ಪ್ರಪಂಚದ ಜನಪ್ರಿಯ 10 ಆಟಗಳು - 24


   ಒಂದೊಂದು ದೇಶವು ಒಂದೊಂದು ತೆರನಾದ ಆಟಗಳನ್ನ ಆಡುತ್ವೆ. ಕೆಲವು ದೇಶಗಳಲ್ಲಿ ಕೆಲವು ಆಟಗಳು ಪ್ರಸಿದ್ದಿಯನ್ನ ಪಡೆದುಕೊಂಡಿವೆ. ಇನ್ನೂ  ಕೆಲವು ಆಟಗಳು ದೇಶದ ರಾಷ್ಟ್ರೀಯ ಕ್ರೀಡೆಯಾಗಿ ಮನ್ನಣೆಯನ್ನ ಗಳಿಸುತ್ವೆ. ಅವುಗಳಲ್ಲಿ ಜನರಿಗೆ ಇಷ್ಟ ಆಗೋದು ಮಾತ್ರ ಕೆಲವು, ಕೆಲವಲ್ಲಿ 10 ಆಟಗಳ ಕಂಪ್ಲೀಟ್ ಡಿಟೈಲ್ಸ್ ಇಲ್ಲಿದೆ ನೋಡಿ.

10. ಗಾಲ್ಫ್

ಕ್ರಿಸ್ತ ಶಕ 15ನೇ ಶತಮಾನದಲ್ಲಿ ಕ್ರೀಡೆ ಬೆಳಕಿಗೆ ಬಂದಿತು ಎಂಬ ಹಲವು ಉಲ್ಲೇಖಗಳು ಕಂಡುಬರುತ್ವೆ. ಆಟವನ್ನ ರೋಮ್ ಸಾಮ್ರಾಜ್ಯಲ್ಲಿ ಕಂಡುಬಂದ ಪಾಗನಿಕ ಆಟ. ಪರ್ಷಿಯನ್ ಚೌಗನ್ ಆಟವು ಇದಕ್ಕೆ ಒಂದು ಮೂಲ ಇರಬಹುದು ಎಂದು ಕೆಲವು ಇತಿಹಾಸಕಾರರು ಹೇಳುತ್ತಾರೆ. ಅದೆಲ್ಲಾ ಏನೆ ಇದ್ದರು ಗಾಲ್ಪ್ ಇಂದು ವಿಶ್ವ ಮನ್ನಣೆಯ ಆಟವಾಗಿ ಜನಪ್ರಿಯವಾಗಿದೆ.
ಸ್ಕಾಟ್ಲ್ಯಾಂಡ್ ದೇಶದಲ್ಲಿ ಆರಭವಾದ ಆಟ ಇಂದು ಜಗತ್ತಿನಾದ್ಯಂತ ಲಗ್ಗೆ ಇಟ್ಟಿದೆ. ಜನಪ್ರಿಯ ಆಟಗಳಲ್ಲಿ ಒಂದಾಗಿರುವ ಗಾಲ್ಫ್ ಶ್ರೀಮಂತ ಜನರು ಹೆಚ್ಚಾಗಿ ಆಡುವಂತ ಜೆಂಟಲ್ಮನ್ ಕ್ರೀಡೆ ಎಂಬ ಹೆಗ್ಗಳಿಕೆಗೂ ಪಾತ್ರವಾಗಿದೆ. ಭಾರತದಲ್ಲೂ ಇದರ ಬಗ್ಗೆ ಒಲವು ಹೆಚ್ಚಾಗಿದ್ದು ಹೆಚ್ಚು ಜನರು ಇದನ್ನು ಕಲಿಯಲು ಮತ್ತು ಆಟವಾಡಲು ಬಯಸುತ್ತಾರೆ. ಜನಪ್ರಿಯ ಆಟಗಳಲ್ಲಿ 1೦ನೇ ಸ್ಥಾನದಲ್ಲಿದೆ ಗಾಲ್ಫ್.

