ್ಲಿ ಪ್ರಾನ್ಸಿಸ್ 1, ಜಾಕ್ವೆಸ್ ಕಾರ್ಟಿಯರ್ ಎರಡು ಹಡಗುಗಳು ಮತ್ತು 61 ಜನರ ಜೊತೆ ಅಮೇರಿಕಾ ಖಂಡದ ಮೇಲೆ, ಫೆಸಿಪಿಕ್ ಜೊತೆ ಅಟ್ಲಾಂಟಿಕನ್ನು ಸಂಪರ್ಕಿಸುವ ವಾಯುವ್ಯ ಮಾರ್ಗವನ್ನು ಕಂಡುಹಿಡಿದನು ಅಲ್ಲಿಂದ ಇವರ ಸಾಮ್ರಾಜ್ಯ ವಿಸ್ತರಣೆ ಆರಂಭವಾಯಿತು.
16 ನೇ ಶತಮಾನದಿಂದ ಫ್ರೆಂಚ್ ಆಳ್ವಿಕೆಗೆ ಒಳಪಟ್ಟ ಸಾಗರೋತ್ತರ ವಸಾಹತುಗಳು ಮತ್ತು ರಕ್ಷಿತ ಪ್ರದೇಶಗಳು ಇದರ ಆದೇಶವನ್ನ ಪಾಲಿಸುತ್ತ ಇದ್ವು. 1830ರಲ್ಲಿ ಅಲ್ವೀರ್ಸ್ ವಿಜಯದೊಂದಿಗೆ ಆರಂಭವಾದ ಎರಡನೇ ವಸಹಾತು ಫ್ರೆಂಚ್ ಸಾಮ್ರಾಜ್ಯವು ಕಳೆದು ಹೋಗಿತ್ತು. ಎರಡನೇ ಸಾಮ್ರಾಜ್ಯವು ವಿಯೆಟ್ನಾಮ್ ಮತ್ತು ಅಲ್ಜಿರಿಯಾದಿಂದ ಆರಂಭವಾಗಿ ಹಲವು ಯುದ್ದಗಳ ನಷ್ಟ ಮತ್ತು ಶಾಂತಿಯುತ ಬೆಳವಣಿಗೆಯಿಂದಾಗಿ 1960 ರಲ್ಲಿ ಕೊನೆಗೊಂಡಿತು.

07. ಯುವಾನ್ ರಾಜವಂಶ   
                 

ಯುವಾನ್ ಸಾಮ್ರಾಜ್ಯವನ್ನ ಮಂಗೋಲಿಯನ್ ಬೊರ್ಜಿಗಿನ್ ವಂಶದ ನಾಯಕ ಕುಬ್ಲೈಖಾನ್ ಸ್ಥಾಪನೆಯನ್ನ ಮಾಡುತ್ತಾನೆ. ಉತ್ತರ ಚೀನಾ ಸೇರಿದಂತೆ ದಶಕಗಳವರೆಗೆ ಮಂಗೋಲರು ಆಳ್ವಿಕೆ ನಡೆಸಿದ್ದರು ಸಹ, ಕುಂಬ್ಲೈಖಾನ್ ಅಧಿಕೃತವಾಗಿ ಸಾಂಪ್ರದಾಯಿಕ ಚೀನಿಯರ ಶೈಲಿಯಲ್ಲಿ ರಾಜವಂಶವನ್ನು ಘೋಷಿಸಿದನು. ಇದು ಚೀನಾವನ್ನು ಆಳಿದ ಮೊದಲ ವಿದೇಶಿ ಸಾಮ್ರಾಜ್ಯ ಎಂಬ ಹೆಸರನ್ನು ಪಡೆದುಕೊಂಡಿತು.
ಯುವಾನ್ ನನು ಕೆಲವು ಮಂಗೋಲಿಯಾದ ಚಕ್ರವರ್ತಿಗಳು ಚೀನಿ ಭಾಷೆಯನ್ನು ಮಾಸರಿಂಗ್ ಮಾಡಿದರು. ಆದರೆ ಕೆಲವರು ತಮ್ಮ ಸ್ಥಳೀಯ ಭಾಷೆಗಳನ್ನು ಬಳಸಲು ಪ್ರಾರಂಭಿಸಿದರು. ಯುವಾನ್ ರಾಜವಂಶವು ಮಂಗೋಲ್ ಸಾಮ್ರಾಜ್ಯ ಮತ್ತು ಚೀನಿ ಸಾಮ್ರಾಜ್ಯ ಎರಡಲ್ಲೂ ತಮ್ಮಾ ಆಡಳಿತವನ್ನು ಹೊಂದಿ ಹಿಡಿತವನ್ನು ಸಾದಿಸಿತ್ತು. ವಿಶಾಲವಾದ ಸಾಮ್ರಾಜ್ಯವನ್ನು ಕಟ್ಟಿದ್ದರು ಯುವಾನ್ ರಾಜವಂಶಸ್ಥರು.

