ಭಾರತದ ಶ್ರೀಮಂತ 10 ದೇವಾಲಯಗಳು - 23


ಹೆಚ್ಚಿನ ಸಂಖ್ಯೆಯಲ್ಲಿ ಹಿಂದುಗಳು ವಾಸ ಮಾಡುವಂತಹ ಭಾವೈಕ್ಯತೆಯ ನಾಡು ಭಾರತ, ಇಲ್ಲಿ ಅನೇಕ ಧರ್ಮಿಯರು ಸಹಬಾಳ್ವೆಯಿಂದ ಜೀವನ ಮಾಡುತ್ತಿದ್ದಾರೆ. ಹಿಂದು ಜನಸಮುದಾಯದವರು ಪೂಜೆ ಮಾಡುವಂತಹ ಅನೇಕ ಹಿಂದೂ ದೇವಾಲಯಗಳು ಇಲ್ಲಿವೆ. ಇವು ಬರಿ ಸಾಮಾನ್ಯ ದೇವಾಲಯಗಳಲ್ಲ, ಸಾವಿರಾರು ಕೋಟಿ ಸಂದಾಯವಾಗುವಂತಹ ಶ್ರೀಮಂತ ಆಲಯಗಳು. ಅಂತಹ ಹತ್ತು ದೇವಾಲಯಗಳ ಕಥೆ ಇಲ್ಲಿದೆ.

10. ಸೋಮನಾಥ ದೇವಾಲಯ,  ಗುಜರಾತ್ 


ಶ್ರೀಮಂತ ದೇವಾಲಯಗಳ ಹತ್ತನೆ ಸ್ಥಾನದಲ್ಲಿ ಗುಜರಾತಿನ ಸೋಮನಾಥ ದೇವಾಲಯ ನಿಲ್ಲುತ್ತೆ. ಜುನಾಗಡ ಜಿಲ್ಲೆಯ ಪ್ರಭಾಸ ಎಂಬಲ್ಲಿ ಶ್ರೀ ಸೋಮನಾಥ ಜ್ಯೋತಿರ್ಲಿಂಗದ ದೇವಾಲಯವಿದೆ. ಇದನ್ನು ಪ್ರಭಾಸ ಕ್ಷೇತ್ರ ಎಂದು ಕರೆಯುತ್ತಾರೆ, ಸ್ಥಳಕ್ಕೆ ಸೋಮೇಶ್ವರ ಎಂದು ಕೂಡ ಹೆಸರಿದೆ. ದೇವಾಲಯ ಪುರಾತನವಾದದ್ದು ಮತ್ತು ಶತಮಾನಗಳಷ್ಟು ಇತಿಹಾಸವನ್ನು ಹೊಂದಿದೆ. ಇಡೀ ಮಂದಿರ ಬೆಳ್ಳಿ ಬಂಗಾರದಿಂದ ಶೋಭಿಸುತ್ತದೆ.
ಪ್ರಾಚೀನ ಕಾಲದಲ್ಲಿ ದೇವಾಲಯದ ಕಂಬಗಳ ಮೇಲೆ ಮುತ್ತು ರತ್ನಗಳನ್ನ ಕೊರಿಸಿದ್ದರೆಂದೂ ಇಡೀ ಮಂದಿರ ಬೆಳ್ಳಿ ಬಂಗಾರದಿಂದ ಶೋಭಿಸುತ್ತಿಂತೆಂದೂ ಇದಕ್ಕೆ ಬಂಗಾರದ ಕಳಸವಿತ್ತೆಂದೂ ಹೇಳಲಾಗುತ್ತದೆ. ದೇವಾಲಯವು ಅನೇಕ ಬಾರಿ ಅನ್ಯ ಮತೀಯರ ದಾಳಿಗೆ ಒಳಗಾಗಿದ್ದರು ಐಶ್ವರ್ಯವನ್ನು ಕೊಳ್ಳೆ ಹೊಡೆದಿದ್ದಾರೆಂದು ಹೇಳುತ್ತಾರೆ. ಇಷ್ಟೆಲ್ಲಾ ಆದರು ಪ್ರತಿ ವರ್ಷ ಇದಕ್ಕೆ ಬರುವಂತಹ ಆದಾಯ ಸುಮಾರು 50 ಕೋಟಿ ಎಂದು ಅಂದಾಜು ಮಾಡಲಾಗಿದೆ.