೦9. ರಗ್ಬಿ   

ರಗ್ಬಿ ಫುಟ್ಬಾಲ್, ರಗ್ಬಿ ಲೀಗ್ ಮತ್ತು ರಗ್ಬಿ ಯೂನಿಯನ್ ಎಂಬ ಎರಡು ಪ್ರಕಾರದ ಆಟಗಳಿಂದ ಪ್ರಸಿದ್ಧವಾಗಿದೆ. ರಗ್ಬಿಯು ಯುನೈಟೆಡ್ ಕಿಂಗ್ಡಮ್ ಸುತ್ತಮುತ್ತಲ ಪ್ರದೇಶಗಳಲ್ಲಿ ಫುಟ್ಬಾಲ್ ಆಟದ ರೂಪ ಪಡೆಯುವ ಮೊದಲು ಬೇರೆ ಬೇರೆ ಪ್ರದೇಶಗಳಲ್ಲಿ  ಬೆಳವಣಿಗೆಯಾದ ಕ್ರೀಡೆ ಎಂದು ಹೇಳಬಹುದು. ಹತ್ತೊಂಬತ್ತನೆಯ ಶತಮಾನದ ಸಮಯದಲ್ಲಿ ಇಂಗ್ಲಿಷ್ ಪಬ್ಲಿಕ್ ಸ್ಕೂಲ್ಗಳಲ್ಲಿ ಆಡುತ್ತಿದ್ದ ವಿವಿಧ ಪ್ರಕಾರದ ಕ್ರೀಡೆಗಳಲ್ಲಿ ಇದು ಕೂಡ ಒಂದು.
ರಗ್ಬಿ ಆಟವು ವೃತ್ತಿಪರ ಹವ್ಯಾಸಿ ಆಟವಾಗಿದ್ದು ದಕ್ಷಿಣ ಆಫ್ರಿಕಾ, ಅರ್ಜೆಂಟೈನಾ, ಆಸ್ಟ್ರೇಲಿಯಾ, ಇಂಗ್ಲೇಂಡ್ ಸೇರಿದಂತೆ ಹಲವು ದೇಶಗಳಲ್ಲಿ ಪ್ರಮುಖ ಆಟವಾಗಿ ಆಡುತ್ತಾರೆ. ಇಡೀ ದೇಹವನ್ನು ಬಳಸಿಕೊಂಡು ಆಡುವ ಆಟ ರೋಮಾಂಚನಕಾರಿಯಾದದ್ದು, ಎದುರಾಳಿಯನ್ನು ಮೆಟ್ಟಿ ತನ್ನ ಗುರಿಯನ್ನು ತಲುಪಲು ನಾಚೂಕಿನಿಂದ ಆಡುವ ಆಟ ಇದು. ಪ್ರಪಂಚದ ಹೆಚ್ಚು ಜನರು ನೋಡುವಂತಹ ಇಷ್ಟ ಪಡುವಂತಹ ಹೆಚ್ಚು ಪ್ರಸಿದ್ದಿಯಾದ ಆಟ ರಗ್ಬಿ.

