ಪ್ರಪಂಚದ ಅತ್ಯಂತ ಎತ್ತರದ 10 ಕಟ್ಟಡಗಳು - 27



ಇವು ಬರಿ ಕಟ್ಟಡಗಳಲ್ಲ ಗಗನಕ್ಕೆ ಮುತ್ತಿಕ್ಕೂವಂತೆ ಚಾಚಿಕೊಂಡಿರುವ ಅದ್ಬುತ ನಿಲುವನ್ನು ಹೊಂದಿರುವಂತಹ ಬೃಹತ್ ಕಟ್ಟಡಗಳು. ಇವು ಇರುವ ದೇಶಕ್ಕೆ ಕಳಶದಂತೆ, ಮಾನವನ ಹಿರಿಮೆಯಂತೆ ತಲೆ ಎತ್ತಿ ನಿಂತಿವೆ. ಪ್ರಪಂಚದ ಎತ್ತರವಾದ ಕಟ್ಟಡಗಳು ಮತ್ತು ಅವುಗಳ ವಿಶೇಷತೆ ಬಗ್ಗೆ ಸಂಕ್ಷಿಪ್ತ ಮಾಹಿತಿ ಇಲ್ಲಿದೆ.

10. ಸಿಐಟಿಸಿ ಟವರ್ ಬೀಜಿಂಗ್‌  

ಸಿಐಟಿಸಿ ಟವರ್ ಬೀಜಿಂಗ್ ಸೆಂಟ್ರಲ್ ಬ್ಯುಸಿನೆಸ್ ಡಿಸ್ಟ್ರಿಕ್ಟ್ನಲ್ಲಿರುವ ಸೂಪರ್ ಟಾಲ್ ಗಗನಚುಂಬಿ ಕಟ್ಟಡವಾಗಿದೆ. ಇದನ್ನು ಚೀನಾದಲ್ಲಿ ಜುನ್ ಮತ್ತು ಐಪಿಎ ಎಂದು ಕರೆಯಲಾಗುತ್ತದೆ. 109 ಅಂತಸ್ತಿನ, 528 ಮೀಟರ್ ನ  ಈ ಕಟ್ಟಡವು ನಗರದ ಅತಿ ಎತ್ತರದ ಕಟ್ಟಡವಾಗಿದ್ದು, ಚೀನಾ ವರ್ಲ್ಡ್ ಟ್ರೇಡ್ ಸೆಂಟರ್ ಟವರ್ ಕಟ್ಟಡವನ್ನು ಮೀರಿಸಿದೆ. ಆಗಸ್ಟ್ 18, 2016 ರಂದು ಸಿಐಟಿಸಿ ಬೀಜಿಂಗ್ ಅತಿ ಎತ್ತರದ ಕಟ್ಟಡವೆಂದು ಹೇಳಲಾಯಿತು ಈ ಗೋಪುರವು ರಚನಾತ್ಮಕವಾಗಿ ಜುಲೈ 9, 2017 ರಿಂದ ಅಗ್ರಸ್ಥಾನದಿಂದ ಉಳಿದುಕೊಂಡು ಬಂದಿದ್ದು 2018 ಕೊನೆಯಲ್ಲಿ ಇದರ ನಿರ್ಮಾಣ ಕಾರ್ಯವು ಪೂರ್ಣಗೊಂಡು ಸಿಐಟಿಸಿ ಟವರ್ 2018 ಅತಿ ಎತ್ತರದ ಕಟ್ಟಡವಾಗಿದೆ.