09. ಕಾಶಿ ವಿಶ್ವನಾಥ ದೇವಾಲಯ, ವಾರಣಾಸಿ   


ಕಾಶಿಯ ವಿಶ್ವೇಶ್ವರ ಲಿಂಗವು ಹನ್ನೆರಡು ಜೋತಿರ್ಲಿಂಗಗಳಲ್ಲಿ ಒಂದು. ಇದು ಭಾರತದ ಪುಣ್ಯ ಕ್ಷೇತ್ರಗಳಲ್ಲಿ ಅತ್ಯಂತ ಪ್ರಸಿದ್ದವಾದುದು. ಹಾಗೂ ಬಹಳ ಪ್ರಾಚೀನ ಮತ್ತು ಶ್ರೀಮಂತವಾದುದು. ಹೇಗೆ ಇಲ್ಲಿಯ ವಿಶ್ವನಾಥ ಜ್ಯೋತಿರ್ಲಿಂಗ ಪ್ರಸಿದ್ಧವೋ ಹಾಗೇ ಕಾಶಿಯು ಭಾರತದ ಸಂಸ್ಕೃತಿಯ ಪ್ರತೀಕವೂ ಆಗಿದೆ. ಮಹಾರಾಣಿ ಅಹತ್ಯಭಾಯಿ ಹೋಲ್ಕರ್ 1780ರಲ್ಲಿ ಇದನ್ನು ನಿರ್ಮಾಣ ಮಾಡಿದ್ದರ ಬಗ್ಗೆ ಉಲ್ಲೇಖವಿದೆ.
ಪವಿತ್ರ ಗಂಗಾನದಿಯು ದೇವಾಲಯದ ಪಕ್ಕದಲ್ಲಿ ಹರಿಯುತ್ತೆ. ಇದರಲ್ಲಿ ಮುಳುಗಿದರೆ ನಮ್ಮ ಪಾಪವೆಲ್ಲಾ ಕಳೆಯುತ್ತೆ ಎಂಬ ನಂಬಿಗೆ ಹಿಂದೂ ಸಮುದಾಯದವರಲ್ಲಿದೆ. ಸತ್ತ ಅಸ್ತಿಯನ್ನ ನದಿಯಲ್ಲಿ ಬಿಟ್ಟರೆ ಮುಕ್ತಿ ಸಿಗುತ್ತೆ ಅನ್ನುವ ನಂಬಿಕೆ ಹಿಂದೂ ಧರ್ಮಿಯರಲ್ಲಿದೆ. ಭಾರತೀಯ ಸಂಸ್ಕೃತಿಯ ಪ್ರತೀಕವಾಗಿ ಹಿಂದೂ ಧರ್ಮಿಯರ ಆರಾದ್ಯ ದೈವವಾಗಿ ಕಾಶಿ ವಿಶ್ವನಾಥ ನಿರ್ಮಾಣವಾಗಿದೆ. ಪುಣ್ಯ ಕ್ಷೇತ್ರಗಳಲ್ಲಿ ಒಂದಾಗಿರುವ ವಿಶ್ವನಾಥ ದೇವಾಲಯಕ್ಕೆ ಪ್ರತಿ ವರ್ಷದ ಆದಾಯ ಅಂದಾಜು 60-7೦ ಕೋಟಿ ಎಂದು ಹೇಳಲಾಗುತ್ತೆ.