೦8. ವಾಲಿಬಾಲ್   


1895ರಲ್ಲಿ ಹೊಲೊಕ್, ಮ್ಯಾಸಚೂಸೆಟ್ಸ್, ಯುನೈಟೆಡ್ ಸ್ಟೇಸ್ಟ್ಗಳಲ್ಲಿ ಆರಂಭವಾದ ವಾಲಿಬಾಲ್ ಇಂದು ಜಗತ್ತಿನ ಮನ್ನಣೆಯನ್ನು ಗಳಿಸಿ ಪ್ರಮುಖ ಆಟಗಳಲ್ಲಿ ಒಂದು ಎನಿಸಿಕೊಂಡಿದೆ. 6 ಜನ ಆಟಗಾರರಿರುವ 2 ತಂಡಗಳು 21 ಅಥವಾ 15 ಅಂತಿಮ ಪಾಯಿಂಟ್ಗಳಿಸಲು ಸೆಣೆಸಾಡುವ ಆಟ ವಾಲಿಬಾಲ್. 1909ರಲ್ಲಿ ಸುಮಾರು 16.೦೦೦ ವಾಲಿಬಾಲ್ಗಳನ್ನು ಅಮೇರಿಕಾದ ದಂಡಯಾತ್ರಾ ಪಡೆಗಳು ತಮ್ಮ ಸೇನಾ ಪಡೆಗಳಿಗೆ ಮತ್ತು ಮಿತ್ರ ರಾಷ್ಟ್ರಗಳಿಗೆ ನೀಡಿದರು ಇದರಿಂದ ವಾಲಿಬಾಲ್ ಆಟದ ಬೆಳವಣಿಗೆ ಹೆಚ್ಚಿತು.
1924ರಲ್ಲಿ ಪ್ಯಾರಿಸ್ನಲ್ಲಿ ನಡೆದ ಒಲಂಪಿಕ್ನಲ್ಲಿ ಅಮೇರಿಕಾದ ಕ್ರೀಡಾ ಪ್ರದರ್ಶನವಾಗಿ ವಾಲಿಬಾಲ್ ಕ್ರೀಡೆಯನ್ನ ಆಡಲಾಯಿತು. ಆಗ ಬಹುತೇಕ ರಾಷ್ಟ್ರಗಳು ಆಟವನ್ನು ಆಡುತ್ತಿದ್ದರು. ಇದರಲ್ಲಿ ಮೂರು ಪ್ರಕಾರಗಳನ್ನ ಕಾಣ್ಬೋದು ಒಳಾಂಗಣ, ಬೀಚ್ ಮತ್ತು ಹುಲ್ಲು ಹಾಸಿನ ಆಟಗಳನ್ನ ಆಡಲಾಗುತ್ತದೆ. ಕಾಲಕ್ಕೆ, ಸನ್ನಿವೇಶಕ್ಕೆ ತಕ್ಕಂತೆ ನಿಯಮಗಳ ಬದಲಾವಣೆಯನ್ನ ಮಾಡಲಾಗುತ್ತದೆ. ಇದರ ಕ್ರೇಸ್ ಭಾರತದಲ್ಲೂ ಕೂಡ ಹೆಚ್ಚಾಗಿಯೇ ಇದೆ.

೦7. ಟೇಬಲ್ ಟೆನ್ನಿಸ್   


ಇಬ್ಬರು ಅಥವಾ ನಾಲ್ಕು ಜನ ಆಡುವಂತಹ ಆಟ ಟೇಬಲ್ ಟೆನ್ನಿಸ್. ಗಟ್ಟಿಯಾದ ಮೇಜಿನ ಮೇಲೆ ಆಟವನ್ನ ಆಡಲಾಗುತ್ತೆ. ಆಟವು ವೇಗವಾಗಿದ್ದು ಅತೀ ವೇಗವಾದ ಪ್ರತಿಕ್ರಿಯೆಯನ್ನ ನೀಡಬೇಕಾಗುತ್ತೆ. ಎದುರಾಳಿಯ ಕೈಯಿಂದ ಚಂಡು ಕಸಿಯುವಂತೆ ನೋಡಿಕೊಳ್ಳುವುದು ಇದರ ಜಾಣತನ. ಚುರುಕು ಆಟಕ್ಕೆ ಪ್ರಾಧಾನ್ಯತೆ ಇದರ ಮತ್ತೊಂದು ಆಟದ ಲಕ್ಷಣ.
1880ರ ದಶಕದಲ್ಲಿ ಆರಂಭವಾದ ಆಟ, ತನ್ನ ನಿಯಮಗಳಲ್ಲಿ ಅನೇಕ ಬದಲಾವಣೆಗಳನ್ನ ಮಾಡಿಕೊಂಡು ವಿಶ್ವ ಮನ್ನಣೆಗೆ ಪಾತ್ರವಾಗಿದೆ. 1926ರಲ್ಲಿ ಸ್ಥಾಪನೆಯಾದ ಅಂತರಾಷ್ಟ್ರೀಯ ಟೇಬಲ್ ಟೆನ್ನಿಸ್ ಒಕ್ಕೂಟ ಇದನ್ನ ನಿಯಂತ್ರಣ ಮಾಡುತ್ತಿದೆ. 1988ರಿಂದ ಒಲಂಪಿಕ್ ಕ್ರೀಡೆಯಾಗಿ ಪರಿಗಣಿಸಲಾಯಿತು. ಆಟವು ವಿಕ್ಟೋರಿಯಾ ಯುಗದ ಅವಧಿಯಲ್ಲಿ ಇಂಗ್ಲೇಂಡ್ ಕ್ರೀಡೆಯಾಗಿ ಆರಂಭಗೊಂಡಿದ್ದು ಈಗ ಬಹುತೇಕ ರಾಷ್ಟ್ರಗಳಲ್ಲಿ ಆಟ ಚಾಲನೆಯಲ್ಲಿದೆ.