09. ಟಿಯಾಂಜಿನ್ ಸಿಟಿಎಫ್ ಹಣಕಾಸು ಕೇಂದ್ರ  

ಟಿಯಾಂಜಿನ್ ಸಿಟಿಎಫ್ ಹಣಕಾಸು ಕೇಂದ್ರವು ಚೀನಾದ ಟಿಯಾಂಜಿನ್ನಲ್ಲಿರುವ ಒಂದು ಸೂಪರ್ ಟಾಲ್ ಗಗನಚುಂಬಿ ಕಟ್ಟಡವಾಗಿದೆ. ಇದರ ನಿರ್ಮಾಣವು 2013 ರಲ್ಲಿ ಪ್ರಾರಂಭವಾಯಿತು ಮತ್ತು 2019 ರಲ್ಲಿ ಪೂರ್ಣಗೊಂಡಿತು. ಗೋಪುರವು ಗೋಲ್ಡಿನ್ ಫೈನಾನ್ಸ್ 117 ನಂತರ ಟಿಯಾಂಜಿನ್ನಲ್ಲಿ ಎರಡನೇ ಅತಿ ಎತ್ತರದ ಕಟ್ಟಡವಾಗಿದೆ, ವಿಶ್ವದ ಒಂಬತ್ತನೆ ಅತಿ ಎತ್ತರದ ಕಟ್ಟಡ ಮತ್ತು 100 ಮಹಡಿಗಳಿಗಿಂತ ಕಡಿಮೆ ಎತ್ತರದ ಕಟ್ಟಡವಾಗಿದೆ. ಇದು ಟಿಯಾಂಜಿನ್ ಆರ್ಥಿಕ-ತಾಂತ್ರಿಕ ಅಭಿವೃದ್ಧಿ ಪ್ರದೇಶದ ಹೊರಗಿನ ಜಿಲ್ಲೆಯಲ್ಲಿದೆ.

08. ಗುವಾಂಗ್ಸಿಟಿಎಫ್ ಹಣಕಾಸು ಕೇಂದ್ರ    

2009ರಲ್ಲಿ ನಿರ್ಮಾಣ ಮಾಡಲು ಆರಂಭ ಮಾಡಿ  ಅಕ್ಟೋಬರ್ 2016ರಲ್ಲಿ ಪೂರ್ಣಗೊಂಡು ಜಗತ್ತಿನ ಅತ್ಯಂತ ಎತ್ತರ ಕಟ್ಟಡಗಳಲ್ಲಿ 7ನೇ ಸ್ಥಾನವನ್ನ ಪಡೆದುಕೊಂಡಿದೆ. 570 ಮೀಟರ್ ಎತ್ತರವಿರುವ ಸಿಟಿಎಫ್ ಹಣಕಾಸು ಕೇಂದ್ರ ಹಲವು ವಿಶೇಷತೆಗಳಿಂದ ಕೂಡಿದೆ. 111 ಮಹಡಿಗಳನ್ನು ಹೊಂದಿರುವ ಕಟ್ಟಡ ನಿರ್ಮಿಸಲು 1.5 ಬಿಲಿಯನ್ ಯುಎಸ್ಡಿ ಡಾಲರ್ ಖರ್ಚು ಮಾಡಲಾಗಿದೆ ಗಗನಚುಂಬಿ ಕಟ್ಟಡದಲ್ಲಿ ಶಾಪಿಂಗ್ ಮಾಲ್, ಹೋಟೆಲ್, ಆಫೀಸ್ ಮತ್ತು ಅರ್ಪಾಟ್ಮೆಂಟ್ಗಳು ಇಲ್ಲಿವೆ. ಚೌ ಟೂ ಫೊಕ್ ಎಂಟರ್ಪ್ರೈಸಸ್ ಇದರ ಮಾಲೀಕತ್ವವನ್ನು ಹೊಂದಿದ್ದು. ಕೊಹ್ನ್ ಪೆಡರ್ಸನ್ ಫಾಕ್ಸ್ ಆರ್ಕಿಟೆಕ್ಚರ್ ಸಂಸ್ಥೆ ಇದನ್ನು ನಿರ್ಮಾಣ ಮಾಡಿದ್ದಾರೆ. ಈಸ್ಟ್ ಟವರ್ ಎಂದೂ ಕರೆಯಲ್ಪಡುವ ಇದನ್ನು ದಕ್ಷಿಣ ಚೀನೀಯ ನಗರದ ಗುವಾಂಗೌದಲ್ಲಿ ನಿರ್ಮಾಣ ಮಾಡಲಾಗಿದೆ.