08. ಪೂರಿಜಗ್ನಾಥ ದೇವಾಲಯ, ಪೂರಿ 


ಪವತ್ರ ಹಿಂದೂ ದೇವಾಲಯಗಳಲ್ಲಿ ಒಂದಾಗಿರುವ ಪೂರಿ ಜಗನ್ನಾಥ ದೇವಾಲಯ ಹೆಚ್ಚು ಜನರು ಭೇಟಿ ನೀಡುವಂತಹ ದೇವಾಲಯಗಳಲ್ಲಿ ಒಂದು. ಒರಿಸ್ಸಾ ರಾಜ್ಯದ ಪೂರ್ವ ಕರಾವಳಿಯಲ್ಲಿದೆ ಸುಂದರ ದೇವಾಲಯ. ಇದನ್ನು ೧೨ನೇ ಶತಮಾನದಲ್ಲಿ ಗಂಗ ಸಾಮ್ರಾಜ್ಯದವರು ನಿರ್ಮಾಣ ಮಾಡಿದ್ದಾರೆ ಎಂದು ಹೇಳಲಾಗುತ್ತೆ. ಪ್ರಸ್ಥುತ ಪ್ರಮುಖ ತೀರ್ಥಯಾತ್ರಾ ಸ್ಥಳವಾಗಿ ನಿರ್ಮಾಣವಾಗಿದೆ ಪೂರಿಜಗ್ನಾಥ ದೇವಾಲಯ.
ಒಬ್ಬ ಹಿಂದುವಿನ ಜೀವಿತಾವಧಿಯಲ್ಲಿ ಹೋಗಲೇಬೇಕಾದ ಪ್ರಮುಖವಾದ ತೀರ್ಥಯಾತ್ರಾ ಸ್ಥಳವಾಗಿದೆ. ಸಾಕಷ್ಟು ಹಿಂದು ದೇವತೆಗಳ ವಿಗ್ರಹಗಳನ್ನು ಕಲ್ಲು ಅಥವಾ ಲೋಹದಿಂದ ಮಾಡಲಾಗಿದೆ. ಆದರೆ ಜಗನ್ನಾಥನ ವಿಗ್ರಹವನ್ನು ಮರದಿಂದ ಮಾಡಲಾಗಿದೆ. ಇಲ್ಲಿ ಅದ್ದೂರಿಯಾಗಿ ವಾರ್ಷಿಕ ರಥೋತ್ಸವು ನಡೆದು ಭಾರತದ ಸಂಸ್ಕೃತಿಯ ಕಳಶವಾಗಿದೆ. ಪೂರಿ ಜಗನ್ನಾಥ ದೇವಾಲಯವು 2010 ವಾರ್ಷಿಕ ವರಮಾನ ಸುಮಾರು 150 ಕೋಟಿ ಎಂದು ಅಂದಾಜಿಸಲಾಗಿದೆ.