೦6. ಬ್ಯಾಸ್ಕೆಟ್ ಬಾಲ್    


1891ರಲ್ಲಿ ಬೆಳಕಿಗೆ ಬಂದ ಆಟ ಬ್ಯಾಸ್ಕೆಟ್ ಬಾಲ್ 5 ಆಟಗಾರರ ಎರಡು ತಂಡಗಳು ಗೆಲುವಿಗಾಗಿ ಸೆಣಸಾಡುತ್ತವೆ. 1೦ ಅಡಿ ಎತ್ತರದ ಗೋಲ್ ಒಳಗೆ ಚೆಂಡನ್ನು ಹಾಕುವ ಮೂಲಕ ಹೆಚ್ಚು ಅಂಕಗಳಿಸಲು ಪರಸ್ಪರ ಸೆಣಸಾಟ ನಡೆಸುವುದಾಗಿದೆ. ಇದೊಂದು ಪ್ರಸಿದ್ದವಾದ ಮತ್ತು ಪ್ರಪಂಚದಾದ್ಯಂತ ವ್ಯಾಪಕವಾದ ಕ್ರೀಡೆಯಾಗಿದೆ. ಚಮತ್ಕಾರದ ಮೂಲಕ ಚೆಂಡನ್ನು ಮೇಲಿಂದ ಬ್ಯಾಸ್ಕೆಟ್ ಒಳಗೆ ಹಾಕುವುದು ಆಟದ ಅಂತಮ ಹಂತ.
ಆಟದಲ್ಲಿ ಎತ್ತರವಿದ್ದಷ್ಟು ಅಡ್ವಾಂಟೇಜಸ್ ಹೆಚ್ಚು ಇರುತ್ತೆ. ಸರಾಗವಾಗಿ ಬ್ಯಾಸ್ಕೇಟ್ ಒಳಗೆ ಚೆಂಡನ್ನು ಹಾಕಬಹುದು. ಆಟವು ಭಾರತವು ಸೇರಿ ಹಲವು ರಾಷ್ಟ್ರಗಳು ಪ್ರಮುಖ ಕ್ರೀಡೆಯಾಗಿ ಬಳಕೆಯಲ್ಲಿದೆ. ಜನರು ಇಷ್ಟ ಪಡುವಂತಹ ಮತ್ತು ಪ್ರೋತ್ಸಾಹಿಸುವಂತಹ ಕ್ರೀಡೆಗಳಲ್ಲಿ ಆರನೇ ಸ್ಥಾನವನ್ನ ನೀಡಲಾಗಿದೆ. ಪ್ರಸ್ಥುತ ದಿನಗಳಲ್ಲಿ ಇದರ ಬೆಳವಣಿಗೆ ಹೆಚ್ಚಾಗಿದೆ.