06. ಕ್ವಿಂಗ್ ಸಾಮ್ರಾಜ್ಯ                         

ಚೀನಾದ ಕೊನೆಯ ರಾಜ ವಂಶವಾಗಿರುವ ಮಂಚೂ ಆಡಳಿತವೇ ಕ್ವಿಂಗ್ ಸಾಮ್ರಾಜ್ಯ. ಇದು 1636ರಲ್ಲಿ ಸ್ಥಾಪನೆಗೊಂಡು 1644 ರಿಂದ 1912ರ ವರೆಗೆ ಚೀನಾವನ್ನು ಆಳಿದ ರಾಜ ಮನೆತನ. 1917ರ ನಂತರ ಮಿಂಗ್ ರಾಜವಂಶವು ಮುಂದುವರೆಸಿಕೊಂಡು ಬಂದಿತು ಮತ್ತು ರಿಪಬ್ಲಿಕ್ ಆಫ್ ಚೀನಾ ಉತ್ತರಾಧಿಕಾರಿಯಾಗಿ ಕ್ವಿಂಗ್ ಮಲ್ಟಿ-ಸಾಂಸ್ಕೃತಿಕ  ಸಾಮ್ರಾಜ್ಯವು ಸುಮಾರು ಮೂರು ಶತಮಾನಗಳವರೆಗೂ ಮುಂದುವರೆದುಕೊಂಡು ಆಧುನಿಕ ಚೀನಿ ರಾಜ್ಯದ ಪ್ರಾದೇಶಿಕ ನೆಲೆಯಾಗಿ ರೂಪುಗೊಂಡಿತು.
ರಾಜವಂಶವನ್ನು ಮಂಚೂರಿಯಾದಲ್ಲಿ ಜುರ್ಚೆನ್ ಐಸಿನ್ ಗಿಯೊರೊ ವಂಶಸ್ಥರು ಸ್ಥಾಪಿಸಿದ ಹದಿನಾರನೇ ಶತಮಾನದ ಉತ್ತರಾರ್ಧದಲ್ಲಿ ನುರ್ಚಾಸಿ, ಮೂಲತಃ ಮಿಂಗ್ ವಾಸ್ಲಿ, ಬ್ಯಾನರ್ಗಳು, ಜ್ಯೂರ್ಚೆನ್, ಹಾನ್ ಚೈನಿಸ್ ಮತ್ತು ಮಂಗೋಲ್ ಅಂಶಗಳನ್ನು ಒಳಗೊಂಡಿರುವ ಮಿಲಿಟರಿ ಸಾಮಾಜಿಕ ಘಟಕಗಳನ್ನು ಸಂಘಟಿಸಲು ಪ್ರಾರಂಭಿಸಿದರು. ನುರ್ಚಾಸಿ ಜುರ್ಚನ್ ಬುಡಕಟ್ಟುಗಳನ್ನು ಮುಂದೆ ಮಂಚಸ್ ಎಂದು ನಾಮಕರಣ ಮಾಡಲಾಯಿತು.