07. ಮೀನಾಕ್ಷಿ ದೇವಾಲಯ, ಮಧುರೈ  


ತಮಿಳುನಾಡಿನ ಹೃದಯ ಭಾಗದಲ್ಲಿರುವ ನಗರ ಮಧುರೈನ ಪ್ರಮುಖ ಆದ್ಯಾತ್ಮಿಕ ಕೇಂದ್ರ ಮೀನಾಕ್ಷಿ ದೇವಾಲಯ. ಹಿಂದೂ ಧಾಮಿಕ ಶೈಲಿಯಲ್ಲಿ ಕೆತ್ತಿರುವ ದೇವಾಲಯದ ವಿಗ್ರಹಗಳು, ಬಂಗಾರದ ಗೋಪುರು ಒಳಗೊಂಡಂತೆ ಭವ್ಯವಾದ ಶಿಖರವನ್ನು ಒಳಗೊಂಡಿದೆ. ದೇವಾಲಯ ತಮಿಳರ ಮಹತ್ವಪೂರ್ಣ ಸಂಕೇತವಾಗಿ ಬಿಂಬಿತವಾಗಿದೆ. ಇದನ್ನು 1600ರಲ್ಲಿ ನಿರ್ಮಿಸಿರಬಹುದೆಂದು ಅಂದಾಜಿದೆ.
ಹಲವಾರು ಆಕ್ರಮಣಗಳಿಗೆ ಒಳಗಾಗಿದ್ದ ಮಿನಾಕ್ಷಿ ದೇವಾಲಯವು ಇಂದು ಅದೇ ಹೊಸತನವನ್ನು ತೋರುತ್ತಿದೆ. ಯಾವುದೇ ದಾಳಿಗೆ ಕುಗ್ಗದೆ ಶ್ರೀಮಂತ ದೇವಾಲಯಗಳಲ್ಲಿ ಒಂದಾಗಿದೆ. ದೇವಾಲಯದ ಗೋಪುರಗಳು, ಒಳ ಆವರಣ, ಸಾವಿರ ಕಂಬಗಳು, ಕೆತ್ತನೆಯ ಶೈಲಿ ಮೊದಲಾದವು ವಿಶೇಷವಾಗಿ ಕಂಡುಬರುತ್ತವೆ. ಸುಮಾರು 60 ಮಿಲಿಯನ್ ವಾರ್ಷಿಕ ವರಮಾನ ದೇವಾಲಯಕ್ಕೆ ಇದೆ.

೦6. ಗೋಲ್ಡನ್ ಟೆಂಪಲ್, ಅಮೃತ್ಸರ  


ಸಿಕ್ ಧರ್ಮದ ಅತ್ಯಂತ ಪವಿತ್ರವಾದ ಮಂದಿರ ಸ್ವರ್ಣ ಮಂದಿರ ಅಥವಾ ಗೋಲ್ಡನ್ ಟೆಂಪಲ್. ಸಿಖ್ಖರ ನಾಲ್ಕನೆಯ ಗುರು, ಗುರು ರಾಮದಾಸ್ರಿಂದ ನಿರ್ಮಿಸಲ್ಪಟ್ಟ ಮಂದಿರ ಅಮೃತ್ ಸರದಲ್ಲಿದೆ. ಹಾಗೂ ಇದನ್ನು ಸಿಖ್ ಗುರುವಿನ ನಗರವೆಂದು ಅರ್ಥವಿರುವ ಗುರು ಡಿ ನರ್ಗಿ ಎಂದು ಹೆಸರಾಗಿದೆ. ಇವರ ಐದನೆಯ ಗುರುವಾಗಿರುವ ಶ್ರೀ ಗುರು ಅರ್ಜುನ್ ದೇವ್ ಜಿಯವರು ದೇವಾಲಯದ ವಾಸ್ತುಶಿಲ್ಪಿಯನ್ನ ಮಾಡಿದ್ದಾರೆ.
ಸಿಖ್ ಧರ್ಮದ ತೊಟ್ಟಿಲು ಎಂದು ಕರೆಯುವ ಮಝಹ್ದಲ್ಲಿ ಅಮೃತ್ಸರವಿದೆ. ಇದು ರಾವಿ ಮತ್ತು ಬೀಯಾಸ್ ಎಂಬ ಎರಡು ನದಿಯ ನಡುವೆ ನೆಲೆಸಿರುವ ಪವಿತ್ರ ನೆಲೆಯಾಗಿದೆ. ಇಲ್ಲಿ ಯಾವುದೇ ಧರ್ಮ ಜಾತಿಯ ಅಂತರವಿಲ್ಲ, ಸ್ತ್ರೀ ಪುರುಷರೆಂಬ ಬೇಧಬಾವವಿಲ್ಲದೆ ಎಲ್ಲರಿಗೂ ಪ್ರವೇಶವಿದೆ. ಸಿಖ್ ಧರ್ಮಿಯರ ಪುಣ್ಯ ಕ್ಷೇತ್ರವಾಗಿದೆ ದೇವಾಲಯ. ಇದರ ವಾರ್ಷಿಕ ಅದಾಯವು 460.೦೦೦.೦೦೦ ಡಾಲರ್ ಆಗಿದೆ.