೦5. ಬೇಸ್ ಬಾಲ್   


ಬೇಸ್ ಬಾಲ್ ಕ್ರೀಡೆಯು ಎಲ್ಲಿ ಹೇಗೆ ಉಗಮವಾಯಿತು ಎಂದು ನಿಖರವಾದ ಆಧಾರಗಳಿಲ್ಲ ಆದರೆ 1344ರಲ್ಲಿ ಒಂದು ಹಸ್ತಪ್ರತಿಯಲ್ಲಿ ಪಾದ್ರಿಗಳು ಒಂದು ಕ್ರೀಡೆಯನ್ನು ಆಡುತ್ತಿರುವ ಚಿತ್ರವಿದ್ದು ಅದು ಬೇಸ್ ಬಾಲ್ ಮಾದರಿಯನ್ನೇ ಹೋಲುತ್ತದೆ ಎಂಬ ಆಧಾರಗಳನ್ನ ನಂಬಲಾಗಿದೆ. ಇದೊಂದೆ ಅಲ್ಲದೆ ನಂತರದ ದಿನಗಳಲ್ಲಿ ವಿವಿಧ ದೇಶಗಳಲ್ಲಿ ವಿವಿಧ ರೀತಿಯ ಆಧಾರಗಳು ಮತ್ತು ಹೆಸರುಗಳಿಂದ ಬಳಕೆಗೆ ಇತ್ತು ಎಂಬುದನ್ನ ಇಲ್ಲಿ ಕಾಣ್ಬೋದು.
ಅಮೇರಿಕಾದ ಕ್ರೀಡೆಯೆಂದೆ ಹೆಸರಾಗಿರುವ ಬೇಸ್ಬಾಲ್ ಇತರ ದೇಶಗಳಲ್ಲೂ ಹರಡಿರುವುದನ್ನ ಕಾಣ್ಬೋದು. ನೆದರ್ಲ್ಯಾಂಡ್, ಆಸ್ಟ್ರೇಲಿಯಾ, ಜಪಾನ್, ಮೆಕ್ಸಿಕೋ,  ದಕ್ಷಿಣ ಕೊರಿಯಾ, ತೈವಾನ್ ಮತ್ತು ಚೀನಾ ಸೇರಿದಂತೆ ಹಲವು ದೇಶಗಳಲ್ಲಿ ಲೀಗ್ಗಳಿವೆ. ರಾಷ್ಟ್ರೀಯ ತಂಡಗಳ ನಡುವೆ ಬೇಸ್ ಬಾಲ್ ವಿಶ್ವಕಪ್ ಮತ್ತು ಒಲಂಪಿಕ್ ಟೂರ್ನಿಮೆಂಟ್ಗಳನ್ನು ಕೂಡ ನಡೆಸಲಾಗುತ್ತೆ. ಒಟ್ಟಾರೆಯಾಗಿ ಬೇಸ್ ಬಾಲ್ ಹೆಚ್ಚು ಮನ್ನಣೆ ಪಡೆದ ಕ್ರೀಡೆಗಳಲ್ಲಿ ಒಂದು ಎನಿಸಿದೆ.