05. ಉಮಯ್ಯದ್ ಕ್ಯಾಲಿಫೇಟ್     

ಮೊಹಮದ್ ಮರಣಾನಂತರ ಸ್ಥಾಪಿಸಲಾದ ನಾಲ್ಕು ಪ್ರಮುಖ ಕ್ಯಾಲಿಫೇಟ್ಗಳಲ್ಲಿ ಉಮಯ್ಯದ್ ಕ್ಯಾಲಿಫೇಟ್ ಕೂಡ ಒಂದು. ಉಕ್ಕಾಯಾದ್ ರಾಜವಂಶಸ್ಥರು ಮೆಕ್ಕಾದಿಂದ ಬಂದವರೆಂದು ನಂಬಲಾಗಿದೆ. ಉಮಾಯ್ಯಾದ್ ಕುಟುಂಬವು ಮೂರನೆಯ ಕ್ಯಾಲಿಫ್ ಉಥಾನ್ ಇಬ್ನ್ ಅಫಾನ್ ಅಡಿಯಲ್ಲಿ ಮೊದಲ ಬಾರಿಗೆ ಅಧಿಕಾರಕ್ಕೆ ಬಂದಿತು. ಮುವಾಲಿಯಾ ಇಬ್ನ್ ಅಭಿ ಸೂಫಿಯನ್ ಅವರು ಸಿರಿಯಾದ ನಂತರ ಕ್ರಿ. 661-41ರ ಮೊದಲ ಮುಸ್ಲಿಂ ಸಾಮ್ರಾಜ್ಯವಾಗಿತ್ತು.
ಉಮಯ್ಯದ್ ಕ್ಯಾಲಿಫೇಟ್ ರಾಜಮನೆತನವು ಕಾಕಸಸ್, ಟ್ರಾನ್ಸಾಕ್ಸಿಯಾನಾ, ಸಿಂದ್, ಮಗೆಬ್ ಮತ್ತು ಐಬೇರಿಯಾ ಪೆನಿನ್ಸುಲಾವನ್ನು ಇವರ ಆಡಳಿತಕ್ಕೆ ಒಳಪಡುವಂತೆ ಮಾಡಿತ್ತು. 11.1೦೦.೦೦೦ ಕಿಮೀ ವ್ಯಾಪ್ತಿ ಮತ್ತು 62 ಮಿಲಿಯನ್ ಜನರು ಇವರ ಆಡಳಿತಕ್ಕೆ ಒಳಪಟ್ಟು ಜೀವನವನ್ನ ನಡೆಸ್ತಾ ಇದ್ರು. ಇತಿಹಾಸದಲ್ಲಿ ಅತಿದೊಡ್ಡ ಸಾಮ್ರಾಜ್ಯಗಳ ಪೈಕಿ ಇದು ಕೂಡ ಒಂದಾಗಿದೆ.

04. ಸ್ಪ್ಯಾನಿಷ್ ಸಾಮ್ರಾಜ್ಯ    


16 ಮತ್ತು 17 ನೇ ಶತಮಾನದ ಅವಧಿಯಲ್ಲಿ ಉತ್ತುಂಗಕ್ಕೆ ಏರಿದ ಸಾಮ್ರಾಜ್ಯ ಇದು. 18ನೇ ಶತಮಾನದಲ್ಲಿ ಪ್ರಪಂಚದ ದೊಡ್ಡ ಸಾಮ್ರಾಜ್ಯ ಎಂದು ಗುರ್ತಿಸಿಕೊಂಡಿದೆ. ಸ್ಪ್ಯಾನಿಷ್ ಸಮ್ರಾಜ್ಯವು ಅಗ್ರಗಣ್ಯ ಜಾಗತಿಕ ಶಕ್ತಿಯನ್ನು ಪಡೆಯಿತು. ಸೂರ್ಯನು ಎಂದು ಮುಳುಗದ ಸಾಮ್ರಾಜ್ಯ ಎಂದು ಮೊದಲಿಗೆ ಗುರ್ತಿಸಿಕೊಂಡಿದ್ದ ಸಾಮ್ರಾಜ್ಯ ಇದು.
ಕ್ರಿಸ್ಟೋಫರ್ ಕೊಲಂಬಸ್ ಪ್ರಯಾಣದ ನಂತರ ಸ್ಪ್ಯಾನಿಷ್ ಸಾಮ್ರಾಜ್ಯವು ಹುಟ್ಟಿಕೊಂಡಿದ್ದು ಇದು ಅಮೇರಿಕಾ, ಏಷ್ಯಾ, ಓಷಿಯಾನಿಯಾ ಮತ್ತು ಆಫ್ರಿಕಾದಲ್ಲಿ ಗ್ರೇಟರ್ ಆಂಟಿಲೆಸ್, ದಕ್ಷಿಣಾ ಅಮೇರಿಕಾ, ಮತ್ತು ಫೆಸಿಫಿಕ್ ಕರಾವಾಳಿ ಸೇರಿದಂತೆ ಹಲವು ಪ್ರದೇಶಗಳು ಇದರ ವಸಾಹತು ಪ್ರದೇಶಗಳಾಗಿದ್ದವು. 19ನೇ ಶತಮಾನದ ಸ್ವಾತಂತ್ರ್ಯದ ಸ್ಪ್ಯಾನಿಷ್ ಯುದ್ಧಗಳವರೆಗೆ ಅದು ಮುಂದುವರೆದಿತ್ತು.