೦5. ಸಿದ್ಧಿವಿನಾಯಕ ದೇವಾಲಯ, ಮಂಬೈ  


ಶ್ರೀ ಸಿದ್ಧಿ ವಿನಾಯಕ ಗಣಪತಿ ಮಂದಿರ ಭಗವಾನ್ ಶ್ರೀ ಗಣೇಶನಿಗೆ ಮೀಸಲಾಗಿರುವ ಹಿಂದೂ ದೇವಾಲಯ. ಇದು ಮುಂಬೈ ನಗರದ ಪ್ರಭಾದೇವಿ ಎಂಬ ಸ್ಥಳದಲ್ಲಿ ಇದೆ. ದೇವಾಲಯವನ್ನ 1801ರಲ್ಲಿ ಲಕ್ಷ್ಮಣ್ ವಿತು ಮತ್ತು ದೇವುಬಾಯಿ ಪಾಟೀಲ್ ನಿರ್ಮಾಣ ಮಾಡಿದರು. ದೇವಾಲಯದ ಒಳಭಾಗದಲ್ಲಿ ಸಣ್ಣ ಮಂಟಪದಲ್ಲಿರುವ ದೇವರ ಮೂರ್ತಿ ಭಕ್ತ ಸಮೂಹವನ್ನ ಕರೆತರುವ ಮತ್ತು ಹಲವು ಜನರ ಆರಾಧ್ಯದೈವವಾಗಿದೆ.
ಸಿದ್ದಿವಿನಾಯಕ ದೇವಾಲಯದ ವಾಸ್ತು ಶಿಲ್ಪದ ಸೊಬಗು ಮತ್ತು ಸೌಂದರ್ಯ ಅದ್ಬುತವಾಗಿದೆ. ಪ್ರತಿ ದಿನ 25೦೦೦ ಕ್ಕೂ ಹೆಚ್ಚು ಭಕ್ತರು ಪವಿತ್ರ ದೇವಾಲಯಕ್ಕೆ ಭೇಟಿಯನ್ನು ನೀಡುತ್ತಾರೆ. ದೇವಾಲಯದ ರಚನೆಯಲ್ಲಿ, ಹಲವಾರು ವಿಶೇಷತೆಗಳನ್ನ ಒಳಗೊಂಡಿದೆ. ಹಿಂದೂ ಧರ್ಮಿಯರ ಪವಿತ್ರ ತಾಣವಾಗಿ ನಿರ್ಮಾಣವಾಗಿದೆ. ಇದರ ವಾರ್ಷಿಕ ವರಮಾನ ಬರೋಬ್ಬರಿ 48 ಕೋಟಿಯಿಂದ 125 ಕೋಟಿಯವವರೆಗೆ ಸಂದಾಯವಾಗುತ್ತೆ ಅಂತ ಹೇಳಲಾಗುತ್ತೆ.