೦4. ಹಾಕಿ     


ಭಾರತದ ರಾಷ್ಟ್ರೀಯ ಕ್ರೀಡೆ ಎಂದು ಹೆಸರಾಗಿರುವ ಹಾಕಿ ಜಗತ್ತಿನ ಬಹುತೇಕ ಜನರು ಇಷ್ಟಪಡುವ ಕ್ರೀಡೆಗಳಲ್ಲಿ ನಾಲ್ಕನೆಯ ಸ್ಥಾನವನ್ನ ಪಡೆದುಕೊಂಡಿದೆ. ಹಾಕಿಯು ಆಟಗಳ ಕೂಟಕ್ಕೆ ಮೂಲ ಕಾರಣ ಎನ್ನಬಹುದಾಗಿದೆ. ಎರಡು ತಂಡಗಳು ಒಬ್ಬರನ್ನೊಬ್ಬರು ಉಪಾಯವಾಗಿ ನಿರ್ವಹಿಸುತ್ತಾ ಚೆಂಡನ್ನು ಹಾಕಿ ಸ್ಟಿಕ್ ಬಳಸಿ ಗುರಿಯನ್ನು ತಲುಪುವಂತೆ ಮಾಡುವುದು ಇದರ ಒಂದು ನಿಯಮವಾಗಿದೆ.
ಬಹು ಮುಖ್ಯವಾಗಿ ಯುರೋಪ್, ಏಷ್ಯಾ, ಆಸ್ಟ್ರೇಲಿಯಾ ಮತ್ತು ದಕ್ಷಿಣ ಆಫ್ರಿಕಾ ದೇಶಗಳಲ್ಲಿ ಆಟವನ್ನು ಹೆಚ್ಚಾಗಿ ಆಡುತ್ತಾರೆ ಮಹಿಳಾ ಮತ್ತು ಪುರುಷ ತಂಡಗಳು ಆಡುವಂತಹ ಕ್ರೀಡೆ ಇದಾಗಿದೆ. ಭಾರತದಲ್ಲಿ ಮೈದಾನದಲ್ಲಿ ಆಡುವಂತಹ ಕ್ರೀಡೆಗೆ ಹೆಚ್ಚಿನ ಒಲವಿದೆ. ಪುರುಷರ ಹಾಕಿ ತಂಡದಲ್ಲಿ ಕರ್ನಾಟಕದ ವಿ. ಆರ್. ರಘುನಾಥ್, ಎಸ್. ವಿ. ಸುನಿಲ್ ಮತ್ತು ನಿಕಿನ್ ತಿಮ್ಮಯ್ಯ ತಂಡದಲ್ಲಿದ್ದರು. ತಂಡ 17ನೇ ಏಷ್ಯನ್ ಕ್ರೀಡಾಕೂಡದ 2014ರಲ್ಲಿ ಚಿನ್ನದ ಪದಕ ಗೆದ್ದು ಸಾಧನೆಯನ್ನು ಮಾಡಿದೆ.

೦3. ಟೆನ್ನಿಸ್   


ಟೆನ್ನಿಸ್ ಇಬ್ಬರು ಅಥವಾ ನಾಲ್ಕು ಜನ ಆಡಬಹುದಾದಂತಹ ಒಂದು ಹೊರಾಂಗಣ ಆಟ. ಆಟದಲ್ಲಿ ಆಟಗಾರರು ಸುಮಾರು ಮೂರುವರೆ ಅಡಿ ಎತ್ತರದ ನಟ್ ಎರಡು ಬದಿಗಳಲ್ಲಿ ಇದ್ದು ಒಂದು ರಕ್ಯುಟ್ ಸಹಾಯದಿಂದ ರಬ್ಬರ್ ಚೆಂಡನ್ನು ಎದುರಾಳಿ ತಂಡದ ಆಟಗಾರರ ಅಂಕಣಕ್ಕೆ ಹೊಡೆಯುತ್ತಾರೆ. ಇದರ ಉದ್ದೇಶ ಎದುರಾಳಿ ತಂಡದವರು ಚೆಂಡನ್ನು ಮತ್ತೆ ವಾಪಸ್ಸು ಮಾಡಲು ಸಾಧ್ಯವಾಗದಂತೆ ಆಟವಾಡೋದು.
1859 ಮತ್ತು 1865ರ ನಡುವೆ ಇಂಗ್ಲೇಂಡ್ನಲ್ಲಿ ಆರಂಭವಾದ ಟೆನ್ನಿಸ್ ಆಟ ಇಂದು ಇಡೀ ವಿಶ್ವವನ್ನು ಆವರಿಸಿಕೊಂಡಿದೆ. ಆಸ್ಟ್ರೇಲಿಯನ್ ಒಪನ್, ಫ್ರೆಂಚ್ ಒಪನ್, ವಿಂಬಲ್ಡನ್ ಒಪನ್ ಸೇರಿದಂತೆ ಹಲವು ಪ್ರಕಾರಗಳಾಗಿ ಇದನ್ನ ಆಡಲಾಗುತ್ತೆ. ಒಲಂಪಿಕ್ನಲ್ಲೂ ಕೂಡ ಆಟವಿದ್ದು ಅನೇಕ ತಂಡಗಳು ಇದರಲ್ಲಿ ಸೆಣೆಸುತ್ತವೆ, ಸಾನಿಯ ಮಿರ್ಜ ಭಾರತದ ಆಟಗಾರರಲ್ಲಿ ಒಬ್ಬರಾಗಿದ್ದು. ಸೆರೆನಾ ವಿಲಿಯಮ್ಸ್, ಮಾರ್ಟಿನ್ ಹಿಂಗಿಸ್, ರೆಫೆಲ್ ನಡಾಲ್, ರೋಜರ್ ಫೆಡರರ್, ನೂವಾಕ್ ಜೊಕೊವಿಕ್ ಪ್ರಮುಖ ಆಟಗಾರರು.