07. ವಿಶ್ವ ವಾಣಿಜ್ಯ ಕೇಂದ್ರ, ನ್ಯೂಯಾರ್ಕ್  


2001ರಲ್ಲಿ ಭಯೋತ್ಪಾದಕರ ದಾಳಿಗೆ ಸಿಲುಕಿ ನಾಶವಾದ ವಿಶ್ವ ವಾಣಿಜ್ಯ ಕೇಂದ್ರ. ಇಂದು ಅದೇ ಚಾಪನ್ನು ಮೂಡಿಸಿಕೊಂಡು ನವ ನಿರ್ಮಾಣದಂತೆ ತಲೆ ಎತ್ತಿದೆ. ಆದ್ದರಿಂದಲೇ ವಿಶ್ವದ 6ನೇ ದೊಡ್ಡ ಕಟ್ಟಡ ಎನ್ನುವ ಖ್ಯಾತಿಯನ್ನ ಇದು ಗಳಿಸಿದೆ. ಇದನ್ನು ಡಬ್ಲಿಯೂಟಿಸಿ ಪ್ರೀಡಂ ಟವರ್ ಎಂದೂ ಕೂಡ ಕರೆಯುತ್ತಾರೆ. ಇದಲ್ಲಿ ಆಫೀಸ್, ಸಂವಹನ ಮತ್ತು ವೀಕ್ಷಣಾ ಕೇಂದ್ರಗಳಿವೆಇದರ ಮೂಲ ಕಟ್ಟಡ 1970 ರಿಂದ 2001 ವರೆಗೆ ಇತ್ತು. ಭಯೋತ್ಪಾದಕರ ದಾಳಿಯಿಂದ ನಾಶವಾದ ನಂತರ 2006ರಲ್ಲಿ ನಿರ್ಮಾಣ ಮಾಡುವುದಕ್ಕೆ ಆರಂಭ ಮಾಡಿ 2013ರಲ್ಲಿ ನಿರ್ಮಿಸಿ ತದನಂತರ 2014ರಲ್ಲಿ ಸಾಮಾನ್ಯ ಜನರ ಪ್ರವೇಶಕ್ಕೆ ತೆರೆಯಲಾಯಿತು. ಇದಕ್ಕೆ ಸುಮಾರು 3.8 ಬಿಲಿಯನ್ ಖರ್ಚು ಮಾಡಲಾಗಿದೆ. 104 ನಾಲ್ಕು ಮಹಡಿಗಳನ್ನು ಹೊಂದಿದೆ ಬೃಹತ್ ಕಟ್ಟಡ.

06. ಲೊಟ್ಟೆ ವಲ್ರ್ಡ್ ಟವರ್, Lotte world Tower 


ದಕ್ಷಿಣ ಕೊರಿಯಾ ದೇಶದಲ್ಲಿರುವ ಗಗನಚುಂಬಿ ಕಟ್ಟಡ 155 ಮೀಟರ್ ಎತ್ತರ ಮತ್ತು 123 ಮಹಡಿಗಳನ್ನು ಹೊಂದಿದೆ. ಅದ್ಬುತ ಕಟ್ಟಡವನ್ನು ನಿರ್ಮಾಣ ಮಾಡಲು ಸುಮಾರು 3 ಬಿಲಿಯನ್ ಹಣವನ್ನ ಖರ್ಚು ಮಾಡಲಾಗಿದೆ. 2011ರಲ್ಲಿ ಇದನ್ನು ನಿರ್ಮಾಣ ಮಾಡಲು ಆರಂಭಿಸಿ 2016 ಡಿಸೆಂಬರ್ನಲ್ಲಿ ಅಂತಿಮ ಸ್ಪರ್ಷವನ್ನು ನೀಡಲಾಗಿದೆ. ಏಪ್ರಿಲ್ 3 2017ರಂದು ಇದರ ಪ್ರವೇಶಕ್ಕೆ ಅನುಕೂಲ ಮಾಡಿಕೊಡಲಾಗಿದೆವಿಶ್ವದಲ್ಲೇ 5ನೆಯ ಬೃಹತ್ ಕಟ್ಟಡ ಎನ್ನುವ ಖ್ಯಾತಿಗೆ ಒಳಗಾಗಿರುವ ಕಟ್ಟಡದಲ್ಲಿ ಹೋಟೆಲ್ ಮತ್ತು ವಸತಿಗೃಹವನ್ನು ಕಾಣಬಹುದು. ಹಲವು ವಿಶೇಷತೆಗಳೋಂದಿಗೆ ತಲೆ ಎತ್ತಿದೆ. 6 ಮಹಡಿಗಳು ನೆಲ ಅಂತಸ್ತಿನಲ್ಲಿದ್ದರೆ 123 ಮಹಡಿಗಳು ಮೇಲ್ಬಾಗದಲ್ಲಿ ಕಂಡುಬರುತ್ತವೆ. ಕೊಹ್ನೆ ಪೆಡರ್ಸನ್ ಫಾಕ್ಸ್ ಇದರ ವಿನ್ಯಾಸವನ್ನು ಮಾಡಿದ್ದು ಅಭಿವೃದ್ಧಿಗೊಳಿಸಿದ್ದಾರೆ.