೦4. ವೈಷ್ಣೋದೇವಿ ದೇವಾಲಯ, ಜಮ್ಮು  


ಭಾರತದ ಪರ್ವತ ಶ್ರೇಣಿಯ ರಾಜ್ಯವಾದ ಜಮ್ಮು ಮತ್ತು ಕಾಶ್ಮೀರದ ಕಾತ್ರಾ ಪ್ರದೇಶದಲ್ಲಿರುವ ವೈಷ್ಣೋದೇವಿ ದೇವಾಲಯ ಹಿಂದೂ ಧರ್ಮಿಯರ ಪ್ರಮುಖ ಮತ್ತು ವಿಶೇಷವಾದ ಸ್ಥಳ. ೫೨೦೦ ಅಡಿ ವಿಸ್ತೀರ್ಣವಾದ ಪ್ರದೇಶದಲ್ಲಿ ಹರಡಿಕೊಂಡಿರುವ ದೇವಾಲಯಕ್ಕೆ ಜಮ್ಮು ಪ್ರದೇಶದಿಂದ ಬಸ್ ಅಥವಾ ಟ್ಯಾಕ್ಸಿ ಮೂಲಕ ಹೋಗಬೇಕಾಗುತ್ತೆ. ಭಾರತದ ಪ್ರಾಚೀನ ದೇವಾಲಯಗಳಲ್ಲಿ ಒಂದು ವೈಷ್ಣೋದೇವಿ ದೇವಾಲಯ.
4.5 ಮಿಲಿಯನ್ ಜನರು ಪ್ರತಿ ವರ್ಷ ಇಲ್ಲಿಗೆ ಭೇಟಿ ನೀಡುವುದರ ಜೊತೆಗೆ 5೦೦ ಕೋಟಿ ಪ್ರತಿ ವರ್ಷ ಇದಕ್ಕೆ ಆದಾಯವನ್ನು ತಂದುಕೊಡುತ್ತಾರೆ. ದೇವಿಯ ಮೂಲ ಅನೇಕ ಕಥೆಗಳೋಂದಿಗೆ ತಳಕು ಹಾಕಿಕೊಂಡಿದ್ದು ಅನೇಕ ಜನರು ಇದನ್ನು ನಂಬುತ್ತಾ ಬಂದಿದ್ದಾರೆ. ಇಲ್ಲಿಗೆ ಬರುವ ಯಾತ್ರಾತ್ರಿಗಳಿಗೆ ಉಟ ಮತ್ತು ವಸತಿ ಸೌಲಭ್ಯಗಳು ಹಾಗೂ ವಾಹನದ ಸೌಲಭ್ಯಗಳು ಇಲ್ಲಿವೆ. ಆದರೆ ಮೋಸಮಾಡುವ ಜನರು ಇಲ್ಲೂ ಇರುವುದರಿಂದ ಹುಷಾರಾಗಿ ಇರಬೇಕು ಅಷ್ಟೇ.

೦3. ಸಾಯಿ ಬಾಬಾ ಮಂದಿರ, ಶಿರಡಿ  


ಸಂತ, ಫಕೀರ, ಅವತಾರ, ಸದ್ಗುರು ಎಂದು ವಿಧ ವಿಧವಾದ ಹೆಸರುಗಳಿಂದ ಕರೆಸಿಕೊಳ್ಳುವ ಮಹಾನ್ ಆದ್ಯಾತ್ಮಿಕ ಗುರು  ಸಾಯಿ ಬಾಬಾ. ಹಿಂದೂ ಮತ್ತು ಮುಸ್ಲಿಂ ಭಕ್ತರಿಂದ ಗೌರವಿಸಲ್ಪಡುತ್ತಿದ್ದ ಅವತಾರ ಪುರುಷ. ಮಹಾರಾಷ್ಟ್ರದ ಶಿರಡಿಯಲ್ಲಿ ಪವಾಡ ಪುರುಷನಿಗಾಗಿ ನಿರ್ಮಾಣ ಮಾಡಿರುವ ದೇವಾಲಯ ಇಂದೂ ಹೆಚ್ಚು ಪ್ರಸಿದ್ದಿಯನ್ನು ಮತ್ತು ಭಾರತದಾದ್ಯಂತ ಮಂದಿರಗಳನ್ನು ನಿರ್ಮಾಣ ಮಾಡುವಂತೆ ಮಾಡಿದೆ.
1922ರಲ್ಲಿ ನಿರ್ಮಾಣ ಮಾಡಿರುವ ಮಂದಿರ ಮುಂಬೈನಿಂದ 296 ಕಿ.ಮೀ ದೂರದಲ್ಲಿದೆ. ಸಾಯಿ ಬಾಬಾ ದೇವಾಲಯವನ್ನು ಸಂಸ್ಥಾನ ಟ್ರಸ್ಟ್ ನಿರ್ವಹಣೆ ಮಾಡ್ತ ಇದೆ. ಇದರ ಹೆಸರಿನಲ್ಲಿ ಆಸ್ಪತ್ರೆ ಮತ್ತು ಶಾಲೆಗಳನ್ನ ನಿರ್ಮಾಣ ಮಾಡಲಾಗಿದೆ. ಮಂದಿರಕ್ಕೆ ಬಂದಿರುವಂತಹ ಚಿನ್ನ, ಬೆಳ್ಳಿ, ವಜ್ರಗಳೂ ಸೇರಿದಂತೆ ವಾರ್ಷಿಕವಾಗಿ ೧1413 ಕೋಟಿಯನ್ನ ರಾಷ್ಟ್ರೀಯ ಬ್ಯಾಂಕ್ಗೆ ಡೆಪಾಸಿಟ್ ಮಾಡಲಾಗಿದೆ. ಭಾರತದ ಶ್ರೀಮಂತ ದೇವಾಲಯಗಳಲ್ಲಿ ಸಾಯಿ ಬಾಬಾ ಮಂದಿರ ಕೂಡ ಒಂದಾಗಿದೆ.