03. ರಷ್ಯಾ ಸಾಮ್ರಾಜ್ಯ   


ರಶಿಯಾ ಸಾಮ್ರಾಜ್ಯ ಎಂದು ಕರೆಯಲ್ಪಡುವ ರಷ್ಯಾ ಸಾಮ್ರಾಜ್ಯವು 1721 ರಿಂದ 1917ರ ವರೆಗೆ ವಿಶಾಲವಾದ ಸಾಮ್ರಾಜ್ಯವನ್ನು ಹೊಂದಿದ್ದಂತಹ ಅಲ್ಪಾವದಿಯ ಸಾಮ್ರಾಜ್ಯವು ಫೆಬ್ರವರಿ ಕ್ರಾಂತಿಯಿಂದ ಪದಚ್ಯುತಿಗೊಂಡಿದೆ. ವಿಶ್ವ ಖಂಡದಲ್ಲಿ ಅತಿ ದೊಡ್ಡ ಸಾಮ್ರಾಜ್ಯಗಳ ಪೈಕಿ 3ನೇ ದೊಡ್ಡ ಸಾಮ್ರಾಜ್ಯ ಎಂಬ ಹೆಗ್ಗಳಿಕೆ ಪಾತ್ರವಾಗಿದೆ. ಬ್ರಿಟೀಷ್ ಮತ್ತು ಮಗೋಲಿಯನ್ ಸಾಮ್ರಾಜ್ಯಗಳನ್ನು ಹೊರತು ಪಡಿಸಿದರೆ ರಷ್ಯಾ ದೊಡ್ಡ ಸಾಮ್ರಾಜ್ಯ.
ಸ್ಪೀಡಿಷ್ ಸಾಮ್ರಾಜ್ಯ, ಪೋಲಿಷ್-ಲಿಥುವೇನಿಯಾ, ಕಾಮನ್ವೆಲ್ತ್, ಪರ್ಷಿಯಾ ಮತ್ತು ಒಟ್ಟೊಮನ್ ಸಾಮ್ರಾಜ್ಯಗಳ ಅವನತಿ ರಷ್ಯಾ ಸಾಮ್ರಾಜ್ಯದ ಏಳಿಗೆಗೆ ಮತ್ತು ಬೆಳವಣಿಗೆಗೆ ಕಾರಣವಾಯಿತು. ಅನೇಕ ಪ್ರದೇಶಗಳು ಇದರ ಆಡಳಿತಕ್ಕೆ ಒಳಪಟ್ಟು ಇವರ ಅಧಿಕಾರವನ್ನು ಒಪ್ಪಿಕೊಂಡಿದ್ದವು. ಅಲ್ಪಾವಧಿಯಲ್ಲೇ ಬೃಹತ್ತಾದಂತಹ ಸಾಮ್ರಾಜ್ಯವನ್ನು ಕಟ್ಟಿ ಬೆಳೆಸಿದ ಕೀರ್ತಿ ನಿಷ್ಠಾವಂತ ರಾಜರಿಗೆ ಸಲ್ಲುತ್ತೆ.

02. ಮಂಗೋಲ್ ಸಾಮ್ರಾಜ್ಯ  


ಮಧ್ಯ ಏಷ್ಯಾದ ಸ್ಟೆಪ್ಪೀಸ್ನಲ್ಲಿ ಹುಟ್ಟಿಕೊಂಡಿರುವ ಮಂಗೋಲ್ ಸಾಮ್ರಾಜ್ಯವು ಮಧ್ಯ ಯುರೋಪಿನಿಂದ ಜಪಾನ್, ಸಮುದ್ರಕ್ಕೆ ವಿಸ್ತರಿತು, ಉತ್ತರಕ್ಕೆ ನೈಬೀರಿಯಾ, ಪೋರ್ವಕ್ಕೆ ಮತ್ತು ದಕ್ಷಿಣದ ಕಡೆಗೆ ಭಾರತೀಯ ಉಪಖಂಡ, ಇಂಡೋಚೈನಾ ಮತ್ತು ಇರಾನಿನ ಪ್ರಸ್ಥಭೂಮಿಯ ವರೆಗೆ ಹಾಗೂ ಪಶ್ಚಿಮಕ್ಕೆ ಲೆವಂಟ್ ಮತ್ತು ಅರೇಬಿಯಾ ಸೇರಿದಂತೆ ವಿಶಾಲವಾದ ಸಾಮ್ರಾಜ್ಯವನ್ನು ನಿರ್ಮಾಣ ಮಾಡಿದ್ದಾರೆ.
ಮಂಗೋಲ್ ಸಾಮ್ರಾಜ್ಯವು ಛೆಂಗಿಸ್ ಖಾನ್ ನೇತೃತ್ವದಲ್ಲಿ ಅಲೆಮಾರಿ ಬುಡಕಟ್ಟು ಜನಾಂಗಗಳ ಏಕೀಕರಣದಿಂದ ಬೆಳಕಿಗೆ ಬಂದಿತು. 1206ರಲ್ಲಿ ಎಲ್ಲ ಮಂಗೋಲರ ಆಡಳಿತಗಾರನ್ನು ಘೋಷಿಸಲಾಯಿತು. ಇವನ ಆಡಳಿತದ ಮೂಲಕ ವೇಗವಾಗಿ ಇವನ ಸಾಮ್ರಾಜ್ಯ ವಿಸ್ತರಣೆ ಮಾಡಿ ಅಖಂಡ ಮಂಗೋಲ ಸಾಮ್ರಾಜ್ಯವನ್ನ ಕಟ್ಟಿ ಬೆಳೆಸಿದನು. ವ್ಯಾಪಾರ, ತಂತ್ರಜ್ಞಾನಗಳು, ಸರಕುಗಳ ಜೊತೆಗೆ ಇವರ ಸಿದ್ದಾಂತಗಳು ಪ್ರಚಾರವಾದವು.