05. ಗೋಲ್ಡಿನ್ ಫೈನಾನ್ಸ್ 117 


ಗೋಲ್ಡಿನ್ ಫೈನಾನ್ಸ್ 117 ಚೀನಾದ ಟಿಯಾಂಜಿನ್ನಲ್ಲಿ ನಿರ್ಮಾಣ ಹಂತದಲ್ಲಿರುವ ಗಗನಚುಂಬಿ ಕಟ್ಟಡವಾಗಿದೆ. ಗೋಪುರವು 117 ಅಂತಸ್ತಿನೊಂದಿಗೆ 597 ಮೀಟರ್ (1,959 ಅಡಿ) ಎತ್ತರವಿದೆ. ಇದರ ನಿರ್ಮಾಣವು 2008 ರಲ್ಲಿ ಪ್ರಾರಂಭವಾಯಿತು 2014 ರಲ್ಲಿ ಪೂರ್ಣಗೊಳಿಸಬೇಕು ಎಂಬ ನಿರ್ಧಾರ ಕೈಗೊಳ್ಳಲಾಯಿತು.  2020 ರಲ್ಲಿ ಪೂರ್ಣಗೊಳಿಸುವ ಅಂದಾಜನ್ನು ಇಟ್ಟುಕೊಳ್ಳಲಾಗಿದೆ. ಸೆಪ್ಟೆಂಬರ್ 8, 2015 ರಂದು ಈ ಕಟ್ಟಡವನ್ನು ಅಗ್ರಸ್ಥಾನಕ್ಕೇರಿಸಲಾಯಿತು. ಇದು ಚೀನಾದ ಎರಡನೇ ಅತಿ ಎತ್ತರದ ಕಟ್ಟಡವಾಗಿದ್ದು, ಶಾಂಘೈ ವಿಶ್ವ ಹಣಕಾಸು ಕೇಂದ್ರವನ್ನು ಮೀರಿಸಿದೆ.  2020 ರಲ್ಲಿ ವೇಳಾಪಟ್ಟಿಯಲ್ಲಿ ಪೂರ್ಣಗೊಂಡರೆ ಗೋಲ್ಡಿನ್ ಫೈನಾನ್ಸ್ 117 ವಿಶ್ವದ 5 ನೇ ಅತಿ ಎತ್ತರದ ಕಟ್ಟಡವಾಗಲಿದೆ.

04. ಪಿಂಗ್ ಹಣಕಾಸು ಕೇಂದ್ರ, ಚೀನಾ  


ಆಡಳಿತ ಕಛೇರಿ ಮತ್ತು ವ್ಯಾಪಾರ ವಹಿವಾಟುಗಳಿಗಾಗಿ ಬಳಕೆ ಮಾಡಿಕೊಳ್ಳುತ್ತಿರುವ ಬಿಲ್ಡಿಂಗ್ ಪಿಂಗ್ ಹಣಕಾಸು ಕೇಂದ್ರ. ಇದನ್ನ 2010ರಲ್ಲಿ ನಿರ್ಮಾಣ ಮಾಡಲಾಗಿದೆ. 678 ಮಿಲಿಯನ್ ಇದಕ್ಕೆ ಖರ್ಚು ಮಾಡಲಾಗಿದೆ. ಪಿಂಗ್ ಆನ್ ಲೈಫ್ ಇನ್ಶೂರೆನ್ಸ್ ಕಂಪನಿ ಚೀನಾ ಮಾಲೀಕತ್ವವನ್ನು ಹೊಂದಿದೆ600 ಮೀಟರ್ ಎತ್ತರವನ್ನು ಹೊಂದಿರುವ ಇದರಲ್ಲಿ 199 ಮಹಡಿಗಳಿವೆ. ಕೊಹ್ನ್ ಪೆಡೆರ್ಸೆನ್ ಫಾಕ್ಸ್ ಅಸೋಸಿಯೇಟ್ಸ್ ಇದನ್ನು ವಿನ್ಯಾಸಗೊಳಿಸಿದ್ದಾರೆ. ಇವರ ವಿನ್ಯಾಸ ಮತ್ತು ಕಟ್ಟಡದ ಹಲವು ವಿಶೇಷತೆಗಳಿಂದ ವಿಶ್ವದ ನಾಲ್ಕನೆಯ ಬೃಹತ್ ಎತ್ತರವಾದ ಕಟ್ಟಡ ಎನ್ನುವ ಹೆಗ್ಗಳಿಕೆಗೆ ಪಾತ್ರವಾಗಿದೆ.