೦2. ತಿರುಪತಿ ವೆಂಕಟೇಶ್ವರ ದೇವಾಲಯ, ಆಂದ್ರಪ್ರದೇಶ  


ಭಾರತದ ಪ್ರಸಿದ್ದ ದೇವಾಲಯಗಳಲ್ಲಿ ಒಂದು, ಹೆಚ್ಚು ಆದಾಯ ತಂದುಕೊಡುವ ಮತ್ತು ಶ್ರೀಮಂತ ದೇವಾಲಯಗಳಲ್ಲಿ ತಿರುಪತಿ ವೆಂಕಟೇಶ್ವರ ದೇವಾಲಯವು ಎರಡನೇ ಸ್ಥಾನದಲ್ಲಿ ಇದೆ. ಆಂದ್ರಪ್ರದೇಶದ ಚಿತ್ತೂರು ಜಿಲ್ಲೆಯ ತಿರುಪತಿಬಳಿಯ ತಿರುಮಲ ಬೆಟ್ಟದಲ್ಲಿರುವ ವೈದ್ಧಿಕ ದೇವಾಲಯ ಇದು. ಬೆಟ್ಟವು ಏಳು ಶಿಖರವನ್ನು ಒಳಗೊಂಡಿದೆ. ಇದು ಆದಿಶೇಷ ಏಳು ತಲೆಗಳನ್ನು ಪ್ರತಿನಿಧಿಸುವುದರಿಂದ  ಶೇಷಚಲಂ ಎಂದು ಹೆಸರಾಗಿದೆ.
ದೇವಾಲಯಕ್ಕೆ ಸುಮಾರು 5೦.೦೦೦ ದಿಂದ 1.೦೦.೦೦೦ ಭಕ್ತರು ಭೇಟಿಯನ್ನು ನೀಡುತ್ತಾರೆ. ಮತ್ತು ವಿಶೇಷವಾದ ಸಂದರ್ಭಗಳಲ್ಲಿ 5.೦೦.೦೦೦ ಗಿಂತಲು  ಹೆಚ್ಚು ಭಕ್ತರು ಬರುತ್ತಾರೆ. ಭಾರತದಲ್ಲಿ ಅತೀ ಹೆಚ್ಚು ಭಕ್ತರನ್ನು ಹೊಂದಿರುವಂತಹ ದೇವಾಲಯಗಳಲ್ಲಿ ಇದು ಒಂದು. ವಾರ್ಷಿಕವಾಗಿ ೫೦೦ ಶತಕೋಟಿಗಿಂತಲೂ ಹೆಚ್ಚು ವರಮಾನವನ್ನು ಇದು ಹೊಂದಿದೆ. ಅನೇಕ ದಂತ ಕತೆಗಳು ಇದಕ್ಕೆ ತಳಕು ಹಾಕಿಕೊಂಡಿವೆ.