೦2. ಕ್ರಿಕೆಟ್   


ಒಂದು ತಂಡದಲ್ಲಿ ಹನ್ನೊಂದು ಜನ ಆಟಗಾರರಿದ್ದು ನಿಯಮಗಳ ಪ್ರಕಾರ ಮೊದಲು ಆಟವಾಡಿದ ತಂಡದ ಮೊತ್ತಕ್ಕಿಂತ ಹೆಚ್ಚಿನ ಮೊತ್ತವನ್ನು ಕಲೆ ಹಾಕಿ ಎದುರಾಳಿ ತಂಡವನ್ನು ಮಣಿಸುವ ಕ್ರೀಡೆ ಕ್ರಿಕೆಟ್, ಆಟದಲ್ಲಿ ಬ್ಯಾಟ್ ಮತ್ತು ಬಾಲ್ ಉಪಯೋಗಿಸಿ ಆಡುವಂತಹ ಆಟ. ಪ್ರಪಂಚದ ಬಹುತೇಕ ರಾಷ್ಟ್ರಗಳು ಆಟವನ್ನು ಆಡುತ್ತಾರೆ. ಪ್ರತಿಷ್ಟೆಯ ಕಣವಾಗಿರುತ್ತೆ ಆಟದ ಮೈದಾನ. ಕ್ರೀಡೆಯ ಮತ್ತೊಂದು ಹೆಸರಾದ ಜೆಂಟಲ್ ಮನ್ ಗೇಮ್ ಎಂದೂ ಕೂಡ ಕರೆಯುತ್ತಾರೆ.
ಭಾರತದಲ್ಲಿ ಕ್ರಿಕೆಟ್ ಒಂದು ಆಟವಾಗಿಲ್ಲ ಮನರಂಜನೆಯ ಅಂಕಣವಾಗಿದೆ. 16ನೇ ಶತಮಾನದಲ್ಲಿ ಇಂಗ್ಲೇಡ್ನಲ್ಲಿ ಆರಂಭವಾದ ಆಟ ಹಲವು ನಿಯಮಗಳ ಬದಲಾವಣೆಯೊಂದಿಗೆ ಹೊಸ ಹುರುಪಿನಲ್ಲಿ ಬದಲಾಗಿ ಬಂದಿದೆ. ಕ್ರಿಕೆಟ್ನಲ್ಲಿ ಪ್ರತಿ ನಾಲ್ಕು ವರ್ಷಗಳಿಗೊಮ್ಮೆ ವಿಶ್ವಕಪ್ ಕೂಡ ನಡೆಸಲಾಗುತ್ತೆ. ಭಾರತ ಎರಡು ಭಾರಿ ಇದನ್ನು ಮುಡಿಗೇರಿಸಿಕೊಂಡಿದೆ, ಟೆಸ್ಟ್, 50 ಓವವರ್ಗಳ ಮ್ಯಾಚ್, 20-20 ಓವರ್ಗಳ ಮ್ಯಾಚ್ ಪ್ರಸ್ಥುತ ದಿನಗಳಲ್ಲಿ ಚಾಲನೆಯಲ್ಲಿವೆ. ಹೆಚ್ಚು ಅಭಿಮಾನಿಗಳನ್ನು ಸಂಪಾದಿಸಿಕೊಂಡಿರುವ ಆಟಗಳಲ್ಲಿ ಕ್ರಿಕೆಟ್ಗೆ ಎರಡನೆ ಸ್ಥಾನ.