03. ಅಬ್ರಾಜ್ ಅಲ್ ಬೈಟ್, ಸೌದಿ ಅರೇಬಿಯಾ  


ಸೌದಿ ಅರೇಬಿಯಾದ ಮೆಕ್ಕಾದಲ್ಲಿನ ಏಳು ಗಗನಚುಂಬಿ ಹೋಟೆಲ್ಗಳಲ್ಲಿ ಒಂದು ಅಬ್ರಾಜ್ ಅಲ್ ಬೈಟ್. ಪ್ರಪಂಚದಲ್ಲೇ ಅತಿ ದೊಡ್ಡ ಗಡಿಯಾರದ ಮುಖವನ್ನು ಇದು ಹೊಂದಿದೆ. ಇಸ್ಲಾಂನ ಪವಿತ್ರ ಸ್ಥಳವಾದ ಮಸೀದಿಯ ಪಕ್ಕದಲ್ಲೇ ಇದೆ. 18ನೇ ಶತಮಾನದಲ್ಲಿ ಒಟ್ಟೋಮನ್ ಸಿಟಡೆಲನ್ನ ಅವಸಾನದ ನಂತರ ಇದನ್ನು ನಿರ್ಮಾಣ ಮಾಡಲಾಯಿತುಮತ್ತೆ 2014ರಲ್ಲಿ ನಿರ್ಮಾಣವಾದ ಇದಕ್ಕೆ 15 ಶತಕೋಟಿ ಖರ್ಚನ್ನ ಮಾಡಲಾಗಿದೆ. 601 ಮೀಟರ್ ಎತ್ತರವಾಗಿರುವ ಕಟ್ಟಡದಲ್ಲಿ 120 ಮಹಡಿಗಳು ಇವೆ. ಶಾಪಿಂಗ್ ಮಾಲ್, ಪಾರ್ಕಿಂಗ್ ಗ್ಯಾರೇಜ್ಗಳು ಇದರ ಒಳಗೆ ಕಂಡುಬರುತ್ತವೆ. ಒಂದು ಕಾಲದಲ್ಲಿ ಇದು ದುಬಾರಿ ಕಟ್ಟಡವಾಗಿತ್ತು. ಎರಡು ಬಾರಿ ಅಗ್ನಿ ಅವಘಡಗಳಿಗೆ ಒಳಗಾಗಿದ್ದರು ಮತ್ತೆ ಅದೇ ಸ್ಥಾನದಲ್ಲಿ ಗಟ್ಟಿಯಾಗಿ ನಿಂತುಕೊಂಡಿದೆ.

02. ಶಾಂಘೈ ಟವರ್, ಚೀನಾ 


ಪ್ರಪಂಚದ ಬಹುತೇಕ ಎತ್ತರವಾದ ಕಟ್ಟಡಗಳು ಕಂಡು ಬರೋದು ಚೀನಾದಲ್ಲಿ, ಇದರ ಸಾಲಿಗೆ ಶಾಂಘೈ ಟವರ್ ಕೂಡ ಸೇರುತ್ತೆ. 2008ರಲ್ಲಿ  ನಿರ್ಮಾಣ ಮಾಡುವುದಕ್ಕೆ ಆರಂಭ ಮಾಡಿ 2014ರಲ್ಲಿ ಪೂರ್ಣಗೊಂಡಿತು. 2015 ಫೆಬ್ರವರಿಯಲ್ಲಿ ಇದರ ಪ್ರವೇಶಕ್ಕೆ ಅನುಮತಿಯನ್ನು ನೀಡಲಾಗಿದೆ. ಇದನ್ನು ಮೊದಲು ಶಾಂಘೈ ಸೆಂಟರ್ ಎಂದು ಕರೆಯುತ್ತಿದ್ದರು632 ಮೀಟರ್ ಎತ್ತರವನ್ನು ಹೊಂದಿರುವ ಶಾಂಘೈ ಟವರ್ 128 ಮಹಡಿಗಳನ್ನು ಹೊಂದಿದೆ. ಇದನ್ನು ನಿರ್ಮಾಣ ಮಾಡುವುದಕ್ಕೆ 2.4 ಬಿಲಿಯನ್ ಖರ್ಚು ಮಾಡಲಾಗಿದೆ. ಜುನ್ ಜಿಯಾ ಟಿಜೆದ್ ಇದರ ವಿನ್ಯಾಸವನ್ನು ಮಾಡಿದ್ದಾರೆ. ಇದು ಶಾಂಘೈ ಸರ್ಕಾರದ ಒಡೆತನದಲ್ಲಿದ್ದು. ಇದರ ನಿರ್ವಹಣೆಯನ್ನು ನೋಡಿಕೊಳ್ಳುತ್ತದೆ.