೦1. ಪದ್ಮನಾಭಸ್ವಾಮಿ ದೇವಾಲಯ, ಕೇರಳ  


ನೆರೆಯ ತಮಿಳುನಾಡು ಮತ್ತು ಕೇರಳದ ದ್ರಾವಿಡ ಶೈಲಿಯಲ್ಲಿ ನಿರ್ಮಾಣವಾಗಿರುವ ಪದ್ಮನಾಭ ದೇವಾಲಯವು ಹಿಂದೂ ಸಂಸ್ಕೃತಿಯ ಪ್ರತೀಕವಾಗಿದೆ. ಇದನ್ನು 16ನೇ ಶತಮಾನದಲ್ಲಿ ನಿರ್ಮಾಣ ಮಾಡಲಾಗಿದೆ ಎಂದು ಹೇಳಲಾಗುತ್ತೆ. ಭಾರತದಲ್ಲಿಯೇ ಅತ್ಯಂತ ಶ್ರೀಮಂತ ದೇವಾಲಯ ಎಂದು ಕೆರೆಸಿಕೊಳ್ಳುವ ದೇವಾಲಯವು ಅನೇಕ ವೈಶಿಷ್ಠ್ಯದಿಂದ ಕೂಡಿದೆ. ಆದಿಶೇಷ ವಿಷ್ಣುವಿನ ಮತ್ತೊಂದು ಅವತಾರ ಪದ್ಮನಾಭ ದೇವಾಲಯವಾಗಿದೆ.
2011ರಲ್ಲಿ ದೇವಾಲಯದಲ್ಲಿರುವ 6 ರಹಸ್ಯ ಬಾಗಿಲುಗಳಲ್ಲಿ 5 ಭಾಗಿಲುಗಳನ್ನು ತೆರೆಯಲಾಯಿತು ಅಲ್ಲಿ ದೊರೆತಿರು ಸಂಪತ್ತು ಬರೋಬ್ಬರಿ 1.೦೦.೦೦೦ ಕೋಟಿ. ಚಿನ್ನದ ಆಭರಣ, ರತ್ನದ ಆಭರಣ, ಚಿನ್ನದ ನಾಣ್ಯ ಸೇರಿದಂತೆ ಹಲವಾರು ಬೆಲೆಬಾಳುವ ವಸ್ತುಗಳು ಇಲ್ಲಿದ್ದವು. ಇಲ್ಲಿನ ವಾರ್ಷಿಕ ಆದಾಯು ಹೆಚ್ಚಾಗಿಯೇ ಇದ್ದು. ಇವೆಲ್ಲ ಮೂಲಗಳಿಂದ ಭಾರತದ ಶ್ರೀಮಂತ ದೇವಾಲಯಗಳಲ್ಲಿ ಅಗ್ರಗಣ್ಯವಾಗಿ ನಿಂತಿದೆ.

                                                                                                                         ಮಂಜುನಾಥ್ ಜೈ


manjunathahr1991@gmail.com



ನಿಮ್ಮ ಅನಿಸಿಕೆ, ಅಭಿಪ್ರಾಯಗಳನ್ನು ಕಾಮೆಂಟ್ ಮಾಡಿ...











ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಪ್ರಪಂಚದ 10 ಎತ್ತರದ ಪರ್ವತಗಳು - 26

ಭಾರತದ 10 ಪ್ರಸಿದ್ಧ ರಾಜರು - 22

ಕರ್ನಾಟಕದ 10 ಸುಂದರ ಬೆಟ್ಟಗಳು - 25