01. ಬ್ರಿಟೀಷ್ ಸಾಮ್ರಾಜ್ಯ         


ಬ್ರಿಟೀಷ್ ಸಾಮ್ರಾಜ್ಯವು ಜಗತ್ತಿನ ಇತಿಹಾಸದಲ್ಲಿ ಅತೀ ವಿಶಾಲ ಸಾಮ್ರಾಜ್ಯವಾಗಿತ್ತು.  ಬಹುಕಾಲ ಮುಂಚೂಣಿಯಲ್ಲಿದ್ದ ಜಾಗತಿಕ ಶಕ್ತಿಯಾಗಿ ಬೆಳೆದಂತಹ ಸಾಮ್ರಾಜ್ಯ ಇದು. 1921ರ ಹೊತ್ತಿಗೆ ಬ್ರಿಟಿಷ್ ಸಾಮ್ರಾಜ್ಯವು ಜಗತ್ತಿನ ಜನಸಂಖ್ಯೆಯ ಸುಮಾರು ಕಾಲುಭಾಗದಷ್ಟು ಅಂದರೆ 57 ಕೋಟಿಯಷ್ಟು ಜನರ ಮೇಲೆ ಅಧಿಪತ್ಯವನ್ನು ಹೊಂದಿತ್ತು. ಒಂದು ಕಾಲಕ್ಕೆ ಸೂರ್ಯನು ಎಂದು ಮುಳುಗದ ಸಾಮ್ರಾಜ್ಯ ಎಂದು ಕರೆಯಲಾಗುತ್ತಿತ್ತು.
ಬ್ರಿಟಿಷರ ಪ್ರಭಾವ ಜಗತ್ತಿನಾದ್ಯಂತ ಬಲವಾಗಿ ಉಳಿದಿರುವುದನ್ನ ಕಾಣ್ಬೋದು. ಆರ್ಥಿಕ ವ್ಯವಸ್ಥೆ, ನ್ಯಾಯಾಂಗ, ಕ್ರೀಡೆ ಮೊದಲಾದವುಗಳು ಹೆಚ್ಚು ಪ್ರಭಾವ ಬೀರಿವೆ. ಭಾರತ, ಅಮೇರಿಕಾ, ಚೀನಾ, ಆಫ್ರಿಕಾ ಸೇರಿದಂತೆ ಬಹುತೇಕ ರಾಷ್ಟ್ರಗಳು ಇವರ ಆಡಳಿತಕ್ಕೆ ಒಳಪಟ್ಟಿದ್ದವು. ಪ್ರಪಂಚದ ವಿಶಾಲವಾದ ಸಾಮ್ರಾಜ್ಯವನ್ನು ಸ್ಥಾಪಿಸಿದ ಮೊಲದ ಸಾಮ್ರಾಜ್ಯವಾಗಿ ಬ್ರಿಟೀಷ್ ಸಾಮ್ರಾಜ್ಯ ಬೆಳೆದಿದೆ.

ಮಂಜುನಾಥ್ ಜೈ
manjunathahr1991@gmail.com


ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ಕಾಮೆಂಟ್ ಮಾಡಿ...






ಕಾಮೆಂಟ್‌ಗಳು

ಕಾಮೆಂಟ್‌‌ ಪೋಸ್ಟ್‌ ಮಾಡಿ

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಪ್ರಪಂಚದ 10 ಎತ್ತರದ ಪರ್ವತಗಳು - 26

ಭಾರತದ 10 ಪ್ರಸಿದ್ಧ ರಾಜರು - 22

ಕರ್ನಾಟಕದ 10 ಸುಂದರ ಬೆಟ್ಟಗಳು - 25