01. ಬುರ್ಜ್ ಖಲೀಫಾ, ದುಬೈ 


ಬುರ್ಜ್ ಖಲೀಫಾ ಗೋಪುರವನ್ನ ಉದ್ಘಾಟನೆಗೆ ಮೊದಲು ಬುರ್ಜ್ ದುಬೈ ಎಂದು ಕರೆಯುತ್ತಿದ್ದರು. ಪ್ರಪಂಚದಲ್ಲಿ ಅತ್ಯಂತ ಎತ್ತರವಾದ ಕಟ್ಟಡ ದೇಶದ ಪ್ರಮುಖ ಕೇಂದ್ರ ಬಿಂದು ಮತ್ತು ಮಾನವ ನಿರ್ಮಿತ ಅದ್ಬುತ ಕಟ್ಟಡವಾಗಿದೆ. ಇದರ ನಿರ್ಮಾಣ ಕಾರ್ಯವು 2004ರಲ್ಲಿ ಪ್ರಾರಂಭವಾಗಿ 2009ರಲ್ಲಿ ಪೂರ್ಣಗೊಂಡಿತು. 2010ರಲ್ಲಿ ಸಾರ್ವಜನಿಕರ ಪ್ರವೇಶಕ್ಕೆ ಅನುಕೂಲ ಮಾಡಿಕೊಡಲಾಯಿತು830 ಮೀಟರ್ ಎತ್ತರವನ್ನು ಹೊಂದಿರುವ ಕಟ್ಟಡವನ್ನು 163 ಮಹಡಿಗಳನ್ನು ಹೊಂದಿದೆ. ಇದಕ್ಕೆ ಅಂದಾಜು 1.5 ಬಿಲಿಯನ್ ಖರ್ಚು ಮಾಡಲಾಗಿದೆ ಎಂದು ಹೇಳಲಾಗುತ್ತೆ. ಸಂವಹನ, ವ್ಯಾಪಾರ, ಹೋಟೆಲ್, ವಾಹನ ನಿಲುಗಡೆ ಮೊದಲಾದವುಗಳು ಇದರಲ್ಲಿ ಕಂಡುಬರುತ್ತವೆ. ದಕ್ಷಿಣ ಕೊರಿಯಾದ ನಿರ್ಮಾಣ ಸಂಸ್ಥೆ ಸ್ಯಾಮ್ಸಂಗ್ ಇಂಜಿನಿಯರಿಂಗ್ ಮತ್ತು ಕಂಸ್ಟ್ರಕ್ಷನ್ ಗೋಪುರ ನಿರ್ಮಾಣವನ್ನ ಮಾಡಿದೆ.
ಮಂಜುನಾಥ್ ಜೈ

manjunathahr1991@gmail.com




ನಿಮ್ಮ ಅನಿಸಿಕೆ ಮತ್ತು ಅಭಿಪ್ರಾಯಗಳನ್ನು ಕಾಮೆಂಟ್ ಮಾಡಿ,  ಮಾಹಿತಿ ಇಷ್ಟ ಆದ್ರೆ ಶೇರ್ ಮಾಡಿ ಜೊತೆಗೆ ಟಾಪ್ 10 ಮಾಹಿತಿಯನ್ನು ಮೊದಲು ಓದಲು ಸಬ್ ಸ್ರ್ಕೈಬ್ ಆಗಿ.








ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಪ್ರಪಂಚದ 10 ಎತ್ತರದ ಪರ್ವತಗಳು - 26

ಭಾರತದ 10 ಪ್ರಸಿದ್ಧ ರಾಜರು - 22

ಕರ್ನಾಟಕದ 10 ಸುಂದರ ಬೆಟ್ಟಗಳು - 25