೦1. ಫುಟ್ಬಾಲ್   


ಫುಟ್ಬಲ್ ಜಗತ್ತಿನ ಅತೀ ಹೆಚ್ಚು ಕ್ರೀಡಾ ಅಭಿಮಾನಿಗಳನ್ನ ಹೊಂದಿರುವಂತಹ ಕ್ರೀಡೆ. ಕ್ರಿಸ್ತ ಪೂರ್ವದ ಇತಿಹಾಸವನ್ನು ಹೊಂದಿರುವಂತಹ ಆಟ ನಿಯಮಗಳಲ್ಲಿ ಹಲವಾರು ಬದಲಾವಣೆಯನ್ನ ಹೊಂದುತ್ತಾ ಬೆಳೆದು ನಿಂತಿದೆ. ಪ್ರತಿ ನಾಲ್ಕು ವರ್ಷಗಳಿಗೊಮ್ಮೆ ನಡೆಯುವ ಫುಟ್ಬಾಲ್ ವಿಶ್ವ ಕಪ್ ಜಗತ್ತಿನ ರಾಷ್ಟ್ರಗಳನ್ನು ಒಂದು ಕಡೆ ಸೇರಿಸುತ್ತೆ. ಹನ್ನೊಂದು ಜನರಿರುವ ಎರಡು ತಂಡಗಳು ಆಟದಲ್ಲಿ ಪಾಲ್ಗೊಳ್ಳುತ್ತವೆ.
ಭಾರತವು ಸೇರಿದಂತೆ ಅನೇಕ ತಂಡಗಳು ಇನ್ನೂ ವಿಶ್ವಕಪ್ಗೆ ಅರ್ಹತೆಯನ್ನು ಪಡೆಯಲು ಸಾದ್ಯವಾಗಿಲ್ಲ. ಆದರೂ ಫುಟ್ಬಾಲ್ ಮೇಲಿನ ಕ್ರೇಸ್ ಭಾರತೀಯರಲ್ಲಿ ಕಡಿಮೆಯಾಗಿಲ್ಲ. ಕರ್ನಾಟಕ ರಾಜ್ಯ ಫುಟ್ಬಾಲ್ ಅಸೋಸಿಯೇಷನ್, ಅಖಿಲ ಭಾರತ ಫುಟ್ಬಾಲ್ ಫೆಡರೇಷನ್ ಭಾರತದಲ್ಲಿ ಫುಟ್ಬಾಲ್ ಕ್ರೀಡೆಯನ್ನ ಬೆಳೆಸುತ್ತಿವೆ. ಕ್ರೀಡೆಗಳಲ್ಲಿ ಪ್ರಾಚೀನ ಎನಿಸುವಂತಹ ಕ್ರೀಡೆ ಅನೇಕ ಏಳು ಬೀಳುಗಳನ್ನ ಕಂಡು ಎಲ್ಲರ ಮನಸನ್ನ ಗೆದ್ದಿದೆ. ಇಂದು ಪ್ರಪಂಚ ಮೊದಲ ಪ್ರಸಿದ್ದಿ ಪಡೆದ ಕ್ರೀಡೆಯಾಗಿದೆ.

                                                                                                                         ಮಂಜುನಾಥ್ ಜೈ

manjunathahr1991@gmail.com


ನಿಮ್ಮ ಅನಿಸಿಕೆ, ಅಭಿಪ್ರಾಯಗಳನ್ನು ಕಾಮೆಂಟ್ ಮಾಡಿ ಜೊತೆಗೆ  ಟಾಪ್ 10 ವಿಶೇಷ ಮಾಹಿತಿಗಾಗಿ ಸಬ್ ಸ್ಕ್ರೈಬ್ ಆಗಿ







ಕಾಮೆಂಟ್‌ಗಳು

ಕಾಮೆಂಟ್‌‌ ಪೋಸ್ಟ್‌ ಮಾಡಿ

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಪ್ರಪಂಚದ 10 ಎತ್ತರದ ಪರ್ವತಗಳು - 26

ಭಾರತದ 10 ಪ್ರಸಿದ್ಧ ರಾಜರು - 22

ಕರ್ನಾಟಕದ 10 ಸುಂದರ ಬೆಟ್ಟಗಳು - 25